For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಪ್ರೇಕ್ಷಕರಿಂದ ಫುಲ್ ಮಾರ್ಕ್ ಪಡೆದುಕೊಂಡ ರಾಣಿ ಮುಖರ್ಜಿ

  By Pavithra
  |

  ಕೆಟ್ಟ ಶಿಕ್ಷಕರು ಇರುತ್ತಾರೆ...ಆದರೆ ಕೆಟ್ಟ ಮಕ್ಕಳು ಇರುವುದಿಲ್ಲ... ಇದು ರಾಣಿ ಮುಖರ್ಜಿ ಅಭಿನಯದ ಹಿಚ್ಕಿ ಸಿನಿಮಾದ ಡೈಲಾಗ್. ಮದುವೆ ನಂತರ ರಾಣಿ ಮುಖರ್ಜಿ ಕಮ್ ಬ್ಯಾಕ್ ಮಾಡುತ್ತಿರುವ ಸಿನಿಮಾ ಹಿಚ್ಕಿ. ಹಿಚ್ಕಿ, ಟುರೆಟ್ ಸಿಂಡ್ರೋಮ್ ನಿಂದ ಬಳಲುತ್ತಿರುವ ಶಿಕ್ಷಕಿ ಹಾಗೂ ಆರ್ಥಿಕ ಸಾಮರ್ಥ್ಯದಿಂದ ಕುಗ್ಗಿರುವ ಕುಟುಂಬದಿಂದ ಬಂದ ಮಕ್ಕಳು ಕಥೆ ಮಾತ್ರವಲ್ಲ. ನೋಡುಗರನ್ನ ಕೆಲ ಸಮಯ ನಗಿಸಿ ಮತ್ತಷ್ಟು ಸಮಯ ಕಣ್ಣಿನ ಅಂಚಿನಲ್ಲಿ ನೀರು ತರಿಸುವ ಸಿನಿಮಾ.

  ನೈನಾ ಮಾಥುರ್ ಪಾತ್ರವನ್ನ ನಿರ್ವಹಿಸಿರುವ ರಾಣಿ ಮುಖರ್ಜಿ ಶಿಕ್ಷಕಿ ಕೆಲಸಕ್ಕಾಗಿ ಇಂಟರ್ ವ್ಯೂಗಾಗಿ ಬಂದಿರುತ್ತಾಳೆ. ಸಂದರ್ಶನ ಮಾಡುವವರು ನೈನಾ ರಿಪೋರ್ಟ್ ಕಾರ್ಡ್ ಹಾಗೂ ಡಿಗ್ರಿಗಳನ್ನ ನೋಡಿ ಇಂಪ್ರೆಸ್ ಆಗಿರುತ್ತಾರೆ. ಆದರೆ ನೈನಾ ಮಾಥುರ್, 'ಟುರೆಟ್ ಸಿಂಡ್ರೋಮ್' ನಿಂದ ಬಳಲುತ್ತಿದ್ದಾಳೆ ಎನ್ನುವುದನ್ನ ತಿಳಿದ ನಂತರ ತಮ್ಮ ಶಾಲೆಯಲ್ಲಿ ಕೆಲಸ ನೀಡಲು ನಿರಾಕರಿಸುತ್ತಾರೆ.

  Hichki bollywood movie review

  ರಾಣಿ ಮುಖರ್ಜಿ 'ಹಿಚ್ಕಿ' ಚಿತ್ರವನ್ನು ಮೆಚ್ಚಿದ ಶಿಕ್ಷಕಿಯರುರಾಣಿ ಮುಖರ್ಜಿ 'ಹಿಚ್ಕಿ' ಚಿತ್ರವನ್ನು ಮೆಚ್ಚಿದ ಶಿಕ್ಷಕಿಯರು

  ನಂತರ ಒಂದಿಷ್ಟು ಮಾತುಕಥೆಯ ನಂತರ ನೈನಾ ಮಾಥುರ್ ಆರ್ಥಿಕವಾಗಿ ಹಿಂದುಳಿದ ಮತ್ತು ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳಿಗೆ ಶಿಕ್ಷಕಿಯಾಗಿ ನೇಮಕ ಆಗುತ್ತಾಳೆ. ಆ ಮಕ್ಕಳ ಭವಿಷ್ಯವನ್ನ ನೈನಾ ಹೇಗೆ ರೂಪಿಸುತ್ತಾಳೆ ಎನ್ನುವುದೇ ಸಿನಿಮಾದ ಇಂಟ್ರೆಸ್ಟಿಂಗ್ ವಿಚಾರ.

  ರಾಣಿ ಮುಖರ್ಜಿ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗುವುದು ಗ್ಯಾರೆಂಟಿ. ಹಿಚ್ಕಿ ಸಿದ್ದಾರ್ಥ್ ಪಿ ಮಲ್ಹೋತ್ರಾ ನಿರ್ದೇಶನದ ಚೊಚ್ಚಲ ಸಿನಿಮಾ. ಸಿದ್ದಾರ್ಥ್ ಮೊದಲ ಚಿತ್ರದಲ್ಲೇ ತಮ್ಮ ಉತ್ತಮ ನಿರ್ದೇಶನದಿಂದ ಬಿಟೌನ್ ಅಂಗಳದಲ್ಲಿ ಭರವಸೆಯ ಡೈರೆಕ್ಟರ್ ಆಗಿ ಉಳಿದುಕೊಳ್ಳುವ ಸೂಚನೆ ನೀಡಿದ್ದಾರೆ. ಚಿತ್ರದಲ್ಲಿ ಕಥೆ ಮತ್ತು ಅಭಿನಯದ ಜೊತೆಯಲ್ಲಿ ಕಾಸ್ಟಿಂಗ್ ಕೂಡ ಅದ್ಬುತವಾಗಿದೆ.

  Hichki bollywood movie review

  ಕೆಲ ಸೀನ್ ಗಳಲ್ಲಿ ಮಾತ್ರ ಕೊಂಚ ಬೇಸರ ಎನ್ನಿಸಿದರೂ ಹಿಚ್ಕಿ ಫೀಲ್ ಗುಡ್ ಸಿನಿಮಾ ಎನ್ನುವುದರಲ್ಲಿ ಬೇರೆ ಮಾತಿಲ್ಲ. ರಾಣಿ ಮುಖರ್ಜಿ ಅಭಿಮಾನಿಗಳಗಂತು ಚಿತ್ರದ ನೋಡಿ ಸಂತೋಷದಿಂದ ಸಿನಿಮಾ ಮಂದಿರದಿಂದ ಹೊರಬರ್ತಾರೆ.

  English summary
  Bollywood actress Rani Mukarji starrer Hichki movie review, Hichki cinema is getting a good response everywhere .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X