For Quick Alerts
  ALLOW NOTIFICATIONS  
  For Daily Alerts

  ಅಮೆಜಾನ್ ಸೀರೀಸ್ ಪಾತಾಳ್ ಲೋಕ್ ಅನಾವರಣಗೊಳಿಸಿದ ಅನುಷ್ಕಾ

  |

  ಅಮೆಜಾನ್ ಪ್ರೈಮ್ ವೀಡಿಯೋ ಇಂದು ಹೊಸ ಅಮೆಜಾನ್ ಒರಿಜಿನಲ್ ಸೀರೀಸ್ ಪಾತಾಳ್ ಲೋಕ್‍ನ ಲೋಗೋವನ್ನು ಅನಾವರಣಗೊಳಿಸಿ ಆರಂಭ ದಿನಾಂಕವನ್ನು ಘೋಷಿಸಿದೆ. ಕ್ಲೀನ್ ಸ್ಲೇಟ್ ಫಿಲಮ್ಸ್ ನಿರ್ಮಿಸಿರುವ 9 ಭಾಗಗಳ ಈ ಥ್ರಿಲ್ಲರ್ ನಾಟಕಾಂಕವು ನಿರ್ಮಾಪಕಿಯಾಗಿ ಸುಪ್ರಸಿದ್ಧ ನಟಿ ಅನುಷ್ಕಾ ಶರ್ಮಾ ಅವರ ಡಿಜಿಟಲ್ ಪ್ರಥಮ ಪ್ರವೇಶವನ್ನು ಸೂಚಿಸುತ್ತದೆ. ಈ ಕೌತುಕಮಯವಾಗಿ ಆ್ಯನಿಮೇಟ್ ಮಾಡಲಾದ ವೀಡಿಯೋ ಬಿರುಗಾಳಿ ಬರುವ ಮುನ್ನಿನ ಪ್ರಶಾಂತತೆಯನ್ನು ತೋರಿಸುತ್ತದೆ. ಅಂದರೆ, ಮೇಲ್ನೋಟಕ್ಕೆ ಶಾಂತವಾಗಿದ್ದರೂ ಒಳಗೆ ಪ್ರಬಲವಾದ ಕತ್ತಲಿನ, ಅಪಾಯಕಾರೀ ಗರ್ಭದೊಳಗಿರುವ ಪಾತಾಳ ಲೋಕದ ಗವಾಕ್ಷವನ್ನು ತೆರೆದಿಡುತ್ತದೆ.

  ಸೆರೆಹಿಡಿದಿಡುವ ಕಥಾನಕವು, ಮನುಷ್ಯತ್ವದ ಕರಾಳಭಾಗದ ಮೇಲೆ ಬೆಳಕು ಚೆಲ್ಲುತ್ತದೆ. ನಿಗೂಢತೆ, ಕೌತುಕತೆ ಮತ್ತು ನಾಟಕೀಯತೆಯಿಂದ ಕೂಡಿರುವ ಅಮೆಜಾನ್ ಪ್ರೈಮ್ ವೀಡಿಯೋದ ಇತ್ತೀಚಿನ ಒರಿಜಿನಲ್ ಅನೈತಿಕತೆಯ ಕತ್ತಲಹಾದಿಯನ್ನು ಶೋಧಿಸುತ್ತದೆ. ಸ್ವರ್ಗಲೋಕ, ಭೂಲೋಕ, ಮತ್ತು ಪಾತಾಳ ಲೋಕದಂತಹ ಪುರಾತನ ಲೋಕಗಳಿಂದ ಪ್ರೇರಿತವಾದ ಈ ನವಯುಗದ ಸೀರೀಸ್ ಪ್ರಜಾತಂತ್ರದ ನಾಲ್ಕು ಕ್ಷೇತ್ರಗಳೊಳಗಿನ ಅನ್ಯೋನ್ಯತೆಯ ಮೇಲೆ ಗಮನಕೇಂದ್ರೀಕರಿಸುತ್ತದೆ.

  ಈ ಥ್ರಿಲ್ಲರ್ ಮೇ 15ರಂದು ಆರಂಭವಾಗುತ್ತದೆ.

  ಈ ಥ್ರಿಲ್ಲರ್ ಮೇ 15ರಂದು ಆರಂಭವಾಗುತ್ತದೆ.

  ಪಾತಾಳ್ ಲೋಕ್, ಪ್ರಶಸ್ತಿ ವಿಜೇತ ಅಮೆಜಾನ್ ಒರಿಜಿನಲ್ ಸರಣಿಯಾದ ದಿ ಫಾಮಿಲಿ ಮ್ಯಾನ್, ಮಿರ್ಜಾಪುರ, ಇನ್ಸೈಡ್ ಎಡ್ಜ್, ಕಾಮಿಕ್ಸ್ತಾನ್, ಮೇಡ್ ಇನ್ ಹೆವೆನ್ ಮತ್ತು ಟಾಮ್ ಕ್ಲಾನ್ಸಿ ಅವರ ಜ್ಯಾಕ್ ರಿಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್, ಮತ್ತು ದಿ ಮಾರ್ವೆಲಸ್ ಮಿಸೆಸ್ ಮೈಸಲ್ ಒಳಗೊಂಡಂತೆ ಜಾಗತಿಕವಾಗಿ ಮೆಚ್ಚುಗೆ ಪಡೆದ ಹಾಗು ಪ್ರಶಸ್ತಿ ವಿಜೇತ ಜಾಗತಿಕ ಅಮೆಜಾನ್ ಒರಿಜಿನಲ್ ಸೀರೀಸ್ ಪ್ರೈಮ್ ವೀಡಿಯೋ ಕ್ಯಾಟಲಾಗ್‍ನಲ್ಲಿವೆ.

