»   » ಚಿತ್ರ ವಿಮರ್ಶೆ: ನಮ್ ಏರಿಯಾಲ್ ಒಂದಿನ

ಚಿತ್ರ ವಿಮರ್ಶೆ: ನಮ್ ಏರಿಯಾಲ್ ಒಂದಿನ

By: * ದೇವಶೆಟ್ಟಿ ಮಹೇಶ್
Subscribe to Filmibeat Kannada

ಇದು ಕಿತ್ತೋಗಿರೋ ಲವ್ ಸ್ಟೋರಿ! ಹೆಸರೇ ಹೇಳುವಂತೇ ಪಕ್ಕಾ ಸ್ಲಮ್ಮೇರಿಯಾ ಕತೆ.ನಾಯಕ ಒಂದಷ್ಟು ಕಿತ್ತೋಗಿರೋ ಡೈಲಾಗ್ ಹೊಡೆಯುತ್ತಲೇ ಇರ್ತಾನೆ. ಹೇಳ್ತಾ ಹೇಳ್ತಾ ಒಂದು ಹುಡುಗಿಗೆ ಮನಸು ಕೊಡುತ್ತಾನೆ. ಕೊಟ್ಟ ಮೇಲೆ ಏನಾಗುತ್ತದೆ?ಉತ್ತರಕ್ಕೆ ಈ ಚಿತ್ರವನ್ನು ನೋಡಬೇಕು.

ನಿರ್ದೇಶಕ ಅರವಿಂದ್ ಕೌಶಿಕ್ ಹಾಡು , ಸಂಭಾಷಣೆ ಹಾಗೂ ಛಾಯಾಗ್ರಹಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಮೊದಲಾರ್ಧ ಪೂರ್ತಿ ಡೈಲಾಗ್ ಹಂಗಾಮ. ಹೋಗ್ತಾ ಹೋಗ್ತಾ ಸೀರಿಯಸ್ ಆಗುತ್ತದೆ. ಹಳೇ ಜಗತ್ತನ್ನೇ ಹೊಸ ಗಮ್ಮತ್ತಿನಲ್ಲಿ ನಿಮ್ಮ ಮುಂದಿಟ್ಟು ಮೋಡಿ ಮಾಡುತ್ತಾರೆ.

ಅನಿಷ್ ಹಾಗೂ ಮೇಘನಾ ಕತೆ ಹಾಗೂ ಪಾತ್ರಕ್ಕೆ ಅಚ್ಚರಿ ಮೂಡಿಸುವಂತೆ ಹೊಂದಿಕೊಂಡಿದ್ದಾರೆ. ಈತ ಸ್ಲಂ, ಆಕೆ ಘಂ ಘಂ.ಇಬ್ಬರಿಗೂ ಅಜಗಜಾಂತರ ಎನಿಸಿದರೂ ಅದು ಹಾಗೇ ಇದ್ದದ್ದೇ ಚೆಂದಕ್ಕಿಂತ ಚೆಂದ...ಕುರಿ ಪ್ರತಾಪ್ ಕುಡುಕನಾಗಿ ಕನವರಿಸುತ್ತಾರೆ. ಒಂದಷ್ಟು ಹೊತ್ತು ಮಜಾ ಕೊಡುತ್ತಾರೆ. ಮಂಡ್ಯರಮೇಶ್ ನೆನಪಿನಲ್ಲಿ ಉಳಿಯುತ್ತಾರೆ.

ಅರ್ಜುನ್ ಸಂಗೀತ ಹಾಗೂ ಅಶೋಕ್ ಕಶ್ಯಪ್ ಛಾಯಾಗ್ರಹಣ ಇಡೀ ಚಿತ್ರದ ಹೈಲೈಟ್. ಒಂದಷ್ಟು ದೃಶ್ಯಗಳು ಕೆನ್ನೆಗೆ ಮುತ್ತಿಟ್ಟರೆ, ಸಂಗೀತ ಅದೇ ಕೆನ್ನೆಯನ್ನು ಸವರುತ್ತದೆ. ಒಟ್ಟಾರೆ ಇಡೀ ಚಿತ್ರ ಬೇರೊಂದು ಅನುಭವಕ್ಕೆ ನಿಮ್ಮನ್ನು ಪಕ್ಕಾಗಿಸುತ್ತದೆ. ಅದೇನೆಂದು ತಿಳಿಯಲು ನೀವೊಮ್ಮೆ ಥೇಟರ್‌ಗೆ ಹೋಗಲೇಬೇಕು.

ಕೌಶಿಕ್ ಮೊದಲ ಚಿತ್ರದಲ್ಲೇ ಜನರಿಗೆ ಹತ್ತಿರವಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಹುಡುಗ ಕೈಗೆ ಸಿಗುವುದು ಕಷ್ಟ...ಯಾಕೆಂದರೆ ಆತನಲ್ಲಿ ಅಂಥದ್ದೊಂದು ಸಿನಿಮಾ ಶ್ರದ್ಧೆ , ನಿಯತ್ತು ಮತ್ತು ಹುಚ್ಚಿದೆ...! (ಸ್ನೇಹಸೇತು: ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada