twitter
    For Quick Alerts
    ALLOW NOTIFICATIONS  
    For Daily Alerts

    ನಿತ್ಯಾನಂದ ವಂಚಕನೋ? ದೇವಮಾನವನೊ? ಬಿಡುಗಡೆ ಆಗಿದೆ ಸಾಕ್ಷ್ಯಚಿತ್ರ

    |

    ನಿತ್ಯಾನಂದ ಭಾರತದ ಅತಿ ಚರ್ಚಿತ ಸ್ವಾಮೀಜಿಗಳಲ್ಲಿ ಒಬ್ಬರು. ನಿತ್ಯಾನಂದ ವಂಚಕನೊ? ಸುಳ್ಳನೊ? ಪೆದ್ದನೊ? ಅತಿ ಬುದ್ಧಿವಂತನೊ? ಅಥವಾ ನಿಜಕ್ಕೂ ಅಧ್ಯಾತ್ಮಕ ಶಕ್ತಿಯುಳ್ಳ ದೇವಮಾನವೊ? ಪ್ರಶ್ನೆಗಳಿಗೆ ಒಬ್ಬರದ್ದು ಒಂದೊಂದು ಉತ್ತರ. ಇದೀಗ ಇದೇ ವಿಷಯ ಆಧರಿಸಿ ಡಿಸ್ಕವರಿ ಪ್ಲಸ್‌ನವರು ಡಾಕ್ಯುಮೆಂಟರಿಯನ್ನೇ ಬಿಡುಗಡೆ ಮಾಡಿದೆ.

    'ಮೈ ಡಾಟರ್ ಜಾಯಿನ್ಡ್ ಎ ಕಲ್ಟ್' ಹೆಸರಿನ ನಿತ್ಯಾನಂದ ಕುರಿತಾದ ಡಾಕ್ಯುಮೆಂಟರಿಯೊಂದು ಡಿಸ್ಕವರಿ ಪ್ಲಸ್ ಒಟಿಟಿಯಲ್ಲಿ ಇಂದಿನಿಂದ ಪ್ರಸಾರವಾಗುತ್ತಿದೆ. ನಿತ್ಯಾನಂದ ಹಾಗೂ ಆತನ ಆಶ್ರಮದ ಬಗ್ಗೆ ಮಾಜಿ ಭಕ್ತರು ಬಿಚ್ಚಿಟ್ಟ ಹಲವು ಸಂಗತಿಗಳನ್ನು ದಾಖಲಿಸಿರುವ ಎಕ್ಸ್‌ಕ್ಲೂಸಿವ್‌ ಸಾಕ್ಷ್ಯಚಿತ್ರ ಸರಣಿ ಈ "ಮೈ ಡಾಟರ್‌ ಜಾಯಿನ್ಡ್‌ ಎ ಕಲ್ಟ್‌'. ವಿವಾದಿತ ವ್ಯಕ್ತಿ ಸ್ವಾಮಿ ನಿತ್ಯಾನಂದ ಕುರಿತ ಈ ಸಾಕ್ಷ್ಯಚಿತ್ರವು ಜೂನ್‌ 2ರಿಂದ ಭಾರತದ ಪ್ರೇಕ್ಷಕರಿಗೆ ಡಿಸ್ಕವರಿ+ನಲ್ಲಿ ಲಭ್ಯವಾಗಲಿದೆ. ನಂತರ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಿಡುಗಡೆಯಾಗಲಿದೆ.

    ಒಬ್ಬ ತಾಯಿ ಆಶ್ರಮದ ಹೊರಗೆ ತನ್ನ ಹೆಣ್ಣು ಮಕ್ಕಳನ್ನು ನೋಡಲು ಅಳುತ್ತಾ ನಿಂತಿದ್ದಾಳೆ. ಆಕೆಗೆ ಮಗಳನ್ನು ಭೇಟಿಯಾಗದಂತೆ ನಿರ್ಬಂಧಿಸಲಾಗಿದೆ. ತನ್ನ ಕಾಣೆಯಾದ ಮಗಳಿಗಾಗಿ ದಿಗ್ಭ್ರಮೆಗೊಂಡ ತಂದೆ ಹುಡುಕಲು ಯತ್ನಿಸುತ್ತಿದ್ದಾನೆ. ಭ್ರಮನಿರಸನಗೊಂಡ ಭಕ್ತನೊಬ್ಬ ತಾನು ಅತ್ಯುನ್ನತ ಗೌರವ ಹೊಂದಿದ ವ್ಯಕ್ತಿಯಿಂದ ಬಂದ ನಗ್ನ ಚಿತ್ರಗಳ ಬೇಡಿಕೆಯಿಂದಾಗಿ ಆಘಾತಕ್ಕೀಡಾಗಿದ್ದಾನೆ. ಆರಾಧನೆಗೆಂದು ಇರುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಹಿಂಸೆಗೆ ಅವಕಾಶ ಏಕೆ ಸಿಗುತ್ತದೆ ಎಂದು ಯುವಕನೊಬ್ಬ ಪ್ರಶ್ನಿಸುತ್ತಿದ್ದಾನೆ. ಕೆಲವರು ನಿತ್ಯಾನಂದ ನನಗೆ ಮೋಕ್ಷ ದೊರಕಿಸಿದ ಎಂದೂ ಹೇಳುತ್ತಿದ್ದಾರೆ. ಯಾರು ಸತ್ಯ ಹೇಳುತ್ತಿದ್ದಾರೆ? ಯಾರು ಸುಳ್ಳು ಹೇಳುತ್ತಿದ್ದಾರೆ? ಇವು ಕೇವಲ ಆರೋಪಗಳಾ ಅಥವಾ ಅದಕ್ಕಿಂತ ಹೆಚ್ಚಿನದೇನೊ ಇದೆಯೇ? 'ಕಲ್ಟ್‌' ಒಳಗೆ ಏನು ನಡೆಯುತ್ತಿದೆ? ತನ್ನನ್ನು ತಾನು ದೇವಮಾನವ ಎಂದು ಕರೆದುಕೊಂಡ ವ್ಯಕ್ತಿ ವಂಚನಾಗಿರಬಹುದೆ? ಇಂಥಹಾ ಪ್ರಶ್ನೆಗಳಿಗೆ ತಾರ್ಕಿಕ ಉತ್ತರ ಡಾಕ್ಯುಮೆಂಟರಿಯಲ್ಲಿ ಸಿಗಲಿದೆ ಎಂಬುದು ಡಿಸ್ಕವರಿ ಪ್ಲಸ್ ವಾದ.