  ತ್ರಿಲೋಕಗಳ ಪರಿಚಯ ನೀಡುವ ಸರಣಿ

  ಸ್ವರ್ಗ ಲೋಕ, ಭೂ ಲೋಕ ಹಾಗೂ ಪಾತಾಳ ಲೋಕ ಎಂಬ ಪುರಾಣದ ಕಲ್ಪನೆಯನ್ನು ಪ್ರಜಾಪ್ರಭುತ್ವದ ನಾಲ್ಕು ಅಂಗಗಳ ಮೂಲಕ ತೋರಿಸುವ ಪ್ರಯತ್ನ ಇದಾಗಿದೆ. ಕ್ರೈಂ ಡ್ರಾಮಾಗೆ ಸುದೀಪ್ ಶರ್ಮ ಕಥೆ ಒದಗಿಸಿದ್ದಾರೆ. ಈ ಸರಣಿ ನೋಡಿದ ಮೇಲೆ ನಿಮ್ಮ ಜಗತ್ತನ್ನು ನೋಡುವ ರೀತಿ ಬದಲಾಗಲಿದೆ ಎಂದು ಅನುಷ್ಕಾ ಹೇಳಿದ್ದಾರೆ.

  ಜಾಹೀರಾತು ರಹಿತ ಥ್ರಿಲ್ಲರ್ ನೊಡಿ

  ಜಾಹೀರಾತು ರಹಿತ ಥ್ರಿಲ್ಲರ್ ನೊಡಿ

  ಸಾವಿರಾರು ಹಾಲಿವುಡ್ ಹಾಗು ಬಾಲಿವುಡ್ ಟಿವಿ ಶೋಗಳು ಹಾಗು ಚಲನಚಿತ್ರಗಳನ್ನು ಸೇರಿಕೊಳ್ಳಲಿದ್ದು ಇವೆಲ್ಲವೂ ಜಾಹೀರಾತು ರಹಿತ ವಿಶ್ವಮಟ್ಟದ ಗ್ರಾಹಕ ಅನುಭವದೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯರಿಗೆ ಲಭ್ಯವಿದೆ. ಈ ಸೇವೆಯಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬಂಗಾಲಿ ಕಾರ್ಯಕ್ರಮಗಳು ಲಭ್ಯವಿದೆ.

  ಹೆಚ್ಚು ವೆಚ್ಚವಿಲ್ಲದೆ ಆಫ್ ಲೈನ್ ವಿಡಿಯೋ

  ಹೆಚ್ಚು ವೆಚ್ಚವಿಲ್ಲದೆ ಆಫ್ ಲೈನ್ ವಿಡಿಯೋ

  ಪ್ರೈಮ್ ಸದಸ್ಯರು, ಸ್ಮಾರ್ಟ್ ಟಿವಿ, ಮೊಬೈಲ್ ಉಪಕರಣಗಳು, ಫೈರ್ ಟಿವಿ, ಫೈರ್ ಟಿವಿ ಸ್ಟಿಕ್, ಫೈರ್ ಟ್ಯಾಬ್ಲೆಟ್, ಆ್ಯಪಲ್ ಟಿವಿ ಮತ್ತು ಮಲ್ಟಿಪಲ್ ಗೇಮಿಂಗ್ ಉಪಕರಣದಲ್ಲಿ ಪ್ರೈಮ್ ವೀಡಿಯೋ ಆ್ಯಪ್‍ನಲ್ಲಿ ಯಾವುದೇ ಸಮಯದಲ್ಲಾದರೂ ಎಲ್ಲೇ ಆದರೂ ನೋಡಬಹುದು.

  ಪ್ರೈಮ್ ವೀಡಿಯೋ ಆ್ಯಪ್‍ನಲ್ಲಿ ಪ್ರೈಮ್ ಸದಸ್ಯರು ಪಾತಾಳ್ ಲೋಕ್‍ನ ಎಲ್ಲಾ ಎಪಿಸೋಡ್‍ಗಳನ್ನು ತಮ್ಮ ಮೊಬೈಲ್ ಉಪಕರಣಗಳು ಅಥವಾ ಟ್ಯಾಬ್ಲೆಟ್‍ಗಳಿಗೆ ಡೌನ್‍ಲೋಡ್ ಮಾಡಿಕೊಂಡು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಫ್‍ಲೈನ್‍ನಲ್ಲಿ ವೀಕ್ಷಿಸಬಹುದು.

  ಪ್ರೈಮ್ ವೀಡಿಯೋ, ಭಾರತದಲ್ಲಿ ಜನಪ್ರಿಯ

  ಪ್ರೈಮ್ ವೀಡಿಯೋ, ಭಾರತದಲ್ಲಿ ಪ್ರೈಮ್ ಸದಸ್ಯರಿಗೆ ರೂ.999 ವಾರ್ಷಿಕ ಅಥವಾ ರೂ. 129 ಮಾಸಿಕ ದರದಲ್ಲಿ ಲಭ್ಯವಿದೆ. ಹೊಸ ಗ್ರಾಹಕರು ಅಮೆಜಾನ್ ಪ್ರೈಮ್ ವೆಬ್ ತಾಣಕ್ಕೆ ಭೇಟಿ ನೀಡಿ 30-ದಿನಗಳ ಉಚಿತ ಟ್ರಯಲ್‍ಗೆ ಚಂದಾ ಪಡೆದುಕೊಳ್ಳಬಹುದು.

  English summary
  Patal Lok- Amazon Prime new Original Series launch date announced. Anushka Sharma Announced Launch Date of Her Digital Production Paatal Lok.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X