For Quick Alerts
  ALLOW NOTIFICATIONS  
  For Daily Alerts

  ಕಳಪೆ ಸಿನಿಮಾ ಮಾಡಿಯೂ ಕೋಟಿ-ಕೋಟಿ ಗಳಿಸಿದ ರಾಮ್‌ಗೋಪಾಲ್ ವರ್ಮಾ!

  |

  ರಾಮ್‌ ಗೋಪಾಲ್ ವರ್ಮಾ ಸಿನಿಮಾಗಳಿಗೆ ಕಾಯುತ್ತಿದ್ದ ಸಮಯವೊಂದಿತ್ತು. ಭಾರತೀಯ ಸಿನಿಮಾ ಒಮ್ಮೆಲೆ ದೃಷ್ಟಿ ತಿರುಗಿಸಿ ನೋಡುವಂತೆ ಮಾಡಿದ್ದ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ.

  Celebrities we lost during the Lockdown | Filmibeat Kannada

  ಆದರೆ ಇತ್ತೀಚಿನ ದಿನಗಳಲ್ಲಿ ಅವರು ಹೊಳಪು ಕಳೆದುಕೊಂಡಿದ್ದಾರೆ. ಸದಾ ವಿವಾದಳಿಂದಲೇ ಸುದ್ದಿ ಆಗುತ್ತಿದ್ದಾರೆ. ಬೇಕೆಂತಲೆ ವಿವಾದಗಳಿಗೆ ತಮ್ಮನ್ನು ತಾವು ದೂಡಿಕೊಳ್ಳುತ್ತಿದ್ದಾರೆ. ಸಿನಿಮಾಗಳ ಬಗ್ಗೆ ಅವರಿಗೆ ಆಸಕ್ತಿಯೇ ಹೋದಂತಿದೆ.

  RRR ಸಿನಿಮಾ ಫ್ಲಾಪ್ ಆದರೆ ಯಾರು-ಯಾರು ಸಂಭ್ರಮಿಸುತ್ತಾರೆ?RRR ಸಿನಿಮಾ ಫ್ಲಾಪ್ ಆದರೆ ಯಾರು-ಯಾರು ಸಂಭ್ರಮಿಸುತ್ತಾರೆ?

  ತಿಂಗಳಿಗೊಂದು ಸಿನಿಮಾಗಳನ್ನು ಘೋಷಣೆ ಮಾಡುವ ರಾಮ್‌ ಗೋಪಾಲ್ ವರ್ಮಾ ಬಹಳ ನೀರಸವಾಗಿ ಸಿನಿಮಾಗಳನ್ನು ತೆಗೆದು ಮುಗಿಸಿಬಿಡುತ್ತಾರೆ. ನಿರ್ದೇಶನದ ಬಗ್ಗೆ ಅವರಿಗೆ ಮೊದಲಿಗಿದ್ದ ಆಸಕ್ತಿ ಈಗಿಲ್ಲವೆಂದು ಸ್ಪಷ್ಟವಾಗಿ ಹೇಳಬಹುದು.

  ಹೀಗೆ ಕಾಟಾಚಾರಕ್ಕೆ ಸಿನಿಮಾ ತೆಗೆದರೂ ಸಹ ರಾಮ್‌ ಗೋಪಾಲ್ ವರ್ಮಾ ಲಾಭ ಗಳಿಸುತ್ತಿದ್ದಾರೆ. ಇದಕ್ಕೆ ಇತ್ತೀಚೆಗೆ ಬಿಡುಗಡೆ ಆದ ಅವರ ಸಿನಿಮಾ ಸಾಕ್ಷಿ.

  ಕೆಟ್ಟ ಸಿನಿಮಾ ನಿರ್ಮಿಸಿದ್ದ ಆರ್‌ಜಿವಿ

  ಕೆಟ್ಟ ಸಿನಿಮಾ ನಿರ್ಮಿಸಿದ್ದ ಆರ್‌ಜಿವಿ

  ಇತ್ತೀಚೆಗೆ ರಾಮ್‌ಗೋಪಾಲ್ ವರ್ಮಾ ಮೆಚ್ಚಿನ ನೀಲಿ ಚಿತ್ರತಾರೆ ಮಿಯಾ ಮಾಲ್ಕೋವಾ ಅವರನ್ನು ನಾಯಕಿಯನ್ನಾಗಿಸಿ 'ಕ್ಲೈಮ್ಯಾಕ್ಸ್' ಎಂಬ ಸಿನಿಮಾ ಒಂದನ್ನು ನಿರ್ದೇಶಿನಿ ಅವರೇ ನಿರ್ಮಿಸಿದ್ದರು. ಸಿನಿಮಾ ಅತ್ಯಂತ ಕೆಟ್ಟದಾಗಿತ್ತು. ಆದರೆ ಅದರಿಂದಲೂ ಲಾಭ ತೆಗೆದಿದ್ದಾರೆ ಆರ್‌ಜಿವಿ.

