For Quick Alerts
  ALLOW NOTIFICATIONS  
  For Daily Alerts

  ದೇವಸ್ಥಾನದಲ್ಲಿ ಚುಂಬನ: ಕೇಂದ್ರ ಸಚಿವ ಗರಂ, ವೆಬ್ ಸರಣಿ ವಿರುದ್ಧ ಪ್ರಕರಣ ದಾಖಲು

  |

  ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ 'ಎ ಸುಟೇಬಲ್ ಬಾಯ್' ವೆಬ್ ಸರಣಿಯಲ್ಲಿನ ಚುಂಬನ ದೃಶ್ಯ ವೊಂದರ ಬಗ್ಗೆ ಕೇಂದ್ರ ಮಂತ್ರಿ ನರೋತ್ತಮ ಮಿಶ್ರಾ ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ.

  'ಸೂಟೆಬಲ್ ಬಾಯ್‌' ನ ಎಪಿಸೋಡ್‌ನ ದೃಶ್ಯವೊಂದರಲ್ಲಿ ಯುವ ಜೋಡಿಯೊಂದು ದೇವಸ್ಥಾನದ ಒಳಗೆ ತುಟಿಗೆ ತುಟಿ ಒತ್ತುವ ದೃಶ್ಯವಿದೆ. ಈ ದೃಶ್ಯ ಹಿಂದು ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಜೈಲು ಮಂತ್ರಿ ಆಗಿರುವ ನರೋತ್ತಮ ಮಿಶ್ರಾ ಹೇಳಿದ್ದಾರೆ.

  ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿರುವ ಕೇಂದ್ರ ಮಂತ್ರಿ ನರೋತ್ತಮ ಮಿಶ್ರಾ, ನೆಟ್‌ಫ್ಲಿಕ್ಸ್ ಹಾಗೂ ಸೂಟೆಬಲ್ ಬಾಯ್ ನಿರ್ಮಾಪಕರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

  ಹಿಂದು ಯುವತಿಯನ್ನು ದೇವಸ್ಥಾನದಲ್ಲಿ ಚುಂಬಿಸುವ ಮುಸ್ಲಿಂ ಯುವಕ

  ಹಿಂದು ಯುವತಿಯನ್ನು ದೇವಸ್ಥಾನದಲ್ಲಿ ಚುಂಬಿಸುವ ಮುಸ್ಲಿಂ ಯುವಕ

  ಎ ಸೂಟೆಬಲ್ ಬಾಲ್ ನಲ್ಲಿ ಹಿಂದು ಯುವತಿಯನ್ನು ಮುಸ್ಲಿಂ ಯುವಕ ದೇವಸ್ಥಾನದಲ್ಲಿ ಚುಂಬಿಸುವ ದೃಶ್ಯವಿದೆ. ಚುಂಬನ ದೃಶ್ಯದ ಹಿನ್ನೆಲೆಯಲ್ಲಿ ಮಂತ್ರಗಳು, ಗಂಟೆ ಶಬ್ದ ಕೇಳಿಬರುತ್ತಿರುತ್ತದೆ. ಇದು ಸಚಿವ ನರೋತ್ತಮ ಮಿಶ್ರಾ ಸೇರಿದಂತೆ ಇನ್ನೂ ಕೆಲವರಿಗೆ ಬೇಸರ ತಂದಿದೆ.

   ಬಿಜೆಪಿಯ ಕೆಲ ಮುಖಂಡರಿಂದ ದೂರು ದಾಖಲು

  ಬಿಜೆಪಿಯ ಕೆಲ ಮುಖಂಡರಿಂದ ದೂರು ದಾಖಲು

  ಬಿಜೆಪಿ ಯುವ ಮುಖಂಡ ಗೌರವ್ ತಿವಾರಿ, ಬಿಜೆಪಿಯ ವಕ್ತಾರ ಗೌರವ್ ಗೋಯಲ್ ಅವರುಗಳು ಸಹ ನೆಟ್‌ಫ್ಲಿಕ್ಸ್‌ ವಿರುದ್ಧ ಹಾಗೂ ಎ ಸೂಟೆಬಲ್ ಬಾಯ್ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೃಶ್ಯವು ಹಿಂದು ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

  ಬಾಯ್‌ಕಾಟ್ ನೆಟ್‌ಫ್ಲಿಕ್ಸ್ ಹ್ಯಾಷ್‌ಟ್ಯಾಗ್ ವೈರಲ್

  ಬಾಯ್‌ಕಾಟ್ ನೆಟ್‌ಫ್ಲಿಕ್ಸ್ ಹ್ಯಾಷ್‌ಟ್ಯಾಗ್ ವೈರಲ್

  ಚುಂಬನ ದೃಶ್ಯ ವೈರಲ್ ಆಗಿದ್ದು, ಇದರ ಬೆನ್ನಲ್ಲೆ ನೆಟ್‌ಫ್ಲಿಕ್ಸ್‌ ಅನ್ನು ಅನ್‌ಇನ್‌ಸ್ಟಾಲ್ ಮಾಡುವಂತೆ ಸಾಮಾಜಿಕ ಜಾಲತಾಣ ಅಭಿಯಾನ ಸಹ ನಡೆಸಲಾಗುತ್ತಿದೆ. #boycottnetflix ಹ್ಯಾಷ್‌ ಟ್ಯಾಗ್ ಬಳಸಿ ಹಲವರು ಸೂಟೆಬಲ್ ಬಾಯ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

  ರಸ್ತೆ ಬದಿ ಟೀ ಕುಡಿದ Shivanna, ಅಭಿಮಾನಿಗಳು ಫುಲ್ ಫಿದಾ | Filmibeat Kannada
  ವಿಕ್ರಂ ಸೇಠ್ ಬರೆದ ಕಾದಂಬರಿ, ಮೀರಾ ನಾಯರ್ ನಿರ್ದೇಶನ

  ವಿಕ್ರಂ ಸೇಠ್ ಬರೆದ ಕಾದಂಬರಿ, ಮೀರಾ ನಾಯರ್ ನಿರ್ದೇಶನ

  ಎ ಸೂಟೆಬಲ್ ಬಾಯ್, ಅದೇ ಹೆಸರಿನ ವಿಕ್ರಂ ಸೇಠ್ ಬರೆದಿರುವ ಕಾದಂಬರಿಯನ್ನು ಆಧರಿಸಿದ ವೆಬ್ ಸರಣಿ ಆಗಿದೆ. ಈ ವೆಬ್ ಸರಣಿಯನ್ನು ಖ್ಯಾತ ನಿರ್ದೇಶಕಿ ಮೀರಾ ನಾಯರ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ನಟಿ ಟಬು ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  BJP minister Narottam Mishra demand ban A suitable boy web series which is been telecasting on Netflix. Many other BJP leaders gave complaint against web series and Netflix.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X