For Quick Alerts
  ALLOW NOTIFICATIONS  
  For Daily Alerts

  ತೆಲುಗಿಗಾಗಿ ಮತ್ತೊಂದು ಪ್ರತ್ಯೇಕ ಒಟಿಟಿ: 200 ಕೋಟಿ ಪ್ರಾಥಮಿಕ ಬಂಡವಾಳ!

  |

  ಇದು ಒಟಿಟಿಗಳ ಕಾಲ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ, ಸೋನಿ ಲಿವ್, ಹಾಟ್‌ಸ್ಟಾರ್ ಹೀಗೆ ಹಲವಾರು ಒಟಿಟಿಗಳು ಭಾರತದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಕೋಟಿಗಟ್ಟಲೆ ಲಾಭವನ್ನೂ ಗಳಿಸುತ್ತಿವೆ.

  ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್‌ಗಳಲ್ಲಿನ ಭಾರತೀಯ ಸಿನಿಮಾಗಳಿಗೆ ಸೀಮಿತವಾಗಿದ್ದ ಪ್ರೇಕ್ಷಕನನ್ನು ಅಂತರರಾಷ್ಟ್ರೀಯ 'ಕಂಟೆಂಟ್‌'ಗೆ ಪರಿಚಯಿಸಿದ ಶ್ರೇಯ ಒಟಿಟಿಗಳಿಗೆ ಸಲ್ಲಬೇಕು. ಒಟಿಟಿಗಳು ಭಾರತದ ಮನೊರಂಜನಾ ಕ್ಷೇತ್ರದಲ್ಲಿ ತರುತ್ತಿರುವ ಬದಲಾವಣೆ ದೊಡ್ಡ ಮಟ್ಟದ್ದು.

  ಆದರೆ ಒಟಿಟಿಗಳ ಸಮಸ್ಯೆಗಳಲ್ಲಿ ಒಂದೆಂದರೆ ಪ್ರಾದೇಶಿಕ ಭಾಷೆಗಳಿಗೆ ಪ್ರತ್ಯೇಕ ಒಟಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೇ ಇರುವುದು. ಆದರೆ ಒಟಿಟಿಗಳ ಶಕ್ತಿ ಮೊದಲೇ ಊಹಿಸಿದ ಕೆಲವರು ಪ್ರಾದೇಶಿಕ ಭಾಷೆಯಲ್ಲಿ ಗುಣಮಟ್ಟದ ಒಟಿಟಿ ತಂದಿದ್ದಾರೆ. ಉದಾಹರಣೆಗೆ ತೆಲುಗಿನ 'ಆಹಾ'.

  'ಆಹಾ' ತೆಲುಗು ಭಾಷೆಯ ಕಂಟೆಂಟ್‌ಗಾಗಿಯೇ ಮೀಸಲಿರುವ ಒಟಿ. ಈ ಒಟಿಟಿ ಫ್ಲಾಟ್‌ಫಾರ್ಮ್‌ ಬಹಳ ಜನಪ್ರಿಯವಾಗಿದೆ. 'ಆಹಾ' ಜನಪ್ರಿಯತೆ ಬೆನ್ನಲ್ಲೆ ಹೊಸ ಒಟಿಟಿ ತೆಲುಗಿನಲ್ಲಿಯೇ ಪ್ರಾರಂಭವಾಗುತ್ತಿದೆ. ಅದು 'ಆಹಾ'ಗಿಂತಲೂ ಭಾರಿ ದೊಡ್ಡದಾಗಿರಲಿದೆ.

  ಏಷ್ಯಾದ ದೊಡ್ಡ ಫಿಲಂ ಸಿಟಿ, ಸಿನಿಮಾ ನಿರ್ಮಾಣ ಸಂಸ್ಥೆ, ಟಿವಿ ಚಾನೆಲ್ ನೆಟ್‌ವರ್ಕ್‌ ಹೊಂದಿರುವ ರಾಮೋಜಿ ರಾವ್, ಒಟಿಟಿ ಉದ್ಯಮಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ರಾಮೋಜಿ ರಾವ್ ಒಡೆತನದ ಈಟಿವಿ ನೆಟ್‌ವರ್ಕ್ಸ್‌ ವತಿಯಿಂದ ಅದೇ ಹೆಸರಿನ ಒಟಿಟಿ ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ.

  ಒಟಿಟಿಯ ತಾಂತ್ರಿಕ ಕಾರ್ಯ, ಪ್ರಚಾರಕ್ಕಾಗಿಯೇ 200 ಕೋಟಿ ರುಪಾಯಿಗಳನ್ನು ರಾಮೋಜಿ ರಾವ್ ಖರ್ಚು ಮಾಡುತ್ತಿದ್ದಾರೆ. ಈ ಒಟಿಟಿಯು 'ಆಹಾ'ದಂತೆ ಕೇವಲ ತೆಲುಗು ಕಂಟೆಂಟ್‌ ಕಡೆಗೆ ಮಾತ್ರವೇ ಗಮನವಹಿಸಲಿದೆ. ಬೇರೆ ಭಾಷೆಯ ಇನ್ನಾವುದೇ ಕಂಟೆಂಟ್ ಅನ್ನು ಈ ಒಟಿಟಿಯಲ್ಲಿ ಸ್ಟ್ರೀಮ್ ಮಾಡಲಾಗುವುದಿಲ್ಲ. 'ಆಹಾ'ಗಿಂತಲೂ ಅದ್ಧೂರಿಯಾದ 'ರಿಚ್' ಕಂಟೆಂಟ್ ಅನ್ನು ರಾಮೋಜಿ ರಾವ್ ಅವರ ಒಟಿಟಿ ಸ್ಟ್ರೀಮ್ ಮಾಡಲಿದೆ.

  ಕನ್ನಡದಲ್ಲಿ ಸಹ ಕೆಲವರು ಕನ್ನಡಕ್ಕಾಗಿ ಪ್ರತ್ಯೇಕ ಒಟಿಟಿ ನಿರ್ಮಿಸಲು ಪ್ರಯತ್ನ ಮಾಡಿದರು ಆದರೆ ಅವು ಸಫಲವಾಗಲಿಲ್ಲ.

  English summary
  Famous producer and businessman Rramoji Rao starting new platform exclusively for Telugu content.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X