For Quick Alerts
  ALLOW NOTIFICATIONS  
  For Daily Alerts

  ನಟಿಗೆ ಮೋಸ ಮಾಡಿದರೇ ಅನುರಾಗ್ ಕಶ್ಯಪ್? ನಟಿ ಹೇಳಿದ್ದೇನು?

  |

  ನಟಿ ಮಂದಾನಾ ಕರೀಮಿ ಕೆಲವು ದಿನಗಳ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ನೀಡಿದ್ದ ಹೇಳಿಕೆ ಭಾರಿ ಸದ್ದು ಮಾಡಿತ್ತು.

  ಕಂಗನಾ ರನೌತ್ ನಡೆಸಿಕೊಡುವ 'ಲಾಕ್ ಅಪ್' ಶೋನಲ್ಲಿ ಸ್ಪರ್ಧಿಯಾಗಿರುವ ನಟಿ ಮಂದಾನಾ ಕರೀಮಿ, ತಾವು ಬಾಲಿವುಡ್‌ನ ಜನಪ್ರಿಯ ನಿರ್ದೇಶಕನೊಬ್ಬನಿಂದ ಮೋಸ ಹೋಗಿದ್ದಾಗಿ ಹೇಳಿಕೊಂಡು ಕಣ್ಣೀರು ಹಾಕಿದ್ದರು.

  ಶೋನಲ್ಲಿ ಎಲಿಮಿನೇಷನ್‌ ಹಂತಕ್ಕೆ ಬಂದವರು, ಎಲಿಮಿನೇಶನ್‌ನಿಂದ ತಪ್ಪಿಸಿಕೊಳ್ಳಲು ತಮ್ಮ ಜೀವನದ ಕರಾಳ ಸತ್ಯವನ್ನು ಬಹಿರಂಗಪಡಿಸಬೇಕಾಗಿರುತ್ತದೆ. ಈ ಹಂತದಲ್ಲಿ ನಟಿ ಮಂದಾನಾ ಕರೀಮಿ, ಬಾಲಿವುಡ್‌ನ ಖ್ಯಾತ ನಿರ್ದೇಶಕನೊಬ್ಬ ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ ಬಳಸಿಕೊಂಡ ಎಂದಿದ್ದರು. ಆತನಿಂದಾಗಿ ತಾವು ಗರ್ಭಿಣಿ ಆಗಿದ್ದಾಗಿಯೂ ಹೇಳಿದ್ದರು. ಇದನ್ನು ಕೇಳಿ ನಟಿ ಕಂಗನಾ ಸೇರಿದಂತೆ ಇತರ ಸ್ಪರ್ಧಿಗಳು ಸಹ ಕಣ್ಣೀರಾಗಿದ್ದರು.

  ಖ್ಯಾತ ನಿರ್ದೇಶಕನೊಂದಿಗೆ ಅಕ್ರಮ ಸಂಬಂಧ: ಕಂಗನಾ ಎದುರು ಸತ್ಯ ಬಿಚ್ಚಿಟ್ಟ ನಟಿ!ಖ್ಯಾತ ನಿರ್ದೇಶಕನೊಂದಿಗೆ ಅಕ್ರಮ ಸಂಬಂಧ: ಕಂಗನಾ ಎದುರು ಸತ್ಯ ಬಿಚ್ಚಿಟ್ಟ ನಟಿ!

  ಮಂದಾನಾ ಕರೀಮಿ, ಶೋನಲ್ಲಿ ಈ ವಿಷಯ ಹೇಳಿದ ಬಳಿಕ ಆ ನಿರ್ದೇಶಕ ಯಾರು ಇರಬಹುದೆಂಬ ಚರ್ಚೆ ಹೊರಗೆ ಪ್ರಾರಂಭವಾಗಿತ್ತು, ಬಹಳಷ್ಟು ಜನ ಅದು ನಿರ್ದೇಶಕ ಅನುರಾಗ್ ಕಶ್ಯಪ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂದಾನಾ ಕರೀಮಿ, ಆ ನಿರ್ದೇಶಕ ಅನುರಾಗ್ ಕಶ್ಯಪ್ ಅಲ್ಲ ಎಂದಿದ್ದಾರೆ.

  ಶೋನಿಂದ ಹೊರಗೆ ಬಂದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಂದಾನಾ ಕರೀಮಿ ಉಲ್ಟಾ ಹೊಡೆದಿದ್ದಾರೆ. ''ನಾನು ಭಾಗವಹಿಸಿದ್ದ ಶೋನ ಫಾರ್ಮ್ಯಾಟ್ ಹಾಗೆ ಇದ್ದುದ್ದರಿಂದ ನಾನು ಅಲ್ಲಿ ಹಾಗೆ ಮಾತನಾಡಿದೆ'' ಎಂದಿದ್ದಾರೆ.

  ''ಆ ಶೋನಲ್ಲಿ ನನ್ನ ಜೀವನದ ಸೀಕ್ರೆಟ್ ಅನ್ನು ಹಂಚಿಕೊಳ್ಳಬೇಕಾಗಿತ್ತು ಹಂಚಿಕೊಂಡೆ, ಆದರೆ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಬಂದಂತೆ ನಾನು ಅಲ್ಲಿ ಮಾತನಾಡಿರಲಿಲ್ಲ. ನನಗೆ ನಿರ್ದೇಶಕನೊಟ್ಟಿಗೆ ಸಂಬಂಧವಿದ್ದಿದ್ದು ನಿಜ ಆದರೆ ಆತ ನನ್ನ ಗೆಳೆಯನಾಗಿರಲಿಲ್ಲ'' ಎಂದಿದ್ದಾರೆ.

  ನಿಮಗೆ ಮೋಸ ಮಾಡಿದ ನಿರ್ದೇಶಕ ಅನುರಾಗ್ ಕಶ್ಯಪ್‌ ಎನ್ನಲಾಗುತ್ತಿದೆಯಲ್ಲಾ? ಎಂಬ ಪ್ರಶ್ನೆಗೆ ಸಿಟ್ಟಿನಿಂದಲೇ ಉತ್ತರಿಸಿರುವ ಮಂದಾನಾ, ''ಇದು ಸುಳ್ಳು ಸುದ್ದಿ, ಕೆಲವು ಪತ್ರಕರ್ತರು ಬೇಜವಾಬ್ದಾರಿಯಿಂದ ಈ ರೀತಿಯ ಸುದ್ದಿಗಳನ್ನು ಹಬ್ಬಿಸಿದ್ದಾರೆ. ನಾನೂ ಹಾಗೂ ಅನುರಾಗ್ ಕಶ್ಯಪ್ ಈಗಲೂ ಉತ್ತಮ ಗೆಳೆಯರಾಗಿದ್ದೇವೆ. ನಾನು ಸಂಬಂಧ ಹೊಂದಿದ್ದ ವ್ಯಕ್ತಿ ನನ್ನ ಗೆಳೆಯನಾಗಿರಲಿಲ್ಲ'' ಎಂದಿರುವ ಮಂದಾನಾ, ಆ ನಿರ್ದೇಶಕನ ಹೆಸರು ಹೇಳಲು ನಿರಾಕರಿಸಿದ್ದಾರೆ.

  'ನಾನು ಪತಿ ಗೌರವ್ ಗುಪ್ತಾನಿಂದ ದೂರವಾದಾಗ ಬಹಳ ಬೇಸರದಲ್ಲಿದ್ದೆ. ಆಗಲೇ ನನಗೆ ಬಾಲಿವುಡ್‌ನ ಜನಪ್ರಿಯ ನಿರ್ದೇಶಕನ ಪರಿಚಯವಾಯ್ತು. ನಾವಿಬ್ಬರೂ ಆಪ್ತವಾಗಿದ್ದೆವು. ಪರಸ್ಪರ ಸಂಬಂಧ ಹೊಂದಿದ್ದವು. ಒಮ್ಮೆ ನಾವು ತಂದೆ-ತಾಯಿ ಆಗುವ ಬಗ್ಗೆ ಯೋಚಿಸಿದೆವು. ಅಂತೆಯೇ ನಾನು ಗರ್ಭಿಣಿ ಆದೆ ಆದರೆ ಆತ ನನಗೆ ಮೋಸ ಮಾಡಿದ. ಆ ಬಾಲಿವುಡ್ ನಿರ್ದೇಶಕ ಮಹಿಳೆಯರ ಹಕ್ಕುಗಳ ಬಗ್ಗೆ ಹಲವು ಸಿನಿಮಾಗಳನ್ನು ತೆಗೆದಿದ್ದಾನೆ. ಬಾಲಿವುಡ್‌ ಸಿನಿ ಪ್ರೇಮಿಗಳ ಆದರ್ಶ ಅವನು. ಆದರೆ ನನಗೆ ಹೀಗೆ ಮಾಡಿದ'' ಎಂದು ಹೇಳುತ್ತಾ ಮಂದಾನಾ ಕಣ್ಣೀರು ಹಾಕಿದ್ದರು. ಮಂದಾನಾ ಕತೆ ಕೇಳಿ ನಟಿ ಕಂಗನಾ ಸಹ ಕಣ್ಣೀರು ಹಾಕಿದ್ದರು.

  English summary
  Actress Mandana Karimi said director Anurag Kashyap did not cheated on her. She confesses in a reality show that a director cheated on her.
  Friday, April 22, 2022, 9:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X