Don't Miss!
- Sports
ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್ಪ್ರೀತ್ ಕೌರ್
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಮರ್ಶೆ : ಅಂಬಿಗೆ ಮುಪ್ಪಾಗಿದ್ದರೂ, ಅವ್ರ ಗತ್ತಿಗೆ ಮುಪ್ಪಿಲ್ಲ
Recommended Video

ಇದೊಂದು feel good ಸಿನಿಮಾ. ವಯಸ್ಸಾದ ಅಪ್ಪ ಅಂದ್ರೆ, ನಮ್ಮ ಮಕ್ಕಳನ್ನು ನೋಡಿಕೊಳ್ಳುವುದು, ನಾವು ಇಲ್ಲದಿದ್ದಾಗ ಮನೆ ಕಾಯುವುದು, ನಾವು ಹಾಕಿದ ಚಾನೆಲ್ ನೋಡುವುದು ಇಷ್ಟೇ ಅಂತ ನೀವೆನಾದರೂ ಅಂದುಕೊಂಡಿದ್ದರೆ ಒಮ್ಮೆ 'ಅಂಬಿ ನಿಂಗೆ ವಾಯಸ್ಸಾಯ್ತೋ' ಸಿನಿಮಾ ನೋಡಿ. ಈ ರೀತಿಯ ನಿಮ್ಮ ಭಾವನೆ ಬದಲಾಗಬಹುದು.

ಅಂಬಿಗೆ ತರ್ಲೆ, ಮಗನಿಗೆ ತಲೆ ನೋವು
ಸಾಮಾನ್ಯವಾಗಿ ಮಕ್ಕಳು ಮಾಡುವ ತರ್ಲೆ ಕೆಲಸಗಳು ಅಪ್ಪನಿಗೆ ಕಿರಿಕಿರಿ ಉಂಟು ಮಾಡುತ್ತದೆ. ಆದರೆ ಇಲ್ಲಿ ಅದು ಉಲ್ಟಾ. ಅಂಬಿ (ಅಂಬರೀಶ್) ಮಾಡುವ ಪ್ರತಿ ಎಡವಟ್ಟು ಕೆಲಸಗಳಿಂದ ಮಗನಿಗೆ ತಲೆ ನೋವು ಆಗುತ್ತಿರುತ್ತದೆ. ಒಬ್ಬ ಫೈಟ್ ಮಾಸ್ಟರ್ ಆಗಿದ್ದ ಅಂಬಿ ವಯಸ್ಸಾದ ಮೇಲೆ ಮನೆಯಲ್ಲಿ ಇರುತ್ತಾರೆ. ಚೆನ್ನಾಗಿ ನೋಡಿಕೊಳ್ಳುವ ಮಗ - ಸೊಸೆ, ಮುದ್ದಾದ ಮೊಮ್ಮಕ್ಕಳು ಎಲ್ಲ ಇದ್ದರೂ ಅಂಬಿ ಮನೆ ಬಿಟ್ಟು ಹೋಗುತ್ತಾರೆ.

ಅರಳು ಮರಳಲ್ಲ, 'ಮರಳಿ ಅರಳು'
ಮಗನ ಜೊತೆಗಿನ ಸಣ್ಣ ಮನಸ್ತಾಪದಿಂದ ಬೈಕ್ ಏರಿ ಮಕ್ಕಳು, ಮೊಮ್ಮಕ್ಕಳಿಂದ ಅಂಬಿ ದೂರ ಹೊರಡುತ್ತಾರೆ. 'ಮಕ್ಕಳ ಜೀವನದಲ್ಲಿ ನಾನು ಇದ್ದೇನೆ... ಆದರೆ ನನಗೂ ಒಂದು ಜೀವನ ಇದೆ' ಎಂದು ಅದನ್ನು ಹುಡುಕುತ್ತ ಅಂಬಿ ಪ್ರಯಾಣ ಆರಂಭಿಸುತ್ತಾರೆ. ತನ್ನ ಹಳೆಯ ಪ್ರೇಯಸಿ ನಂದಿನಿ (ಸುಹಾಸಿನಿ) ಈಗ ಹೇಗಿದ್ದಾಳೆ?, ಅವಳನ್ನು ನೋಡಬೇಕು ಎಂದು ಅಂಬಿ ಕೇರಳಗೆ ಹೋಗುತ್ತಾರೆ. ವಯಸ್ಸಾದ ಅಂಬಿಗೆ ಇಲ್ಲಿ ಅರಳು ಮರಳಲ್ಲ ಅವರು 'ಮರಳಿ ಅರಳು'ತ್ತಾರೆ.

ಪ್ರೀತಿಗೆ, ಭಾವನೆಗಳಿಗೆ ವಯಸ್ಸೆಲ್ಲಿದೆ
ಪ್ರೀತಿಗೆ, ಭಾವನೆಗಳಿಗೆ ವಯಸ್ಸಿಲ್ಲ... ಈ ಸಿನಿಮಾ ಅದನ್ನೇ ಹೇಳುತ್ತಿದೆ. ಹಳ್ಳಿಯಲ್ಲಿ ತಾನು ಯುವಕನಾಗಿದ್ದಾಗ ಪ್ರೀತಿ ಮಾಡಿದ್ದ ಹುಡುಗಿಯನ್ನು ಮತ್ತೆ ಕಾಣಲು ಅಂಬಿ ಹೋಗುತ್ತಾರೆ. ಆಗ ಅವರಿಗೆ ಮತ್ತೊಮ್ಮೆ ಪ್ರೀತಿ ಹುಟ್ಟುತ್ತದೆ. ಹೆಂಡತಿ ಇಲ್ಲದ ಅಂಬಿ, ಗಂಡನಿಲ್ಲದ ನಂದಿನಿ ಮತ್ತೆ ಸೇರಿ ಹೊಸ ಜೀವನ ಶುರು ಮಾಡುತ್ತಾರಾ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು.

ಜೂನಿಯರ್ ಅಂಬಿಯಾದ ಸುದೀಪ್ ನೋಡೋದೆ ಚೆಂದ
ಸುದೀಪ್ ಈ ಸಿನಿಮಾದಲ್ಲಿ ಯುವಕನಾಗಿರುವ ಅಂಬಿ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. 'ಸ್ವಾತಿ ಮುತ್ತು', 'ಮೈ ಆಟೋಗ್ರಾಫ್', 'ಶಾಂತಿ ನಿವಾಸ' ಶೈಲಿಯಲ್ಲಿ ಮತ್ತೆ ಇಲ್ಲಿ ತಮ್ಮ ಚೆಂದದ ನಟನೆ ಮೂಲಕ ಕಿಚ್ಚ ಬಹಳ ಇಷ್ಟ ಆಗುತ್ತಾರೆ. ಸುದೀಪ್ ತನ್ನೊಬ್ಬ ಒಳ್ಳೆಯ ನಟ ಎನ್ನುವುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಫ್ಲಾಶ್ ಬ್ಯಾಕ್ ನಲ್ಲಿ ಸುದೀಪ್ ಬರುತ್ತಾರೆ.

ಅಂಬಿಯ ಬೆಸ್ಟ್ ಸಿನಿಮಾಗಳಲ್ಲಿ ಒಂದು
ಈ ಸಿನಿಮಾ ಅಂಬಿ ಕೆರಿಯರ್ ನ ಕೊನೆಯ ಚಿತ್ರ ಎನ್ನುವ ಸುದ್ದಿ ಇತ್ತು. ಹಾಗಿನಾದರೂ ಅದು ನಿಜವಾಗಿದ್ದರೆ, ಅಂಬಿ ಕೊನೆಯ ಚಿತ್ರಕ್ಕೆ ಇದೊಂದು ಬೆಸ್ಟ್ ಆಯ್ಕೆ. ಮೊಮ್ಮಕ್ಕಳ ಜೊತೆಗೆ ಆಟ ಆಡುತ್ತಾ, ರೌಡಿಗಳ ಜೊತೆಗೆ ಫೈಟ್ ಮಾಡುತ್ತಾ, ಪ್ರೇಯಸಿಯ ಜೊತೆಗೆ ಸುತ್ತಾಡುತ್ತಾ ಅಂಬಿ ಇಲ್ಲಿ ಅಮೋಘವಾಗಿ ಕಾಣಿಸಿಕೊಂಡಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಅಂಬಿ ಕೆರಿಯರ್ ನ ಬೆಸ್ಟ್ ಸಿನಿಮಾಗಳಲ್ಲಿ ಇದು ಒಂದು.

ಸುಹಾಸಿನಿ, ಶೃತಿ ಹರಿಹರನ್ ಸಹಜ ನಟನೆ
ನಟಿಯರಾದ ಸುಹಾಸಿನಿ, ಶೃತಿ ಹರಿಹರನ್ ಅಭಿನಯದಲ್ಲಿ ತಪ್ಪು ಹುಡುಕಲು ಸಾಧ್ಯವಿಲ್ಲ. ಈ ಇಬ್ಬರು ನಟಿಯರು ಸರಳ ಹಾಗೂ ಸುಂದರವಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪರದೆ ಮೇಲೆ ಇಬ್ಬರು ನಟಿಯರು ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಸುಹಾಸಿನಿ ಅವರ ಯವ್ವನದ ಪಾತ್ರದಲ್ಲಿ ಶೃತಿ ಹರಿಹರನ್ ನಟಿಸಿದ್ದಾರೆ. ಉಳಿದಂತೆ, ಶಿವು ಕೆ ಆರ್ ಪೇಟೆ, ದಿಲೀಪ್ ರಾಜ್, ಗೀತಾ ಗಮನ ಸೆಳೆಯುತ್ತಾರೆ.

ನಿರ್ದೇಶಕ ಗುರು ಗಾಣಿಗ ಒಳ್ಳೆಯ ಪ್ರಯತ್ನ
ಸಣ್ಣ ವಯಸ್ಸಿನಲ್ಲಿಯೇ ಇಂತಹ ಸಿನಿಮಾ ಮಾಡಿರುವ ಗುರು ಗಾಣಿಗ ಕೆಲಸವನ್ನು ಮೆಚ್ಚಿಕೊಳ್ಳಬೇಕು. ರಿಮೇಕ್ ಆಗಿದ್ದರೂ ಒಂದು ಸುಂದರ ಚಿತ್ರವನ್ನು ಅವರು ಕಟ್ಟಿಕೊಟ್ಟಿದ್ದಾರೆ. ಒಂದು ಒಳ್ಳೆಯ ಕಥೆಯನ್ನು ಇನ್ನೊಂದು ಬಾರಿ ಚೆನ್ನಾಗಿ ಹೇಳಿದ್ದಾರೆ. ಸಿನಿಮಾದ ಮೇಕಿಂಗ್ ನೋಡುಗರಿಗೆ ಖುಷಿ ನೀಡುತ್ತದೆ. ಆಕಸ್ಮಾತ್, ತಮಿಳಿನಲ್ಲಿ ನೋಡಿದ್ದರೂ ಈ ಚಿತ್ರ ಇಷ್ಟ ಆಗುತ್ತದೆ.

ಸಂಗೀತ ಈ ಸಿನಿಮಾದ ಜೀವ
ಕಥೆ, ನಟನೆ ಜೊತೆಗೆ ಸಿನಿಮಾದ ಶಕ್ತಿಯನ್ನು ಹೆಚ್ಚು ಮಾಡಿರುವುದು ಸಂಗೀತ. ಆಗಾಗ ಬರುವ ಅರ್ಜುನ್ ಜನ್ಯ ಹಾಡುಗಳು ಮನಸ್ಸಿಗೆ ತಲುಪುತ್ತದೆ. ಇನ್ನು ಹಿನ್ನಲೆ ಸಂಗೀತ ಇಡೀ ಸಿನಿಮಾದ ಪ್ಲಸ್ ಪಾಯಿಂಟ್ ಗಳಲ್ಲಿ ಒಂದಾಗಿದೆ. ಉಳಿದಂತೆ, ಕ್ಯಾಮರಾ, ಎಡಿಟಿಂಗ್ ಹೀಗೆ ಪ್ರತಿ ವಿಭಾಗದಲ್ಲಿ ಸಿನಿಮಾ ಗೆದ್ದಿದೆ.

ಎಲ್ಲರಿಗೂ ಇಷ್ಟ ಆಗುವ ಫ್ಯಾಮಿಲಿ ಸಿನಿಮಾ
ಇದು ಮಾಸ್ ಚಿತ್ರವೋ ಕ್ಲಾಸ್ ಚಿತ್ರವೋ ಎನ್ನುವುದನ್ನು ಬಿಟ್ಟು 'ಅಂಬಿ ನಿಂಗೆ ವಾಯಸ್ಸಾಯ್ತೋ' ಒಂದು ಭಾವನಾತ್ಮಕ ಸಿನಿಮಾ. ಒಂದು ಸಣ್ಣ ಸಂದೇಶದ ಜೊತೆಗೆ ಇಲ್ಲಿ ಒಂದಷ್ಟು ಎಮೋಷನ್ಸ್ ಇದೆ. ಎಲ್ಲರಿಗೂ ಇಷ್ಟ ಆಗುವ ಒಂದು ಒಳ್ಳೆಯ ಫ್ಯಾಮಿಲಿ ಸಿನಿಮಾ ಇದು.