»   » ವಿಮರ್ಶೆ: ರಾವಣ,ಸೈಕಿಕ್ ಪ್ರೀತಿಯ ಆರ್ಭಟ

ವಿಮರ್ಶೆ: ರಾವಣ,ಸೈಕಿಕ್ ಪ್ರೀತಿಯ ಆರ್ಭಟ

Posted By:
Subscribe to Filmibeat Kannada

ಈ ಚಿತ್ರದ ಹೆಸರು ಕೇಳಿದ ತಕ್ಷಣ ಇದರಲ್ಲಿ ಒಂದು ನೆಗೆಟಿವ್ ಭಾವ ಮೂಡಿಸುವ ಆಂಶ ಇರೋದು ಗೊತ್ತಾಗುತ್ತದೆ. ಹೀಗಾಗಿ ಕತೆಯ ಎಳೆಯೂ ಸಿಗುತ್ತದೆ. ಅದೇ ರಾವಣ. ಇದು ತಮಿಳಿನ ಕಾದಲ್ ಕೊಂಡೇನ್ ಚಿತ್ರದ ರೀಮೇಕು.

ಅಲ್ಲಿ ಧನುಶ್ ಎಂಬ ತೆಳ್ಳಗಿನ ಹುಡುಗ ಮಾಡಿದ ಪಾತ್ರವನ್ನು ಇಲ್ಲಿ ಯೋಗೀಶ್ ಮಾಡಿದ್ದಾರೆ. ಪ್ರೀತಿಯಲ್ಲಿ ಬಿದ್ದ ಹುಡುಗ ಆಕೆ ಇನ್ನೊಬ್ಬನಿಗೆ ದಕ್ಕುತ್ತಿದ್ದಾಳೆ ಎಂದು ಗೊತ್ತಾದಾಗ ಸೈಕ್ ಆಗುತ್ತಾನೆ. ಆಕೆಗಾಗಿ ಕೊಲೆಗಳನ್ನು ಮಾಡುತ್ತಾನೆ. ಕೊನೆಗೆ ಏನಾಗುತ್ತಾನೆ ಎಂದು ತೆರೆ ಮೇಲೆ ನೋಡಿ...

ಗಿರಿ ಕ್ಯಾಮೆರಾ ಇಡೀ ಚಿತ್ರದ ಜೀವಾಳ. ಅದೇ ಒಂದು ಪಾತ್ರವಾಗಿ ಕಾಡುತ್ತದೆ. ಹಾಗೇ ಅಭಿಮನ್ ರಾಯ್ ಸಂಗೀತದಲ್ಲಿ ಮೂರು ಹಾಡುಗಳು ಅದ್ಭುತ. ಮೂಲ ಚಿತ್ರದ ಟ್ಯೂನ್ ಕದಿಯದೆ ಪಕ್ಕಾ ಹೊಸದಾಗಿ ಸಂಗೀತ ಸಂಯೋಜನೆ ಮಾಡಿ ಗೆದ್ದಿರುವುದನ್ನು ಅಭಿನಂದಿಸಲೇಬೇಕು. ಯೋಗೀಶ್ ಹುಣಸೂರ್ ಚಿತ್ರಕತೆಯಲ್ಲಿ ಇನ್ನೊಂದಿಷ್ಟು ವೇಗ ತರಲು ಯತ್ನಿಸಬಹುದಿತ್ತು.

ಇನ್ನಷ್ಟು ಟ್ರಿಮ್ಮಿಂಗ್ ಅಗತ್ಯ ಇತ್ತು. ಆದರೂ ಮೂಲಕ್ಕೆ ಮೋಸ ಮಾಡಿಲ್ಲ. ನಾಯಕ ಯೋಗೀಶ್‌ಗೆ ಅಭಿನಯ ತೋರಿಸಲು ಸಿಕ್ಕ ಉತ್ತಮ ಪಾತ್ರ ಇದು. ಅದಕ್ಕಾಗಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಸಾಧ್ಯ ವಾದಷ್ಟು ಪ್ರೀತಿ ಮತ್ತು ಶ್ರದ್ಧೆಯಿಂದ ನಟಿಸಿದ್ದಾರೆ. ನಾಯಕಿ ಸಂಚಿತಾ ಪಾತ್ರಕ್ಕೆ ಜೀವ ತುಂಬಿದ್ದಾಳೆ. ಮತ್ತೊಬ್ಬ ನಾಯಕ ಸಂತೋಷ್ ಕೂಡ ಸೈ. ಪ್ರೀತಿಗಾಗಿ ಸೈಕಿಕ್ ಆಗುವುದು. ಅದಕ್ಕಾಗಿ ಕೊಲೆ ಮಾಡುವುದು, ಅಂಥವರಿಗೆ ಪ್ರೀತಿಯ ಹುಚ್ಚ ಅಂತ ಕರೆಯುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಅದು ಸಮಾಜದ ಮೇಲೆ ಎಂಥ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಂಬಂಧಪಟ್ಟವರು ಯೋಚಿಸುವುದೇ ಇಲ್ಲ. ಇದು ರಾವಣ ಚಿತ್ರಕ್ಕೂ ಅನ್ವಯಿಸುತ್ತದೆ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada