»   » ವಿಮರ್ಶೆ: ಈ ಚಿತ್ರ ನೋಡಿದ್ಮೇಲೆ ಪುಣ್ಯಸ್ನಾನ ಮಾಡಿ

ವಿಮರ್ಶೆ: ಈ ಚಿತ್ರ ನೋಡಿದ್ಮೇಲೆ ಪುಣ್ಯಸ್ನಾನ ಮಾಡಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ವಿವೇಕ್ ಒಬೆರಾಯ್, ಅಫ್ತಾಬ್ ಶಿವದಾಸನಿ ಹಾಗೂ ರಿತೇಶ್ ದೇಶ್ ಮುಖ್ ಅವರ ಮಹಿಳಾ ಅಭಿಮಾನಿಗಳಿಗೆ ಸೂಚನೆ ದಯವಿಟ್ಟು ಚಿತ್ರಮಂದಿರ ಕಡೆ ಸುಳಿಯಬೇಡಿ. ಸುಳಿದರೂ ಕಿವಿಗೆ ಹತ್ತಿ ಇಟ್ಟುಕೊಳ್ಳಿ. ಸೆನ್ಸಾರ್ ಮಂಡಳಿ ಕಣ್ತಪ್ಪಿಸಿ ಡೈಲಾಗ್ ಗಳು ನುಸುಳಿದ್ದಾದರೂ ಹೇಗೆ? ಎಲ್ಲೋ ಗಲ್ಲಿಗಳಲ್ಲಿ ಕುಳಿತು ಗಾಸಿಪ್ ಮಾಡುತ್ತಾ ಛೀಪ್ ಜೋಕ್ಸ್ , ಪಿಜೆಗಳನ್ನು ಹೊರಹಾಕುವ ಪಡ್ಡೆಗಳಿಗೆ ಹೇಳಿ ಮಾಡಿಸಿದ ಚಿತ್ರ ಇದಾಗಿದ್ದು ಕುಟುಂಬ ವರ್ಗ 'ಗ್ರ್ಯಾಂಡ್ ಮಸ್ತಿ' ಪೂರ್ತಿ ಚಿತ್ರ ನೋಡಿದರೆ ಉಸಿರುಗಟ್ಟುವುದು ಗ್ಯಾರಂಟಿ.

ವಯಸ್ಕರ ಚಿತ್ರ, ವಯಸ್ಕರ ಜೋಕ್ ಇಷ್ಟಪಡುವವರಿಗೆ ಮಾತ್ರ ಈ ಚಿತ್ರ ನಿರ್ಮಿಸಿದ್ದರೆ ಪರ್ವಾಗಿಲ್ಲ ಎನ್ನಬಹುದಿತ್ತು. ಆದರೆ, ಹಿಂದಿ ಚಿತ್ರರಂಗದ ಗುಣಮಟ್ಟವನ್ನು ಕುಸಿಯುವಂತೆ ಮಾಡಲು ಪಣತೊಟ್ಟಂತೆ ಈ ಚಿತ್ರ ತೆರೆ ಅಪ್ಪಳಿಸಿದೆ. ಪ್ರೇಕ್ಷಕರಿಗೆ ಮನರಂಜನೆ ಹೆಸರಿನಲ್ಲಿ ಎಲ್ಲೆ ಮೀರಿದ ಹಾಸ್ಯ ತುರುಕಿದರೆ ಚಿತ್ರ ಆಧೋಗತಿ ತಲುಪುತ್ತದೆ ಎಂಬುದಕ್ಕೆ ಈ ಚಿತ್ರ ಉದಾಹರಣೆಯಾಗಬಲ್ಲುದು.

Rating:
1.0/5

ಹಲವು ವಿಮರ್ಶಕರು ಈಗಾಗಲೆ ಈ ಚಿತ್ರವನ್ನು ತಿರಸ್ಕರಿಸಿದ್ದು, ಮಹಿಳೆಯರು ಗೌರವಿಸುವುದಾದರೆ ಈ ಚಿತ್ರ ನೋಡಬೇಡಿ, ನೋಡಿದರೆ ಪುಣ್ಯಸ್ನಾನ ಮಾಡಿಕೊಳ್ಳಿ ಎಂದು ಕಟುವಾಗಿ ಟೀಕಿಸಿದ್ದಾರೆ. ಅದು ದೆಹಲಿ ಅತ್ಯಾಚಾರ ಪ್ರಕರಣ ತೀರ್ಪು ಹೊರ ಬಿದ್ದ ದಿನವೇ ಮಹಿಳೆಯರಿಗೆ ಮಾರಕವಾಗಿರುವ ಚಿತ್ರ ಹೊರಬಿದ್ದಿರುವುದು ದುರಂತ.

ಚಿತ್ರ ನೋಡಿದ ಕರ್ಮಕ್ಕೆ ನಾಲ್ಕು ಅಕ್ಷರ ಬರೆಯೋಣ ಎಂದರೆ ಈ ಚಿತ್ರದಲ್ಲಿ ಬರೀ F***K, 'a***s', b***s ಗೆ ಅವಾಚ್ಯ ಶಬ್ದಗಳೇ ತುಂಬಿದೆ. ಅಪ್ಪಿ ತಪ್ಪಿ ಫ್ಯಾಮಿಲಿ ಜತೆ ಅಥವಾ ಗೆಳತಿ ಜತೆ ಚಿತ್ರ ನೋಡಲು ಹೋದರೆ ಸ್ಸಾರಿ.. ಮಧ್ಯಂತರದೊಳಗೆ ಆಚೆ ಬರದೇ ವಿಧಿಯಿಲ್ಲ. ಹೆಚ್ಚು ಬರಿಯುವ ಮನಸ್ಸು ಇಲ್ಲ.. ನಾಲ್ಕಾರು ಚಿತ್ರಗಳಲ್ಲಿ ಚಿತ್ರದ ಬಗ್ಗೆ ಹೇಳಿ ಮುಗಿಸಿಬಿಡ್ತೀನಿ..

