For Quick Alerts
  ALLOW NOTIFICATIONS  
  For Daily Alerts

  ಸೆಕ್ಸ್ ದೃಶ್ಯಗಳ ಮೂಲಕ ಸೇನೆಗೆ ಅವಮಾನ: ಏಕ್ತಾ ಕಪೂರ್ ವಿರುದ್ಧ ದೂರು

  By Avani Malnad
  |

  ನಿರ್ಮಾಪಕಿ ಏಕ್ತಾ ಕಪೂರ್ ನಿರ್ಮಾಣದ ವೆಬ್ ಸಿರೀಸ್ 'ಟ್ರಪಲ್ ಎಕ್ಸ್-2' ತೀವ್ರ ವಿವಾದ ಸೃಷ್ಟಿಸಿದ್ದು, ಭಾರತೀಯ ಸೇನೆಯನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಸೇನೆಯ ಕೆಲವು ಮಾಜಿ ಸೈನಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

  ಇದೇ ವೆಬ್ ಸೀರೀಸ್‌ ವಿರುದ್ಧ ಕೆಲವು ದಿನಗಳ ಹಿಂದೆ ಹಿಂದಿ ಬಿಗ್ ಬಾಸ್ 13ನೇ ಸೀಸನ್‌ನ ಸ್ಪರ್ಧಿಯಾಗಿದ್ದ ಹಿಂದೂಸ್ಥಾನಿ ಭಾವು ದೂರು ನೀಡಿದ್ದರು. ಈಗ ಗುರುಗ್ರಾಮದ ಪಾಲಮ್ ವಿಹಾರದಲ್ಲಿನ ಪೊಲೀಸ್ ಠಾಣೆಗೆ ಕೆಲವು ಮಾಜಿ ಸೈನಿಕರು ಏಕ್ತಾ ಕಪೂರ್ ವಿರುದ್ಧ ದೂರು ಸಲ್ಲಿಸಿದ್ದಾರೆ. ಈ ವೆಬ್ ಸೀರೀಸ್‌ನಲ್ಲಿ ಅನುಚಿತವಾದ ಹಾಗೂ ಅಸಭ್ಯಕರ ದೃಶ್ಯ ಹಾಗೂ ಸಂಭಾಷಣೆಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

  ಜನಪ್ರಿಯ ಸೀರಿಯಲ್ 'ನಾಗಿನ್' ಸಿನಿಮಾ ಮಾಡಲು ಬಯಸಿದ್ದರು ಏಕ್ತಾ ಕಪೂರ್, ಆದರೆ...ಜನಪ್ರಿಯ ಸೀರಿಯಲ್ 'ನಾಗಿನ್' ಸಿನಿಮಾ ಮಾಡಲು ಬಯಸಿದ್ದರು ಏಕ್ತಾ ಕಪೂರ್, ಆದರೆ...

  ಕೆಲವು ದಿನಗಳ ಹಿಂದಷ್ಟೇ ಏಕ್ತಾ ಕಪೂರ್ ಹಾಗೂ ಅವರ ತಾಯಿ ಶೋಭಾ ಕಪೂರ್ ವಿರುದ್ಧ ಇದೇ ಆರೋಪದಡಿ ಬಿಗ್ ಬಾಸ್ ಸ್ಪರ್ಧಿ ವಿಕಾಸ್ ಪಾಠಕ್ ಅಲಿಯಾಸ್ ಹಿಂದೂಸ್ತಾನಿ ಬಾವು ದೂರು ಸಲ್ಲಿಸಿದ್ದರು. ಮುಂದೆ ಓದಿ...

  ಆಕ್ಷೇಪಾರ್ಹ ದೃಶ್ಯಗಳು

  ಆಕ್ಷೇಪಾರ್ಹ ದೃಶ್ಯಗಳು

  ತ್ರಿಪಲ್ ಎಕ್ಸ್-2 ವೆಬ್ ಸೀರೀಸ್ ಸೇನಾ ಸಿಬ್ಬಂದಿಯ ಜೀವನವನ್ನು ಕುರಿತಾದ ಸೀರೀಸ್ ಆಗಿದೆ. ಈ ವೆಬ್ ಸೀರೀಸ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹುತಾತ್ಮರ ಕಲ್ಯಾಣ ಪ್ರತಿಷ್ಠಾನದ (ಎಂಡಬ್ಲ್ಯೂಎಫ್) ಅಧ್ಯಕ್ಷ ಮೇಜರ್ ಟಿಸಿ ರಾವ್, 'ಈ ಸೀರೀಸ್ ನಮ್ಮ ಸಶಸ್ತ್ರ ಸೇನಾ ಪಡೆಯನ್ನು ಕೀಳಾಗಿ ತೋರಿಸುವ ಮೂಲಕ ಅವರ ನೈತಿಕ ಶಕ್ತಿಯನ್ನು ಕುಸಿಯುವಂತೆ ಮಾಡುತ್ತಿದೆ' ಎಂದು ಆರೋಪಿಸಿದ್ದಾರೆ.

  ಕೆಟ್ಟದಾಗಿ ಚಿತ್ರಣ

  ಕೆಟ್ಟದಾಗಿ ಚಿತ್ರಣ

  'ದೇಶಕ್ಕಾಗಿ ಸೈನಿಕರು ಪ್ರಾಣತ್ಯಾಗ ಮಾಡುತ್ತಾರೆ. ಆದರೆ ಈ ಸೀರೀಸ್‌ನ ನಿರ್ಮಾಪಕರು ಮತ್ತು ನಿರ್ದೇಶಕರು ಸೈನಿಕರು ದೂರದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅವರ ಹೆಂಡತಿಯರು ಮನೆಯಲ್ಲಿ ಪರಪುರುಷರೊಂದಿಗೆ ಸಂಬಂಧ ಇರಿಸಿಕೊಳ್ಳುತ್ತಾರೆ ಎಂದು ಕೆಟ್ಟದಾಗಿ ಚಿತ್ರಿಸಿದ್ದಾರೆ' ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  30 ಬಾರಿ 'ಏಕ್ತಾ ಕಪೂರ್'ರನ್ನ ಹಿಂಬಾಲಿಸಿದ್ದ ಕ್ಯಾಬ್ ಡ್ರೈವರ್: ಕಾರಣ ಅಚ್ಚರಿ ತಂದಿದೆ.!30 ಬಾರಿ 'ಏಕ್ತಾ ಕಪೂರ್'ರನ್ನ ಹಿಂಬಾಲಿಸಿದ್ದ ಕ್ಯಾಬ್ ಡ್ರೈವರ್: ಕಾರಣ ಅಚ್ಚರಿ ತಂದಿದೆ.!

  ಸೈನಿಕರಿಗೆ ಅವಮಾನ

  ಸೈನಿಕರಿಗೆ ಅವಮಾನ

  'ಸಮವಸ್ತ್ರದಲ್ಲಿರುವ ಸೈನಿಕರು, ಅಶೋಕ ಸ್ತಂಬ ಮತ್ತು ತಾಜ್ ಸಂಕೇತಗಳನ್ನು ಹರಿದು ಹಾಕುವಂತಹ ದೃಶ್ಯಗಳು ಇದರಲ್ಲಿದೆ. ಇದು ನಮ್ಮ ಸೇನಾ ಪಡೆ ಹಾಗೂ ಸೈನಿಕರಿಗೆ ಮಾಡಿರುವ ಅವಮಾನ' ಎಂದು ಅವರು ಕಿಡಿಕಾರಿದ್ದಾರೆ.

  ಪ್ರತಿಭಟನೆಯ ಎಚ್ಚರಿಕೆ

  ಪ್ರತಿಭಟನೆಯ ಎಚ್ಚರಿಕೆ

  'ಹರಿಯಾಣದಂತಹ ರಾಜ್ಯವನ್ನು 3.70 ಲಕ್ಷಕ್ಕೂ ಅಧಿಕ ಸೇನಾ ಯೋಧರು ಪ್ರತಿನಿಧಿಸುತ್ತಿದ್ದಾರೆ. ಇದು ಅವರಿಗೆ ಹಾಗೂ ನಮ್ಮಂತಹ ಮಾಜಿ ಸೈನಿಕರಿಗೆ ಮಾಡಿರುವ ಅವಮಾನ. ವೆಬ್ ಸೀರೀಸ್‌ನಿಂದ ಇಂತಹ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯದೆ ಹೋದರೆ ಏಕ್ತಾ ಕಪೂರ್ ವಿರುದ್ಧದ ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾಗುತ್ತದೆ' ಎಂದು ಪ್ರತಿಷ್ಠಾನದ ಸದಸ್ಯ ಮೇಜರ್ ಎಸ್ ಎನ್ ರಾವ್ ಎಚ್ಚರಿಕೆ ನೀಡಿದ್ದಾರೆ.

  ಹಿಟ್ ಚಿತ್ರ ಕೊಟ್ಟ ನಿರ್ದೇಶಕನಿಗೆ ಲಕ್ಷುರಿ ಕಾರ್ ಗಿಫ್ಟ್ ಮಾಡಿದ ನಿರ್ಮಾಪಕಿ.!ಹಿಟ್ ಚಿತ್ರ ಕೊಟ್ಟ ನಿರ್ದೇಶಕನಿಗೆ ಲಕ್ಷುರಿ ಕಾರ್ ಗಿಫ್ಟ್ ಮಾಡಿದ ನಿರ್ಮಾಪಕಿ.!

  English summary
  Ex army men lodged complaint against producer Ekta Kapoor for insulting Indian Army in her Web series Triple X-2.
  Tuesday, June 9, 2020, 23:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X