twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕ ಬಜೆಟ್‌ ಗಾತ್ರದ 5000 ಪಟ್ಟು ಹೆಚ್ಚು ಹಣ ಖರ್ಚು ಮಾಡುತ್ತಿದೆ ಹಾಟ್‌ಸ್ಟಾರ್!

    |

    ಕೇಂದ್ರ ಸರ್ಕಾರ ಮಂಡಿಸಿದ 2021-22ನೇ ಸಾಲಿನ ದೇಶದ ಬಜೆಟ್‌ನ ಒಟ್ಟು ಗಾತ್ರ 34.83 ಲಕ್ಷ ಕೋಟಿ. ಕರ್ನಾಟಕದ ಬಜೆಟ್ ಗಾತ್ರ 41,358 ಕೋಟಿ. ಆದರೆ ಜನಪ್ರಿಯ ಒಟಿಟಿ ಡಿಸ್ನಿ ಹಾಟ್‌ಸ್ಟಾರ್ ಕೇವಲ ಸಿನಿಮಾ, ವೆಬ್ ಸರಣಿ, ಡಾಕ್ಯುಮೆಂಟರಿಗಳಿಗೆ ಒಂದು ವರ್ಷದಲ್ಲಿ ಭಾರತದ ವಾರ್ಷಿಕ ಬಜೆಟ್‌ಗಿಂತಲೂ ತುಸು ಕಡಿಮೆ ಕರ್ನಾಟಕದ ವಾರ್ಷಿಕ ಬಜೆಟ್‌ಗಿಂತಲೂ 5000 ಪಟ್ಟು ಹೆಚ್ಚು!

    ಈ ವರ್ಷ ಬೇರೆಲ್ಲ ಒಟಿಟಿಗಳನ್ನು ಮೀರಿಸಿ ದೊಡ್ಡ ಮಟ್ಟದಲ್ಲಿ ಬೆಳೆಯುವ ಯೋಜನೆ ಹಾಕಿದಂತಿರುವ ಡಿಸ್ನಿ ಹಾಟ್‌ಸ್ಟಾರ್, 2022ರಲ್ಲಿ ಸಿನಿಮಾ, ವೆಬ್ ಸರಣಿ ಹಾಗೂ ಇತರ ಕಂಟೆಂಟ್‌ಗಾಗಿ ಬರೋಬ್ಬರಿ 23 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಲಿದೆ.

    ತನ್ನ ನೇರ ಎದುರಾಳಿ ನೆಟ್‌ಫ್ಲಿಕ್ಸ್‌ ಅನ್ನು ಕಂಟೆಂಟ್ ವಿಷಯದಲ್ಲಿ ಹಿಂದಿಕ್ಕುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿರುವ ಡಿಸ್ನಿ ಹಾಟ್‌ಸ್ಟಾರ್, 2022ಕ್ಕೆ ನೆಟ್‌ಫ್ಲಿಕ್ಸ್ ಖರ್ಚು ಮಾಡಲಿರುವ ಹಣಕ್ಕಿಂತಲೂ ದುಪ್ಪಟ್ಟು ಹಣವನ್ನು ಕಂಟೆಂಟ್‌ಗಾಗಿ ಖರ್ಚು ಮಾಡುತ್ತಿದೆ.

    Disney Hotstar Spending More Than 24 Lakh Crore Rs In 2022 For Content
    ಡಿಸ್ನಿ ಹಾಟ್‌ಸ್ಟಾರ್ ಈಗಾಗಲೇ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಒಟಿಟಿ. ಲೈವ್ ಟಿವಿ, ಅತ್ಯುತ್ತಮ ಹಾಲಿವುಡ್ ಸಿನಿಮಾ, 'ಗೇಮ್ ಆಫ್ ಥ್ರೋನ್ಸ್' ಹಾಗೂ ಇತರೆ ಜನಪ್ರಿಯ ವೆಬ್ ಸರಣಿಯನ್ನು ಡಿಸ್ನಿ ಹಾಟ್‌ಸ್ಟಾರ್ ಹೊಂದಿದೆ. ಇದರ ಜೊತೆಗೆ ಇನ್ನಷ್ಟು ಒರಿಜಿನಲ್ ಕಂಟೆಂಟ್ ಹಾಗೂ ಪ್ರಾದೇಶಿಕ ಭಾಷೆಗಳ ಕಂಟೆಂಟ್‌ ಕಡೆಗೆ ಡಿಸ್ನಿ ಹಾಟ್‌ಸ್ಟಾರ್ ಗಮನ ನೀಡಲಿದೆ.

