ನೆಟ್‌ಫ್ಲಿಕ್ಸ್‌ನಲ್ಲಿ 'ಕಾಂತಾರ': ಅಸಮಾಧಾನ ವ್ಯಕ್ತಪಡಿಸಿದ ವೀಕ್ಷಕರು! ಕಾರಣ?

ಚಿತ್ರಮಂದಿರಗಳಲ್ಲಿ ಸೂಪರ್-ಡೂಪರ್ ಹಿಟ್ ಆಗಿರುವ 'ಕಾಂತಾರ' ಸಿನಿಮಾ 400 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ. ಮಾತ್ರವಲ್ಲ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.

ಚಿತ್ರಮಂದಿರದಲ್ಲಿ ಸೂಪರ್-ಡೂಪರ್ ಹಿಟ್ ಆದ ಸಿನಿಮಾ ಆ ಬಳಿಕ ಅಮೆಜಾನ್ ಪ್ರೈಂನಲ್ಲಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಆಗಿ ಅಲ್ಲಿಯೂ ಸೂಪರ್ ಹಿಟ್ ಆಯಿತು. ಅಮೆಜಾನ್ ಪ್ರೈಂನಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 'ಕಾಂತಾರ' ಬಿಡುಗಡೆ ಆಗಿತ್ತು.

ಆ ಬಳಿಕ 'ಕಾಂತಾರ' ಸಿನಿಮಾದ ಹಿಂದಿ ಆವೃತ್ತಿಯು ನೆಟ್‌ಫ್ಲಿಕ್ಸ್‌ನಲ್ಲಿ ಡಿಸೆಂಬರ್ 09 ರಂದು ತೆರೆಗೆ ಬಂದಿದೆ. ಅಂತರಾಷ್ಟ್ರೀಯ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಚಿತ್ರತಂಡವು ಹಿಂದಿ ಆವೃತ್ತಿಯನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಿದೆ. ಆದರೆ ಬಿಡುಗಡೆ ಆದ ಒಂದೇ ದಿನಕ್ಕೆ ವೀಕ್ಷಕರು ದೂರುಗಳನ್ನು ಹೇಳಿದ್ದಾರೆ. ವಿಶೇಷವಾಗಿ ಹಿಂದಿ ಭಾಷೆಯ ಡಬ್ಬಿಂಗ್ ಹೆಚ್ಚು ಜನರಿಗೆ ಇಷ್ಟವಾಗಿಲ್ಲ.

ಕನ್ನಡ ಹೊರತುಪಡಿಸಿದರೆ 'ಕಾಂತಾರ' ಸಿನಿಮಾ ಅತಿ ಹೆಚ್ಚು ಕಲೆಕ್ಷನ್ ಮಾಡಿದ್ದು ಹಿಂದಿ ಭಾಷಿಕ ಪ್ರದೇಶದಲ್ಲಿ. ಆದರೆ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಿರುವ ಹಿಂದಿ ಆವೃತ್ತಿಯೇ ಚೆನ್ನಾಗಿಲ್ಲ ಎಂದು ವೀಕ್ಷಕರು ಆರೋಪಿಸಿದ್ದಾರೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಹಿಂದಿ ಆವೃತ್ತಿಯನ್ನು ನೆಟ್‌ಫ್ಲಿಕ್ಸ್‌ಗೆ ಯಥಾವತ್ತು ಉಳಿಸಿಕೊಂಡಂತಿಲ್ಲ. ಚಿತ್ರಮಂದಿರದಲ್ಲಿ ಡಬ್ಬಿಂಗ್ ಚೆನ್ನಾಗಿತ್ತು, ನೆಟ್‌ಫ್ಲಿಕ್ಸ್‌ನಲ್ಲಿ ಚೆನ್ನಾಗಿಲ್ಲ ಎಂದು ಕೆಲವರು ದೂರಿದ್ದಾರೆ.

Kantara Movie Streaming On Netflix, Viewers Complaint On Poor Dubbing

'ಕಾಂತಾರ' ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವ ಅನುಭವ ಉತ್ಕೃಷ್ಟವಾಗಿರುತ್ತದೆ ಎಂದು ಹಲವರು ಹೇಳಿದ್ದಾರೆ. ಆದರೆ ಒಟಿಟಿಯಲ್ಲಿ 'ಕಾಂತಾರ' ಸಿನಿಮಾ ನೋಡಿದಾಗ ಆ ಉತ್ಕೃಷ್ಟ ಅನುಭವ ಆಗುತ್ತಿಲ್ಲ ಎಂದು ಸಹ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿ ಡಬ್ಬಿಂಗ್ ನೋಡುವಾಗ ಕೆಲವು ಸಂಭಾಷಣೆಗಳು ಹಠಾತ್ತನೆ ಕನ್ನಡದಲ್ಲಿ ಪ್ರಸಾರವಾಗುತ್ತಿವೆಯಂತೆ. ಸಿನಿಮಾದ ಆರಂಭದಲ್ಲಿ ಹಾಗೂ ಅರಣ್ಯದಲ್ಲಿ ನಡೆವ ಕೆಲವು ಸೀನ್‌ಗಳಲ್ಲಿ ಈ ರೀತಿ ಆಗುತ್ತಿದೆ ಎಂದು ಕೆಲವು ವೀಕ್ಷಕರು ಟ್ವೀಟ್ ಮಾಡಿದ್ದಾರೆ. ಇದನ್ನು ದಯವಿಟ್ಟು ಸರಿ ಮಾಡಿ ಎಂದು ಮನವಿ ಮಾಡಿದ್ದಾರೆ.

More from Filmibeat

English summary
Kantara movie streaming on Netflix in Hindi language. Viewers complaint about poor dubbing quality.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X