For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಗುಡ್‌ನ್ಯೂಸ್: ಕೇರಳ ಸರ್ಕಾರದಿಂದ ಸ್ವಂತ ಒಟಿಟಿಗೆ ನಿರ್ಧಾರ

  |

  ಚಿತ್ರರಂಗವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ತನ್ನದೇ ಅಧೀನದಲ್ಲಿ ಸ್ವಂತ ಒಟಿಟಿ ಆರಂಭಿಸಲು ಮುಂದಾಗಿದೆ ಎಂದು ಕೇರಳ ಸಚಿವ ಸಾಜಿ ಚೆರಿಯನ್ ತಿಳಿಸಿದ್ದಾರೆ. ಸರ್ಕಾರ ಸ್ವಂತ ಒಟಿಟಿ ಆರಂಭಿಸುವುದರಿಂದ ಸಣ್ಣ ಚಿತ್ರಗಳಿಗೆ ಗಣನೀಯ ಮಟ್ಟದಲ್ಲಿ ಸಹಾಯವಾಗಲಿದೆ ಎಂದು ಸಾಂಸ್ಕೃತಿಕ ವ್ಯವಹಾರ ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.

  ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (KUWJ) ಮತ್ತು ಕೇಸರಿ ಮೆಮೋರಿಯಲ್ ಜರ್ನಲಿಸ್ಟ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಚೆರಿಯನ್, ''ಎಲ್ಲಾ ರೀತಿಯ ಕಲಾತ್ಮಕ ಚಲನಚಿತ್ರಗಳನ್ನು ಜನರಿಗೆ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ, ಸ್ವಂತ ಒಟಿಟಿ ಸ್ಥಾಪಿಸಲು ಅಧ್ಯಯನ ನಡೆಯುತ್ತಿದೆ'' ಎಂದು ಹೇಳಿದರು. ಮುಂದೆ ಓದಿ...

  ತೆಲುಗಿಗಾಗಿ ಮತ್ತೊಂದು ಪ್ರತ್ಯೇಕ ಒಟಿಟಿ: 200 ಕೋಟಿ ಪ್ರಾಥಮಿಕ ಬಂಡವಾಳ!ತೆಲುಗಿಗಾಗಿ ಮತ್ತೊಂದು ಪ್ರತ್ಯೇಕ ಒಟಿಟಿ: 200 ಕೋಟಿ ಪ್ರಾಥಮಿಕ ಬಂಡವಾಳ!

  ಸ್ವಂತ ಒಟಿಟಿಗೆ ಅಧ್ಯಯನ ನಡೆಯುತ್ತಿದೆ

  ಸ್ವಂತ ಒಟಿಟಿಗೆ ಅಧ್ಯಯನ ನಡೆಯುತ್ತಿದೆ

  ''ಸ್ವಂತವಾಗಿ ಒಟಿಟಿ ಪ್ಲಾಟ್‌ ಫಾರ್ಮ್ ಪ್ರಾರಂಭಿಸಬೇಕೋ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಪ್ಲಾಟ್‌ ಫಾರ್ಮ್‌ನ ಸೇವೆ ಖರೀದಿಸಿ ಸರ್ಕಾರವೇ ನೋಡಿಕೊಳ್ಳಬೇಕೋ ಎಂದು ಆಲೋಚಿಸಲಾಗುತ್ತಿದೆ. ಈ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡುವ ಜವಾಬ್ದಾರಿಯನ್ನು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮತ್ತು ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಲಾಗಿದೆ'' ಎಂದು ಈ ಸಂದರ್ಭದಲ್ಲಿ ಹೇಳಿದರು.

