»   »  ಗೋಕುಲ: ಹಳೆ ಕಾಯ, ಹೊಸ ಜೀವ

ಗೋಕುಲ: ಹಳೆ ಕಾಯ, ಹೊಸ ಜೀವ

Posted By: *ನಕ್ಷತ್ರಿಕ
Subscribe to Filmibeat Kannada

ಇದರಲ್ಲಿ ಎಲ್ಲಾ ಇದೆ. ಹಾಸ್ಯ, ಪ್ರೀತಿ, ಸೆಂಟಿಮೆಂಟು, ನವಿರು ಪ್ರೇಮ...ಒಂದು ಸದಭಿರುಚಿ ಚಿತ್ರ ಅಂತಾರಲ್ಲ...ಅದನ್ನು ನಿರ್ದೇಶಕ ಪ್ರಕಾಶ್ ನೀಟಾಗಿ ನಿರೂಪಿಸಿದ್ದಾರೆ. ಮೊದಲಾರ್ಧ ಹೋಗಿದ್ದೇ ಗೊತ್ತಾಗುವುದಿಲ್ಲ. ದ್ವಿತಿಯಾರ್ಧದಲ್ಲಿ ಸೆಂಟಿಮೆಂಟು ಬಂದದ್ದು ನಿಲ್ಲುವುದೇ ಇಲ್ಲ. ಇದರ ನಡುವೆ ಮುಂದೆ ಏನಾಗು ತ್ತದೆ ಎಂದು ಪ್ರೇಕ್ಷಕ ಮೊದಲೇ ಊಹಿಸಿಬಿಡುತ್ತಾನೆ. ಅದು ಆತನ ಜಾಣತನ. ಮತ್ತು ನಿರ್ದೇಶಕನಚಿತ್ರಕತೆಯ ಭೋಳೆತನ.

ಹೀಗಿದ್ದರೂ ಒಂದು ಚೆಂದದ ಚಿತ್ರವನ್ನು ಕೊಟ್ಟಿದ್ದಾರೆ ಪ್ರಕಾಶ್. ಇಲ್ಲಿ ನಾಲ್ವರು ನಾಯಕರು. ಅವರಿಗೆ ಸುಳ್ಳು ಹೇಳುವ ಹವ್ಯಾಸ. ಮೋಸ ಮಾಡುತ್ತಾ ಅದರಲ್ಲೇ ಬದುಕನ್ನು ಕಂಡುಕೊಂಡ ಬಡಪಾಯಿಗಳು. ಇಂಥವ ರನ್ನೂ ಲವ್ ಮಾಡುತ್ತೇವೆ ಎಂದು ಬಂದಿಳಿ ಯುವ ನಾಯಕಿಯರು. ಅವರಿಂದಲೂ ಅವರನ್ನು ಸುಧಾರಿಸಲು ಆಗುವುದಿಲ್ಲ ಎನ್ನು ವಾಗ... ಒಂದು ಟ್ವಿಸ್ಟ್... ಅದೇ ಮುಂದಿನ ಕತೆಯನ್ನು ಎಳೆದುಕೊಂಡು ಹೋಗುತ್ತದೆ.

ವಿಜಯ ರಾಘವೇಂದ್ರ ಎಂದಿನಂತೆ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಒಂದು ಪಾತ್ರವನ್ನು ಪ್ರೀತಿಸಿದರೆ ಹೇಗಿರುತ್ತೆ ಎನ್ನುವುದಕ್ಕೆ ಅವರೇ ಸಾಕ್ಷಿ. ಯಶ್ ಕೂಡ ತಮ್ಮತನ ಉಳಿಸಿಕೊಂಡಿದ್ದಾರೆ. ಹೊಸ ಹುಡುಗರಾದ ಪವನ್ ಮತ್ತು ಗುರುರಾಜ್ ಭರವಸೆ ಮೂಡಿಸಿದ್ದಾರೆ. ಸಿಕ್ಕಿದ್ದನ್ನು ಸಿಕ್ಕಷ್ಟು ಬಳಸಿ ಕೊಂಡು ಎದ್ದುನಿಲ್ಲುತ್ತಾರೆ.

ಮನೋಮೂರ್ತಿ ಸಂಗೀತ ಎರಡು ಹಾಡು ಪರವಾಗಿಲ್ಲ. ಪೂಜಾ ಗಾಂಧಿ ಮತ್ತು ನಕ್ಷತ್ರ ಎಂಬ ನಾಯಕಿಯರಿಗೆ ಹೆಚ್ಚು ರೀಲುಗಳಿಲ್ಲ. ಆದರೂ ಬಳುಕುವ ಬಳ್ಳಿ ಇಲ್ಲದಿದ್ದರೆ ಸಿನಿಮಾ ಹೇಗೆ ಮುಂದುವರೆಯುತ್ತೆ? ಕಣ್ಣು ತುಂಬಿಸುತ್ತಾರೆ ಈ ಬೆಡಗಿಯರು. ಪ್ರಕಾಶ್ ಏನೋ ಹೊಸದನ್ನು ಮಾಡಲು ಹೋಗಿದ್ದಾರೆ. ಅದು ಏನೆಂದು ನೋಡುವ ಕುತೂಹಲ ಇದ್ದರೆ ನೀವೂ ನೋಡಿಬನ್ನಿ...ಹೊಸತನದ ಯತ್ನ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada