Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರ ವಿಮರ್ಶೆ: ’ಬಿಸಿಲೆ’ ಕೂಲ್ ಕೂಲ್
ಎಲ್ಲ ಚಿತ್ರಗಳ ಹಾಗೆ ಇದೂ ಒಂದು ಲವ್ ಕೇಂದ್ರಿತ ಚಿತ್ರ. ಆದರೆ ಕಥೆ, ನಿರೂಪಣೆ ಭಿನ್ನ. ಹೀಗಿರುವುದರಿಂದಲೇ ಈ ಚಿತ್ರ ಮನ ಸೆಳೆಯುತ್ತದೆ. ಇದು ತಾನು ನಿರ್ದೇಶಿಸುತ್ತಿರುವ ಮೊದಲ ಚಿತ್ರವೆಂಬ ಯಾವ ಸುಳಿವನ್ನೂ ಬಿಟ್ಟುಕೊಡದಷ್ಟು ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಸಂದೀಪ್ ಎಸ್ ಗೌಡ.
'ಬಿಸಿಲೆ" ಘಾಟ್‌ನಲ್ಲಿ ಟ್ರೆಕ್ಕಿಂಗ್‌ಗೆ ಹೊರಟ ನಾಯಕ ನಾಯಕಿ ಮಾರ್ಗ ಮಧ್ಯೆ ದಾರಿ ತಪ್ಪಿಸಿಕೊಂಡು ಏನೇನು ಸಮಸ್ಯೆಗಳಲ್ಲಿ ಸಿಲುಕುತ್ತಾರೆ ಮತ್ತು ಅವರಿಬ್ಬರ ನಡುವೆ ಹೇಗೆ ಪ್ರೇಮ ಚಿಗುರುತ್ತದೆ ಎಂಬುದೇ ಚಿತ್ರದ ಕೇಂದ್ರ ಬಿಂದು. ಆದರೆ ಕಥೆಯ ಮಧ್ಯೆ ಜೋಡಿಸಲಾಗಿರುವ ಘಟನೆ, ಡೈಲಾಗ್‌ಗಳು ನಿಮ್ಮನ್ನು ಅತ್ತಿತ್ತ ನೋಡಲೂ ಬಿಡಲಾರವು.
ಸಿನಿಮಾ ಪ್ರಾರಂಭವಾಗುವುದು ಕಾಲೇಜಿನಲ್ಲಿ ನಡೆಯುವ ಪುಟ್ಟ ಫೈಟ್‌ನಿಂದ. ನಾಯಕ ವಿಕ್ಕಿ (ದಿಗಂತ್) ಕಿಲಾಡಿ, ಉಡಾಫೆ ಸ್ವಭಾವದ ಹುಡುಗ. ಇಂಥವನ ಕಣ್ಣಿಗೆ ಬೀಳುತ್ತಾಳೆ ನಾಯಕಿ ಅನು (ಜೆನ್ನಿಫರ್ ಕೊತ್ವಾಲ್). ಅವಳ ಗಮನ ಸೆಳೆಯಲು ನಡೆಸುವ ನಾನಾ ರೀತಿಯ ಸರ್ಕಸ್‌ಗಳು ಯಾವ್ಯಾವುದೋ ತಿರುವುಗಳಲ್ಲಿ ನಿಮ್ಮನ್ನು ತಿರುಗಾಡಿಸಿ ಹೊಟ್ಟೆ ನೋವಾಗುವ ಹಾಗೆ ನಗಿಸುತ್ತವೆ.
ಮುಂದೆ ಏನೇನಾಗುತ್ತದೆ ಎಂಬುದನ್ನೆಲ್ಲಾ ಹೇಳಹೊರಟರೆ ಸ್ವಾರಸ್ಯ ಇರುವುದಿಲ್ಲ ಬಿಡಿ. ಗುಳಿಗೆನ್ನೆಯ ದೂಧ್‌ಪೇಡಾ ದಿಗಂತ್ ಅಭಿನಯ, ಎಲ್ಲೂ ನಟಿಸಿದಂತೆ ಕಾಣಿಸದಷ್ಟು ಸಹಜವಾಗಿದೆ. ಸ್ಟಾರ್ ಎನ್ನುವುದಕ್ಕಿಂತ ಪಕ್ಕದ ಮನೆ ಹುಡುಗನ ಇಮೇಜೇ ಅವರಿಗೆ ಹೆಚ್ಚು ಸರಿಹೊಂದುತ್ತದೆ. ಜೆನ್ನಿಫರ್ ಅಭಿನಯದಲ್ಲೂ ತಪ್ಪು ಹುಡುಕುವಂಥದ್ದೇನಿಲ್ಲ. ಹಿರಿಯ ನಟ ಶಿವರಾಂ, ದ್ವಾರಕೀಶ್, ಜೈಜಗದೀಶ್, ಚಿತ್ರಾ ಶೆಣೈ, ಉಮೇಶ್, ಸುನೇತ್ರಾ ಪಂಡಿತ್, ಎಂ.ಎನ್.ಲಕ್ಷ್ಮೀದೇವಿ ಮುಂತಾದ ಕಲಾವಿದರು ಸಿಕ್ಕಷ್ಟೇ ಅವಕಾಶಗಳಲ್ಲಿ ತುಂಬ ತನ್ಮಯರಾಗಿ ಅಭಿನಯಿಸಿದ್ದಾರೆ.
ಒಂದೇ ಒಂದು ದೃಶ್ಯದಲ್ಲಿ ಬಂದುಹೋಗುವ ವೈಜಯಂತ್ ಬಿರಾದಾರ್ ಅಭಿನಯವನ್ನು ಮೆಚ್ಚದೆ ಇರಲು ಸಾಧ್ಯವಿಲ್ಲ. ಗಗನ್-ಹರಿ ಜೋಡಿಯ ಸಂಗೀತದಲ್ಲಿ ಕಿವಿಗೆ ಹಿತವಾಗುವಂತಹ 'ಈ ಬಿಸಿಲಲಿ" (ಸೋನುನಿಗಮ್), 'ನಿನ್ನಂದ ನೋಡಲೆಂದೇ" (ಹರಿಹರನ್) ಹಾಡುಗಳು ಇಷ್ಟವಾಗುತ್ತವೆ. ಉಳಿದವುಗಳೂ ಪರವಾಗಿಲ್ಲ. ಕೊಟ್ಟ ಕಾಸಿಗೆ ಮೋಸವಿಲ್ಲ.