For Quick Alerts
  ALLOW NOTIFICATIONS  
  For Daily Alerts

  ಬಂದೂಕು-ರಕ್ತ-ಬೈಗುಳ-ರಾಜಕೀಯ: ಮತ್ತೆ ಬಂತು 'ಮಿರ್ಜಾಪುರ್'

  |

  ಸೇಕ್ರೆಡ್ ಗೇಮ್ಸ್ ನಂತರ ಹಿಂದಿ ವೆಬ್‌ ಸೀರೀಸ್ ನಲ್ಲಿ ಅತಿ ಹೆಚ್ಚು ಹಿಟ್ ಎನಿಸಿಕೊಂಡಿದ್ದ 'ಮಿರ್ಜಾಪುರ್' ಈಗ ಮತ್ತೆ ಬರುತ್ತಿದೆ.

  ಮಿರ್ಜಾಪುರ್ ಎಂಬ ಊರಿನ ಕರಾಳ ಕಥೆ ಹೇಳಿದ್ದ ಮಿರ್ಜಾಪುರ್ ವೆಬ್ ಸರಣಿ ಅಮೆಜಾನ್ ಪ್ರೈಂ ನಲ್ಲಿ ಪ್ರಸಾರವಾಗಿ ದೊಡ್ಡ ಹಿಟ್ ಎನಿಸಿಕೊಂಡಿತ್ತು. ಅದೀಗ ಮಿರ್ಜಾಪುರ್ 2 ಹೆಸರಿನಲ್ಲಿ ಮತ್ತೆ ಬರುತ್ತಿದೆ.

  ಮೊದಲೇ ಭಾಗದಲ್ಲಿ ಬಿಟ್ಟಿದ್ದ ಕತೆಯನ್ನೇ ಎರಡನೇ ಭಾಗದಲ್ಲಿ ಮುಂದುವರೆಸಲಾಗಿದ್ದು, ಮಿರ್ಜಾಪುರ್ 2 ವೆಬ್ ಸರಣಿಯ ಟ್ರೇಲರ್ ಇಂದು ಬಿಡುಗಡೆ ಆಗಿದೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಟ್ರೇಲರ್‌ಗೆ ಲೈಕ್ ಒತ್ತಿದ್ದಾರೆ.

  ಬಂದೂಕು-ರಕ್ತ-ಬೈಗುಳ-ರಾಜಕೀಯ

  ಬಂದೂಕು-ರಕ್ತ-ಬೈಗುಳ-ರಾಜಕೀಯ

  ಇಂದು ಬಿಡುಗಡೆ ಆಗಿರುವ 2:48 ನಿಮಿಷದ ಟ್ರೇಲರ್‌ನಲ್ಲಿ ಬಂದೂಕು, ರಕ್ತ, ಅಸಭ್ಯ ಬೈಗುಳಗಳು, ರಾಜಕೀಯ, ಕತ್ತಲು ಇವೇ ತುಂಬಿವೆ. ಮಿರ್ಜಾಪುರ್ ಮೊದಲ ಭಾಗದಲ್ಲಿ ರೌಡಿಯಾಗಿದ್ದ ಕಾಲೀನ್ ಭಯ್ಯಾ (ಮನೋಜ್ ಪ್ರಿಪಾಠಿ) ಹೊಸ ಮಿರ್ಜಾಪುರ್‌ ನಲ್ಲಿ ದೊಡ್ಡ ರಾಜಕಾರಣಿಯಾಗಿ ಬೆಳೆದಿದ್ದಾನೆ. ಮಿರ್ಜಾಪುರದ ಅಧಿಕಾರದ ಕುರ್ಚಿಗಾಗಿ ಮತ್ತೆ ಕಿತ್ತಾಟ ಪ್ರಾರಂಭವಾಗಿದೆ. ಇದರ ಜೊತೆಗೆ ಸೇಡು ಸಹ ಸೇರಿಕೊಂಡಿದೆ.

  ಥ್ರಿಲ್ಲರ್ ಕತೆ ಯಿಂದ ಹಿಟ್ ಆಗಿದ್ದ ಮಿರ್ಜಾಪುರ್

  ಥ್ರಿಲ್ಲರ್ ಕತೆ ಯಿಂದ ಹಿಟ್ ಆಗಿದ್ದ ಮಿರ್ಜಾಪುರ್

  ಬಂದೂಕು, ರಕ್ತ, ಅಸಭ್ಯ ಬೈಗುಳಗಳು, ರಾಜಕೀಯ ಮಿರ್ಜಾಪುರ್ ಮೊದಲ ಭಾಗದಲ್ಲಿಯೂ ಇದ್ದವು, ಆದರೆ ಇವೆಲ್ಲವುಗಳನ್ನು ಬಳಸಿ ಥ್ರಿಲ್ಲರ್ ಕತೆಯೊಂದನ್ನು ಕಟ್ಟಲಾಗಿತ್ತು. ಹಾಗಾಗಿಯೇ ವೆಬ್ ಸರಣಿ ಸಖತ್ ಹಿಟ್ ಆಗಿತ್ತು.

  ಸೇಕ್ರೆಡ್ ಗೇಮ್ಸ್‌ಗೆ ಸ್ಪರ್ಧಿ ಮಿರ್ಜಾಪುರ್

  ಸೇಕ್ರೆಡ್ ಗೇಮ್ಸ್‌ಗೆ ಸ್ಪರ್ಧಿ ಮಿರ್ಜಾಪುರ್

  ನೆಟ್‌ಫ್ಲಿಕ್ಸ್‌ನಲ್ಲಿ ನವಾಜುದ್ದೀನ್ ಸಿದ್ಧಿಕಿ, ಸೈಫ್ ಅಲಿ ಖಾನ್ ನಟನೆಯ ಸೇಕ್ರೆಡ್ ಗೇಮ್ಸ್‌ ಗೆ ಎದುರಾಗಿ ಈ ವೆಬ್ ಸರಣಿಯನ್ನು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಸೇಕ್ರೆಡ್ ಗೇಮ್ಸ್‌ನಂತೆ ಇದು ಸಹ ಸಖತ್ ಹಿಟ್ ಆಯಿತು.

  ಅಕ್ಟೋಬರ್ 23 ರಂದು ಬಿಡುಗಡೆ

  ಅಕ್ಟೋಬರ್ 23 ರಂದು ಬಿಡುಗಡೆ

  ಮಿರ್ಜಾಪುರ್ 2 ಅಕ್ಟೋಬರ್ 23 ರಿಂದ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ. ಗುರ್ಮೀತ್ ಸಿಂಗ್, ಮಿಹಿರ್ ದೇಸಾಯಿ ನಿರ್ದೇಶಿಸಿರುವ ಈ ವೆಬ್ ಸರಣಿಯ ಕಾರ್ಯನಿರ್ವಹಾಕ ನಿರ್ಮಾಪಕರು ರಿತೇಶ್ ಸಿದ್ವಾನ್ ಮತ್ತು ನಟ ಫರ್ಹಾನ್ ಅಖ್ತರ್.

  English summary
  Hindi web series Mirzapur 2 trailer released today. web series will release on October 23 on Amazon prime videos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X