For Quick Alerts
  ALLOW NOTIFICATIONS  
  For Daily Alerts

  ನಯನತಾರಾ, ವಿಘ್ನೇಶ್ ಮದುವೆ ಸ್ಟ್ರೀಮಿಂಗ್‌ನಿಂದ ನೆಟ್‌ಫ್ಲಿಕ್ಸ್‌ನಲ್ಲಿ ಔಟ್!

  By Bhagya.s
  |

  ಹಲವು ದಿನಗಳಿಂದ ನಯನತಾರ ಮತ್ತು ವಿಘ್ನೇಶ್ ಜೋಡಿಯ ಮದುವೆ ಸುದ್ದಿ ಹರಿದಾಡುತ್ತಲೇ ಇದೆ. 2015ರಿಂದ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಾ ಇರುವ ಈ ಜೋಡಿ ಮದುವೆ ಬಂಧಕ್ಕೆ ಒಳಗಾಗಲೂ ಸಜ್ಜಾಗಿದೆ. ಸೌತ್‌ನಲ್ಲಿ ಇವರ ಮದುವೆ ಸುದ್ದಿ ಜೋರಾಗಿತ್ತು.

  ನಟಿ ನಯನತಾರಾ ಮತ್ತು ವಿಘ್ನೇಶ್ ಮದುವೆ ನೆರವೇರಿದೆ. ಆಪ್ತರ ಸಮ್ಮುಖದಲ್ಲಿ ಈ ಜೋಡಿ ಸಂಪ್ರದಾಯ ಬದ್ಧವಾಗಿ ಮದುವೆ ಮಾಡಿಕೊಂಡಿದೆ. ಜೂನ್ 9 ರಂದು ನಯನತಾರಾ ಮದುವೆ ಅದ್ಧೂರಿಯಾಗಿ ನಡೆದಿದೆ. ಸಾಕಷ್ಟು ಸಿನಿಮಾ ಕಲಾವಿದರು ಇವರ ಮದುವೆಯಲ್ಲಿ ಭಾಗಿ ಆಗಿದ್ದಾರೆ.

  ಇನ್ನು ಈ ಜೋಡಿಯ ಮದುವೆ ಫೋಟೊಗಳನ್ನು ನೋಡಲು ಪ್ರೇಕ್ಷಕರು ಹೆಚ್ಚು ಕಾತುರದಿಂದ ಕಾಯುತ್ತಿದ್ದರು. ಅಂತೆಯೇ ಮದುವೆಯ ಬಳಿಕ ಮೊದಲ ಫೋಟೊ ಹಂಚಿಕೊಂಡಿದ್ದರು ವಿಘ್ನೇಶ್ ಶಿವನ್ ಮತ್ತು ನಯನತಾರಾ. ಆದರೆ ಇವರ ಮದುವೆ ವಿಡಿಯೋಗಾಗಿ ಕಾಯುತ್ತಾ ಇರುವವರಿಗೆ ಈಗ ಬೇಸರದ ಸುದ್ದಿ ಬಂದಿದೆ.

  ನೆಟ್‌ಫ್ಲಿಕ್ಸ್ ಜೊತೆಗೆ ಮದುವೆ ಒಪ್ಪಂದ!

  ನೆಟ್‌ಫ್ಲಿಕ್ಸ್ ಜೊತೆಗೆ ಮದುವೆ ಒಪ್ಪಂದ!

  ನಯನತಾರಾ ಮದುವೆ ಹಕ್ಕನ್ನು ನೆಟ್‌ಫ್ಲಿಕ್ಸ್ ಖರೀದಿ ಮಾಡಿತ್ತು. ಮದುವೆಯ ಇಡೀ ಖರ್ಚನ್ನು ನೆಟ್‌ಫ್ಲಿಕ್ಸ್ ನೋಡಿಕೊಂಡಿತ್ತು ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ನಯನತಾರಾ ಮತ್ತು ವಿಘ್ನೇಶ್ ಮದುವೆಯಾಗಿ ಒಂದು ತಿಂಗಳ ಮೇಲಾಗಿದೆ. ಆದರೂ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ಬಗ್ಗೆ ಯಾವುದೇ ಸುಳಿವು ನೀಡಿಲ್ಲ ನೆಟ್‌ಫ್ಲಿಕ್ಸ್. ಇದಕ್ಕೆ ಕಾರಣ ನೆಟ್‌ಫ್ಲಿಕ್ಸ್ ತೆಗೆದುಕೊಂಡಿರುವ ನಿರ್ಧಾರ.

  ನೆಟ್‌ಫ್ಲಿಕ್ಸ್‌ನಲ್ಲಿ ಮದುವೆ ಸ್ಟ್ರೀಂಗ್ ಇಲ್ಲ!

  ನೆಟ್‌ಫ್ಲಿಕ್ಸ್‌ನಲ್ಲಿ ಮದುವೆ ಸ್ಟ್ರೀಂಗ್ ಇಲ್ಲ!

  ಸದ್ಯದ ಮಾಹಿತಿ ಪ್ರಕಾರ ಲೇಡಿ ಸೂಪರ್ ಸ್ಟಾರ್ ಮದುವೆ ಸ್ಟ್ರೀಮಿಂಗ್‌ನಿಂದ ನೆಟ್‌ಫ್ಲಿಕ್ಸ್ ಹಿಂದೆ ಸರಿದಿದೆಯಂತೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಕೆಲವು ನಿರ್ಧಾರಗಳು ನೆಟ್‌ಫ್ಲಿಕ್ಸ್‌ಗೆ ಇಷ್ಟವಾಗದ ಕಾರಣ ಹಿಂದೆ ಸರಿದಿದೆ ಎನ್ನಲಾಗಿದೆ. ನೆಟ್‌ಫ್ಲಿಕ್ಸ್ ಒಪ್ಪಂದ ಮಾಡಿಕೊಂಡಂತೆ ಮದುವೆಯ ಯಾವುದೇ ಫೋಟೊವನ್ನು ರಿವೀಲ್ ಮಾಡುವ ಹಾಗಿಲ್ಲ ಎಂದು ಷರತ್ತು ಹಾಕಿತ್ತು. ಆದರೆ ಸ್ವತಃ ನಯನತಾರಾ ಮತ್ತು ವಿಘ್ನೇಶ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಆದರೆ ಮದುವೆ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಾಗಾಗಿ ಸ್ಟ್ರೀಮಿಂಗ್ ನಿರ್ಧಾರಿಂದ ಹಿಂದೆ ಸರಿದಿದೆ ಎನ್ನಲಾಗುತ್ತಿದೆ.

  ಮದುವೆ ಫೋಟೊ ಹಂಚಿಕೊಂಡ ಜೋಡಿ!

  ಮದುವೆ ಫೋಟೊ ಹಂಚಿಕೊಂಡ ಜೋಡಿ!

  ಇವರು ಮದುವೆ ಆಗ್ತಿದ್ದಾರೆ ಎಂಬ ವಿಚಾರ ತಿಳಿದ ಬಳಿಕ, ಎಲ್ಲರೂ ಸಾಕಷ್ಟು ಕುತೂಹಲದಿಂದ ಫೋಟೊಗಾಗಿ ಕಾಯುತ್ತಿದ್ದರು. ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಫೋಟೊ ರಿವೀಲ್ ಮಾಡಿದ್ದರು. ಅದ್ದೂರಿಯಾಗಿ ನಡೆದ ಮದುವೆಯಲ್ಲಿ ನಯನತಾರಾ, ವಿಘ್ನೇಶ್ ಮದುಮಕ್ಕಳಂತೆ ಸಿಂಗಾರಗೊಂಡು ಅಂದವಾಗಿ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು.

  ಅತಿಥಿಗಳ ಫೋಟೊ ವೈರಲ್!

  ಅತಿಥಿಗಳ ಫೋಟೊ ವೈರಲ್!

  ಇತ್ತೀಚಿಗಷ್ಟೆ ಈ ತಾರಾ ಜೋಡಿ ಮದುವೆಯಾಗಿ ಒಂದು ತಿಂಗಳ ಸಂಭ್ರಮವನ್ನು ಆಚರಿಸಿದ್ದರು. ಒಂದು ತಿಂಗಳ ಖುಷಿಯನ್ನು ಹಂಚಿಕೊಳ್ಳಲು ಮತ್ತೊಂದಿಷ್ಟು ಫೋಟೊವನ್ನು ಶೇರ್ ಮಾಡಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಶಾರುಖ್ ಖಾನ್ ಭೇಟಿಯ ಫೋಟೊವನ್ನು ಹಂಚಿಕೊಂಡಿದ್ದರು. ಶಾರುಖ್ ಖಾನ್ ಜೊತೆಗಿನ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಶಾರುಖ್ ಖಾನ್‌ಗೆ ನಿರ್ದೇಶಕ ಅಟ್ಲಿ ಕುಮಾರ್ ಸಾಥ್ ನೀಡಿದ್ದರು.

  English summary
  Nayanthara, Vignesh Shivan Wedding Video Not Stream On Netflix, Know More Details
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X