twitter
    For Quick Alerts
    ALLOW NOTIFICATIONS  
    For Daily Alerts

    OTTಗೆ ವಿವಾದಾತ್ಮಕ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಲಗ್ಗೆ: ಕನ್ನಡದಲ್ಲೂ ರಿಲೀಸ್!

    |

    ಈ ವರ್ಷದ ಭಾರತದ ವಿವಾದಾತ್ಮಕ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್'. ಈ ಸಿನಿಮಾ ಬಿಡುಗಡೆಯಾದಾಗ ಪರ-ವಿರೋಧ ಚರ್ಚೆಗಳು ನಡೆದಿತ್ತು. ಸಿನಿಮಾ ಬಿಡುಗಡೆಯಾದ ಬಳಿಕವಂತೂ ದೇಶದ ಉದ್ದಗಲಕ್ಕೂ ವಾದ-ವಿವಾದಗಳು ನಡೆಯುತ್ತಲೇ ಇತ್ತು. ಸಿನಿಮಾ ತಾರೆಯರಿಂದ ಹಿಡಿದು, ರಾಜಕೀಯ ಮುಖಂಡರು ಅಖಾಡಕ್ಕೆ ಇಳಿದಿದ್ದರು. ಕೆಲವು ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿತ್ತು.

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕೇವಲ ವಿವಾದದಿಂದಷ್ಟೇ ಸದ್ದು ಮಾಡಿಲ್ಲ. ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾ ಬೇಜಾನ್ ಸದ್ದು ಮಾಡಿತ್ತು. ದೇಶದ ಉದ್ದಗಲಕ್ಕೂ ಜನರೂ ಮುಗಿಬಿದ್ದು ಸಿನಿಮಾ ನೋಡಿದ್ದರು. ಅದೇ ಸಿನಿಮಾ ಈಗ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಥಿಯೇಟರ್‌ನಲ್ಲಿ ಕೇವಲ ಹಿಂದಿಯಲ್ಲಿ ಬಿಡುಗಡೆಯಾಗಿದ್ದ ಸಿನಿಮಾ, ಕನ್ನಡವೂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

    The Kashmir Files:ವಿವಾದಾತ್ಮಕ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ನಿರ್ದೇಶಕ ವಿವೇಶ್ ಅಗ್ನಿಹೋತ್ರಿ ಹಿನ್ನೆಲೆಯೇನು?The Kashmir Files:ವಿವಾದಾತ್ಮಕ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ನಿರ್ದೇಶಕ ವಿವೇಶ್ ಅಗ್ನಿಹೋತ್ರಿ ಹಿನ್ನೆಲೆಯೇನು?

    ಒಟಿಟಿಯಲ್ಲಿ ದಿ ಕಾಶ್ಮೀರ್ ಫೈಲ್ಸ್

    ಒಟಿಟಿಯಲ್ಲಿ ದಿ ಕಾಶ್ಮೀರ್ ಫೈಲ್ಸ್

    'ದಿ ಕಾಶ್ಮೀರ್ ಫೈಲ್ಸ್' 1991ರಲ್ಲಿ ಕಾಶ್ಮೀರದ ಪಂಡಿತರ ಮೇಲಾದ ದೌರ್ಜನ್ಯ ಹಾಗೂ ಅವರ ಹತ್ಯೆಯನ್ನು ಕುರಿತು ನಿರ್ಮಿಸಿದ್ದ ಸಿನಿಮಾ. ಆದರೆ, ಈ ಸಿನಿಮಾ ನೋಡಿ ಅದೆಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರೋ, ಅಷ್ಟೇ ಜನರು ಕಥೆಯಲ್ಲಿ ಸಂಪೂರ್ಣ ಸತ್ಯಾಂಶವಿಲ್ಲ ಎಂದು ವಿರೋಧಿಸಿದ್ದರು. ಹೀಗಾಗಿ ವಾದ-ವಿವಾದಗಳಿಂದಲೇ ಸಿನಿಮಾ ಮುನ್ನಲೆಯಲ್ಲಿತ್ತು. ಈಗ ಇದೇ ಸಿನಿಮಾ ಒಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಜೀ 5 ಒಟಿಟಿಯಲ್ಲಿ ಈ ಸಿನಿಮಾ ಮೇ 13ರಿಂದ ಪ್ರೀಮಿಯರ್ ಆಗಲಿದೆ.

    ಬಿಜೆಪಿ ಶಾಸಕರೊಂದಿಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಬಿಎಸ್‌ವೈಬಿಜೆಪಿ ಶಾಸಕರೊಂದಿಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಬಿಎಸ್‌ವೈ

    ಬಾಕ್ಸಾಫೀಸ್‌ನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಕಮಾಲ್

    ಬಾಕ್ಸಾಫೀಸ್‌ನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಕಮಾಲ್

    ಕಾಶ್ಮೀರ ಪಂಡಿತರ ಮೇಲಾದ ದೌರ್ಜನ್ಯ ಹಾಗೂ ಹತ್ಯೆ ಕುರಿತ ಈ ಸಿನಿಮಾ ಬಾಕ್ಸಾಫೀಸ್‌ನ್ನು ಕೊಳ್ಳೆ ಹೊಡೆದಿತ್ತು. ದೇಶದ ಉದ್ದಗಲ್ಲೂ 'ದಿ ಕಾಶ್ಮೀರ್ ಫೈಲ್ಸ್' ದಿನದಿಂದ ದಿನಕ್ಕೆ ಗಳಿಕೆಯಲ್ಲೂ ಮುಂದಿದೆ. 2022ರ ಬಾಕ್ಸಾಫೀಸ್‌ನಲ್ಲಿ ಅತೀ ಕಲೆಕ್ಷನ್ ಮಾಡಿದ ಸಿನಿಮಾ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇದೂವರೆಗೂ ಕಾಶ್ಮೀರ್ ಫೈಲ್ಸ್ ಬಾಕ್ಸಾಫೀಸ್‌ನಲ್ಲಿ ಸುಮಾರು 339.41 ಕೋಟಿ ಗಳಿಕೆ ಕಂಡಿದೆ. ಹಿಂದಿಯ ಯಾವುದೇ ಸಿನಿಮಾ ಈ ಮಟ್ಟಿಗೆ ಗಳಿಕೆ ಕಂಡಿಲ್ಲ. 'ಗಂಗೂಬಾಯಿ ಕಾಠಿಯಾವಾಡಿ', 'ಬಚ್ಚನ್ ಪಾಂಡೆ', 'ಬದಾಯಿ ದೊ' ಸಿನಿಮಾಗಳ ಕಲೆಕ್ಷನ್ನೂ ಮೀರಿಸಿದೆ.

    'ದಿ ಕಾಶ್ಮೀರ್ ಫೈಲ್ಸ್‌'ನಲ್ಲಿ ದಿಗ್ಗಜರ ನಟನೆ

    'ದಿ ಕಾಶ್ಮೀರ್ ಫೈಲ್ಸ್‌'ನಲ್ಲಿ ದಿಗ್ಗಜರ ನಟನೆ

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ ಮತ್ತು ದರ್ಶನ್ ಕುಮಾರ್ ಸೇರಿದಂತೆ ಬಾಲಿವುಡ್‌ನ ದಿಗ್ಗಜರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 1991ರ ಸಮಯದಲ್ಲಿ ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಹಾಗೂ ವಲಸೆಯನ್ನು ತೆರೆಮೇಲೆ ಕಟ್ಟಿಕೊಟ್ಟಿದ್ದ ಈ ಸಿನಿಮಾದಲ್ಲಿ ಅನುಮಪ್‌ ಖೇರ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಹಲವರ ವಿರೋಧ ನಡುವೆಯೂ ಗೆಲುವಿನ ನಗೆ ಬೀರಿದ್ದ ಬೀರಿದ್ದ 'ದಿ ಕಾಶ್ಮೀರ್ ಫೈಲ್ಸ್' ಈಗ ಒಟಿಟಿಯಲ್ಲಿ ತೆರೆಕಾಣಲಿದೆ.

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಲ್ಲ ಎಂದ ಮಾಜಿ ಸಿಎಂ ಸಿದ್ಧರಾಮಯ್ಯ: ಕೊಟ್ಟ ಕಾರಣವೇನು?'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಲ್ಲ ಎಂದ ಮಾಜಿ ಸಿಎಂ ಸಿದ್ಧರಾಮಯ್ಯ: ಕೊಟ್ಟ ಕಾರಣವೇನು?

    ಕನ್ನಡದಲ್ಲೂ 'ದಿ ಕಾಶ್ಮೀರ್ ಫೈಲ್ಸ್' ರಿಲೀಸ್

    ಕನ್ನಡದಲ್ಲೂ 'ದಿ ಕಾಶ್ಮೀರ್ ಫೈಲ್ಸ್' ರಿಲೀಸ್

    ಬಾಲಿವುಡ್ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಕೇವಲ ಹಿಂದಿ ಭಾಷೆಯಲ್ಲಷ್ಟೇ ಬಿಡುಗಡೆಯಾಗಿತ್ತು. ಆದ್ರೀಗ ಈ ಸಿನಿಮಾ ಒಟಿಟಿಗೂ ಲಗ್ಗೆ ಇಡಲಿದ್ದು, ಮೇ 13ರಂದು ಹಿಂದಿ, ತಮಿಳು, ತೆಲುಗು ಸೇರಿದಂತೆ ಕನ್ನಡ ಭಾಷೆಯಲ್ಲಿಯೂ ರಿಲೀಸ್ ಆಗಲಿದೆ. ಜೀ 5ನಲ್ಲಿ ಡಿಜಿಟಲ್ ವರ್ಲ್ಡ್ ಪ್ರೀಮಿಯರ್ ಆಗಲಿದೆ.

    English summary
    The Kashmir Files OTT Release On Zee5 in 4 languages including Kannada, Know More,
    Friday, April 29, 2022, 16:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X