twitter
    For Quick Alerts
    ALLOW NOTIFICATIONS  
    For Daily Alerts

    'ಲೈಗರ್' OTT: 10 ನಿಮಿಷಕ್ಕಿಂತ ಜಾಸ್ತಿ ನೋಡೋಕ್ಕಾಗ್ತಿಲ್ಲ, ಪುರಿ ನಿಂದೇ ಸಿನಿಮಾನಾ, ವಿಜಿ ಸ್ಕ್ರಿಪ್ಟ್ ಕೇಳಿದ್ಯಾ?

    |

    ವರ್ಷದ ಅತಿ ದೊಡ್ಡ ಫ್ಲಾಪ್ ಸಿನಿಮಾ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರೋ 'ಲೈಗರ್' ಓಟಿಟಿಗೆ ಬಂದಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ರಿಲೀಸ್ ಆದರೂ 7 ವಾರಗಳ ನಂತರ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಮಾಡಲು ಒಪ್ಪಂದ ಆಗಿರುತ್ತದೆ. ಆದರೆ ತಿಂಗಳಿಗೂ ಮೊದಲೇ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಸ್ಮಾಲ್ ಸ್ಕ್ರೀನ್‌ಗೆ ಬಂದಿದೆ. ಆದರೆ ಸಿನಿಮಾ ನೋಡಿದವರು ಮಾತ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕ್ರೇಜಿ ಕಾಂಬಿನೇಷನ್‌ನಲ್ಲಿ ನಿರ್ಮಾಣವಾಗಿದ್ದ 'ಲೈಗರ್' ಸಿನಿಮಾ ಆಗಸ್ಟ್ 25ಕ್ಕೆ ತೆರೆಗಪ್ಪಳಿಸಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಅಂತ ಬಹಳ ಜೋರಾಗಿ ಪ್ರಮೋಷನ್ ಮಾಡಲಾಗಿತ್ತು. ಆದರೆ ಸಿನಿಮಾ ಮಾತ್ರ ಪ್ರೇಕ್ಷಕರನ್ನು ರಂಜಸುವಲ್ಲಿ ಸೋತಿತ್ತು. ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಶುರುವಾಗಿತ್ತು. ಕೊನೆಯವರೆಗೂ ಸಿನಿಮಾ ಮೇಲೇಳಲೇ ಇಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಕನಸು ಕಂಡಿದ್ದ ವಿಜಯ್ ದೇವರಕೊಂಡಗೆ ದೊಡ್ಡ ಹಿನ್ನಡೆ ಆಗಿದೆ. ಇದೀಗ ಸಿನಿಮಾ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗ್ತಿದ್ದು, ಅಲ್ಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

    'ಲೈಗರ್' ಹೀನಾಯ ಸೋಲು ಮುಂಬೈ ಫ್ಲ್ಯಾಟ್ ಖಾಲಿ: ಪುರಿ ಜಗನ್ನಾಥ್ ಗೋವಾ ಶಿಫ್ಟ್!'ಲೈಗರ್' ಹೀನಾಯ ಸೋಲು ಮುಂಬೈ ಫ್ಲ್ಯಾಟ್ ಖಾಲಿ: ಪುರಿ ಜಗನ್ನಾಥ್ ಗೋವಾ ಶಿಫ್ಟ್!

    'ಲೈಗರ್' ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ತಾಯಿಯಾಗಿ ರಮ್ಯಾಕೃಷ್ಣ ನಟಿಸಿದ್ರೆ, ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಕರಣ್‌ ಜೋಹರ್ ಜೊತೆ ಸೇರಿ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಸಿನಿಮಾ ನಿರ್ಮಿಸಿದ್ದರು.

