»   » ವಿಮರ್ಶೆ:ಬೊಂಬಾಬ್ ಕಾರ್, ಎಲ್ಲಾ ಮ್ಯಾಜಿಕ್

ವಿಮರ್ಶೆ:ಬೊಂಬಾಬ್ ಕಾರ್, ಎಲ್ಲಾ ಮ್ಯಾಜಿಕ್

By: *ವಿನಾಯಕರಾಮ್
Subscribe to Filmibeat Kannada

ಇದೊಂದು ಮಕ್ಕಳ ಚಿತ್ರ. ಲಾಜಿಕ್ ಇಲ್ಲ. ಎಲ್ಲಾ ಮ್ಯಾಜಿಕ್. ನಿರ್ದೇಶಕ ರಾಮ್‌ನಾರಾಯಣ್ ಮೊದಲಿಂದಲೂ ಇಂಥ ಚಿತ್ರಗಳಿಗೇ ಹೆಸರುವಾಸಿ. ಈ ಚಿತ್ರ ಒಂದು ಹಂತದವರೆಗೆ ವಾಸಿ. ಇದು ಯಾಕೆ ಹೀಗೆ ಎಂದು ಪ್ರಶ್ನಿಸುವಂತಿಲ್ಲ. ಒಂದಷ್ಟು ಹೊತ್ತು ಎಂಜಾಯ್ ಮಾಡಬಹುದು. ವಿಶೇಷವಾಗಿ ಮಕ್ಕಳು ಇಷ್ಟಪಡುವ ಚಿತ್ರ. ಬಳಸಲಾದ ಶಾಟ್ಸ್, ಗ್ರಾಫಿಕ್ಸ್ ಎಲ್ಲವೂ ಚೆನ್ನಾಗಿದೆ.

ಹಾರರ್ ಚಿತ್ರ ಎನ್ನುವ ಹೊತ್ತಿಗೆ ಕಾರು ಹಾರಲು ಅಣಿಯಾಗುತ್ತದೆ. ಮತ್ತೆ ಗ್ರಾಫಿಕ್ ಮಳೆಗರೆಯುತ್ತದೆ! ಪುಟಾಣಿ ಕೀರ್ತಿಕಾ ಲೊಚಲೊಚನೆ ಮಾತನಾಡಿ, ಗಮನ ಸೆಳೆಯುತ್ತದೆ. ಡ್ಯಾನ್ಸ್ ಮಾಡುವಾಗಲಂತೂ ಬಲು ಸೊಗಸು. ಒಂದು ಆಂಗಲ್‌ನಲ್ಲಿ ಬಿಂದಾಸ್ ಹುಡುಗಿ ಪ್ರಿಯಾ ಹಾಸನ್ ಕುಣಿದಂತೆ ಫೀಲ್ ಆಗುತ್ತದೆ!

ಸಂಗೀತ, ಸಾಹಿತ್ಯ ಯಾವುದೂ ಕೇಳುವುದಿಲ್ಲ. ನೃತ್ಯ ಸಂಯೋಜನೆಯಲ್ಲಿ ರವಿಶಂಕರ್, ದೊಡ್ಡಣ್ಣ, ಸಂಗೀತಾ, ರಿಯಾಜ್ ಮೊದಲಾದ ಪೋಷಕ ನಟರು ಕೆಲಸಕ್ಕೆ ಅನ್ಯಾಯ ಮಾಡಿಲ್ಲ. ವಿಲನ್‌ಗಳ ಆರ್ಭಟ ಇನ್ನಷ್ಟು ಬೇಕಿತ್ತು. ಶರಣ್ ಕಾಮಿಡಿ ಪರವಾಗಿಲ್ಲ. ನಾಜರ್ ಹಾಗೆ ಬಂದು ಹೀಗೆ ಹೋಗುತ್ತಾರೆ. ಕೆಂಡಗಣ್ಣ ಕಾಳಿ ರಮ್ಯಕೃಷ್ಣ ಕೆಲವೊಮ್ಮೆ ಭಯ ಹುಟ್ಟಿಸುತ್ತಾರೆ.

ಒಟ್ಟಾರೆ ಬೊಂಬಾಟ್ ಕಾರ್ ಒಂದಷ್ಟು ಹೊತ್ತು ಮಜಾ ಕೊಡುತ್ತದೆ. ಮಕ್ಕಳ ಪಾಲಿಗಂತೂ ಹಾಲಿಡೇ ಪ್ಯಾಕೇಜ್. ಬಾಯಿ ಬಿಟ್ಟುಕೊಂಡು ನೋಡಲು ಮೋಸವಿಲ್ಲ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada