For Quick Alerts
  ALLOW NOTIFICATIONS  
  For Daily Alerts

  Ek Love Ya: ಒಟಿಟಿಗೆ 'ಏಕ್ ಲವ್ ಯಾ': ಯಾವಾಗ ಬಿಡುಗಡೆ? ಯಾವ ಒಟಿಟಿ?

  |

  ಪ್ರೇಮ್ ನಿರ್ದೇಶನದ ಇತ್ತೀಚಿಗಿನ ಸಿನಿಮಾ 'ಏಕ್ ಲವ್ ಯಾ' ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಂಡಿತ್ತು. ಇದೀಗ ಒಟಿಟಿಯಲ್ಲಿ ತೆರೆ ಕಾಣಲು ಸಿನಿಮಾ ಸಜ್ಜಾಗಿದೆ.

  ಪ್ರೇಮ ಕತೆಯುಳ್ಳ 'ಏಕ್ ಲವ್ ಯಾ' ಸಿನಿಮಾ ಫೆಬ್ರವರಿ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ರಕ್ಷಿತಾ ಪ್ರೇಮ್ ನಿರ್ಮಾಣದ ಈ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದಿದ್ದಲ್ಲದೆ, ಒಳ್ಳೆಯ ಕಲೆಕ್ಷನ್ ಸಹ ಮಾಡಿತ್ತು.

  OTT releases this week : ಈ ವೀಕೆಂಡ್‌ನಲ್ಲಿ ಒಟಿಟಿ ಫುಲ್ ಬ್ಯುಸಿ: ದೊಡ್ಡ ದೊಡ್ಡ ಸಿನಿಮಾ ರಿಲೀಸ್OTT releases this week : ಈ ವೀಕೆಂಡ್‌ನಲ್ಲಿ ಒಟಿಟಿ ಫುಲ್ ಬ್ಯುಸಿ: ದೊಡ್ಡ ದೊಡ್ಡ ಸಿನಿಮಾ ರಿಲೀಸ್

  ಇದೀಗ ಸಿನಿಮಾವು ಒಟಿಟಿಗೆ ಬರುತ್ತಿದ್ದು, ಜೀ ಕನ್ನಡ ಒಟಿಟಿಯಲ್ಲಿ ಏಪ್ರಿಲ್ 08 ರಂದು ಸಿನಿಮಾ ಪ್ರದರ್ಶನಗೊಳ್ಳಲಿದೆ. ಚಿತ್ರಮಂದಿರದಲ್ಲಿ ಹಿಟ್ ಆದ 'ಏಕ್ ಲವ್ ಯಾ' ಒಟಿಟಿಯಲ್ಲಿಯೂ ಹಿಟ್ ಆಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

  'ಏಕ್ ಲವ್ ಯಾ' ಸಿನಿಮಾದಲ್ಲಿ ಪ್ರೇಮ್ ಹಾಗೂ ರಕ್ಷಿತ್‌ ಕುಟುಂಬ ಸಂಬಂಧಿಯಾದ ರಾಣಾ ನಾಯಕ ನಟನಾಗಿ ನಟಿಸಿದ್ದಾರೆ. ರಾಣಾ ಅನ್ನು ಲಾಂಚ್ ಮಾಡಲೆಂದೇ ಈ ಸಿನಿಮಾ ಮಾಡಲಾಗಿದೆ. ಸಿನಿಮಾದಲ್ಲಿ ನಾಯಕಿಯಾಗಿ ರೀಷ್ಮಾ ನಟಿಸಿದ್ದಾರೆ. ನಟಿ ರಚಿತಾ ರಾಮ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ರಕ್ಷಿತಾ ಸಹ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

  ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿಯೆಯಾದರೂ ಸಿನಿಮಾದ ಎಲ್ಲ ಹಾಡುಗಳು ಹಿಟ್ ಆಗಿವೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

  'ಏಕ್ ಲವ್ ಯಾ' ಸಿನಿಮಾ ಬಿಡುಗಡೆ ಆದ ಒಂದೇ ದಿನಕ್ಕೆ ಸಿನಿಮಾಕ್ಕೆ ಪೈರಸಿ ಕಾಟ ಶುರುವಾಗಿತ್ತು. ಈ ಬಗ್ಗೆ ಪ್ರೇಮ್ ಗೃಹ ಸಚಿವರಿಗೆ ದೂರು ನೀಡಿದ್ದರು. ಪೊಲೀಸ್ ಕಮಿಷನರ್ ಅವರಿಗೂ ದೂರು ನೀಡಿದ್ದರು. ಪೈರಸಿ ವಿರುದ್ಧ ಚಿತ್ರರಂಗ ಒಂದಾಗಬೇಕು ಎಂದರು, ಚಿತ್ರರಂಗ ಒಂದಾಗುವುದು ಈ ಸಮಯದಲ್ಲಿ ಕಷ್ಟದ ಮಾತೆಂದು ಸಹ ಅಭಿಪ್ರಾಯ ಪಟ್ಟರು.

  ಇತ್ತೀಚೆಗೆ ಹಲವು ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ತೆರೆ ಕಾಣುತ್ತಿವೆ. ಇತ್ತೀಚೆಗೆ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ನಟನೆಯ 'ಲವ್ ಮಾಕ್ಟೆಲ್ 2' ಸಿನಿಮಾ ಒಟಿಟಿಯಲ್ಲಿ ತೆರೆ ಕಂಡು ಅಲ್ಲಿಯೂ ಹಿಟ್ ಎನಿಸಿಕೊಂಡಿತು. ಅದಕ್ಕೆ ಮುನ್ನ ನಿಖಿಲ್‌ರ ಹೊಸ ಸಿನಿಮಾ 'ರೈಡರ್' ಒಟಿಟಿಗೆ ಬಂತು. 'ಗರುಡ ಗಮನ ವೃಷಭ ವಾಹನ' ಸಹ ಜೀನಲ್ಲಿಯೇ ಬಿಡುಗಡೆ ಆಗಿ ದೊಡ್ಡ ಹಿಟ್ ಆಯಿತು. ಒಟಿಟಿಯಲ್ಲಿ ಬೇರೆ ಬೇರೆ ಭಾಷೆಗಳವರು ಆ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

  English summary
  Ek Love Ya Kannada movie to be streaming on Zee OTT from April 08. Movie intialy released in theater on February 24.
  Wednesday, March 30, 2022, 18:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X