    My Daughter Joined A Cult A Documentary About Nithyananda Streaming On Discovery Plus

    ವೈಸ್‌ ಮೀಡಿಯಾ ಗ್ರೂಪ್‌ನ ಜಾಗತಿಕ ಉತ್ಪಾದನಾ ವಿಭಾಗವಾದ ವೈಸ್‌ ಸ್ಟುಡಿಯೋಸ್ ನಿರ್ಮಿಸಿದ ಮೂರು ಭಾಗಗಳ ಸರಣಿಯು ಸ್ವಘೋಷಿತ ದೇವಮಾನವನ ನಿಜಬಣ್ಣವನ್ನು ಅನಾವರಣಗೊಳಿಸಲಿದೆ. ತನ್ನ ಆಶ್ರಮ ಮತ್ತು ಗುರುಕುಲ ಟ್ರಸ್ಟ್ 'ನಿತ್ಯಾನಂದ ಧ್ಯಾನಪೀಠಂ'ಗೆ ಸೇರುವಂತೆ ಆಮಿಷವೊಡ್ಡುವ ಮೂಲಕ ತನ್ನ ಭಕ್ತರನ್ನು ಹೇಗೆ ವಂಚಿಸಿದನೆಂಬುದನ್ನು ತೆರೆದಿಡಲಿದೆ.

    ಭಕ್ತರು, ವಕೀಲರು, ಪತ್ರಕರ್ತರು ಮತ್ತು ಕಾರ್ಯಕರ್ತರ ಸಾಕ್ಷ್ಯಗಳನ್ನು ಒಳಗೊಂಡ, ಡಾಕ್ಯುಮೆಂಟ್-ಸರಣಿಯು ನಿತ್ಯಾನಂದನ ಜೀವನದ ಏರಿಳಿತಗಳ ನಿರೂಪಣೆಯನ್ನು ಪ್ರಸ್ತುತಪಡಿಸುತ್ತದೆ.

    ಡಿಸ್ಕವರಿ, ವಾರ್ನರ್‌ ಬ್ರದರ್ಸ್‌ನ ದಕ್ಷಿಣ ಏಷ್ಯಾದ ಒರಿಜಿನಲ್ ಕಂಟೆಂಟ್‌ ವಿಭಾಗದ ಮುಖ್ಯಸ್ಥ ಸಾಯಿ ಅಭಿಷೇಕ್‌ ಮಾತನಾಡಿ, "ಡಿಸ್ಕವರಿ ಯಾವಾಗಲೂ ನೇರ ಮತ್ತು ನೈಜ ವಿಷಯಕ್ಕೆ ಸಮಾನಾರ್ಥಕವಾಗಿದೆ. ಅಧಿಕೃತತೆಯನ್ನು ನಮ್ಮ ಕಂಟೆಂಟ್‌ಗಳ ಮೂಲ ಮೌಲ್ಯವಾಗಿರಿಸಿಕೊಂಡಿದ್ದೇವೆ. 'ಮೈ ಡಾಟರ್‌ ಜಾಯಿನ್ಡ್‌ ಎ ಕಲ್ಟ್‌' ಬಹುಪದರಗಳನ್ನು ಹೊಂದಿರುವ ಕಥೆಯನ್ನು ಜೀವಂತಗೊಳಿಸುವ ಮತ್ತೊಂದು ಹೆಜ್ಜೆಯಾಗಿದೆ. ಈ ಸರಣಿಯು ನಿತ್ಯಾನಂದರ ಅನುಯಾಯಿಗಳ ಪ್ರಯಾಣವನ್ನು ವಿವರಿಸುತ್ತದೆ ಮತ್ತು ಮಾನವರ ದುರ್ಬಲತೆಗಳನ್ನು ಪರಿಶೀಲಿಸುತ್ತದೆ. ಕೆಲವೊಮ್ಮೆ ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗುತ್ತದೆ. ವೀಕ್ಷಕರು ಈ ಸರಣಿಯಿಂದ ಕುತೂಹಲಕ್ಕೆ ಒಳಗಾಗುತ್ತಾರೆ ಎಂದು ಖಚಿತ. ಇದು ಮಾಜಿ ಭಕ್ತರ ಕಠಿಣವಾದ ನೇರ ಅನುಭಗಳನ್ನು ಆಧರಿಸಿ ನಿರ್ಮಿಸಲಾಗಿದೆ ಎಂದಿದ್ದಾರೆ.

    ಎಪಿಎಸಿ, ವೈಸ್‌ ಸ್ಟುಡಿಯೋಸ್‌ನ ಕಂಟೆಂಟ್‌ನ ಉಪಾಧ್ಯಕ್ಷರಾದ ಸಮೀರಾ ಕನ್ವರ್ ಮಾತನಾಡಿ, "ಮೈ ಡಾಟರ್‌ ಜಾಯಿನ್ಡ್‌ ಎ ಕಲ್ಟ್‌', ಇದು ಸ್ವಾಮಿ ನಿತ್ಯಾನಂದನಂಥಹಾ ಕುಖ್ಯಾತ ವ್ಯಕ್ತಿಯ ಬಗ್ಗೆ ರಾಜಿಯಾಗದೆ ದಾಖಲೆಗಳ ಸಹಿತ ಮಾಡಲಾಗಿರುವ ಸರಣಿಯಾಗಿದೆ ಎಂದಿದ್ದಾರೆ.

    ನಿರ್ದೇಶಕ ನಮನ್ ಸಾರಯ್ಯ ಮಾತನಾಡಿ, 'ನಿತ್ಯಾನಂದ ಬಗ್ಗೆ ಸಮಗ್ರ ಮತ್ತು ಸಂಕೀರ್ಣವಾದ ತನಿಖೆಗೆ ಸಾಕಷ್ಟು ಜನ ಸಹಕರಿಸಿದ್ದಾರೆ. ಅವರ ನೆರವಿಲ್ಲದೆ ಈ ಡಾಕ್ಯುಮೆಂಟರಿ ಆಗುತ್ತಿರಲಿಲ್ಲ. ಮಾಜಿ ಭಕ್ತರು, ಪತ್ರಕರ್ತರು, ವಕೀಲರು ಮತ್ತು ಪೊಲೀಸ್ ಅಧಿಕಾರಿಗಳಾಗಿರಬಹುದು. ಈ ಸರಣಿಯು ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ತಲುಪಲಿದೆ. "ಮೈ ಡಾಟರ್‌ ಜಾಯಿನ್ಡ್‌ ಎ ಕಲ್ಟ್‌, ಇದು ನನ್ನ ವೃತ್ತಿಜೀವನದ ಅತ್ಯಂತ ಸವಾಲಿನ ಮತ್ತು ಲಾಭದಾಯಕ ಯೋಜನೆಗಳಲ್ಲಿ ಒಂದಾಗಿದೆ ಮತ್ತು ನಾನು ಮತ್ತು ನಾನು ವೈಸ್‌ ಸ್ಟುಡಿಯೋಸ್ ಮತ್ತು ಸಮೀರಾ ಕನ್ವರ್‌ನೊಂದಿಗೆ ನಿರ್ಮಿಸಿರುವ ಈ ಡಾಕ್ಯುಮೆಂಟರಿ ಬಗ್ಗೆ ಬಹಳ ಹೆಮ್ಮೆ ಪಡುತ್ತೇನೆ" ಎಂದಿದ್ದಾರೆ.

    ಮೈ ಡಾಟರ್‌ ಜಾಯಿನ್ಡ್‌ ಎ ಕಲ್ಟ್‌ ಡಿಸ್ಕವರಿ+ ಭಾರತದಲ್ಲಿ ಜೂನ್ 2 ರಿಂದ ಪ್ರೀಮಿಯರ್ ಆಗಲಿದೆ ಮತ್ತು ಹಿಂದಿ, ತಮಿಳು, ತೆಲುಗು, ಇಂಗ್ಲಿಷ್, ಕನ್ನಡ ಮತ್ತು ಮಲಯಾಳಂನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ. ಈ ಸರಣಿಯನ್ನು ವೈಸ್‌ ಸ್ಟುಡಿಯೋಸ್ ಡಿಸ್ಕವರಿ+ ಗಾಗಿ ನಿರ್ಮಿಸಿದೆ ಮತ್ತು ವೈಸ್‌ ಸ್ಟುಡಿಯೋಸ್‌ಗಾಗಿ ನಮನ್ ಸರಯ್ಯ ನಿರ್ದೇಶಿಸಿದ್ದಾರೆ.

    English summary
    My Daughter joined a Cult a documentary about Nithyananda is streaming on discovery plus from June 02. Many devotees of Nithyananda shared their experience in the documentary.
    Friday, June 3, 2022, 10:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X