»   » 'ದಂಡುಪಾಳ್ಯ'ದ ಇನ್ನೊಂದು ಮುಖಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್‌ ಎಷ್ಟು?

'ದಂಡುಪಾಳ್ಯ'ದ ಇನ್ನೊಂದು ಮುಖಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್‌ ಎಷ್ಟು?

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ದಂಡುಪಾಳ್ಯ' ಸಂಚಲನ ಮೂಡಿಸಿದ್ದ ದರೋಡೆಕೋರರ ಗ್ಯಾಂಗ್. 'ದಂಡುಪಾಳ್ಯ' ಚಿತ್ರವನ್ನು ನಿರ್ದೇಶನ ಮಾಡಿದ್ದ ಶ್ರೀನಿವಾಸ ರಾಜು ಅದರ ಭಾಗ 2 ತೆರೆ ಮೇಲೆ ತಂದಿದ್ದು, ಉತ್ತಮ ರೆಸ್ಪಾನ್ಸ್ ಪಡೆದಿದೆ. ಕ್ರೈಂ ಥ್ರಿಲ್ಲರ್ ಇಷ್ಟಪಡುವವರಿಗೆ ಇಂದೊಂದು ಸೂಪರ್ ಸಿನಿಮಾ ಎಂಬುದು ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರ ಅಭಿಪ್ರಾಯ.

  ಚಿತ್ರ ವಿಮರ್ಶೆ: 'ಸತ್ಯ-ಸುಳ್ಳು'ಗಳ ನಡುವಿನ ದಂಡುಪಾಳ್ಯ '2'

  ಇನ್ನು ಪ್ರೇಕ್ಷಕರಿಗೆ ಇಷ್ಟವಾದಂತೆ 'ದಂಡುಪಾಳ್ಯ 2' ಚಿತ್ರ ನಮ್ಮ ವಿಮರ್ಶಕರಿಗೂ ಇಷ್ಟವಾಗಿದ್ಯಾ? ಚಿತ್ರದ ಬಗ್ಗೆ ಅವರ ಅಭಿಪ್ರಾಯವೇನು? ಅದಕ್ಕೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ದಂಡುಪಾಳ್ಯ 2' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಈ ಕೆಳಗಿನಂತಿದೆ.

  ಕ್ರೌರ್ಯದ ಮಾರಾಟಕ್ಕೆ ಖಾಕಿ ಪೋಷಾಕು: ಪ್ರಜಾವಾಣಿ

  'ದಂಡುಪಾಳ್ಯ'ದ ಕ್ರೌರ್ಯವನ್ನು ಮುಂದುವರೆಸಿದ್ದಾರೆ. ಪಾತಕಿಗಳ ಮೇಲೆ 80 ಪ್ರಕರಣಗಳಿದ್ದರೂ, ಎಷ್ಟು ಕ್ರೂರಿಗಳು ಎಂದು ಬಿಂಬಿಸಲ್ಪಟ್ಟಿದೆಯೋ ಅಷ್ಟೊಂದು ಕ್ರೂರಿಗಳಾಗಿರಲಿಕ್ಕಿಲ್ಲ' ಎಂಬ ವಾದ ವಿಚಿತ್ರವಾಗಿದೆ. ಪೊಲೀಸ್ ಆಗಿ ರವಿಶಂಕರ್ ಸಣ್ಣ ಧ್ವನಿಯಲ್ಲಿಯೇ ನಡುಕ ಹುಟ್ಟಿಸುತ್ತಾರೆ. ಇತರರೆಲ್ಲಾ ಕಣ್ಣಿನಲ್ಲೇ ದೈನ್ಯತೆ ಮತ್ತು ಕ್ರೌರ್ಯ ಎರಡನ್ನೂ ಹೊಮ್ಮಿಸುತ್ತಾರೆ. ಅರ್ಜುನ್ ಜನ್ಯ ಸಂಗೀತ ಕಥೆಯ ಕರಾಳತೆಯನ್ನು ಇನ್ನಷ್ಟು ಹೆಚ್ಚಿಸಿದೆ. ವೆಂಕಟ್ ಪ್ರಸಾದ್ ಕ್ಯಾಮೆರಾ ಕ್ಲೋಸ್‌ಅಪ್, ಎಕ್ಸ್ಟ್ರಾ ಕ್ಲೋಸ್‌ಅಪ್‌ ಶಾಟ್‌ಗಳಲ್ಲಿಯೇ ಆಟವಾಡಿದ್ದಾರೆ. ಸಿ.ರವಿಚಂದ್ರನ್ ಸಂಕಲನ ಅಚ್ಚುಕಟ್ಟಾಗಿದೆ. ಪಾತಕಿಗಳನ್ನು ಅಮಾಯಕರನ್ನಾಗಿ, ವ್ಯವಸ್ಥೆಯನ್ನು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸುವ ಅಪಾಯಗಳ ಬಗ್ಗೆ ನಿರ್ದೇಶಕರಿಗೆ ಎಚ್ಚರ ಇದ್ದಂತಿಲ್ಲ. ಕ್ರೌರ್ಯವನ್ನು ನೋಡಿ 'ಕಿಕ್' ಹೊಂದುವವರಿಗೆ ಇಂಥ ಸಿನಿಮಾಗಳು ಕಜ್ಜಿ ತುರಿಕೆಯ ಸುಖ ನೀಡಬಹುದು -ಪದ್ಮನಾಭ ಭಟ್

