For Quick Alerts
  ALLOW NOTIFICATIONS  
  For Daily Alerts

  ಮೊಟ್ಟ ಮೊದಲ ವಿಮರ್ಶೆ: ಪ್ರೇಕ್ಷಕರ ಮನಗೆದ್ದ 'ಕಥೆಯೊಂದು ಶುರುವಾಗಿದೆ'

  By Harshitha
  |

  'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ 'ಕಥೆಯೊಂದು ಶುರುವಾಗಿದೆ' ಸಿನಿಮಾ ಇದೇ ಶುಕ್ರವಾರ (ಆಗಸ್ಟ್ 3) ನಿಮ್ಮೆಲ್ಲರ ಮುಂದೆ ಬರಲಿದೆ.

  ರಾಜ್ಯಾದ್ಯಂತ 'ಕಥೆಯೊಂದು ಶುರುವಾಗಿದೆ' ಬಿಡುಗಡೆ ಆಗುವ ಮುನ್ನವೇ ವಿದೇಶಗಳಲ್ಲಿ ಈ ಸಿನಿಮಾದ ಪ್ರೀಮಿಯರ್ ಶೋ ಮುಗಿದಿದೆ. ಯು.ಎಸ್.ಎ, ಯು.ಕೆ, ಆಸ್ಟ್ರೇಲಿಯಾ ಹಾಗೂ ಯೂರೋಪ್ ನಲ್ಲಿ 'ಕಥೆಯೊಂದು ಶುರುವಾಗಿದೆ' ಚಿತ್ರದ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿತ್ತು.

  ಸಪ್ತಸಾಗರದಾಚೆ ನೆಲೆಸಿರುವ ಕನ್ನಡಿಗರು ದಿಗಂತ್ ಅಭಿನಯದ ಸೆನ್ನಾ ಹೆಗ್ಡೆ ನಿರ್ದೇಶನದ 'ಕಥೆಯೊಂದು ಶುರುವಾಗಿದೆ' ಚಿತ್ರವನ್ನ ನೋಡಿ ಜೈಕಾರ ಹಾಕಿದ್ದಾರೆ ಅಂದ್ರೆ ನೀವು ನಂಬಲೇ ಬೇಕು. ನಂಬಲ್ಲ ಅಂದ್ರೆ ವಿದೇಶದಲ್ಲಿ ಇರುವ ಕನ್ನಡಿಗರು 'ಕಥೆಯೊಂದು ಶುರುವಾಗಿದೆ' ಸಿನಿಮಾವನ್ನ ಕಣ್ತುಂಬಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನೀಡಿರುವ ವಿಮರ್ಶೆಗಳನ್ನ ಒಮ್ಮೆ ನೋಡಿ....

  ಅತ್ಯುತ್ತಮ ಚಿತ್ರ

  ಅತ್ಯುತ್ತಮ ಚಿತ್ರ

  ''ಕಥೆಯೊಂದು ಶುರುವಾಗಿದೆ' ಕನ್ನಡದಲ್ಲಿ ತಯಾರಾಗಿರುವ ಒಂದು ಅತ್ಯುತ್ತಮ ಚಿತ್ರ. ಆಕ್ಟಿಂಗ್, ವಿಶ್ಯುವಲ್ಸ್, ಮ್ಯೂಸಿಕ್, ಸೌಂಡ್.. ಎಲ್ಲವೂ ಚೆನ್ನಾಗಿದೆ. ದಿಗಂತ್ ಗೆ ಇದು ಹೇಳಿ ಮಾಡಿಸಿದ ಪಾತ್ರ. ನಾವಂತೂ ಈ ಚಿತ್ರವನ್ನ ಎಂಜಾಯ್ ಮಾಡಿದ್ವಿ. ಇಂತಹ ಹಲವು ಸಿನಿಮಾಗಳಲ್ಲಿ ಕನ್ನಡದಲ್ಲಿ ಬರಲಿ ಅಂತ ಆಶಿಸುತ್ತೇವೆ'' ಎಂದು ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ನೆಲೆಸಿರುವ ಮನೀಶ್ ಭಂಡಾರಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  ಮತ್ತೊಂದು 'ಕಥೆ' ಶುರು ಮಾಡಿದ ಸುನಿ-ದಿಗಂತ್-ಪುಷ್ಕರ್ಮತ್ತೊಂದು 'ಕಥೆ' ಶುರು ಮಾಡಿದ ಸುನಿ-ದಿಗಂತ್-ಪುಷ್ಕರ್

  ಸಿಂಪಲ್ ಸಿನಿಮಾ

  ಸಿಂಪಲ್ ಸಿನಿಮಾ

  ''ಕಥೆಯೊಂದು ಶುರುವಾಗಿದೆ' ಎಂದು ಸಿಂಪಲ್, ಸ್ವೀಟ್, ಮನಸ್ಸಿಗೆ ಮುದ ನೀಡುವ ಚಿತ್ರ. ಕನ್ನಡ ಚಿತ್ರರಂಗದಲ್ಲಿ ಇಂತಹ ಸಿನಿಮಾಗಳು ಬರುವುದು ತೀರಾ ಅಪರೂಪ. ಇದರಲ್ಲಿ ಐಟಂ ಸಾಂಗ್ ಇಲ್ಲ. ಹೈ ಬೇಸ್ ಮ್ಯೂಸಿಕ್ ಇಲ್ಲ, ಡಬಲ್ ಮೀನಿಂಗ್ ಡೈಲಾಗ್ಸ್ ಹಾಗೂ ಫೈಟ್ಸ್ ಇಲ್ಲ. ಸಿಂಪಲ್ ಆಗಿರುವ ಕಥೆಯನ್ನ ನಿರೂಪಣೆ ಮಾಡಿರುವ ಶೈಲಿ ಚೆನ್ನಾಗಿದೆ. ದಿಗಂತ್ ರವರ ಫ್ರೆಶ್ ಲುಕ್ ಇಷ್ಟ ಆಯ್ತು'' ಎಂದು ಮೆಲ್ಬರ್ನ್ ನಲ್ಲಿ ನೆಲೆಸಿರುವ ರಾಜಶೇಖರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  ತಲೆ ನೋವು ತರಿಸುವುದಿಲ್ಲ

  ತಲೆ ನೋವು ತರಿಸುವುದಿಲ್ಲ

  ''ಸಿನಿಮಾದಲ್ಲಿ ಎಲ್ಲರ ನಟನೆ ಚೆನ್ನಾಗಿದೆ. ಯಾರದ್ದೂ ಓವರ್ ಆಕ್ಟಿಂಗ್ ಅಂತ ಅನಿಸಲಿಲ್ಲ. ಇದು ಖಂಡಿತ ಒಳ್ಳೆಯ ಸಿನಿಮಾ. ಬೇರೆ ಸಿನಿಮಾಗಳಂತೆ ಇದು ತಲೆ ನೋವು ತರಿಸುವುದಿಲ್ಲ'' ಅಂತ ರಾಣಿ ಎಂಬುವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  'ಕಥೆಯೊಂದು ಶುರುವಾಗಿದೆ' ಕುರಿತು...

  'ಕಥೆಯೊಂದು ಶುರುವಾಗಿದೆ' ಕುರಿತು...

  ದಿಗಂತ್, ಪೂಜಾ ದೇವರಿಯಾ, ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಾ ಆಂಚನ್ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿರುವ ಚಿತ್ರ 'ಕಥೆಯೊಂದು ಶುರುವಾಗಿದೆ'. ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಚಿತ್ರ ಆಗಸ್ಟ್ 3 ರಂದು ಕರ್ನಾಟಕ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

  English summary
  Have a look at the First Review of Kannada Film Katheyondu Shuruvagidhe from Australia.
  Monday, July 30, 2018, 16:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X