twitter
    For Quick Alerts
    ALLOW NOTIFICATIONS  
    For Daily Alerts

    ಚೀನಾ ಅಲ್ಲ, ಭಾರತ-ಕೊರಿಯಾದ ಮೇಲೆ ನೆಟ್‌ಫ್ಲಿಕ್ಸ್‌ ಕಣ್ಣು

    |

    ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ ಏಷ್ಯಾದ ಮೇಲೆ ಕಣ್ಣು ನೆಟ್ಟಿದೆ. ಮುಂದಿನ ವರ್ಷಗಳಲ್ಲಿ ಏಷ್ಯಾ ಖಂಡದ ರಾಷ್ಟ್ರಗಳ ಮೇಲೆ ದುಪ್ಪಟ್ಟು ಹೂಡಿಕೆಯನ್ನು ನೆಟ್‌ಫ್ಲಿಕ್ಸ್ ಮಾಡಲಿದೆ.

    ಚೀನಾ ದೇಶದಲ್ಲಿ ನೆಟ್‌ಫ್ಲಿಕ್ಸ್ ಸೇವೆ ಲಭ್ಯವಿಲ್ಲ. ಹಾಗಾಗಿ ಚೀನಾವನ್ನು ಹೊರತು ಪಡಿಸಿ ಉಳಿದ ಏಷ್ಯಾದ ದೇಶಗಳಲ್ಲಿ ನೆಟ್‌ಫ್ಲಿಕ್ಸ್ ಭಾರಿ ಮೊತ್ತದ ಹೂಡಿಕೆ ಮಾಡಲಿದ್ದು, ದೊಡ್ಡ ಮಟ್ಟದ ಲಾಭವನ್ನು ಹಿಂಪಡೆಯುವ ಗುರಿ ಹೊಂದಿದೆ. ಅದರಲ್ಲಿಯೂ ಕೊರಿಯಾ ಹಾಗೂ ಭಾರತ ದೇಶದ ಕಂಟೆಂಟ್ ಮೇಲೆ ಭಾರಿ ಬಂಡವಾಳವನ್ನೇ ನೆಟ್‌ಫ್ಲಿಕ್ಸ್ ಹೂಡಲಿದೆ.

    ವಿಶ್ವದಾದ್ಯಂತ ಕೊರಿಯನ್ ಸಿನಿಮಾಗಳಿಗೆ ಅತಿ ಹೆಚ್ಚು ಬೇಡಿಕೆ ಇರುವ ಕಾರಣ ಕೊರಿಯನ್ ಸಿನಿಮಾಗಳು, ವೆಬ್ ಸರಣಿ ಹಾಗೂ ಇತರೆ ಕಂಟೆಂಟ್ ಮೇಲೆ ಭಾರಿ ಮೊತ್ತದ ಹಣ ಸುರಿಯಲಿದೆ ನೆಟ್‌ಫ್ಲಿಕ್ಸ್.

    ಭಾರತದ ಸಿನಿಮಾಗಳು, ಹಾಸ್ಯ ಕಂಟೆಂಟ್‌ಗಳಿಗೂ ವಿಶ್ವದಾದ್ಯಂತ ಒಳ್ಳೆಯ ಮಾರುಕಟ್ಟೆ ಇರುವ ಕಾರಣ. ಹಾಗೂ ಸ್ವತಃ ಭಾರತದಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರರ ಸಂಖ್ಯೆ ದಿನೇ-ದಿನೇ ಏರಿಕೆ ಆಗುತ್ತಿರುವ ಕಾರಣ ಭಾರತದ ಕಂಟೆಂಟ್ ಮೇಲೆ ಮುಂದಿನ ದಿನಗಳಲ್ಲಿ ಹೂಡಿಕೆಯನ್ನು ದ್ವಿಗುಣಗೊಳಿಸಲಿದೆ ನೆಟ್‌ಫ್ಲಿಕ್ಸ್.

    ಯೂರೋಪ್‌ಗಿಂತಲೂ ಏಷ್ಯಾದಿಂದ ಹೆಚ್ಚು ಲಾಭ

    ಯೂರೋಪ್‌ಗಿಂತಲೂ ಏಷ್ಯಾದಿಂದ ಹೆಚ್ಚು ಲಾಭ

    ಕಳೆದ ವರ್ಷವೊಂದರಲ್ಲಿಯೇ ಏಷ್ಯಾದಲ್ಲಿ ಬರೋಬ್ಬರಿ 1 ಕೋಟಿಗೂ ಹೆಚ್ಚು ಮಂದಿ ಹೊಸ ಚಂದಾದಾರರು ನೆಟ್‌ಫ್ಲಿಕ್ಸ್‌ಗೆ ಆಗಿದ್ದಾರೆ. 2019 ಕ್ಕೆ ಹೋಲಿಸಿದರೆ 65% ಚಂದಾದಾರರು ಹೆಚ್ಚಾಗಿದ್ದಾರೆ. ಯೂರೋಪ್‌ ಗೆ ಹೋಲಿಸಿದರೆ ನೆಟ್‌ಫ್ಲಿಕ್ಸ್‌ ಅತಿ ಹೆಚ್ಚು ಲಾಭ ಬಂದಿರುವುದು ಸಹ ಏಷ್ಯಾದಿಂದಲೇ ಎನ್ನುತ್ತಿದೆ ವರದಿ.

    10 ಕೋಟಿ ಚಂದಾದಾರರು ಭಾರತದಿಂದ: ನೆಟ್‌ಫ್ಲಿಕ್ಸ್ ಸಿಇಒ

    10 ಕೋಟಿ ಚಂದಾದಾರರು ಭಾರತದಿಂದ: ನೆಟ್‌ಫ್ಲಿಕ್ಸ್ ಸಿಇಒ

    'ಮುಂದಿನ 10 ಕೋಟಿ ಚಂದಾದಾರರು ಕೇವಲ ಭಾರತ ಒಂದರಿಂದಲೇ ನಮಗೆ ಸಿಗಲಿದ್ದಾರೆ' ಎಂದು ಮೂರು ವರ್ಷದ ಹಿಂದೆ ನೆಟ್‌ಫ್ಲಿಕ್ಸ್‌ನ ಸಿಇಒ ರೀಡ್ ಹ್ಯಾಸ್ಟಿಂಗ್ಸ್ ಹೇಳಿದ್ದರು. ಅದು ಬಹುತೇಕ ನಿಜವೂ ಆಗಿದೆ. ಕಳೆದ ಮೂರು ವರ್ಷದಲ್ಲಿ ಭಾರತದಲ್ಲಿ ದೊಡ್ಡ ಸಂಖ್ಯೆಯ ಇಂಟರ್ನೆಟ್‌ ಪ್ರಿಯರು ನೆಟ್‌ಫ್ಲಿಕ್ಸ್ ಬಳಕೆದಾರರಾಗಿದ್ದಾರೆ.

    ಎರಡು ವರ್ಷಕ್ಕೆ 14 ಲಕ್ಷ ಕೋಟಿ ಖರ್ಚು ಮಾಡಿದೆ ನೆಟ್‌ಫ್ಲಿಕ್ಸ್

    ಎರಡು ವರ್ಷಕ್ಕೆ 14 ಲಕ್ಷ ಕೋಟಿ ಖರ್ಚು ಮಾಡಿದೆ ನೆಟ್‌ಫ್ಲಿಕ್ಸ್

    ನೆಟ್‌ಫ್ಲಿಕ್ಸ್‌, ಕಳೆದ ಎರಡು ವರ್ಷದಲ್ಲಿ ಏಷ್ಯಾ ಖಂಡದ ದೇಶಗಳಿಗೆ ಮಾತ್ರವೇ ಸುಮಾರು 14 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದೆ. ಈ ಹಣವನ್ನು ಲೈಸೆನ್ಸ್‌ಗಾಗಿ ಹಾಗೂ ಸಿನಿಮಾ, ವೆಬ್ ಸೀರೀಸ್ ನಿರ್ಮಾಣಕ್ಕಾಗಿ ಖರ್ಚು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದು ದ್ವಿಗುಣವಾಗಲಿದೆ.

    ಕೊರಿಯನ್ ಸಿನಿಮಾಗಳಿಗೆ ಭಾರಿ ಬೇಡಿಕೆ

    ಕೊರಿಯನ್ ಸಿನಿಮಾಗಳಿಗೆ ಭಾರಿ ಬೇಡಿಕೆ

    ಹೊಸ ವರ್ಷದ ಸಮಯದಲ್ಲಿ ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿದ್ದ ವಾರ್ಷಿಕ ವರದಿಯ ಪ್ರಕಾರ. ವಿಶ್ವದಾದ್ಯಂತ ಅತಿ ಹೆಚ್ಚು ಮಂದಿ ಕೊರಿಯನ್, ಸ್ಪ್ಯಾನಿಷ್‌, ಭಾರತೀಯ ಹಾಗೂ ಹಾಲಿವುಡ್ ಕಂಟೆಂಟ್ ಅನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ. ಹಾಗಾಗಿ ಕೋರಿಯನ್ ಕಂಟೆಂಟ್ ಹಾಗೂ ಭಾರತೀಯ ಕಂಟೆಂಟ್ ಮೇಲೆ ಭಾರಿ ಹೂಡಿಕೆ ಮಾಡಲಿದೆ ನೆಟ್‌ಫ್ಲಿಕ್ಸ್.

    English summary
    Netflix doubling its investment in Asian countries like India, Korean countries and Japan. Netflix not giving its service in China.
    Thursday, February 4, 2021, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X