For Quick Alerts
  ALLOW NOTIFICATIONS  
  For Daily Alerts

  'ಮನಿ ಹೈಸ್ಟ್'ನ ಕೊನೆಯ ಸೀಸನ್‌ಗೆ ಕೈಜೋಡಿಸಿದ ಪೆಪ್ಸಿ, ನೆಟ್ ಫ್ಲಿಕ್ಸ್

  |

  ವಿಶ್ವವಿಖ್ಯಾತ 'ಮನಿ ಹೈಸ್ಟ್' ವೆಬ್ ಸರಣಿ ಸೆಪ್ಟೆಂಬರ್ 03ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದು, ಗ್ರ್ಯಾಂಡ್ ಫಿನಾಲೆಯನ್ನು ಸಂಬ್ರಮಿಸಲು ಪೆಪ್ಸಿ ತಂಪು ಪಾನೀಯ ಸಂಸ್ಥೆ, ವಿಶ್ವದ ಅತಿ ಹೆಚ್ಚು ಸ್ಟ್ರೀಮ್ ಆಗುವ ಮನರಂಜನಾ ಸೇವೆ ನೆಟ್ಫ್ಲಿಕ್ಸ್ ಜೊತೆ ಕೈಜೋಡಿಸಿದೆ. ಸೆಪ್ಟೆಂಬರ್ 3 ರಂದು ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿರುವ ಸರಣಿ ಫಿನಾಲೆಯ ಭಾಗ 1 ರಲ್ಲಿ ಪೆಪ್ಸಿ, ಸೀಮಿತ ಆವೃತ್ತಿಯ ಗೋಲ್ಡನ್ ಕ್ಯಾನ್ಸ್ ಮತ್ತು ಪ್ಯಾಕ್ಸ್ ಅನ್ನು ಬಿಡುಗಡೆಗೊಳಿಸಿದೆ. ಇದು ಎಲ್ಲಾ 'ಮನಿ ಹೈಸ್ಟ್' ಅಭಿಮಾನಿಗಳಿಗೆ ಅಕ್ಟೋಬರ್‌ ನಲ್ಲಿ ನಡೆಯಲಿರುವ ವರ್ಚುವಲ್ ಫ್ಯಾನ್ ಪಾರ್ಟಿಯವರೆಗೆ ಮುಂದುವರಿಯಲಿರುವ ಐಕಾನಿಕ್ ಸರಣಿಯಿಂದ ಸ್ಫೂರ್ತಿ‌ ಪಡೆದಿದೆ.

  ಗೋಲ್ಡನ್ ಕ್ಯಾನ್ಸ್ ಆಂಡ್ ಪ್ಯಾಕ್ಸ್, ಈ ಹಿಟ್ ಸರಣಿಯ ದಾಲಿ ಮಾಸ್ಕ್ ಮತ್ತು ಬೆಲ್ಲಾ ಚಾವ್ ಅನ್ನು ಫೀಚರ್ ಮಾಡುತ್ತದೆ. ಇದು ವರ್ಚುವಲ್ ಪಾರ್ಟಿಗೆ ಗೋಲ್ಡನ್ ಟಿಕೆಟ್ ಆಗಿ ಕೂಡ ಕಾರ್ಯ ನಿರ್ವಹಿಸಲಿದೆ. ಇಲ್ಲಿ ಫ್ಯಾನ್ ಗಳಿಗೆ ಮನಿ ಹೈಸ್ಟ್ ನ ಪಾತ್ರಧಾರಿಗಳನ್ನು ನಿಕಟವಾಗಿ ಅರಿಯಲು ಅವಕಾಶ ದೊರೆಯುತ್ತದೆ.

  ಜೊತೆಗೆ ಪೆಪ್ಸಿಕೋ ಒಂದು ಡಿಜಿಟಲ್ ಸಿನಿಮಾ ಕೂಡ ಬಿಡುಗಡೆಗೊಳಿಸಿದ್ದು, ಇದನ್ನು ಖ್ಯಾತ ಬಾಲಿವುಡ್ ನಿರ್ದೇಶಕ ಅಹಮದ್ ಖಾನ್ ನಿರ್ದೇಶಿಸಿದ್ದು, ಅದರಲ್ಲಿ ಕಂಪನಿಯ ರಾಯಭಾರಿ ಮತ್ತು ಬಾಲಿವುಡ್ ನ ನೆಚ್ಚಿನ ನಟ ಟೈಗರ್ ಶ್ರಾಫ್ ತಾರಾಗಣದಲ್ಲಿದ್ದಾರೆ. ಇದರಲ್ಲಿ ಕಳೆದು ಹೋಗಿರುವ ಗೋಲ್ಡನ್ ಕ್ಯಾನ್ ಹಾಗೂ ಪ್ಯಾಕ್ ಗಳನ್ನು ಶೋಧಿಸಲು ಪ್ರೊಫೆಸರ್, ಟೈಗರ್ ಶ್ರಾಫ್ ಅನ್ನು ಕಳುಹಿಸುತ್ತಾರೆ. ಸಿನಿಮಾದ ಅಂತ್ಯದಲ್ಲಿ ಟೈಗರ್ ಪೆಪ್ಸಿ ಗೋಲ್ಡನ್‌ ಕ್ಯಾನ್‌ಗಳನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗುತ್ತಾರೆ ಮತ್ತು ಜನರಿಗೆ ಪೆಪ್ಸಿಯ ಲೋಗೊ ಸ್ಕ್ರಾಚ್ ಮಾಡಿ ವರ್ಚುವಲ್ ಫ್ಯಾನ್ ಪಾರ್ಟಿಯ ನೋಂದಣಿ ಬಗ್ಗೆ ಮಾಹಿತಿ ನೀಡುತ್ತಾರೆ.

  ಪಾಲುದಾರಿಕೆ ಕುರಿತು ಮಾತನಾಡಿರುವ ಪೆಪ್ಸಿ ಕೋಲಾ-ಪೆಪ್ಸಿಕೋ ಇಂಡಿಯಾದ ಕ್ಯಾಟಗರಿ ಲೀಡ್ ಸೌಮ್ಯ ರಾಥೋಡ್, " ಪೆಪ್ಸಿ ಯಾವಾಗಲೂ ಯುವ ಪೀಳಿಗೆಯ ಆಯ್ಕೆಯಾಗಿದೆ. ನಾವು ಯಾವಾಗಲೂ ಯುವಜನತೆಗೆ ಪ್ರಸ್ತುತವೆನಿಸುವ ವೇದಿಕೆ, ಕಾರ್ಯಕ್ರಮಗಳ ಮೂಲಕ ಅವರನ್ನು ಸಂಪರ್ಕಿಸಲು ಯತ್ನಿಸಿದ್ದೇವೆ. ಮನಿ ಹೈಸ್ಟ್ ಕೂಡ ಇದೇ ಹಾದಿಯಲ್ಲಿ ಸಾಗಿದೆ. ಇದರ ವರ್ಚುವಲ್ ಫ್ಯಾನ್ ಪಾರ್ಟಿಗೆ ಈ ಸೀಮಿತ ಆವೃತ್ತಿಯ ಗೋಲ್ಡನ್ ಪ್ಯಾಕ್ಸ್ ಆ್ಯಂಡ್ ಕ್ಯಾನ್ ಗಳ ಬಿಡುಗಡೆ ಸಂತಸ ತಂದಿದೆ" ಎಂದರು.

  ನೆಟ್‌ಫ್ಲಿಕ್ಸ್ ಇಂಡಿಯಾದ ಮಾರುಕಟ್ಟೆ ಪಾಲುದಾರಿಕೆ ವಿಭಾಗದ ನಿರ್ದೇಶಕಿ ಶಿಲ್ಪಾ ಸಿಂಗ್, "ಮನಿ ಹೈಸ್ಟ್‌ ನ ಅತ್ಯುತ್ತಮ ಫ್ಯಾನ್‌ ಬೇಸ್‌ ಹಾಗೂ ಅದರ ಫಿನಾಲೆಯನ್ನು ಪೆಪ್ಸಿಯೊಂದಿಗೆ ಆಚರಿಸಲು ನಾವು ಉತ್ಸುಕರಾಗಿದ್ದೇವೆ. ಮುಂಬರುವ ವರ್ಚುವಲ್‌ ಫ್ಯಾನ್‌ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಅಭಿಮಾನಿಗಳಿಗೆ ಬೇಕಿರುವುದು ಪೆಪ್ಸಿಯ ಗೋಲ್ಡನ್‌ ಕ್ಯಾನ್‌ಗಳು. ಈ ಸರಣಿಯ ಫಿನಾಲೆಗೆ ಸಾಕ್ಷಿಯಾಗಲು ಕಾತುರರಾಗಿದ್ದೇವೆ" ಎಂದರು.

