»   » 5 ಈಡಿಯಟ್ಸ್ : ಕಾಮಿಡಿ ಗಿಮಿಡಿ ಜಾನೇದೋ ...

5 ಈಡಿಯಟ್ಸ್ : ಕಾಮಿಡಿ ಗಿಮಿಡಿ ಜಾನೇದೋ ...

By: * ಚಿತ್ರಗುಪ್ತ
Subscribe to Filmibeat Kannada

ಇತ್ತೀಚೆಗೆ ಕನ್ನಡದಲ್ಲಿ ಬರುತ್ತಿರುವ ಕಾಮಿಡಿ ಚಿತ್ರಗಳಲ್ಲಿ ಒಂದೇ ಫಾರ್ಮೆಟ್ ಇರುತ್ತದೆ. ಕತೆ ಇಲ್ಲದಿದ್ದರೂ ಒಂದಷ್ಟು ಹೊತ್ತು ಹಿಡಿಹಿಡಿಯಾಗಿ ಒಂದಷ್ಟು ದೃಶ್ಯಗಳನ್ನು ಕಷ್ಟಪಟ್ಟಾದರೂ ಎಂಜಾಯ್ ಮಾಡಬಹುದು. ಅದೇ ಮಾದರಿಯಲ್ಲಿ ಬಂದಿರುವ ಇನ್ನೊಂದರಲ್ಲಿ ಮತ್ತೊಂದು ಚಿತ್ರ '5 ಈಡಿಯಟ್ಸ್'.

ಇದನ್ನು ಮೊದಲ ಬಾರಿಗೆ ಮಾಜಿ ನಿರ್ದೇಶನ ಮಾಡಿರುವುದು ಜ್ಯೂನಿಯರ್ ಮಾಸ್ಟರ್ ಆನಂದ್ ಅಲಿಯಾಸ್ ಒಂದು ಕಾಲದ ಬಾಲನಟ!ಆನಂದ್ ಒಂದಷ್ಟು ತಿದ್ದಿಕೊಳ್ಳಬೇಕು. ಕಾಮಿಡಿ ಹೆಸರಲ್ಲಿ ಏನು ಕೊಟ್ಟರೂ ಜನ ಬಿಕ್ಕಳಿಸುತ್ತಾ ನೋಡುತ್ತಾರೆ ಎಂದುಕೊಂಡು ಕಳಪೆ ಗುಣಮಟ್ಟದ ಸಿನಿಮಾ ಮಾಡಿದರೆ ಮುಂದೆ ಅದೇ ಜನ ಅವರಿಗೆ ಮನೆಯ ದಾರಿ ತೋರಿಸಿ, ಕೈತೊಳೆದುಕೊಳ್ಳುತ್ತಾರೆ. ಇದು ಆನಂದ ತೀರ್ಥರಿಗೆ ಗೊತ್ತಾದರೆ...

ಹಾಗಂತ ಆನಂದ್ ಎಲ್ಲಾ ಆಂಗಲ್‌ನಲ್ಲೂ ಸೋತಿದ್ದಾರೆ ಎಂದಲ್ಲ. ಕೋಳಿ ಚಿಕನ್ ತಿನ್ನಲ್ಲ, ಕುರಿ ಮಟನ್ ತಿನ್ನಲ್ಲ ಮೊದಲಾದ ವೆಜಿಟೆಬಲ್ ಸಂಭಾಷಣೆಗಳು ಇಷ್ಟವಾಗುತ್ತೆ. ನಟನೆಯಲ್ಲಿ ಆನಂದ್ ಎತ್ತಿದ ಕೈ. ನವೀನ್‌ಕೃಷ್ಣ, ಅರ್ಚನಾ ಹೆಗ್ಡೆ, ಪೆಟ್ರೋಲ್ ಪ್ರಸನ್ನ ಎಲ್ಲರದ್ದೂ ಸಹನೀಯ ನಟನೆ. ಹರ್ಷಿಕಾ ಪೂಣಚ್ಚ ನಗುವಲ್ಲಿ ಇರುವ ತಾಕತ್ತು ನಟನೆಯಲ್ಲಿಲ್ಲ.

ಜೇಡರಹಳ್ಳಿ ಕೃಷ್ಣಮೂರ್ತಿಯವರು ಸುಮ್ಮನೆ ನಿಂತರೇ ನಟಿಸಿದಂತೆ ಕಾಣುತ್ತದೆ! ಚಿತ್ರಕತೆ ಇನ್ನೊಂಚೂರು ಚುರುಕಾಗಿದ್ದರೆ, ಸಂಭಾಷಣೆಯಲ್ಲಿ ಮತ್ತಷ್ಟು ಚಮಕ್ ಇದ್ದಿದ್ದರೆ '5 ಈಡಿಯಟ್ಸ್' ಚಿತ್ರ ಅಮೀರ್‌ಖಾನ್‌ರ '3 ಈಡಿಯಟ್ಸ್‌'ನ ಮೂರನೇ ಒಂದು ಭಾಗದಷ್ಟು ಚೆನ್ನಾಗಿರುತ್ತಿತ್ತು!

English summary
Here is the Kannada movie 5 Idiots review. This is a Master Anand debut directional movie. The story has umteen number of spoofs on popular films. The film looks like an extended television serial, rather than a film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada