twitter
    For Quick Alerts
    ALLOW NOTIFICATIONS  
    For Daily Alerts

    'ಬಾಹುಬಲಿ' ವೆಬ್ ಸರಣಿ ಎಲ್ಲಿವರೆಗೂ ಬಂದಿದೆ? ನಿರ್ದೇಶಕ ಸ್ಪಷ್ಟನೆ

    |

    ಭಾರತೀಯ ಸಿನಿಮಾರಂಗಕ್ಕೆ, ವಿಶೇಷವಾಗಿ ದಕ್ಷಿಣ ಭಾರತ ಸಿನಿಮಾ ರಂಗಕ್ಕೆ ವಿಶ್ವಮಟ್ಟದಲ್ಲಿ ಗುರುತು ತಂದುಕೊಟ್ಟ 'ಬಾಹುಬಲಿ' ಸಿನಿಮಾ ಆಧರಿಸಿ ಕತೆಯನ್ನು ತುಸು ಹಿಂಜಿ ವೆಬ್ ಸರಣಿ ಮಾಡಲಾಗುತ್ತಿರುವುದು ಹಳೆಯ ಸುದ್ದಿ.

    'ಬಾಹುಬಲಿ' ವೆಬ್ ಸರಣಿಗೆ ನೆಟ್‌ಫ್ಲಿಕ್ಸ್ ಕೃಪಾಕಟಾಕ್ಷವಿದ್ದು 'ಬಾಹುಬಲಿ' ಸಿನಿಮಾ ನಿರ್ದೇಶಕ ರಾಜಮೌಳಿ ಹಾಗೂ ಪ್ರಸಾದ್ ದೇವಿನೇನಿ ಸಹ ನಿರ್ಮಾಪಕರಾಗಿದ್ದಾರೆ.

    'ಬಾಹುಬಲಿ' ವೆಬ್ ಸರಣಿಯ ಕೆಲವು ಭಾಗ ಈಗಾಗಲೇ ಚಿತ್ರೀಕರಣ ಆಗಿತ್ತು, ಆದರೆ ಚಿತ್ರೀಕರಣವಾದ ಭಾಗಗಳು ನೆಟ್‌ಫ್ಲಿಕ್ಸ್‌ಗೆ ಹಿಡಿಸದ ಕಾರಣ ಈಗ ಚಿತ್ರೀಕರಣ ಮಾಡಿದ ಭಾಗವನ್ನು ಕೈಬಿಟ್ಟು ಮತ್ತೆ ಹೊಸದಾಗಿ ಚಿತ್ರೀಕರಣ ಮಾಡಲಾಗುತ್ತಿದೆ ಎಂಬ ಸುದ್ದಿ ಕೆಲವು ತಿಂಗಳ ಹಿಂದೆ ಹಬ್ಬಿತ್ತು. ಸುದ್ದಿ ನಿಜವೂ ಹೌದು. ಆದರೆ ಮತ್ತೆ ಚಿತ್ರೀಕರಣ ಆರಂಭವಾದ ಬಳಿಕ ಈಗ 'ಬಾಹುಬಲಿ' ವೆಬ್ ಸರಣಿ ಯಾವ ಹಂತದಲ್ಲಿದೆ ಎಂಬ ಕುತೂಹಲ ಮನೆ ಮಾಡಿದೆ.

    Director Deva Katta Talks About Bahubali Web Series

    'ಬಾಹುಬಲಿ' ವೆಬ್ ಸರಣಿ ನಿರ್ದೇಶಕರಲ್ಲಿ ಒಬ್ಬರಾದ ದೇವಕಟ್ಟ ಇತ್ತಿಚಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಅವರು (ನೆಟ್‌ಫ್ಲಿಕ್ಸ್) 'ಬಾಹುಬಲಿ' ವೆಬ್ ಸರಣಿಯು ಗೇಮ್ ಆಫ್ ಥ್ರೋನ್ಸ್ ಮಾದರಿಯಲ್ಲಿರಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ. 'ಗೇಮ್ಸ್ ಆಫ್ ಥ್ರೋನ್ಸ್' ಕೆಲವೇ ವರ್ಷಗಳಲ್ಲಿ ಆಗಿದ್ದಲ್ಲ. ಹತ್ತು ವರ್ಷ ಬರೆದ ಕತೆಯನ್ನು ಐದು ವರ್ಷ ಚಿತ್ರಕತೆ ಮಾಡಿ ನಿರ್ಮಿಸಿದ ವೆಬ್ ಸರಣಿ ಅದು. 'ಬಾಹುಬಲಿ' ಒಂದಕ್ಕೆ ಅಷ್ಟೋಂದು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ದೇವಕಟ್ಟ.

