For Quick Alerts
ALLOW NOTIFICATIONS  
For Daily Alerts

  ಪಲ್ಲವಿಸುವ ಪಾರಿಜಾತ! ದಿಗಂತ್‌ಗೆ ದಿಗಿದಿಗಿ ಬ್ರೇಕ್!

  By *ವಿನಾಯಕರಾಮ್ ಕಲಗಾರು
  |

  ಪಾರಿಜಾತ! ಹೆಸರಲ್ಲೇ ಒಂದು ರೀತಿಯ ಪ್ರೀತಿಯ ತೀವ್ರತೆ ತಾಂಡವವಾಡುತ್ತದೆ. ನಿರ್ದೇಶಕ ಪ್ರಭು ಶ್ರೀನಿವಾಸ್ ಇಡೀ ಚಿತ್ರಕ್ಕೆ ಜೀವಾತುಂಬಿದ್ದಾರೆ. ಹಿಂದೆ ಜೀವಾ ಚಿತ್ರದಲ್ಲಿ ಮಾಡಿದ ತಪ್ಪುಗಳಿಗೆ ಇಲ್ಲಿ ಪರಿಹಾರ ಪ್ಲಸ್ ಸಮಜಾಯಷಿ ಕೊಟ್ಟಿದ್ದಾರೆ.

  ಪಾರಿಜಾತ ತಮಿಳಿನ ರೀಮೇಕು. ಬಾಸ್ ಎಂಗಿರಾ ಬಾಸ್ಕರನ್ ಚಿತ್ರವನ್ನು ಕನ್ನಡಕ್ಕೆ ಇಳಿಸಿದ್ದಾರೆ ಮಹಾ-ಪ್ರಭು! ಅದಕ್ಕಿಂತ ಹೆಚ್ಚಾಗಿ ಇಡೀ ಸಿನಿಮಾವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ದಿಗಂತ್ ಮತ್ತು ಐಂದ್ರಿತಾ ಎಂಬ ಎರಡು ಚಾಕಲೇಟ್ ಮತ್ತು ಕೇಕ್ ಅನ್ನು ಇನ್‌ಸ್ಟಾಲ್ ಮೆಂಟ್‌ನಲ್ಲಿ ಉಣಬಡಿಸುತ್ತಾ ಹೋಗುತ್ತಾರೆ.

  ಇದು ಒಬ್ಬ ಕೆಲಸವಿಲ್ಲದ ಹುಡುಗನ ಕಥೆ. ಸೋಂಬೇರಿ ಎನಿಸಿಕೊಂಡ ಹುಡುಗ ಹೇಗೆ ಬದುಕನ್ನು ಕಟ್ಟಿಕೊಳ್ಳುತ್ತಾನೆ ಎನ್ನುವುದನ್ನು ಸಿನಿಮಾ ಪ್ರತಿಬಿಂಬಿಸುತ್ತದೆ. ಹಂತಹಂತವಾಗಿ ಅವನ ಬದುಕಿನ ಅನಾವರಣದ ಜೊತೆಗೆ ಮನೆಯ ವಾತಾವರಣ, ಬೀದಿಸುತ್ತುವ ಬದುಕು, ಟೈಮ್ ಸಿಕ್ಕಲ್ಲಿ ಹುಡುಗಿಯರಿಗೆ ಲೈನು ಹಾಕುವ ಕಾಯಕ.. ಹೀಗೆ ನಾಯಕನ ಲೈಫು ಇಷ್ಟೇನೇಎಂದುಕೊಂಡ ಪ್ರೇಕ್ಷಕರಿಗೆ ಆತನ ಕಿಸೆಯಲ್ಲಿ ಕಾಂಚಾಣಕಾಲಿಯಾಗಿರುವುದು ಗೊತ್ತಾಗುತ್ತದೆ. ಅಲ್ಲಿಗೆ ಕಥೆ ಇನ್ನೊಂದು ದಿಕ್ಕಿಗೆ ಹೊರಳಿಕೊಳ್ಳುತ್ತದೆ. ಐಂದ್ರಿತಾ ರೇ ದಿಗಂತ್ ಕಡೆ ಹೊರಳಿಕೊಂಡು, ಮುಂಗುರುಳು ಸರಿಸಿ, ತುಟಿಗೆ ತುಟಿ ಒತ್ತುತ್ತಾಳೆ. ಸಿಂಪಲ್ ಆಗಿ ಲಿಪ್ ಸೀಲ್ ಗುದ್ದುತ್ತಾಳೆ. ಅಲ್ಲಿಗೆ...

  ಇಡೀ ಚಿತ್ರವನ್ನು ಕ್ಯಾರಿ ಮಾಡಿಕೊಂಡು ಹೋಗಿರುವುದು ಶರಣ್. ಆತನ ಕಾಮಿಡಿ ಟೈಮಿಂಗ್ ನಿಜಕ್ಕೂ ಫೆಂಟಾಸ್ಟಿಕ್. ಪಾರಿಜಾತ ಸಿನಿಮಾವನ್ನು ಸರಿಯಾಗಿ ನಿರ್ಮಾಪಕರು ಪ್ರೊಮೋಟ್ ಮಾಡಿದರೆ ಖಂಡಿತ ಯುವ ಪ್ರೇಮಿಗಳಿಗೆ ವ್ಯಾಲೆಂಟೆನ್ಸ್ ಡೇ ಸ್ಪೆಷಲ್ ಗಿಫ್ಟ್ ಆಗುವುದರಲ್ಲಿ ಸಂಶಯವಿಲ್ಲ.

  ದಿಗಂತ್ ಮುದ್ದು ಪೆದ್ದಾಗಿ ಕಾಣುತ್ತಾರೆ. ಅಭಿನಯದಲ್ಲಿ ಪಕ್ವತೆ ಪಸರಿಸಿದೆ. ಹಿಂದಿನ ಹೆಚ್ಚು ಚಿತ್ರಗಳಲ್ಲಿ ಹೆಚ್ಚಾಗಿ ದಿಗಂತ್ ಹೈಲೈಟ್ ಆಗಿದ್ದು ಬರೀ ಮಾತುಗಳಿಂದ. ಯೋಗರಾಜ್ ಭಟ್ಟರ ರಾಯಭಾರಿ ಎಂಬಂತೇ ದಿಗಂತ್ ಕಚಪಚ ಎಂದಿದ್ದು ಈಗ ಇತಿಹಾಸ. ಪಾರಿಜಾತ ಚಿತ್ರದಲ್ಲಿ ಮಾತಿನ ಮಳೆಯ ಜೊತೆಗೆ ಅಭಿನಯದ ಕಳೆಯ ಮೂಲಕ ರಣಕಹಳೆ ಊದಿದ್ದಾರೆ ದಿಗಂತ್. ಐಂದ್ರಿತಾ ರೇ ಮಿಂಚುಳ್ಳಿ ಮೀನಿಗೆ ಸುಣ್ಣ ಬಣ್ಣ ಬಡಿದಂತೇ ಕಾಣುತ್ತಾಳೆ. ಕಣ್ಣಲ್ಲೇ ಹಾಫ್ ಮರ್ಡರ್ ಮಾಡುತ್ತಾಳೆ. ನಗುವಲ್ಲೇ ಕೊಲ್ಲುತ್ತಾಳೆ!

  ಇನ್ನುಳಿದಂತೇ ಸಾಧು ಕೋಕಿಲಾ ಎಂದಿನಂತೇ ಅತಿಯಾಗಿ ನಟಿಸಿ, ಹಳೇ ಚಾಳಿ ಮುಂದುವರಿಸಿದ್ದಾರೆ. ಅವರಿಂದ ಬೇರೆ ಥರದ ಅಭಿನಯ ತೆಗೆಸುವುದು ಮುಂದಿನ ದಿನಗಳಲ್ಲಿ ಯಾರಿಂದ ಸಾಧ್ಯವೋ ಅವರಿಗೆ ಗೋಲ್ಡ್ ಮೆಡಲ್ ಗ್ಯಾರಂಟಿ!

  ಮನೋಮೂರ್ತಿ ಮೂರು ಹಾಡುಗಳನ್ನು ಸಿನಿಮಾಗೆ ಬಳುವಳಿಯಾಗಿ ಕೊಟ್ಟಿದ್ದಾರೆ. ನೀ ಮೋಹಿಸು ಕೋರಿಯಾಗ್ರಫಿಯಂತೂ ಸಿಂಪ್ಲೀ ಸೂಪರ್ಬ್. ನಾಯಕನ ಎಂಟ್ರಿಗೆ ಬರುವ ಓಪನಿಂಗ್ ಸಾಂಗ್ ಹಾಡಿದ್ದು ಜೈ ಹೋ ವಿಜಯ್ ಪ್ರಕಾಶ್ ಎನ್ನುವುದೇ ಅಚ್ಚರಿಯ ಪರಿಪೂರ್ಣ ರೂಪ. ನಿರ್ದೇಶಕ ಪ್ರಭು ಶ್ರೀನಿವಾಸ್ ಮುಂದಿನ ದಿನಗಳಲ್ಲಿ ಭರವಸೆ ಮೂಡಿಸುವ ನಿರ್ದೇಶಕರಾಗುವ ಎಲ್ಲಾ ಲಕ್ಷಣಗಳೂ ಪಾರಿಜಾತ ಚಿತ್ರದಿಂದ ಪ್ರೂವ್ ಆದರೆ ಅಚ್ಚರಿ ಪಡುವ ಅಗತ್ಯ ಇಲ್ಲ.

  ಅಂದಹಾಗೇ ಪಾರಿಜಾತ ಚಿತ್ರದಲ್ಲಿ ಮಲಯಾಳಂ ಮೋಹಿನಿ ಶಕೀಲಾ ಕೂಡ ಬಂದು ಹೋಗುತ್ತಾರೆ. ಅದೂ ಕೂಡ ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಪಾಠ ಮಾಡೀ ಬನ್ನೀ.. ದಿಲ್ಲಿ ಮೇಡಮ್ ದಿಲ್ಲಿ ಮೇಡಮ್...ಸ್ಲೇಟು ಬಳಪಾ ತನ್ನೀ...ಹಾಡಿನಲ್ಲಿ ಬಂದುಹೋಗುವ ಸಿಲ್ಕ್ ಸ್ಮಿತಾ ರೂಪದಲ್ಲಿ. ಹೈ ಸ್ಕೂಲ್ ಟೀಚರ್ ರೂಪದಲ್ಲಿ!

  English summary
  Read Kannda movie Parijatha review by Vinayakaram Kalagaru. Chocolate hero Diganth and charming Aindrita Ray seem to have gone an extra mile in the movie. Parijatha is directed by Prabhu Srinivas. It is a remake of Tamil superhit film Boss Engira Bhaskaran.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more