  100 ರೂಪಾಯಿ ದರ ನಿಗದಿ ಮಾಡಿದ್ದರು ಆರ್‌ಜಿವಿ

  100 ರೂಪಾಯಿ ದರ ನಿಗದಿ ಮಾಡಿದ್ದರು ಆರ್‌ಜಿವಿ

  ಸಿನಿಮಾವನ್ನು ತಮ್ಮದೇ ವೆಬ್‌ಸೈಟ್ ನಲ್ಲಿ ಆರ್‌ಜಿವಿ ಬಿಡುಗಡೆ ಮಾಡಿದ್ದರು. ಸಿನಿಮಾ ನೋಡಲು 100 ರೂಪಾಯಿಗಳ ಆನ್‌ಲೈನ್ ಟಿಕೆಟ್ ಅನ್ನು ಇಟ್ಟಿದ್ದರು. ಲಕ್ಷಾಂತರ ಮಂದಿ ಸಿನಿಮಾವನ್ನು ನೋಡಿದ್ದಾರೆ.

   24 ಗಂಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ

  24 ಗಂಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ

  ಹೌದು, ಸಿನಿಮಾ ಬಿಡುಗಡೆ ಆದ ಕೇವಲ 24 ಗಂಟೆಯಲ್ಲಿ ವೆಬ್‌ಸೈಟ್‌ನಿಂದ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸಿನಿಮಾವನ್ನು ನೋಡಿದ್ದಾರೆ. ರಾಮ್‌ ಗೋಪಾಲ್ ವರ್ಮಾ ಅವರೇ ಟ್ವೀಟ್‌ ಮಾಡಿರುವ ಪ್ರಕಾರ ಒಂದು ದಿನದಲ್ಲಿ 1,68,596 ಮಂದಿ ಸಿನಿಮಾವನ್ನು ಹಣ ಕೊಟ್ಟು ಆನ್‌ಲೈನ್‌ನಲ್ಲಿ ವೀಕ್ಷಿಸಿದ್ದಾರಂತೆ.

  ಒಂದೇ ದಿನದಲ್ಲಿ 1.68 ಕೋಟಿ ಗಳಿಕೆ

  ಒಂದೇ ದಿನದಲ್ಲಿ 1.68 ಕೋಟಿ ಗಳಿಕೆ

  ಅಲ್ಲಿಗೆ ರಾಮ್‌ಗೋಪಾಲ್ ವರ್ಮಾ ಕೇವಲ ಒಂದೇ ದಿನದಲ್ಲಿ ಒಂದು ಕೋಟಿ ಅರವತ್ತೆಂಟು ಲಕ್ಷ (1.68 ಕೋಟಿ) ಗಳಿಸಿದ್ದಾರೆ. ಸಿನಿಮಾ ಬಿಡುಗಡೆ ಆಗಿ 10 ದಿನಗಳಾಯ್ತು. ಈ ವರೆಗೆ ಸುಮಾರು 3 ಲಕ್ಷ ಮಂದಿ ಹಣ ಕೊಟ್ಟು ಸಿನಿಮಾ ನೋಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಗೆ ಮೂರು ಕೋಟಿಗೂ ಹೆಚ್ಚು ಹಣ ಗಳಿಸಿದ್ದಾರೆ ಆರ್‌ಜಿವಿ.

  ಸಿನಿಮಾಕ್ಕೆ ಒಂದು ಕೋಟಿಯೂ ಖರ್ಚಾಗಿಲ್ಲ?!

  ಸಿನಿಮಾಕ್ಕೆ ಒಂದು ಕೋಟಿಯೂ ಖರ್ಚಾಗಿಲ್ಲ?!

  ಕ್ಲೈಮ್ಯಾಕ್ಸ್‌ ಸಿನಿಮಾಕ್ಕೆ ಒಂದು ಕೋಟಿ ಸಹ ಖರ್ಚಾಗಿಲ್ಲ ಎಂದು ಕೆಲವು ಪರಿಣಿತರು ಹೇಳುತ್ತಿದ್ದಾರೆ. ಮರುಭೂಮಿಯಲ್ಲಿ ಕೆಲವೇ ಪಾತ್ರಗಳನ್ನು ಇಟ್ಟುಕೊಂಡು ತೆಗೆದಿರುವ ಸಿನಿಮಾ ಇದಾಗಿದ್ದು. ಕತೆ, ನಿರೂಪಣೆ ಬಹಳಾ ಪೇಲವವಾಗಿದೆ.

  ಸಿನಿಮಾ ಬಂಡವಾಳ ಮಿಯಾ ಮಾಲ್ಕೊವಾ

  ಸಿನಿಮಾ ಬಂಡವಾಳ ಮಿಯಾ ಮಾಲ್ಕೊವಾ

  ನೀಲಿ ಚಿತ್ರತಾರೆ ಮಿಯಾ ಮಾಲ್ಕೊವಾ ಅವರ ಚರ್ಮ ಸೌಂದರ್ಯ ನಂಬಿಕೊಂಡು ಮಾಡಿರುವ ಇದಾಗಿದೆ. ರಾಮ್‌ಗೋಪಾಲ್ ವರ್ಮಾ ಕೇವಲ ತನ್ನ ಹೆಸರನ್ನಷ್ಟೆ ಬಳಸಿ ಸೆಟ್‌ಗೂ ಸಹ ಹೋಗದೆ ಸಹಾಯಕರ ಕೈಲಿ ಸಿನಿಮಾ ತೆಗೆಸಿದ್ದಾರೆ ಎನ್ನುತ್ತಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ. ಹಿಂದೆಯೂ ಹೀಗೆ ಮಾಡಿದ್ದರು ಆರ್‌ಜಿವಿ.

  English summary
  more than one lakh people watch Director Ram Gopal Varma's Climax movie in website by paying 100 rs in just one day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X