  ನಿಜ ಏನು ಸಾಮೀ..?: ವಿಜಯವಾಣಿ

  ಪತ್ರಕರ್ತೆ ಪಾತಕಿಗಳು ಅಮಾಯಕರು ಎಂದು ಸಾಬೀತು ಪಡಿಸಲು ಮುಂದಾದರೆ, ಪೊಲೀಸರು ದಂಡುಪಾಳ್ಯ ಗ್ಯಾಂಗ್ ನವರು ಕಳ್ಳರು ಎಂದು ನಿರೂಪಿಸಲು ಪ್ರಯತ್ನಿಸುತ್ತಾರೆ. ಅದಕ್ಕೆ ಸಮಾನಾಂತರವಾಗಿ ಅವರೆಲ್ಲರೂ ನಿರಪರಾಧಿಗಳು ಎಂದು ನಿರ್ದೇಶಕರು ಪರೋಕ್ಷವಾಗಿ ಪ್ರತಿಪಾದಿಸುತ್ತಿರುತ್ತಾರೆ. ಇವೆಲ್ಲವನ್ನೂ ಕಣ್ಣಲ್ಲಿ ರಕ್ತ ಬರುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಶ್ರೀನಿವಾಸ ರಾಜು. ನೋವು ಅನುಭವಿಸುತ್ತಿರುವವರ ಆಕ್ರಂದನವಾಗಿ ಹೊಮ್ಮಿರುವ ಹಾಡೊಂದು ಆಪ್ತ-ಆರ್ದ್ರ ಎನಿಸುತ್ತದೆ. ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಹಿಡಿದಿಡುತ್ತದೆ. 'ನಾವೇನೂ ತಪ್ಪು ಮಾಡಿಲ್ಲ ಸಾಮೀ..' ಎನ್ನುತ್ತ ತೀವ್ರ ಹಿಂಸೆಗೆ ಒಳಗಾಗುವ ದಂಡುಪಾಳ್ಯ ಗ್ಯಾಂಗ್‌ ನವರು ಇನ್ನೇನೋ ಆಗಿಬಿಡುತ್ತಾರೆ ಎಂಬಷ್ಟರಲ್ಲಿ ಚಿತ್ರ ಮುಗಿದು, ಪ್ರೇಕ್ಷಕರಲ್ಲಿ 'ನಿಜ ಏನು ಸಾಮೀ..?' ಎಂಬ ಪ್ರಶ್ನೆ ಮೂಡಿರುತ್ತದೆ.

  ದಂಡುಪಾಳ್ಯದ ಇನ್ನೊಂದು ಮುಖ: ವಿಜಯ ಕರ್ನಾಟಕ

  ದಂಡುಪಾಳ್ಯದ ಭಾಗ-2 ದಲ್ಲಿ ಅಪರಾಧ ಕೃತ್ಯಗಳನ್ನು ಭೀಭತ್ಸವಾಗಿ ತೋರಿಸದೇ ಪಾತಕಿಗಳನ್ನು ಪೊಲೀಸ್ ವಿಚಾರಣೆ ಕಡೆಗೆ ಫೋಕಸ್ ಮಾಡಿದ್ದಾರೆ. ಕೆಲ ದೃಶ್ಯಗಳು ತಮಿಳಿನ 'ವಿಸಾರಣೈ' ಚಿತ್ರಕ್ಕೆ ಹೋಲುತ್ತವೆಯಾದರೂ ಯಥಾವತ್ ನಕಲು ಎನ್ನುವುದಕ್ಕೆ ಆಗಲ್ಲ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಶಕ್ತಿ. ಸಿನಿಮಾದ ಕಲರ್ ಕಾಂಬಿನೇಷನ್ ಅದ್ಭುತವಾಗಿದೆ. ಕತ್ತಲೆ ಬೆಳಕಿನ ನಡುವೆ ಪ್ರಸಾದ್ ಆಟವಾಡಿದ್ದಾರೆ. ಡೈಲಾಗ್‌ಗಳು ಮೊನಚಾಗಿದ್ದರೂ ಕೆಲವೆಡೆ ಕೇಳಲು ಸಹ್ಯವಾಗಿಲ್ಲ. ಪಾತ್ರಧಾರಿಗಳು ಒಬ್ಬರಿಗಿಂತ ಒಬ್ಬರನ್ನೂ ಮೀರಿಸುವ ಹಾಗೆ ನಟಿಸಿದ್ದಾರೆ. ನಟಿ ಶ್ರುತಿ ಗಂಭೀರ ಪಾತ್ರದಲ್ಲಿ ಕಮಾಲ್ ಮಾಡಿದ್ದಾರೆ. ರವಿಶಂಕರ್ ಖಡಕ್ ಪಾತ್ರ ಗಮನ ಸೆಳೆಯುತ್ತದೆ. ಕ್ರೈಂ ಥ್ರಿಲ್ಲರ್ ಇಷ್ಟಪಡುವ ಮತ್ತು ಇಂತಹ ಗ್ಯಾಂಗ್ ಬಗ್ಗೆ ತಿಳಿದುಕೊಳ್ಳಲು ಇಷ್ಟ ಪಡುವವರಿಗೆ '2' ಮೆಚ್ಚುಗೆಯಾಗುತ್ತದೆ -ಹರೀಶ್ ಬಸವರಾಜ್

  Dandupalya 2 Movie Review: The Times of India

  The first film shows the gruesome modus operandi of the gang and how they end up being caught by the police, the sequel throws open a debate on whether the gang members are innocent. Although, the maker has also ensured that there are enough doubts left in the viewers' minds to set up a part 3 that promises to conclude the story. The triumph of the film is in its performances, slick narration style and quality technical team. The background score by Arjun Janya is one of the best highlights of the film. The ensemble cast does a good job. The filmmaker has brought two sides of the case in the first two parts of the film and this leaves the viewer curious about the third and concluding part. Go watch this film, its worth that trip to the hall.

  English summary
  Pooja Gandhi starrer Kannada Movie 'Dandupalya 2' has received mixed response from critics. 'Dandupalya 2' critics review is here.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more