  ಸಣ್ಣ ಚಿತ್ರಗಳಿಗೆ ದೊಡ್ಡ ಸಹಾಯ

  ಸಣ್ಣ ಚಿತ್ರಗಳಿಗೆ ದೊಡ್ಡ ಸಹಾಯ

  ಕೊರೊನಾವೈರಸ್ ಬಿಕ್ಕಟ್ಟಿನಿಂದ ಸಣ್ಣ ಮಟ್ಟದ ಚಿತ್ರಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಈ ಸಲುವಾಗಿ ಸರ್ಕಾರದ ಒಟಿಟಿ ಮೂಲಕ ಸಾಧ್ಯವಾದಷ್ಟು ಸಹಾಯ ಮಾಡಬಹುದು. ಅವರ ಚಿತ್ರಗಳನ್ನು ಜನರಿಗೆ ತಲುಪಿಸಲು ವೇದಿಕೆ ಸೃಷ್ಟಿಸಬಹುದು ಎಂದು ಸಚಿವ ಸಾಜಿ ಭರವಸೆ ನೀಡಿದ್ದಾರೆ.

  ಒಟಿಟಿಯಲ್ಲಿ ಈ ವಾರ ನೋಡಬಹುದಾದ ಸಿನಿಮಾ, ವೆಬ್ ಸಿರೀಸ್‌ಗಳ ವಿವರಒಟಿಟಿಯಲ್ಲಿ ಈ ವಾರ ನೋಡಬಹುದಾದ ಸಿನಿಮಾ, ವೆಬ್ ಸಿರೀಸ್‌ಗಳ ವಿವರ

  ದೊಡ್ಡ ಚಿತ್ರಗಳು ಸದ್ಬಳಕೆ ಮಾಡಿಕೊಳ್ಳಬಹುದು

  ದೊಡ್ಡ ಚಿತ್ರಗಳು ಸದ್ಬಳಕೆ ಮಾಡಿಕೊಳ್ಳಬಹುದು

  ದೊಡ್ಡ ಸಿನಿಮಾಗಳು ಸಹ ಈ ಒಟಿಟಿ ವೇದಿಕೆಯನ್ನು ಬಳಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ. ಸಾಮಾನ್ಯವಾಗಿ ದೊಡ್ಡ ಬಜೆಟ್ ಚಿತ್ರಗಳಿಗೆ ಥಿಯೇಟರ್‌ನಲ್ಲಿ ಬರುವುದರಿಂದ ಹೆಚ್ಚು ಲಾಭ ಇದೆ. ದೊಡ್ಡ ಸಿನಿಮಾಗಳಿಗೂ ಈ ಒಟಿಟಿ ಉಪಯೋಗವಾಗುವುದಾದರೆ ಖಂಡಿತಾ ಬಳಸಬಹುದು ಎಂದು ಸಾಜಿ ಹೇಳಿದ್ದಾರೆ.

  ಕೇರಳ ಮಾದರಿ ಆಗುತ್ತಾ?

  ಕೇರಳ ಮಾದರಿ ಆಗುತ್ತಾ?

  ಅಂದ್ಹಾಗೆ, ಇದುವರೆಗೂ ಯಾವುದೇ ರಾಜ್ಯದಲ್ಲಿ ಸರ್ಕಾರ ಸ್ವಂತವಾಗಿ ಒಟಿಟಿ ಫ್ಲಾಟ್‌ಫಾರ್ಮ್ ಹೊಂದಿಲ್ಲ. ಕೇರಳ ಇಂತಹದೊಂದು ಆಲೋಚನೆ ಮಾಡಿದ್ದು, ಬಹುಶಃ ಆನ್‌ಲೈನ್ ದುನಿಯಾದಲ್ಲಿ ಕೇರಳ ಸರ್ಕಾರ ಹೊಸ ಕ್ರಾಂತಿ ಸೃಷ್ಟಿಸಬಹುದು. ಕೇರಳ ಸ್ವಂತ ಒಟಿಟಿ ಸಕ್ಸಸ್ ಆದರೆ ಇತರೆ ರಾಜ್ಯಗಳಲ್ಲಿ ಇದು ಮಾದರಿಯಾಗಬಹುದು.

  English summary
  Kerala government all set to launch its own OTT platform. The first state in the country to start a streaming platform its own.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X