    ಡಿಸ್ನಿ ಹಾಟ್‌ಸ್ಟಾರ್‌ ಬಳಿ ಈಗ ಜಗತ್‌ಪ್ರಸಿದ್ಧ ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್‌ನ ಹಲವು ಸಿನಿಮಾಗಳು, ವೆಬ್ ಸರಣಿಗಳು ಇವೆ. ಇದರ ಜೊತೆಗೆ ಇನ್ನಷ್ಟು ಅನಿಮೇಷನ್ ಸಿನಿಮಾಗಳನ್ನು ತರುವ ಯೋಜನೆಯಲ್ಲಿ ಹಾಟ್‌ಸ್ಟಾರ್ ಇದೆ.

    ಭಾರತದಲ್ಲಿ 4.64 ಕೋಟಿ ಚಂದಾದಾರರನ್ನು ಡಿಸ್ನಿ ಹಾಟ್‌ಸ್ಟಾರ್ ಈಗಾಗಲೇ ಹೊಂದಿದೆ. ಭಾರತದಲ್ಲಿ ಡಿಸ್ನಿಗೆ ನೆಟ್‌ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಂಗಳು ಪ್ರಬಲ ಪ್ರತಿಸ್ಪರ್ಧೆ ಒಡ್ಡುತ್ತಿವೆ. ಡಿಸ್ನಿ ಹಾಟ್‌ಸ್ಟಾರ್ ಐಪಿಎಲ್‌, ಹಾಗೂ ಕೆಲವು ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿರುವ ಕಾರಣ ದೊಡ್ಡ ಮಟ್ಟದ ಚಂದಾದಾರರು ಭಾರತದಲ್ಲಿ ಡಿಸ್ನಿಗೆ ಇದ್ದಾರೆ. ಭಾರತದ ದೊಡ್ಡ ಮಾರುಕಟ್ಟೆಯ ಅರಿವಿರುವ ಡಿಸ್ನಿ ಹಾಟ್‌ಸ್ಟಾರ್‌ ಭಾರತದ ಮನೊರಂಜನಾ ಮಾರುಕಟ್ಟೆ ಮೇಲೆ ಕೋಟ್ಯಂತರ ಹಣ ವಿನಿಯೋಗಿಸುವ ಸಾಧ್ಯತೆ ದಟ್ಟವಾಗಿದೆ.

    ನೆಟ್‌ಫ್ಲಿಕ್ಸ್ ಈಗಾಗಲೇ ಭಾರತದ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದೆ. 'ಮುಂದಿನ ಹತ್ತು ಕೋಟಿ ಚಂದಾದಾರರು ನಮಗೆ ಭಾರತದಿಂದಲೇ ಸಿಗಲಿದ್ದಾರೆ' ಎಂದು ನೆಟ್‌ಫ್ಲಿಕ್ಸ್‌ನ ಸಿಇಒ ರೀಡ್ ಹೇಸ್ಟಿಂಗ್ ಹೇಳಿದ್ದರು. 2020 ರಲ್ಲಿ ಭಾರತದ 14 ಲಕ್ಷ ಕೋಟಿ ಹೂಡಿಕೆ ಮಾಡಿದ್ದ ನೆಟ್‌ಫ್ಲಿಕ್ಸ್ ಅದನ್ನು ಮೂರು ಪಟ್ಟು ಹೆಚ್ಚು ಮಾಡಲು ಯೋಜನೆ ಹಾಕಿದೆ. ಆದರೆ ಡಿಸ್ನಿ ಹಾಟ್‌ಸ್ಟಾರ್ ನೆಟ್‌ಫ್ಲಿಕ್ಸ್‌ಗಿಂತಲೂ ಹೆಚ್ಚು ಹಣವನ್ನು ಭಾರತದ ಮೇಲೆ ಹೂಡಿಕೆ ಮಾಡಲಿದೆ.

    English summary
    Disney Hotstar spending more than 24 lakh crore rs in 2022 for content. Its double of what Netflix spending in 2022 for content.
    Friday, January 7, 2022, 13:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X