For Quick Alerts
  ALLOW NOTIFICATIONS  
  For Daily Alerts

  ಪ್ರೇಕ್ಷಕನ ವಿಮರ್ಶೆ: 'ಇರುವುದೆಲ್ಲವ ಬಿಟ್ಟು' ಸಂಬಂಧಗಳಿಗೆ ತುಡಿವುದೇ ಈ ಸಿನಿಮಾ

  By ನವೀನ್
  |

  ನಟಿ ಮೇಘನಾರಾಜ್, ತಿಲಕ್, ಶ್ರೀಮಹಾದೇವ್ ಅಭಿನಯದ ಇರುವುದೆಲ್ಲವ ಬಿಟ್ಟು ಸಿನಿಮಾ ಕಳೆದ ವಾರ ತೆರೆಕಂಡಿದೆ. ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಡೀ ಕುಟುಂಬ ಒಟ್ಟಿಗೆ ನೂತು ನೋಡುವ ಸಿನಿಮಾ ಎಂಬ ರೆಸ್ಪಾನ್ಸ್ ಸಿಕ್ಕಿದೆ.

  ಇಂತಹ ಸಿನಿಮಾವನ್ನ ನೋಡಿದ ನವೀನ್ ಎಂಬ ಪ್ರೇಕ್ಷಕ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಬರೆದಿದ್ದಾರೆ. ನವೀನ್ ಬರೆದಿರುವ ವಿಮರ್ಶೆಯನ್ನ ಯಥಾವತ್ತಾಗಿ ಪ್ರಕಟಿಸಲಾಗಿದೆ. ಈ ದಿನ ನಾನು ನೋಡಿದ ಒಂದು ಹೊಸ ಚಿತ್ರ ಅದುವೇ " ಇರುವುದೆಲ್ಲವ ಬಿಟ್ಟು" ಅದರ ಬಗ್ಗೆ ನನ್ನದೆ ಆದ ಅಭಿಪ್ರಾಯಗಳು ಹೀಗಿದೆ.

  ಅತ್ತಿಗೆ ಸಿನಿಮಾ ನೋಡಿ ಖುಷ್ ಆದ ಧ್ರುವ ಸರ್ಜಾಅತ್ತಿಗೆ ಸಿನಿಮಾ ನೋಡಿ ಖುಷ್ ಆದ ಧ್ರುವ ಸರ್ಜಾ

  ಚಿತ್ರದ ಪ್ಲಸ್ ಹಾಗೂ ಮೈನಸ್ ಗಳು:

  ಆಕಾಶ್ ಪಾತ್ರಧಾರಿಯಾದ ಶ್ರೀ ಮಹದೇವ್ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಯಶಸ್ವಿ ಹಾಗೂ ಚಿತ್ರದ ಕೊನೆವರೆಗೂ ನೆನಪಿನಲ್ಲಿ ಉಳಿಯುತ್ತಾರೆ. ಮೇಘನಾರಾಜ್ ಪ್ರಬುದ್ಧ ಹಾಗೂ ಪರಿಪೂರ್ಣ ನಟಿಯಾಗಿ ಅಭಿನಯಿಸಿದ್ಧಾರೆ. ದೇವ್ ಪಾತ್ರಕ್ಕೆ ತಕ್ಕಂತೆ ತಿಲಕ್ ರ ಅಭಿನಯ ಗಮನ ಸೆಳೆಯುತ್ತದೆ. ಜವಾಬ್ದಾರಿಯುತ ತಂದೆಯಾಗಿ ಅಚ್ಯುತ್ ಕುಮಾರ್ ಅವರ ಅಭಿನಯ ಜೀವ ತುಂಬಿದೆ.

  Audience review on iruvudellava Bittu movie

  ಹರೆಯದಲ್ಲಿ ಬಯಸುವ ಪ್ರೀತಿಗೆ ಮನಸೋತು ತಂದೆ ತಾಯಿಯಿಂದ ದೂರಾಗಿ, ವೃತ್ತಿ ಬದುಕಿನಲ್ಲಿ ಹಾಗೂ ಜವಾಬ್ದಾರಿಗಳನ್ನು ನಿಭಾಯಿಸಲು ತಾವೇ ದೂರವಾಗುವ ಬ್ಯೂಟಿಫುಲ್ ಕಪಲ್ಸ್. ತಾನು ಪ್ರೀತಿಸಿ ಅದನ್ನು ತ್ಯಾಗ ಮಾಡುವ ಆಕಾಶ್ ಮತ್ತೆ ಅವರನ್ನು ಒಂದು ಮಾಡುವ ದೃಶ್ಯ ಕಣ್ಣಂಚಲ್ಲಿ ನೀರು ತರಿಸುತ್ತದೆ.

  ವಿಮರ್ಶೆ: 'ಇರುವುದೆಲ್ಲವ ಬಿಟ್ಟು' ಸಂಬಂಧಗಳೆಡೆಗೆ ತುಡಿವುದೇ ಜೀವನವಿಮರ್ಶೆ: 'ಇರುವುದೆಲ್ಲವ ಬಿಟ್ಟು' ಸಂಬಂಧಗಳೆಡೆಗೆ ತುಡಿವುದೇ ಜೀವನ

  'ರಂಗೀತರಂಗ' ಖ್ಯಾತಿಯ ವಿಲಿಯಂ ಡೇವಿಡ್ ಅವರ ಕ್ಯಾಮರ ಕೈ ಚಳಕದಲ್ಲಿ ಸುಂದರ ದೃಶ್ಯಗಳು ಸೆರೆಯಾಗಿವೆ. ಕಥೆಗೆ ತಕ್ಕಂತೆ ಸಾಗುವ ಹಿನ್ನೆಲೆ ಸಂಗೀತ ಹಾಗೂ ಉತ್ತಮ ಹಾಡುಗಳು ಪ್ಲಸ್. ಶ್ರೀಧರ್ ಸಂಭ್ರಮ್ ರ ಅದ್ಭುತ ಸಂಗೀತ ಚಿತ್ರದ ಜೀವಾಳ. ಚಿತ್ರದ ಸಂಭಾಷಣೆ ಅಮೋಘ ಹಾಗೂ ಕೆಲವೊಂದು ಕಡೆ ಸ್ವಲ್ಪ ವೇಗ ಬೇಕಿತ್ತು.

  ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಜವಾಬ್ಧಾರಿ ಹೊತ್ತ ಕಾಂತ ಕನ್ನಲ್ಲಿ ಅವರ ಪರಿಶ್ರಮ ಎದ್ದು ಕಾಣುತ್ತದೆ. ಮೊದಲಾರ್ಧ ಇನ್ನೊಂದಿಷ್ಟು ಚೆನ್ನಾಗಿಸಲು ಅವಕಾಶವಿತ್ತು. ಚಿತ್ರದ ದ್ವಿತಿಯಾರ್ಧ ಕುತೂಹಲ ಹಾಗೂ ಉತ್ತಮ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

  Audience review on iruvudellava Bittu movie

  ಒಟ್ಟಿನಲ್ಲಿ ಚಿತ್ರವನ್ನು ಎಲ್ಲ ವರ್ಗದವರೂ ಕುಟುಂಬ ಸಮೇತ ನೋಡಬಹುದಾಗಿದೆ. ಪಕ್ಕ ಕಮರ್ಷಿಯಲ್ ಹಾಗೂ ಪೈಸಾ ವಸೂಲಿ ಚಿತ್ರ ಇದಾಗಿದೆ. ನನ್ನ ರೇಟಿಂಗ್ ಈ ಚಿತ್ರಕ್ಕೆ 4/5...

  ಇನ್ನುಳಿದಂತೆ ಕಾಂತಕನ್ನಲ್ಲಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಮೇಘನಾ ರಾಜ್, ತಿಲಕ್ ಹಾಗೂ ಶ್ರೀ ಮಹದೇವ್ ನಟಿಸಿದ್ದಾರೆ. ದೇವರಾಜ್ ದಾವಣಗೆರೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಸಂಗೀತ ಒದಗಿಸಿದ್ದಾರೆ. ಸೆಪ್ಟೆಂಬರ್ 21 ರಂದು ಸಿನಿಮಾ ತೆರೆಕಂಡಿತ್ತು.

  English summary
  Actress Meghana Raj and Tilak Shekar starring 'Iruvudellava Bittu' kannada movie has released on September 21st. here is the Audience review on movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X