  ಪೆಪ್ಸಿಯ ರಾಯಭಾರಿ ಮತ್ತು ಬಾಲಿವುಡ್‌ ನಟ ಟೈಗರ್‌ ಶ್ರಾಫ್, "ನಾನು ದೀರ್ಘ ಕಾಲದಿಂದ ನೆಟ್‌ಫ್ಲಿಕ್ಸ್‌ನ' ಮನಿ ಹೈಸ್ಟ್‌' ವೆಬ್ ಸರಣಿಯ ಅಭಿಮಾನಿಯಾಗಿದ್ದೇನೆ ಮತ್ತು ನಾನು ಪೆಪ್ಸಿಯನ್ನು ತುಂಬಾ ಇಷ್ಟಪಡುತ್ತೇನೆ. ಈ ಚಿತ್ರದ ಭಾಗವಾಗಿರುವುದು ನನಗೆ ಸಂತಸ ತಂದಿದೆ. ಇದರ ಚಿತ್ರೀಕರಣ ಒಂದು ಅದ್ಭುತ ಅನುಭವವಾಗಿತ್ತು ಮತ್ತು ಇದನ್ನು ಜನರು ಆನಂದಿಸುತ್ತಾರೆ ಎಂದು ಆಶಿಸುತ್ತೇನೆ" ಎಂದಿದ್ದಾರೆ.

  ಬಾಲಿವುಡ್ ಚಲನಚಿತ್ರ ನಿರ್ದೇಶಕ ಅಹ್ಮದ್ ಖಾನ್, "ನಾನು ನೆಟ್ ಫ್ಲಿಕ್ಸ್ ನ ಮನಿ ಹೈಸ್ಟ್ ನ ದೊಡ್ಡ ಅಭಿಮಾನಿ, ಮತ್ತು ಈ ಚಿತ್ರವನ್ನು ನಿರ್ದೇಶಿಸುವುದು ನನಗೆ ಕನಸಿನ ಯೋಜನೆಯಂತಿತ್ತು. ಇದು ಬ್ಲಾಕ್ ಬಸ್ಟರ್ ನ ಎಲ್ಲಾ ಅಂಶಗಳನ್ನು ಹೊಂದಿದೆ - ಟೈಗರ್ ಶ್ರಾಫ್, ರೋಮಾಂಚಕ ಚೇಸ್, ಪೆಪ್ಸಿಯ ಸ್ಟೈಲ್, ಮತ್ತು ಸಾಕಷ್ಟು ಒಳಸಂಚುಗಳು ಚಿತ್ರವನ್ನು ಆಸಕ್ತಿದಾಯಕವಾಗಿಸಿದೆ. ಮನಿ ಹೈಸ್ಟ್ ಅಭಿಮಾನಿಗಳು ಪೆಪ್ಸಿಯನ್ನು ಕಥಾಹಂದರ ಮತ್ತು ಅದರ ಪಾತ್ರಗಳ ಬಗ್ಗೆ ನನ್ನ ಅಭಿಪ್ರಾಯವನ್ನು ಒಪ್ಪುತ್ತಾರೆ ಎಂದು ಭಾವಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಸೀಮಿತ ಆವೃತ್ತಿ ಪೆಪ್ಸಿ ಗೋಲ್ಡನ್ ಕ್ಯಾನ್ ಮತ್ತು ಪ್ಯಾಕ್ಗಳು ವಿಶೇಷ ಕ್ಯೂಆರ್ ಕೋಡ್ನೊಂದಿಗೆ ಬರುತ್ತವೆ. ಇದು ಗ್ರಾಹಕರಿಗೆ 2021 ರ ಅಕ್ಟೋಬರ್ನಲ್ಲಿ ಯೂಟ್ಯೂಬ್ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಅಭಿಮಾನಿಗಳ ಪಾರ್ಟಿಗೆ ನೋಂದಾಯಿಸಲು ಅವಕಾಶ ನೀಡುತ್ತದೆ. ಅಭಿಮಾನಿಗಳು ತಮ್ಮ ಚಿನ್ನದ ಟಿಕೆಟ್ ಪಡೆಯಲು ಪೆಪ್ಸಿ ಲೋಗೋವನ್ನು ಪೆಪ್ಸಿ ಇಂಡಿಯಾ ಇನ್ಸ್ಟಾಗ್ರಾಮ್ ಫಿಲ್ಟರ್ ಮೂಲಕ ಕ್ಯಾನ್ಗಳು, ಪ್ಯಾಕ್ಗಳು, ಜಾಹೀರಾತು ಫಲಕಗಳು ಎಲ್ಲಿಂದಲಾದರೂ ಸ್ಕ್ಯಾನ್ ಮಾಡಬಹುದು-. ಇವು ಎಲ್ಲಾ ಆಧುನಿಕ ವ್ಯಾಪಾರ ಮಳಿಗೆಗಳಲ್ಲಿ ಲಭ್ಯ ಇರಲಿದೆ.

  English summary
  Pepsi company collaboration with 'Money Heist' for web series final season. Pepsi released special golden cans for Money Heist final season. Web series will release on September 03.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X