For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಸಿನಿಮಾಕ್ಕೆ ಕೋಟಿ-ಕೋಟಿ ಆಫರ್: ಡೀಲ್ ಬೇಡವೆಂದ ನಿರ್ಮಾಪಕ

  |

  ಎಲ್ಲವೂ ಸರಿಯಾಗಿದ್ದಿದ್ದರೆ ದರ್ಶನ್ ಅವರ ರಾಬರ್ಟ್ ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳ ಮೇಲಾಗಬೇಕಿತ್ತು. ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ 'ರಾಬರ್ಟ್' ತೆರೆಯ ಮೇಲೆ ಬರಲು ಕಾಯಬೇಕಾಗಿದೆ.

  Recommended Video

  Roberrt Cinema On Prime?ರಾಬರ್ಟ್ ಸಿನಿಮಾಗೆ ಕೋಟಿ ಕೋಟಿ ಆಫರ್ ಕೊಟ್ರು ಬೇಡ ಎಂದ ನಿರ್ಮಾಪಕ! | Robert | Darshan

  ಎಲ್ಲವೂ ಸರಿ ಇದ್ದಿದ್ದರೆ ಏಪ್ರಿಲ್ 09 ಕ್ಕೆ ರಾಬರ್ಟ್ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಹಾಗಾಗಲಿಲ್ಲ. ಸಿನಿಮಾದ ಸಂಪೂರ್ಣ ಚಿತ್ರೀಕರಣ, ಡಬ್ಬಿಂಗ್ ಎಲ್ಲವೂ ಮುಗಿದಿದ್ದರೂ ಸಹಿತ ಬಿಡುಗಡೆಗಾಗಿ ಇನ್ನೆಷ್ಟು ದಿನ ಕಾಯಬೇಕೊ ಯಾರಿಗೂ ಗೊತ್ತಿಲ್ಲ.

  'ರಾಬರ್ಟ್' ಹೊಸ ರಿಲೀಸ್ ಡೇಟ್': ವಿಶೇಷ ದಿನದಂದು ಬಿಡುಗಡೆಯಾಗುತ್ತಾ ಸಿನಿಮಾ?'ರಾಬರ್ಟ್' ಹೊಸ ರಿಲೀಸ್ ಡೇಟ್': ವಿಶೇಷ ದಿನದಂದು ಬಿಡುಗಡೆಯಾಗುತ್ತಾ ಸಿನಿಮಾ?

  ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಚಿತ್ರಮಂದಿರಗಳು ತೆರೆಯುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ನಂಥಹಾ ಓಟಿಟಿಗಳು, ನಿರ್ಮಾಣವಾಗಿರುವ ಸಿನಿಮಾಗಳನ್ನು ನೇರವಾಗಿ ತಮ್ಮ ಓಟಿಟಿಗಳ ಮೂಲಕ ಮೊಬೈಲ್‌ ಗೆ ಬಿಡುಗಡೆ ಮಾಡಲು ಹವಣಿಸುತ್ತಿವೆ.

  ದರ್ಶನ್ ಸಿನಿಮಾ ಮೇಲೆ ಅಮೆಜಾನ್ ಪ್ರೈಂ ಕಣ್ಣು

  ದರ್ಶನ್ ಸಿನಿಮಾ ಮೇಲೆ ಅಮೆಜಾನ್ ಪ್ರೈಂ ಕಣ್ಣು

  ಅಮೆಜಾನ್ ಪ್ರೈಂ ಓಟಿಟಿ ಪ್ಲ್ಯಾಟ್‌ಫಾರಂ, ದರ್ಶನ್ ಅವರ ರಾಬರ್ಟ್ ಸಿನಿಮಾ ಮೇಲೆ ಕಣ್ಣಿಟ್ಟಿದ್ದು, ಸಿನಿಮಾವನ್ನು ನೇರವಾಗಿ ತಮ್ಮ ಓಟಿಟಿ ಫ್ಲಾಟ್‌ಪಾರ್ಮ್‌ ನಲ್ಲಿ ಬಿಡುಗಡೆ ಪ್ರಯತ್ನ ನಡೆಸಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕರನ್ನೂ ಸಹ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

  ಬರೋಬ್ಬರಿ 70 ಕೋಟಿ ರೂಪಾಯಿ ಆಫರ್

  ಬರೋಬ್ಬರಿ 70 ಕೋಟಿ ರೂಪಾಯಿ ಆಫರ್

  ಅಮೆಜಾನ್ ಪ್ರೈಂ ಬರೋಬ್ಬರಿ 70 ಕೋಟಿ ಆಫರ್ ಅನ್ನು ರಾಬರ್ಟ್ ಸಿನಿಮಾಕ್ಕೆ ನೀಡಿದೆಯಂತೆ. ಡೀಲ್ ಓಕೆಯಾದರೆ ಕನ್ನಡ ಸಿನಿಮಾವೊಂದಕ್ಕೆ ನೀಡಿದ ಬಹುದೊಡ್ಡ ಮೊತ್ತ ಇದಾಗಲಿದೆ. ಆದರೆ ಡೀಲ್ ಓಕೆ ಆಗಿಲ್ಲ.

  ಅನಾರೋಗ್ಯದಿಂದ ಬಳಲುತ್ತಿದ್ದ ಬಸವನ ಚಿಕಿತ್ಸೆಗೆ ನಟ ದರ್ಶನ್ ನೆರವುಅನಾರೋಗ್ಯದಿಂದ ಬಳಲುತ್ತಿದ್ದ ಬಸವನ ಚಿಕಿತ್ಸೆಗೆ ನಟ ದರ್ಶನ್ ನೆರವು

  ಅಮೆಜಾನ್ ಆಫರ್ ತಿರಸ್ಕರಿಸಿದ ನಿರ್ಮಾಪಕ

  ಅಮೆಜಾನ್ ಆಫರ್ ತಿರಸ್ಕರಿಸಿದ ನಿರ್ಮಾಪಕ

  ದರ್ಶನ್ ಸಿನಿಮಾದ 'ಓಡುವ ವೇಗ'ದ ಅರಿವಿರುವ ನಿರ್ಮಾಪಕ ಉಮಾಪತಿ ಅಮೆಜಾನ್ ಪ್ರೈಂ ಆಫರ್ ಅನ್ನು ನಿರಾಕರಿಸಿದ್ದಾರೆ. 'ನಾವು ಚಿತ್ರಮಂದಿರದಲ್ಲಿಯೇ ರಾಬರ್ಟ್ ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ' ಎಂದಿದ್ದಾರೆ.

  ಅಭಿಮಾನಿಗಳಿಗೆ ನಿರಾಸೆ ಆಗುತ್ತಿತ್ತು

  ಅಭಿಮಾನಿಗಳಿಗೆ ನಿರಾಸೆ ಆಗುತ್ತಿತ್ತು

  ದರ್ಶನ್ ಅಭಿಮಾನಿಗಳಿಗೆ ಮೆಚ್ಚಿನ ನಾಯಕನ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡುವುದು ಇಷ್ಟ. ದರ್ಶನ್ ಸಿನಿಮಾ ಬಿಡುಗಡೆಯನ್ನು ಹಬ್ಬವಾಗಿ ಆಚರಿಸುವ ಅಭಿಮಾನಿಗಳು ನಟರಿಗಿದ್ದಾರೆ. ಹೀಗಿದ್ದಾಗ ಚಿತ್ರಮಂದಿರದಲ್ಲಿ ಬಿಡುಗಡೆಯೇ ಮಾಡದಿದ್ದಲ್ಲಿ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗುತ್ತಿತ್ತು, ಆದರೆ ಈಗ ಹಾಗಾಗಿಲ್ಲ.

  ಟ್ವೀಟ್ ಡಿಲೀಟ್ ಮಾಡಿದ ಸುದೀಪ್: ಭಯಬಿದ್ದು ಡಿಲೀಟ್ ಮಾಡಿದ್ದಾರೆ ಎಂದ ದರ್ಶನ್ ಫ್ಯಾನ್ಸ್ಟ್ವೀಟ್ ಡಿಲೀಟ್ ಮಾಡಿದ ಸುದೀಪ್: ಭಯಬಿದ್ದು ಡಿಲೀಟ್ ಮಾಡಿದ್ದಾರೆ ಎಂದ ದರ್ಶನ್ ಫ್ಯಾನ್ಸ್

  English summary
  Darshan's Robert Movie Producer Denied Amazon Prime's Offer of selling it to OTT and releasing directly on the Amazon prime.
  Monday, May 18, 2020, 17:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X