»   » ವಿಮರ್ಶೆ: ಸ್ಪೆಷಲ್ ಹುಡುಗನ 'ಬಾಕ್ಸರ್' ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ.!

ವಿಮರ್ಶೆ: ಸ್ಪೆಷಲ್ ಹುಡುಗನ 'ಬಾಕ್ಸರ್' ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ.!

Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸ್ಪೆಷಲ್ ಹುಡುಗ ಧನಂಜಯ್ ಅವರ ಬಹುನಿರೀಕ್ಷಿತ ಚಿತ್ರ 'ಬಾಕ್ಸರ್' ತೆರೆ ಕಂಡಿದ್ದು, ಪ್ರೇಕ್ಷಕರು ನಿರೀಕ್ಷಿಸಿದ ಮಟ್ಟವನ್ನು ತಲುಪಿಲ್ಲ ಅನ್ನೋದು ಚಿತ್ರದ ಕೊನೆಯ ಭಾಗ ಬಂದಾಗ ತಿಳಿಯುವ ವಿಚಾರ.

  ಇಡೀ ಸಿನಿಮಾದ ತುಂಬಾ ನಟ ಧನಂಜಯ್ ಹಾಗೂ ನಟಿ ಕೃತಿಕಾ ಜಯರಾಂ ತುಂಬಿಕೊಂಡಿದ್ದಾರೆ. ಚಿತ್ರದ ಫಸ್ಟ್ ಹಾಫ್ ಫುಲ್ ಲವ್-ರೊಮ್ಯಾಂಟಿಕ್ ದೃಶ್ಯಗಳಿಂದ ತುಂಬಿಕೊಂಡಿದ್ದರೆ, ಸೆಕೆಂಡ್ ಹಾಫ್ ಪುಲ್ ಫೈಟ್.[ಸ್ಪೆಷಲ್ ಹುಡುಗನ 'ಬಾಕ್ಸರ್' ಏಕೆ ನೋಡಬೇಕು?, ಇಲ್ಲಿದೆ ಕಾರಣ]

  'ರಾಟೆ' ಚಿತ್ರದಲ್ಲಿ ಮುಗ್ದ ಲವರ್ ಬಾಯ್ ಆಗಿದ್ದ ನಟ ಧನಂಜಯ್ ಅವರು 'ಬಾಕ್ಸರ್' ನಲ್ಲಿ ಫುಲ್ ಫೈಟ್ ಮಾಡಿ ಇಡೀ ಪ್ರೇಕ್ಷಕರನ್ನಲ್ಲದಿದ್ದರೂ, ತಮ್ಮ ಅಭಿಮಾನಿಗಳನ್ನು ಮಾತ್ರ ಸಖತ್ತಾಗಿ ರಂಜಿಸಿದ್ದಾರೆ.[ಮೌಂಟ್ ಕಾರ್ಮೆಲ್ ಹುಡುಗಿ, 'ಬಾಕ್ಸರ್' ಬೆಡಗಿ ಕೃತಿಕಾ, ಏನಂತಾರೆ..?]

  'ಬಾಕ್ಸರ್' ಚಿತ್ರದ ಸಂಪೂರ್ಣ ವಿಮರ್ಶೆ ಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

  Rating:
  3.0/5
  Star Cast: ಧನಂಜಯ, ಕೃತಿಕಾ ಜಯಕುಮಾರ್
  Director: ಪ್ರೀತಂ ಗುಬ್ಬಿ

  ಅಂತರ್ಮುಖಿ ಅನಾಥ ಹುಡುಗ ಧನಂಜಯ್

  ನಾಯಕ ನಟ ರಾಜ (ಧನಂಜಯ್) ಒಬ್ಬ ಅನಾಥ ಹುಡುಗ ಹಾಗೂ ತುಂಬಾ ಅಂತರ್ಮುಖಿಯಾಗಿರುತ್ತಾನೆ. ಈತ ಯಾರ ಸುದ್ದಿಗೂ ಹೋಗದೇ ತನ್ನದೇ ಪ್ರಪಂಚವಾದ ಬೆಟ್ಟಿಂಗ್ ಮತ್ತು 'ಬಾಕ್ಸರ್' ನಲ್ಲಿ ಕಳೆದು ಹೋಗಿರುತ್ತಾನೆ. ಈತನಿಗೆ ತಾನೊಬ್ಬ ದೊಡ್ಡ 'ಬಾಕ್ಸರ್' ಆಗಬೇಕು ಎನ್ನುವ ಕನಸು ಹೊಂದಿರುತ್ತಾನೆ.

  ಅನಾಥ ಹುಡುಗನಿಗೆ ಜೊತೆಯಾಗುವ ಕುರುಡಿ

  ರಫ್ ಅಂಡ್ ಟಫ್ ಆಗಿ ತನ್ನದೇ ಪ್ರಪಂಚದಲ್ಲಿ ತೇಲಾಡುತ್ತಿರುವ ನಾಯಕ ರಾಜನ ಬದುಕಿಗೆ ಕುರುಡಿ ಲಕ್ಷ್ಮಿ (ಕೃತಿಕಾ ಜಯರಾಮ್) ಎಂಟ್ರಿ ಪಡೆದುಕೊಳ್ಳುತ್ತಾಳೆ. ತದನಂತರ ರಾಜನ ಬದುಕು ಸಖತ್ ಕಲರ್ ಫುಲ್ ಆಗುತ್ತದೆ. ಇದರೊಂದಿಗೆ ರಾಜನಿಗೆ ಬದುಕಿನ ಮೇಲೆ ವಿಭಿನ್ನ ಒಲವು ಮೂಡುತ್ತದೆ. ಜೊತೆಗೆ ಬರುಬರುತ್ತಾ ರಾಜನಿಗೆ ಲಕ್ಷ್ಮಿಯ ಮುಗ್ದತೆ ಹಾಗೂ ಆಕೆಯ ಪರಿಶುದ್ಧ ಪ್ರೇಮದ ಅರಿವಾಗುತ್ತಾ ಹೋಗುತ್ತದೆ. ಹಾಗೆಯೇ ರಾಜ ಲಕ್ಷ್ಮಿಯನ್ನು ಇಷ್ಟ ಪಡಲು ಆರಂಭಿಸುತ್ತಾನೆ.

  ಫಸ್ಟ್ ಹಾಫ್ ಲವ್-ಸೆಕೆಂಡ್ ಹಾಫ್ ಫೈಟ್

  ಚಿತ್ರದ ಟೈಟಲ್ ನಲ್ಲಿಯೇ ಆಕ್ಷನ್ ಸೀಕ್ವೆನ್ಸ್ ಇದ್ದರೂ ಕೂಡ ಸಿನಿಮಾದ ಫಸ್ಟ್ ಹಾಫ್ ನಲ್ಲಿ ಫುಲ್ ಪ್ರೀತಿ-ಪ್ರೇಮ ಅಂತ ರೊಮ್ಯಾಂಟಿಕ್ ರಾಜ ನಿಮಗೆ ಇಷ್ಟವಾದರೆ, ಚಿತ್ರದ ಸೆಕೆಂಡ್ ಹಾಫ್ ನಲ್ಲಿ 'ಬಾಕ್ಸರ್' ರಾಜ ನಿಮಗೆಲ್ಲಾ ಇಷ್ಟ ಆಗ್ತಾನೆ.

  ಹೃದಯ ದೇವತೆಗೆ ಬೆಳಕಿನ ಪ್ರಪಂಚ ತೋರಿಸಲು ರಾಜನ ಹೋರಾಟ

  ಕತ್ತಲೆಯ ಪ್ರಪಂಚದಲ್ಲಿರುವ ತನ್ನ ಪ್ರಿಯತಮೆ ಲಕ್ಷ್ಮಿಗೆ ಬೆಳಕು ತೋರಿಸಬೇಕು. ಆಕೆಗೆ ಮತ್ತೆ ಕಣ್ಣು ಕಾಣುವಂತೆ ಮಾಡಬೇಕು ಎಂದು ತನ್ನ ಜೀವವನ್ನೆ ಪಣಕ್ಕಿಟ್ಟು, 'ಬಾಕ್ಸಿಂಗ್' ಗೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ತದನಂತರ ಏನಾಗುತ್ತೆ?, ರಾಜ ಲಕ್ಷ್ಮಿಗೆ ಕಣ್ಣು ವಾಪಸ್ ತರುವಲ್ಲಿ ಯಶಸ್ವಿಯಾಗ್ತಾನ?, ಮತ್ತೆ ರಾಜ ಮತ್ತು ಲಕ್ಷ್ಮಿ ಭೇಟಿ ಆಗ್ತಾರ?, ಎಂಬುದನ್ನು ನೋಡಲು ಒಮ್ಮೆ ಈ ವೀಕೆಂಡ್ ನಲ್ಲಿ ಚಿತ್ರಮಂದಿರಕ್ಕೆ ಭೇಟಿ ನೀಡಿ.

  ನಟ ಧನಂಜಯ್ ನಟನೆ

  ನಾಯಕ ನಟ ಧನಂಜಯ್ ಅವರು ಪರ್ಫೆಕ್ಟ್ ಆಗಿ ತಮ್ಮ ನಟನೆಯನ್ನು ತೋರಿದ್ದಾರೆ. ಆಕ್ಷನ್-ಡೈಲಾಗ್ ಡೆಲಿವರಿ ಹಾಗೂ ತಮ್ಮ ಉತ್ತಮ ನಟನೆ ಸೇರಿದಂತೆ ಎಲ್ಲವನ್ನು ಸರಿಯಾದ ರೀತಿಯಲ್ಲಿ ಬ್ಯಾಲೆನ್ಸ್ ಮಾಡುವಲ್ಲಿ ಡೈರೆಕ್ಟರ್ ಸ್ಪೆಷಲ್ ಹುಡುಗ ಯಶಸ್ವಿಯಾಗಿದ್ದಾರೆ.

  ನಟಿ ಕೃತಿಕಾ ಜಯರಾಂ ನಟನೆ

  ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿರುವ ಕನ್ನಡತಿ ಕೃತಿಕಾ ಜಯರಾಂ ಅವರು ತಮ್ಮ ಡೀಸೆಂಟ್ ನಟನೆ ಹಾಗೂ ಕುರುಡಿಯ ಪಾತ್ರದಲ್ಲಿ ತಮ್ಮ ಉತ್ತಮ ನಟನೆಯನ್ನು ತೋರಿ ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಂಡಿದ್ದಾರೆ.

  ಇನ್ನುಳಿದವರ ಕಥೆ

  ಇನ್ನುಳಿದಂತೆ ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಂಡಿರುವ ರಂಗಾಯಣ ರಘು ಅವರು ಎಂದಿನಂತೆ ಪ್ರೇಕ್ಷಕರನ್ನು ಹೆಚ್ಚಾಗಿ ನಗಿಸದೇ, ಎಷ್ಟು ಬೇಕೋ ಅಷ್ಟೇ ನಗಿಸಿದ್ದಾರೆ. ತಮಿಳು ನಟ ಕನ್ನಡಕ್ಕೆ ಹೊಸ ಮುಖ ನಟ ಚರಣ್ ದೀಪ್ ಅವರು ಖಳನಾಯಕನ ಪಾತ್ರದಲ್ಲಿ ಮಿಂಚಿದ್ದು, ತಮ್ಮ ನಟನೆಗೆ ತಕ್ಕ ನ್ಯಾಯ ಒದಗಿಸಿದ್ದಾರೆ. ಹಿರಿಯ ನಟಿ ಸುಮಿತ್ರಾ ಅವರು ತಾಯಿಯ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.

  ಚಿತ್ರದ ತಾಂತ್ರಿಕತೆ

  ನಿರ್ದೇಶಕ ಪ್ರೀತಂ ಗುಬ್ಬಿ ಅವರ ಕಥೆ-ಚಿತ್ರಕಥೆ ಉತ್ತಮವಾಗಿದೆ. ಆದರೆ ಇದನ್ನು ಸಮರ್ಪಕ ರೀತಿಯಲ್ಲಿ ಹೊರತರುವಲ್ಲಿ ಎಲ್ಲೋ ಎಡವಟ್ಟು ಮಾಡಿದ್ದಾರೆ. ಆದರೆ ಉತ್ತಮ ಸ್ಕ್ರೀನ್ ಪ್ಲೇ ಮತ್ತು ಕಾಮಿಡಿ ಮೂಲಕ ಇಡೀ ಸಿನಿಮಾ ಪ್ರೇಕ್ಷಕರನ್ನು ಎಂಗೇಜ್ ಮಾಡುತ್ತದೆ. ಸಿನಿಮಾಟೊಗ್ರಫಿ ಕೂಡ ಒನ್ ಆಫ್ ದ ಬೆಸ್ಟ್ ಅಂತಾನೇ ಹೇಳಬಹುದು.

  ಸಂಗೀತ

  ಸಂಗೀತ ಮಾಂತ್ರಿಕ ವಿ ಹರಿಕೃಷ್ಣ ಅವರ ಮ್ಯೂಸಿಕ್ ಕಂಪೋಸಿಷನ್ ನಲ್ಲಿ ಚಿತ್ರದ ಹಾಡುಗಳು ಸಖತ್ ಹಿಟ್ ಲಿಸ್ಟ್ ಪಡೆದುಕೊಂಡಿವೆ. ನಿರ್ದೇಶಕ ಕಮ್ ನೃತ್ಯ ನಿರ್ದೇಶಕ ಎ.ಹರ್ಷ ಅವರ ಚಿತ್ರದ ಹಾಡುಗಳ ನೃತ್ಯಕ್ಕೆ, ನೃತ್ಯ ನಿರ್ದೇಶನ ಮಾಡಿದ್ದು, ನಾಯಕ ಧನಂಜಯ್ ಅವರು ಸಖತ್ ಪರ್ಫಾಮೆನ್ಸ್ ನೀಡಿದ್ದಾರೆ. ಅದರಲ್ಲೂ ಚಿತ್ರದ ನಾಲ್ಕು ಹಾಡುಗಳು ಮಾರ್ಕೆಟ್ ನಲ್ಲಿ ಹಿಟ್ ಲಿಸ್ಟ್ ನಲ್ಲಿವೆ. 'ತುಂಟ ತಾಟಕಿಯೇ' ವಿದೇಶದಲ್ಲಿ ಚಿತ್ರೀಕರಣಗೊಂಡಿದೆ.

  ಒಟ್ಟಾರೆ 'ಬಾಕ್ಸರ್'

  'ಬಾಕ್ಸರ್' ಸ್ಪೆಷಲ್ ಹುಡುಗ ಧನಂಜಯ್ ಅಭಿಮಾನಿಗಳು ನೋಡಬಹುದಾದ ಸಿನಿಮಾ. ಆದರೆ ಪ್ರೇಕ್ಷಕರ ನಿರೀಕ್ಷೆ ಮಟ್ಟ ತಲುಪಿಲ್ಲ ಅನ್ನೋದು ಬೇಸರದ ಸಂಗತಿ. ಅದು ಬಿಟ್ಟರೆ 'ಬಾಕ್ಸರ್' ಫುಲ್ ಆಕ್ಷನ್ ಮೂವಿ.

  English summary
  The most expected movie Boxer has released today, November 20th. Special Star Dhananjay and debutant Kruthika Jayakumar have paired up as lead pair in the action cum love entertainer. Read the movie review here.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more