For Quick Alerts
  ALLOW NOTIFICATIONS  
  For Daily Alerts

  'ಮುಗುಳುನಗೆ' ಮೊದಲ ಶೋ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿತ್ತು.!

  By Harshitha
  |

  'ಮುಂಗಾರು ಮಳೆ' ಹಾಗೂ 'ಗಾಳಿಪಟ' ಅಂತಹ ಯಶಸ್ವಿ ಸಿನಿಮಾಗಳನ್ನು ನೀಡಿದ್ದ ಗಣೇಶ್ ಹಾಗೂ ಯೋಗರಾಜ್ ಭಟ್ ಇದೀಗ 'ಮುಗುಳುನಗೆ' ಮೂಲಕ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್ ನ ಹ್ಯಾಟ್ರಿಕ್ ಸಿನಿಮಾ 'ಮುಗುಳುನಗೆ' ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ.

  'ಮುಗುಳುನಗೆ' ಚಿತ್ರದ ಮೊದಲ ಪ್ರದರ್ಶನ ಮುಕ್ತಾಯ ಆಗಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕ ಮಹಾಪ್ರಭುಗಳು 'ಮುಗುಳುನಗೆ' ಬಗ್ಗೆ ಟ್ವಿಟ್ಟರ್ ನಲ್ಲಿ ಮಾಡಿರುವ ಕಾಮೆಂಟ್ ಗಳ ಕಲೆಕ್ಷನ್ ಇಲ್ಲಿದೆ. ನೋಡಿ....

  ಸಖತ್ತಾಗಿದೆ ಸಿನಿಮಾ

  ಸಖತ್ತಾಗಿದೆ ಸಿನಿಮಾ

  ''ಮುಗುಳುನಗೆ ಸಿನಿಮಾ ಸಖತ್ತಾಗಿದೆ. ಸೋನು ನಿಗಮ್ ಹಾಡಿರುವ 'ಮುಗುಳುನಗೆ' ಟ್ರೈಟಲ್ ಟ್ರ್ಯಾಕ್ ಮಿಸ್ ಮಾಡಿಕೊಂಡೆ. ಸಿನಿಮಾ ಇನ್ನೂ ಭಾವನಾತ್ಮಕವಾಗಿರಬೇಕಿತ್ತು'' ಎಂದು ಮನೋಜ್ ಕುಂಬಾರ್ ಎಂಬುವರು ಟ್ವೀಟ್ ಮಾಡಿದ್ದಾರೆ.

  ಹಾರ್ಟ್ ಬ್ರೇಕಿಂಗ್ ಕ್ಲೈಮ್ಯಾಕ್ಸ್

  ಹಾರ್ಟ್ ಬ್ರೇಕಿಂಗ್ ಕ್ಲೈಮ್ಯಾಕ್ಸ್

  ''ಸ್ಟೋರಿ ತುಂಬಾ ಸ್ಲೋ ಅನ್ಸುತ್ತೆ. ಆದ್ರೆ, ಕ್ಲೈಮ್ಯಾಕ್ಸ್ ತುಂಬಾ ಹಾರ್ಟ್ ಬ್ರೇಕಿಂಗ್ ಆಗಿದೆ. ರೋಮ್ಯಾನ್ಸ್ ಮಿಸ್ ಮಾಡಿಕೊಳ್ಳಬೇಡಿ''

  ನಿರೀಕ್ಷೆ ಮಾಡಿರಲಿಲ್ಲ

  ನಿರೀಕ್ಷೆ ಮಾಡಿರಲಿಲ್ಲ

  ''ಮುಗುಳುನಗೆ ಸಿನಿಮಾ ಕ್ಲಾಸಿಕ್ ಆಗಿದೆ. ಇಂತಹ ಕಥಾವಸ್ತುವನ್ನು ನಾನು ನಿರೀಕ್ಷೆ ಮಾಡಿರಲಿಲ್ಲ'' - ಸುನೀಲ್ ಕುಮಾರ್

  ನಗುವುದೋ... ಅಳುವುದೋ...

  ನಗುವುದೋ... ಅಳುವುದೋ...

  ''ಮುಗುಳುನಗೆ' ಸಿನಿಮಾ ನೋಡಿ 'ನಗುವುದೋ ಅಳುವುದೋ ನೀವೇ ಹೇಳಿ...' ಹಾಡು ನೆನಪಾಗುತ್ತಿದೆ'' - ಶಶಿಪ್ರಸಾದ್.ಎಸ್.ಎಂ

  ನಿರಾಸೆ ಆಯ್ತು

  ನಿರಾಸೆ ಆಯ್ತು

  ''ಮುಗುಳುನಗೆ' ಸಿನಿಮಾದಲ್ಲಿ ಟೈಟಲ್ ಸಾಂಗ್ ಇಲ್ಲದೇ ಇರುವುದನ್ನು ನೋಡಿ ನಿರಾಸೆ ಆಯ್ತು. ಅದು ನನ್ನ ಫೇವರಿಟ್ ಟ್ರ್ಯಾಕ್ ಆಗಿತ್ತು'' - ಸ್ಪರ್ಶ.ಆರ್.ಕೆ

  ಗಣೇಶ್ ಅಭಿಮಾನಿಗಳಿಗೆ ಮನರಂಜನೆ

  ಗಣೇಶ್ ಅಭಿಮಾನಿಗಳಿಗೆ ಮನರಂಜನೆ

  ''ಮುಗುಳುನಗೆ' ಸಿನಿಮಾ ಗಣೇಶ್ ಅಭಿಮಾನಿಗಳಿಗೆ ಮನರಂಜನೆ ನೀಡುತ್ತದೆ'' - ನಮ್ಮ ಸಿನಿಮಾ.ಕಾಮ್

  English summary
  Golden Star Ganesh starrer 'Mugulu Nage' has hit the screens today (September 1st). 'Mugulu Nage' is receiving mixed response in Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X