ನಟನೆ ಬಗ್ಗೆ

ಗ್ರ್ಯಾಂಡ್ ಮಸ್ತಿ ಚಿತ್ರಕ್ಕೆ ವಿವೇಕ್ ಒಬೆರಾಯ್, ರಿತೇಶ್ ದೇಶ್ ಮುಖ್ ಅಫ್ತಾಬ್ ಶಿವದಾಸನಿ ಏಕೆ ಸಹಿ ಹಾಕಿದರು ಎಂಬುದು ಇನ್ನೂ ನಿಗೂಢವಾಗಿದೆ. ಕ್ಯಾರೆಕ್ಟರ್ ರಹಿತ ಚಿತ್ರದಲ್ಲಿ ಈ ಮೂವರ ಕ್ಯಾರೆಕ್ಟರ್ ಬಗ್ಗೆ ಮಾತನಾಡಲು ಏನು ಉಳಿದಿಲ್ಲ.

ಮೀತ್, ಪ್ರೇಮ್, ಅಮರ್ SLUTS ಕಾಲೇಜ್ ರೀ ಯೂನಿಯನ್ ಹೆಸರಿನಲ್ಲಿ ಕಾಮ ತೃಪ್ತಿ ಬಯಸುವುದು ಪ್ರೇಕ್ಷಕರಿಗೆ ಮನರಂಜನೆ ಹೆಸರಿನಲ್ಲಿ ನೀಡುವ ಟಾರ್ಚರ್ ಆಗಿದೆ.

ಮಸ್ತಿ ಚಿತ್ರದ ಎರಡನೇ ಭಾಗ

2004ರಲ್ಲಿ ತೆರೆ ಕಂಡು ಯಶಸ್ವಿಯಾಗಿದ್ದ ಒಂದೆರಡು ಒಳ್ಳೆ ಹಾಡುಗಳನ್ನು ಹೊಂದಿದ್ದ ಮಸ್ತಿ ಚಿತ್ರದ ಎರಡನೇ ಭಾಗವಾಗಿ ತೆರೆ ಕಂಡಿರುವ ಗ್ರ್ಯಾಂಡ್ ಮಸ್ತಿ ಚಿತ್ರ ನಿಜಕ್ಕೂ ದುರಂತವಾಗಿದೆ.

ಕಾಲೇಜುಗೂ ಈ ರೀತಿ ಹೆಸರು

ಶ್ರೀ ಲಾಲ್ ಚಂದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಅಂಡ್ ಸೈನ್(SLUTS) ಎಂದು ಹೆಸರು ನೀಡಲಾಗಿದೆ. SLUT ಎಂದರೆ ಏನು ಅರ್ಥ ಎಂಬುದು ಗೂಗಲ್ ನಲ್ಲಿ ಸರ್ಚ್ ಮಾಡಿ ಹುಡುಕಬೇಕಾಗಿಲ್ಲ

ಸ್ಸಾರಿ ಇಂದ್ರಕುಮಾರ್

ದಿಲ್, ಬೇಟಾ ದಂಥ ಚಿತ್ರ ನೀಡಿದ ಇಂದ್ರಕುಮಾರ್ ಧಮಾಲ್(ಕನ್ನಡದಲ್ಲಿ ಮಸ್ತ್ ಮಜಾ ಮಾಡಿ), ಡಬ್ಬಲ್ ಧಮಾಲ್ ಹಾಗೂ ಮಸ್ತಿ ತನಕ ಉತ್ತಮ ಚಿತ್ರಗಳನ್ನು ನೀಡಿದ್ದರು. ಅದರೆ, ಈ ಚಿತ್ರ ಇಂದ್ರಕುಮಾರ್ ಗ್ರೇಡ್ ಕೆಳಗಿಳಿಸಿಬಿಟ್ಟಿದೆ.

ನಟಿಯರಿಗೇನಾಗಿದೆ

ರಿಡೀಫ್ ಜಂಜೀರ್ ಚಿತ್ರದ ನಂತರ ಈ ಚಿತ್ರಕ್ಕೂ ZERO ಸ್ಟಾರ್ ನೀಡಿದೆ. ಹಿಂದೂಸ್ತಾನ್ ಟೈಮ್ಸ್ ಮಹಿಳೆಯರಿಗಾಗಿ ಅಲ್ಲ ಎಂದಿದೆ.

ಈ ಚಿತ್ರದಲ್ಲಿ ಒಬ್ಬ ನಾಯಕಿಯಲ್ಲ ಆರು ಜನ ಇದ್ದಾರೆ.ಬ್ರೂನಾ ಅಬ್ದುಲ್ಲಾ, ಖಾಯನಾತ್ ಅರೋರಾ, ಮರ್ಯಾಂ ಝಕಾರಿಯಾ ಗ್ಲಾಮರ್ ಟಚ್ ಗೆ ಕರೀಷ್ಮಾ ತನ್ನಾ, ಮಂಜರಿ ಫಡ್ನಿಸ್, ಸೊನಾಲಿ ಕುಲಕರ್ಣಿ ಗೃಹಿಣಿ ಪಾತ್ರದಲ್ಲಿದ್ದಾರೆ.

English summary
Grand Masti goes to an extent to suffocate the audience with the cheapest of the cheap jokes. Naughty movies are nice to watch, but something like Grand Masti is a shame to the society, where crimes against women are increasing day to day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada