»   » ಚಿತ್ರ ವಿಮರ್ಶೆ: ಪ್ರಜ್ವಲ್ ಅಭಿನಯದ ಜೀವಾ

ಚಿತ್ರ ವಿಮರ್ಶೆ: ಪ್ರಜ್ವಲ್ ಅಭಿನಯದ ಜೀವಾ

By: *ನಕ್ಷತ್ರಿಕ
Subscribe to Filmibeat Kannada

ಎರಡು ಮೂರು ದಶಕಗಳ ಹಿಂದೆ ಇಂಥ ಕತೆ ಬರುತ್ತಿದ್ದವು.ಜನರು ಮೆಚ್ಚುತ್ತಿದ್ದರು. ಈಗಲೂ ಅಂಥ ಕತೆಯನ್ನು ಪ್ರೇಕ್ಷಕರು ನೋಡುತ್ತಾರೆ ಎನ್ನುವುದು ನಿರ್ದೇಶಕ ಪ್ರಭು ಶ್ರೀನಿವಾಸ್‌ಗಿರುವ ಪಕ್ಕಾ ನಂಬಿಕೆ. ಆ ನಂಬಿಕೆ ಮೇಲೆ ಅವರು ಜೀವಾ ಚಿತ್ರದ ಕತೆ ಹೆಣೆದು ನಿರ್ದೇಶನ ಮಾಡಿದ್ದಾರೆ. ಮಿನಿಸ್ಟರ್ ಪುತ್ರ ಜೀವಾ ಮತ್ತು ಇನ್ಸೂರೆನ್ಸ್ ಏಜೆಂಟ್ ಮಗಳು ಜಯಂತಿ ಪ್ರೀತಿಸಿರುತ್ತಾರೆ.

ಆದರೆ ಎಂಗೇಜ್ ಮೆಂಟ್ ದಿನ ಜೀವಾ ಕುಡಿದು ಬಂದು ಅದನ್ನು ನಿಲ್ಲಿಸುತ್ತಾನೆ. ಕಾರಣ ನಂತರ ಗೊತ್ತಾಗುತ್ತದೆ. ಆತನಿಗೆ ಬ್ರೇನ್ ಟ್ಯೂಮರ್. ಆದರೆ ಅಸಲಿಯತ್ತು ಏನೆಂದರೆ ಅದೇ ಹೆಸರಿನ ಬೇರೊಬ್ಬ ವ್ಯಕ್ತಿಗೆ ಟ್ಯೂಮರ್ ಇರುತ್ತದೆ. ಅದು ನಾಯಕನಿಗೆ ಇದೆ ಎಂದು ಡಾಕ್ಟರ್ ಕನ್ ಫ್ಯೂಸ್ ಮಾಡಿಕೊಂಡಿರುತ್ತಾನೆ.

ಜೀವ ಕಳೆದುಕೊಳ್ಳಲು ಮನಸು ಮಾಡಿದ್ದ ಜೀವಾ ಮತ್ತೆ ನಾಯಕಿಯನ್ನು ಮದುವೆಯಾಗಲು ಹೊರಡುತ್ತಾನೆ. ಅಷ್ಟರಲ್ಲಿ ಆಕೆಗೆ ಇನ್ನೊಂದು ಹುಡುಗನ ಜೊತೆ ಮದುವೆ.... ಮುಂದೇನು ? ನೋಡಿ ಮಜಾ ಮಾಡಿ ಎನ್ನಬಹುದು... ಆದರೆ.... ಅದಕ್ಕೇ ಹೇಳಿದ್ದು ಇದು ಅಂದಕಾಲತ್ತಿಲ್ ಕಥಾ ಹಂದರ ಅಂತ...ಏನೇ ಆದರೂ ಪ್ರಜ್ವಲ್ ಗೆ ಬಂಪರ್ ಅವಕಾಶ ಸಿಕ್ಕಿದೆ.

ಆಕ್ಷನ್ , ಸೆಂಟಿ ಮೆಂಟು,ರೋಮ್ಯಾನ್ಸು... ಎಲ್ಲದರಲ್ಲೂ ಸಿಕ್ಕ ಅವಕಾಶವನ್ನು ಪ್ರಜ್ವಲ್ ಸಖತ್ತಾಗಿ ಬಳಸಿಕೊಂಡಿದ್ದಾನೆ. ನಾಯಕಿ ರುತ್ವಾ ಹಿಂದೆ ಬಿದ್ದಿಲ್ಲ. ಗುರುಕಿರಣ್ ಸಂಗೀತದಲ್ಲಿ ಎರಡು ಹಾಡು ಸೂಪರ್. ಕ್ಯಾಮೆರಾಮೆನ್ ಸಬಾ ಕುಮಾರ್ ಪ್ರತಿ ಫ್ರೇಮ್‌ನಲ್ಲಿ ಮಿಂಚಿದ್ದಾರೆ. ಕಣ್ಣಿಗೆ ತಂಪು ಕೊಡುತ್ತಾರೆ.ನಿರ್ದೇಶಕ ಪ್ರಭು ಕೆಲಸಕ್ಕೆ ಮೋಸ ಮಾಡಿಲ್ಲ. ಆದರೆ ದ್ವಿತಿಯಾರ್ಧ ಕೊಂಚ ಎಳೆಯುವುದನ್ನು ಬಿಟ್ಟಿಲ್ಲ. ಇನ್ನು ಮುಂದಾದರೂ ಹೊಸ ಕತೆಯನ್ನು ಇನ್ನಷ್ಟು ಹೊಸದಾಗಿ ಹೇಳಿದರೆ ಭವಿಷ್ಯ ಕಾಣಬಹುದು...

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada