twitter
    For Quick Alerts
    ALLOW NOTIFICATIONS  
    For Daily Alerts

    ಎಲ್‌ಟಿಟಿಇ ಪ್ರಭಾಕರನ್ ಬಗ್ಗೆ ಕನ್ನಡದಲ್ಲಿ ವೆಬ್ ಸರಣಿ

    |

    ಶ್ರೀಲಂಕನ್ ತಮಿಳರ ಹೋರಾಟ, ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಕುರಿತು ಈಗಾಗಲೇ ಕೆಲವಾರು ಸಿನಿಮಾಗಳು, ಡಾಕ್ಯುಮೆಂಟರಿಗಳು ಬಂದಿವೆ. ಇತ್ತೀಚೆಗೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಸದ್ದು ಮಾಡುತ್ತಿರುವ 'ದಿ ಫ್ಯಾಮಿಲಿ ಮ್ಯಾನ್ 2' ಸಹ ಶ್ರೀಲಂಕನ್ ತಮಿಳರ ಹೋರಾಟದ ಕತೆಯ ಎಳೆಯನ್ನು ಹೊಂದಿದೆ.

    ಎಲ್‌ಟಿಟಿಇ ಮುಖ್ಯಸ್ಥನಾಗಿದ್ದ ಪ್ರಭಾಕರನ್ ಬಗ್ಗೆ ಕನ್ನಡದಲ್ಲಿಯೇ ವೆಬ್ ಸರಣಿ ನಿರ್ಮಾಣಗೊಳ್ಳಲಿದೆ. ವೀರಪ್ಪನ್ ಜೀವನ ಕುರಿತಾದ 'ಅಟ್ಟಹಾಸ', ರಾಜೀವ್ ಗಾಂಧಿ ಹತ್ಯೆಕೋರರ ಕುರಿತಾದ 'ಸೈನೈಡ್' ಸಿನಿಮಾಗಳನ್ನು ನಿರ್ದೇಶಿಸಿರುವ ಎಎಂಆರ್ ರಮೇಶ್, ಪ್ರಭಾಕರನ್ ಕುರಿತಾಗಿ ವೆಬ್ ಸರಣಿ ನಿರ್ಮಾಣ ಮಾಡಲಿದ್ದಾರೆ.

    ಈಗಾಗಲೇ ವೀರಪ್ಪನ್ ಕುರಿತಾಗಿ 'ಹಂಗರ್ ಫಾರ್ ಕಿಲ್ಲಿಂಗ್' ವೆಬ್ ಸರಣಿ ನಿರ್ಮಾಣದಲ್ಲಿ ತೊಡಗಿರುವ ಎಎಂಆರ್ ರಮೇಶ್ ಈವರೆಗೆ ಆರು ಗಂಟೆ ಅವಧಿಯ ವೆಬ್ ಸರಣಿ ನಿರ್ಮಾಣ ಮಾಡಿದ್ದಾರೆ. ಅದು ಬಿಡುಗಡೆ ಆಗುತ್ತಿದ್ದಂತೆ ಪ್ರಭಾಕರನ್ ಕುರಿತಾದ ವೆಬ್ ಸರಣಿ ಸೆಟ್ಟೇರಲಿದೆ.

    Web Series About LTTE Leader Prabhakaran In Kannada

    ಈ ಬಗ್ಗೆ ಮಾತನಾಡಿರುವ ರಮೇಶ್, 'ಪ್ರಭಾಕರನ್ ಕುರಿತಾಗಿ ವಿಷಯ ಸಂಗ್ರಹಿಸಲು ಭಾರತದ ಹಲವು ಕಡೆ ಅಲೆದಿದ್ದೇನೆ. ರಾ ಏಜೆಂಟ್‌ಗಳು, ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು, ಸ್ಥಳೀಯರು, ಮಾಜಿ ಎಲ್‌ಟಿಟಿಇ ಯೋಧರನ್ನು ಭೇಟಿ ಆಗಿದ್ದೇನೆ. ಹಲವು ದೇಶಗಳನ್ನು ಸುತ್ತಿದ್ದೇನೆ. ಶ್ರೀಲಂಕಾಗೆ ಸಹ ಹೋಗಿದ್ದೆ' ಎಂದಿದ್ದಾರೆ.

    'ಪ್ರಭಾಕರನ್ ಕುರಿತಾಗಿ ವೆಬ್ ಸರಣಿ ಮಾಡುವುದು ನನ್ನ ಜೀವನದ ಆಸೆಗಳಲ್ಲಿ ಒಂದು. ಅದಕ್ಕಾಗಿ ದೊಡ್ಡ ಮಟ್ಟದ ತಯಾರಿ ಮಾಡಿಕೊಂಡಿದ್ದೇನೆ. ಹಲವಾರು ಅಧಿಕಾರಿಗಳು, ಭಾರತದ ಶಾಂತಿ ಪಾಲನಾ ಸಮಿತಿಯ ಸದಸ್ಯರು, ಶ್ರೀಲಂಕಾದ ರಾಜಕಾರಣಿಗಳು ಇನ್ನೂ ಹಲವರನ್ನು ಭೇಟಿಯಾಗಿ ಚಿತ್ರಕತೆಯನ್ನು ತಯಾರು ಮಾಡಿಕೊಂಡಿದ್ದೇನೆ' ಎಂದಿದ್ದಾರೆ.

    ಪ್ರಭಾಕರನ್ ಕುರಿತಾದ ವೆಬ್ ಸರಣಿಯನ್ನು ನಾನೇ ನಿರ್ಮಾಣ ಮಾಡಿ ನಾನೇ ನಿರ್ದೇಶನ ಸಹ ಮಾಡಲಿದ್ದೇನೆ ಎಂದಿದ್ದಾರೆ ಎಎಂಆರ್ ರಮೇಶ್.

    English summary
    Web series about LTTE founder leader Prabhakaran in Kannada. AMR Ramesh is going to direct and produce that web series.
    Wednesday, June 9, 2021, 9:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X