     ಸಿನಿಮಾ ನೋಡಿದವರು ತಲೆ ಚಚ್ಚಿಕೊಳ್ಳುತ್ತಿದ್ದಾರೆ

    ಸಿನಿಮಾ ನೋಡಿದವರು ತಲೆ ಚಚ್ಚಿಕೊಳ್ಳುತ್ತಿದ್ದಾರೆ

    ದೊಡ್ಡ ಸಿನಿಮಾ ಓಟಿಟಿಗೆ ಬರ್ತಿದೆ ಅಂದಾಗ ಸಹಜವಾಗಿಯೇ ಕುತೂಹಲ ಇರುತ್ತದೆ. ಕೊನೆ ಪಕ್ಷ ಥಿಯೇಟರ್‌ನಲ್ಲಿ ನೋಡದೇ ಇರುವವರಾದರೂ ಸಿನಿಮಾ ನೋಡಲು ಮುಂದಾಗುತ್ತಾರೆ. ಆದರೆ 'ಲೈಗರ್' ಸಿನಿಮಾ ನೋಡಲು ಯಾರೊಬ್ಬರು ಮನಸ್ಸು ಮಾಡುತ್ತಿಲ್ಲ. ನೋಡಿದವರು ಕೂಡ ಬೇಸರ ವ್ಯಕ್ತಪಡಿಸ್ತಿದ್ದಾರೆ. ರಿಲೀಸ್‌ಗೂ ಮೊದಲು ನೀವು ಕೊಟ್ಟ ಬಿಲ್ಡಪ್‌ಗೂ ಈ ಸಿನಿಮಾಗೂ ಏನಾದ್ರು ಸಂಬಂಧ ಇದ್ಯಾ ಅಂತ ವ್ಯಂಗ್ಯ ಮಾಡಿದ್ದಾರೆ.

    ವೇಣು ಸ್ವಾಮಿ ಭವಿಷ್ಯ ನಿಜವಾಯ್ತಾ? 'ಲೈಗರ್' ಸೋಲಿಗೆ ಅದೇ ಕಾರಣನಾ?ವೇಣು ಸ್ವಾಮಿ ಭವಿಷ್ಯ ನಿಜವಾಯ್ತಾ? 'ಲೈಗರ್' ಸೋಲಿಗೆ ಅದೇ ಕಾರಣನಾ?

     ಮತ್ತೆ ಟ್ರೋಲ್ ಆಗ್ತಿದೆ 'ಲೈಗರ್'

    ಮತ್ತೆ ಟ್ರೋಲ್ ಆಗ್ತಿದೆ 'ಲೈಗರ್'

    'ಲೈಗರ್' ಸಿನಿಮಾ ರಿಲೀಸ್ ಆದ ದಿನದಿಂದಲೂ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಮಾತು ನಿಲ್ಲಿಸಿ ಕೆಲಸ ಮಾಡಬೇಕಿತ್ತು. ಕೆಲಸ ಮಾಡದೇ ಬರೀ ಬಡಾಯಿ ಕಚ್ಚಿಕೊಂಡಿದ್ರಿ, ಅದಕ್ಕೆ ಹಿಂಗಾಯ್ತು ಅಂತೆಲ್ಲಾ ಗೇಲಿ ಮಾಡಿದ್ದರು. ಇದೀಗ ಸಿನಿಮಾ ಓಟಿಟಿಗೆ ಬಂದರೂ ಟ್ರೋಲ್ ಮಾತ್ರ ತಪ್ಪುತ್ತಿಲ್ಲ. '10 ನಿಮಿಷಕ್ಕಿಂತ ಜಾಸ್ತಿ ಸಿನಿಮಾ ನೋಡೋಕ್ಕಾಗ್ತಿಲ್ಲ'. 'ಸಿನಿಮಾ ನೋಡಿದ್ರೆ ವಾಂತಿ ಬರುವಂತಾಗುತ್ತಿದೆ'. 'ವಿಜಯ್ ದೇವರಕೊಂಡ ನಿಜಕ್ಕೂ ನೀನು ಸ್ಕ್ರಿಪ್ಟ್ ಕೇಳಿ ಸಿನಿಮಾ ಒಪ್ಪಿಕೊಂಡ?' 'ಈ ಸಿನಿಮಾ ನೋಡಿದ್ರೆ ಟೈಂ ವೇಸ್ಟ್' ಅಂತೆಲ್ಲಾ ಕಾಮೆಂಟ್ ಮಾಡಿ ಟ್ರೋಲ್ ಮಾಡ್ತಿದ್ದಾರೆ.

     ಓಟಿಟಿಯಲ್ಲಿ ನೋಡಿ ಎಂದ ಚಾರ್ಮಿಗೂ ಪಾಠ

    ಓಟಿಟಿಯಲ್ಲಿ ನೋಡಿ ಎಂದ ಚಾರ್ಮಿಗೂ ಪಾಠ

    ಕೆಲ ದಿನಗಳ ಹಿಂದೆ ಟ್ರೋಲ್‌ಗೆ ಬೇಸತ್ತು, ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುವುದಾಗಿ ಹೇಳಿದ್ದ ಚಾರ್ಮಿ ಮತ್ತೆ ವಾಪಸ್ ಬಂದಿದ್ದರು. ಇದೀಗ ಸಿನಿಮಾ ಓಟಿಟಿಗೆ ಬಂದಿದೆ ಎಂದು ಪೋಸ್ಟ್ ಮಾಡಿದ್ದಾರೆ. ಕಾಮೆಂಟ್‌ ಬಾಕ್ಸ್‌ನಲ್ಲಿ ಚಾರ್ಮಿಗೂ ನೆಟ್ಟಿಗರು ಪಾಠ ಮಾಡಿದ್ದಾರೆ. 'ಇನ್ನು ಮುಂದೆ ಸರಿಯಾಗಿ ಕಥೆ ಮಾಡಿಕೊಂಡು ಸಿನಿಮಾ ಮಾಡಿ', 'ನೀನು, ಪುರಿ, ವಿಜಯ್ ದೇವರಕೊಂಡ ಒಮ್ಮೆ ಲೈಗರ್ ಸಿನಿಮಾ ನೋಡಿ, ಏನೆಲ್ಲಾ ಮಿಸ್ಟೇಕ್ ಆಗಿದೆ ಅಂತ ತಿಳ್ಕೊಂಡು ಮುಂದೆ ಒಳ್ಳೆ ಸಿನಿಮಾ ಮಾಡಿ' ಎಂದು ಬಿಟ್ಟಿ ಸಲಹೆ ಕೊಟ್ಟಿದ್ದಾರೆ.

    'ಮತ್ತೆ ತಿರುಗೇಟು ನೀಡುತ್ತೇವೆ' ಎಂದ ಚಾರ್ಮಿ: 'ಲೈಗರ್' ಸೋಲಿನ ಬಳಿಕ ಸೋಶಿಯಲ್ ಮೀಡಿಯಾಗೆ ಬ್ರೇಕ್!'ಮತ್ತೆ ತಿರುಗೇಟು ನೀಡುತ್ತೇವೆ' ಎಂದ ಚಾರ್ಮಿ: 'ಲೈಗರ್' ಸೋಲಿನ ಬಳಿಕ ಸೋಶಿಯಲ್ ಮೀಡಿಯಾಗೆ ಬ್ರೇಕ್!

     ಸಿನಿಮಾ ನೋಡಿ ಅಭಿಮಾನಿಗಳ ಮೆಚ್ಚುಗೆ

    ಸಿನಿಮಾ ನೋಡಿ ಅಭಿಮಾನಿಗಳ ಮೆಚ್ಚುಗೆ

    ಇನ್ನು ಓಟಿಟಿಗೆ ಬಂದಿರೋ 'ಲೈಗರ್' ಸಿನಿಮಾ ಇಷ್ಟೆಲ್ಲಾ ಟ್ರೋಲ್ ಆಗುತ್ತಿದ್ದರೂ ಕೆಲವರು ಮಾತ್ರ ಸಿನಿಮಾ ಚೆನ್ನಾಗಿದೆ ಎನ್ನುತ್ತಿದ್ದಾರೆ. 'ಇಷ್ಟೆಲ್ಲಾ ನೆಗೆಟಿವ್ ಟ್ರೋಲ್ ಮಾಡುವಂತಹ ಕೆಟ್ಟ ಸಿನಿಮಾ ಏನಲ್ಲ'. 'ಅದಕ್ಕೆ ಹೇಳುವುದು ರಿವ್ಯೂ ನಂಬಬೇಡಿ ಅಂತ, ಲೈಗರ್ ಸಿನಿಮಾ ಚೆನ್ನಾಗಿದೆ' ಎನ್ನುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ವಿಜಯ್ ದೇವರಕೊಂಡ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    English summary
    Vijay Devarakonda Starrer liger now Streaming On Ott netizens trolling again. know More.
    Friday, September 23, 2022, 15:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X