»   » ವಿಮರ್ಶೆ: ತರಂಗಿಣಿ, ಹಳ್ಳಿ ಪರಿಸರದ ಚಿತ್ರ

ವಿಮರ್ಶೆ: ತರಂಗಿಣಿ, ಹಳ್ಳಿ ಪರಿಸರದ ಚಿತ್ರ

Posted By: *ದೇವಶೆಟ್ಟಿ ಮಹೇಶ್,
Subscribe to Filmibeat Kannada

ಒಂದು ವಿಷಯಾಧಾರಿತ ಚಿತ್ರ ಮಾಡುವುದು ಸುಲಭದ ಮಾತಲ್ಲ. ಅಲ್ಲಿ ಒಂದಷ್ಟು ಪೂರ್ವತಯಾರಿ ಬೇಕು. ಅಂಥದ್ದೊಂದು 'ಕಲಾತ್ಮಕ'ತೆ ತರಂಗಿಣಿ ಚಿತ್ರಕ್ಕಿದೆ. ನಿರ್ದೇಶಕ ಶ್ರೀನಿವಾಸ್ ಕೌಶಿಕ್ ಗೆದ್ದಿರುವುದೇ ಇಲ್ಲಿ. ಹಳ್ಳಿಯೊಂದರಲ್ಲಿ ಕೈಗಾರಿಕೆಯೊಂದು ಉದ್ಭವಿಸಿದರೆ ಜನಕ್ಕೆ ಏನೆಲ್ಲಾ ತೊಂದರೆಯಾಗುತ್ತದೆ. ಅದು ಉಗುಳುವ ತ್ಯಾಜ್ಯ ವಸ್ತುಗಳು ಹಳ್ಳಿಗರ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮ ಉಂಟುಮಾಡುತ್ತವೆ. ಅದರಿಂದಾಗುವ ಸಾಧಕ ಬಾಧಕಗಳೇನು...? ಹೀಗೆ ಪ್ರತಿಯೊಂದನ್ನೂ
'ಡಾಕ್ಯುಮೆಂಟರಿ' ರೂಪದಲ್ಲಿ ತೆರೆದಿಡುತ್ತದೆ ತರಂಗಿಣಿ.

ಊರಿಗೆ ಊರು ಕೈಗಾರಿಕೆಯ ಕೈಗೊಂಬೆಯಾಗುವ ಮುನ್ನ ನಾಯಕ ಎತ್ತೆಚ್ಚುಕೊಳ್ಳುತ್ತಾನೆ. ಜನರನ್ನು ಬಡಿದೆಚ್ಚರಿಸುತ್ತಾನೆ. ಮುಂದೆ ಆಗುವ ಅನಾಹುತ ವಿವರಿಸುತ್ತಾನೆ. ಹೋರಾಡುತ್ತಾನೆ. ಕೋರ್ಟ್ ಮೆಟ್ಟಿಲೇರುತ್ತಾನೆ. ಅವನಿಗೆ ಬೆಂಗಾವಲಾಗಿ ಪತ್ರಕರ್ತೆ ರೂಪದ ನಾಯಕಿ ನಿಲ್ಲುತ್ತಾಳೆ. ಅಲ್ಲಿಂದ ಇನ್ನೊಂದು ವ್ಯೂಹ. ಬಿಗಡಾಯಿಸಿದ ಪರಸ್ಥಿತಿ... ಮೋಹನ್ ಎಂದಿನಂತೆ ಅಚ್ಚುಕಟ್ಟಾಗಿ ನಟಿಸಿದ್ದಾರೆ.

ತೇಜಸ್ವಿನಿ ನಟನೆಯಲ್ಲಿ ಸುಧಾರಣೆ ಇಲ್ಲ ಎನ್ನುವುದನ್ನು ಬಿಟ್ಟರೆ ಉಳಿದದ್ದೆಲ್ಲ ಸೊಗಸು. ಶ್ರೀನಿವಾಸಮೂರ್ತಿ, ಬಿ.ಸಿ.ಪಾಟೀಲ್ ಮೊದಲಾದವರಿಂದ ಕೆಲಸ ತೆಗೆಸುವಲ್ಲಿ
ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸಂಗೀತ ಪರವಾಗಿಲ್ಲ. ಛಾಯಾ ಗ್ರಹಣ ನೋಡಿಸಿಕೊಂಡು ಹೋಗುತ್ತದೆ. ಸಂಕಲನ ಕತ್ತರಿಗೇ 'ಸವಾಲು' ಹಾಕುವಷ್ಟು ಜಾಳಾಗಿದೆ! ಒಟ್ಟಾರೆ ತರಂಗಿಣಿ ಒಂದು ಹಂತ ಮುಟ್ಟುವವರೆಗೆ ಅದ್ಭುತ ಸಾಕ್ಷ್ಯ ಚಿತ್ರ. ಚಿತ್ರಮಂದಿರದಲ್ಲಿ ಪ್ರೇಕ್ಷಕರು ಮೂರನೇ ವಾರವೂ ಸಾಕ್ಷಿಯಾಗಿದ್ದರೆ ಅದು ಯಶಸ್ವೀ ಚಿತ್ರ... ಇಲ್ಲವಾದರೆ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada