twitter
    For Quick Alerts
    ALLOW NOTIFICATIONS  
    For Daily Alerts

    ನೆಟ್‌ಫ್ಲಿಕ್ಸ್‌ ಚಂದಾದಾರಲ್ಲಿ ತೀವ್ರ ಇಳಿಕೆ: ಹೊಸ ಸೇವೆಯತ್ತ ಗಮನ

    |

    ಕೊರೊನಾ ಕಾರಣದಿಂದಾಗಿ ಕಳೆದ ವರ್ಷಾರಂಭದಲ್ಲಿ ಭಾರಿ ಬೂಮ್‌ ಕಂಡಿದ್ದ ನೆಟ್‌ಫ್ಲಿಕ್ಸ್‌ ಇದೀಗ ಅಷ್ಟೇ ವೇಗದ ಇಳಿಕೆಯನ್ನೂ ಕಾಣುತ್ತಿದೆ.

    2020 ರ ಆರಂಭದಲ್ಲಿ ತನ್ನ ಚಂದಾದಾರರ ಸಂಖ್ಯೆಯಲ್ಲಿ 400% ಏರಿಕೆ ಕಂಡಿದ್ದ ನೆಟ್‌ಫ್ಲಿಕ್ಸ್ ಒಂದೇ ವರ್ಷದಲ್ಲಿ ಚಂದಾದಾರರ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ಚಂದಾದಾರರನ್ನು ನೆಟ್‌ಫ್ಲಿಕ್ಸ್ ಕಳೆದುಕೊಂಡಿದೆ.

    ಚಂದಾದಾರರ ಚಂದಾ ಹಣದಿಂದಲೇ ಭಾರಿ ದೊಡ್ಡ ಮೊತ್ತದ ಲಾಭ ಪಡೆಯುತ್ತಿದ್ದ ನೆಟ್‌ಫ್ಲಿಕ್ಸ್‌ಗೆ ಚಂದಾದಾರರು ಭಾರಿ ಸಂಖ್ಯೆಯಲ್ಲಿ ಕಡಿಮೆ ಆಗುತ್ತಿರುವುದು ತಲೆ ನೋವಾಗಿ ಪರಿಣಮಿಸಿದ್ದು, ನಷ್ಟ ಸರಿದೂಗಿಸಲು ಹಾಗೂ ಮಾರುಕಟ್ಟೆಯ ಲೀಡರ್ ಆಗಿ ಮುಂದುವರೆಯಲು ಹೊಸ ಯೋಜನೆಯೊಂದನ್ನು ಯೋಜಿಸಿದೆ.

    Netflix Said It Will Start Online Gaming Service

    ಇದೀಗ ಸಿನಿಮಾ, ಡಾಕ್ಯುಮೆಂಟರಿ, ರಿಯಾಲಿಟಿ ಶೋ, ವೆಬ್ ಸರಣಿಗಳನ್ನು ನೀಡುತ್ತಿರುವ ನೆಟ್‌ಫ್ಲಿಕ್ಸ್‌ ಗೇಮಿಂಗ್ ಉದ್ಯಮಕ್ಕೂ ಕಾಲಿಟ್ಟು, ತನ್ನ ಚಂದಾದಾರರಿಗೆ ಹೊಸ ಬಗೆಯ ಗೇಮ್‌ಗಳನ್ನು ಪರಿಚಯಿಸಲು ಮುಂದಾಗಿದೆ.

    ಈ ಬಗ್ಗೆ ಕೆಲ ದಿನಗಳ ಹಿಂದಷ್ಟೆ ಘೋಷಣೆ ಹೊರಡಿಸಿರುವ ನೆಟ್‌ಫ್ಲಿಕ್ಸ್ ತನ್ನ ಹಾಲಿ ಚಂದಾದಾರರಿಗೆ ಗೇಮ್ಸ್‌ ಅನ್ನು ನೀಡುತ್ತಿದ್ದು, ಈ ಗೇಮ್ಸ್‌ಗಳಿಗೆ ಹೆಚ್ಚಿನ ಚಂದಾ ಹಣ ವಿಧಿಸುವುದಿಲ್ಲ ಎಂದು ಹೇಳಿದೆ. ಏನೇ ಆದರೂ ಉಚಿತ ಗೇಮಿಂಗ್ ಸೌಲಭ್ಯ ಆರಂಭದಲ್ಲಿ ಮಾತ್ರವೇ ಎಂಬುದು ನೆಟ್‌ಫ್ಲಿಕ್ಸ್‌ನ ವ್ಯವಹಾರ ಅರಿತವರು ಸುಲಭವಾಗಿ ಊಹಿಸಬಹುದಾಗಿದೆ.

    ಪ್ರಪಂಚಾದಾದ್ಯಂತ ಲಸಿಕೆ ವಿತರಣೆ ಶೀಘ್ರಗತಿಯಲ್ಲಿ ಆಗುತ್ತಿದ್ದು, ವಿಶ್ವ ಮಟ್ಟದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಆಗಿ, ಜನರು ಸಾಮಾನ್ಯ ಜೀವನದತ್ತ ಮರಳುತ್ತಿರುವ ಕಾರಣ ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಸಬ್‌ಸ್ಕ್ರಿಪ್ಷನ್ ಪಡೆದುಕೊಂಡಿದ್ದವರು, ಅದನ್ನು ಮುಂದುವರೆಸುತ್ತಿಲ್ಲ. ಹಾಗಾಗಿ ಕಳೆದ ನಾಲ್ಕು ತಿಂಗಳಲ್ಲಿ ದೊಡ್ಡ ಮಟ್ಟದ ಇಳಿಕೆಯನ್ನು ನೆಟ್‌ಫ್ಲಿಕ್ಸ್ ಕಂಡಿದೆ.

    ಜೊತೆಗೆ ನೆಟ್‌ಫ್ಲಿಕ್ಸ್‌ಗೆ ಡಿಸ್ನಿ, ಎಚ್‌ಬಿಒ, ಅಮೆಜಾನ್ ಪ್ರೈಂ, ಆಪಲ್‌ ಟಿವಿನಂಥಹಾ ಒಟಿಟಿಗಳು ಕಠಿಣ ಸ್ಪರ್ಧೆ ಒಡ್ಡುತ್ತಿವೆ ಹಾಗಾಗಿ ವಿಧಿ ಇಲ್ಲದೆ ಮನೊರಂಜನಾ ಕ್ಷೇತ್ರದಿಂದ ಮೆಲ್ಲಗೆ ಗೇಮಿಂಗ್‌ ಕಡೆಗೆ ನೆಟ್‌ಫ್ಲಿಕ್ಸ್ ವಾಲುತ್ತಿದೆ.

    English summary
    Netflix announce it will start online gaming service. Netflix loosing its subscribers in recent months so it shifting to gaming industry.
    Wednesday, July 21, 2021, 13:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X