    ಅವರು ನಿರೀಕ್ಷಿಸಿದಷ್ಟು ಸಮಯವನ್ನು ಒಂದೆ ವೆಬ್ ಸರಣಿಗೆ ನೀಡಲಾಗುವುದಿಲ್ಲ. ಹಾಗಾಗಿ ಒಂದು ಸೀಸನ್‌ಗೆ ಮಾತ್ರವೇ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿ ನಾನು ಹೊರಗೆ ಬಂದುಬಿಟ್ಟೆ ಎಂದು ಸ್ಪಷ್ಟನೆ ನೀಡಿದ್ದಾರೆ ದೇವಕಟ್ಟ. ಈ ಹಿಂದೆ ಹರಿದಾಡಿದ್ದ ಸುದ್ದಿಗಳ ಪ್ರಕಾರ, ದೇವಕಟ್ಟ ಗುಣಮಟ್ಟದ ಎಪಿಸೋಡ್‌ಗಳನ್ನು ಕೊಡದ ಕಾರಣ ಅವರನ್ನು ತೆಗೆದುಹಾಕಲಾಗಿದೆ ಎಂಬ ಸುದ್ದಿ ಹರಿದಾಡಿತ್ತು ಆದರೆ ತಾವೇ ವೆಬ್ ಸರಣಿಯಿಂದ ಹೊರಗೆ ಬಂದಿರುವುದಾಗಿ ದೇವಕಟ್ಟ ಹೇಳಿದ್ದಾರೆ.

    ಇದೀಗ ಪ್ರವೀಣ್ ಸತ್ತಾರು ಹೆಸರಿನ ಮತ್ತೊಬ್ಬ ನಿರ್ದೇಶಕ 'ಬಾಹುಬಲಿ' ವೆಬ್ ಸರಣಿ ನಿರ್ದೇಶನ ಮಾಡುತ್ತಿದ್ದಾರೆ. 'ಬಾಹುಬಲಿ' ವೆಬ್ ಸರಣಿಯಲ್ಲಿ ನಟಿ ನಯನತಾರಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಬಾಹುಬಲಿ' ವೆಬ್ ಸರಣಿಯನ್ನು ನೆಟ್‌ಫ್ಲಿಕ್ಸ್‌ ತೆಗೆದುಕೊಂಡ ಬಳಿಕ ಈ ಹಿಂದೆ ಇದ್ದ ಹಲವು ಪಾತ್ರಧಾರಿಗಳನ್ನು ತೆಗೆದು ಹಾಕಲಾಗಿದ್ದು ದೊಡ್ಡ ಸ್ಟಾರ್ ನಟ-ನಟಿಯರನ್ನು ಕರೆತರಲಾಗಿದೆ. 'ಬಾಹುಬಲಿ; ಬಿಫೋರ್‌ ದಿ ಬಿಗಿನಿಂಗ್' ಚಿತ್ರೀಕರಣ ಕೊನೆಯ ಹಂತದಲ್ಲಿದೆ ಎನ್ನಲಾಗುತ್ತಿದೆ. ವೆಬ್ ಸರಣಿಯು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ.

    ದೇವಕಟ್ಟ ನಿರ್ದೇಶಿಸಿರುವ 'ರಿಪಬ್ಲಿಕ್' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಒಳ್ಳೆ ಪ್ರತಿಕ್ರಿಯೆಗಳನ್ನು ಗಳಿಸಿಕೊಂಡಿದೆ. ಸಿನಿಮಾದ ನಾಯಕ ಸಾಯಿ ಧರಂ ತೇಜ್ ಅಪಘಾತಗೊಂಡು ಆಸ್ಪತ್ರೆಯಲ್ಲಿರುವಾಗಲೇ ಸಿನಿಮಾ ಬಿಡುಗಡೆ ಆಗಿ ಯಶಸ್ಸಿನತ್ತ ದಾಪುಗಾಲಿಟ್ಟಿದೆ. 'ರಿಪಬ್ಲಿಕ್' ಸಿನಿಮಾವು ಐಎಎಸ್ ಅಧಿಕಾರಿಯೊಬ್ಬನ ಕತೆಯಾಗಿದ್ದು, ಸಿನಿಮಾದಲ್ಲಿ ರಮ್ಯಾಕೃಷ್ಣ, ನಾಯಕಿಯಾಗಿ ಐಶ್ವರ್ಯಾ ರಾಜೇಶ್, ವಿಲನ್ ಪಾತ್ರದಲ್ಲಿ ಜಗಪತಿ ಬಾಬು, ರಾಹುಲ್ ರಾಮಕೃಷ್ಣ, ಸುಬ್ಬರಾಜು, ಸಾಯಿ ಧೀನ ನಟಿಸಿದ್ದಾರೆ.

    English summary
    Director Deva Katta talks about Bahubali; before the beginning web series. He said Netflix aiming very high we can not deliver it, so I directed one season and came out of the series.
    Friday, October 1, 2021, 10:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X