For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: 440 ವೋಲ್ಟ್ ನಲ್ಲಿ ಅಬ್ಬರಿಸಿದ ಹರ್ಯಾಣದ 'ಸುಲ್ತಾನ್'

  By ಸೋನು ಗೌಡ
  |

  ಈದ್ ಹಬ್ಬಕ್ಕೆ ಭಾಯ್ ಜಾನ್ ಸಲ್ಮಾನ್ ಖಾನ್ ಚಿತ್ರಗಳು ಬಿಡುಗಡೆ ಆಗಿ ಈಗಾಗಲೇ ಬಾಕ್ಸಾಫೀಸ್ ಸುಲ್ತಾನ ಆಗಿದ್ದಾರೆ. ಇದೀಗ ಇಂದು ಕೂಡ ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮಾ ಜೋಡಿ 'ಸುಲ್ತಾನ್' ಚಿತ್ರದ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಿದೆ.

  ಪ್ರಮುಖವಾಗಿ 'ಸುಲ್ತಾನ್' ಚಿತ್ರದಲ್ಲಿ ಕುಸ್ತಿಪಟು ಬಗ್ಗೆ ಕಥೆ ಇದೆಯಾದರೂ ಇದರಲ್ಲಿ ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಐಟಂಗಳು ಲಭಿಸಿವೆ. ಡ್ಯಾನ್ಸ್, ರೋಮ್ಯಾನ್ಸ್, ಕಲರ್ ಫುಲ್ ಹಾಡು, ಪವರ್ ಫುಲ್ ಡೈಲಾಗ್ ಮತ್ತು ಆಕ್ಷನ್ ಇರುವ ಸುಲ್ತಾನ್ ಪಕ್ಕಾ ಪೈಸಾ ವಸೂಲ್ ಸಿನಿಮಾ ಆಗಿದೆ.[ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸಕ್ಸಸ್ ಹಿಂದಿನ ಸೂತ್ರ]

  ಫಸ್ಟ್ ಡೇ ಫಸ್ಟ್ ಶೋ ನೋಡಿದ ಅಭಿಮಾನಿಗಳ ಏನಂತಾರೇ ಅನ್ನೋದನ್ನ ನೋಡಿ ಈ ವಿಡಿಯೋದಲ್ಲಿ...

  ಖ್ಯಾತ ಕುಸ್ತಿಪಟು ಆಗಿರುವ ಸುಲ್ತಾನ್ ಆಲಿ ಖಾನ್ (ಸಲ್ಮಾನ್ ಖಾನ್) ಗೆ ಒಲಂಪಿಕ್ಸ್ ಮಲ್ಲಯುದ್ಧದಲ್ಲಿ ಭಾರತವನ್ನು ಪ್ರತಿನಿಧಿಸಿ ಬಂಗಾರದ ಪದಕ ಗೆಲ್ಲಬೇಕು ಎಂಬ ಒಂದೇ ಒಂದು ದೊಡ್ಡ ಕನಸು ಇರುತ್ತದೆ. ಮುಂದೇನಾಗುತ್ತದೆ ಚಿತ್ರದ ಸಂಪೂರ್ಣ ವಿಮರ್ಶೆ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ...

  Rating:
  3.0/5

  ಚಿತ್ರ : ಸುಲ್ತಾನ್
  ನಿರ್ದೇಶಕ : ಆಲಿ ಅಬ್ಬಾಸ್ ಜಾಫರ್
  ಸಂಗೀತ: ವಿಶಾಲ್ ಶೇಖರ್
  ನಿರ್ಮಾಣ: ಆದಿತ್ಯ ಚೋಪ್ರಾ ಮತ್ತು ಯಶ್ ರಾಜ್ ಬ್ಯಾನರ್
  ತಾರಾಗಣ: ಸಲ್ಮಾನ್ ಖಾನ್, ಅನುಷ್ಕಾ ಶರ್ಮಾ, ರಣದೀಪ್ ಹೂಡಾ, ಸುಜಿ ಖಾನ್, ಅಮಿತ್ ಸದಾ ಮತ್ತು ಇತರರು.
  ಬಿಡುಗಡೆ: ಜುಲೈ 6.

  'ಸುಲ್ತಾನ್' ಕಥಾ ಹೂರಣ

  'ಸುಲ್ತಾನ್' ಕಥಾ ಹೂರಣ

  ಹರ್ಯಾಣದಿಂದ ಬಂದಿರುವ ಸುಲ್ತಾನ್ ಆಲಿ ಖಾನ್ (ಸಲ್ಮಾನ್ ಖಾನ್) ಎಂಬ ಕುಸ್ತಿಪಟುಗೆ ಒಲಂಪಿಕ್ಸ್ ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಬೇಕು ಎಂಬ ಕನಸು ಇರುತ್ತದೆ. ಸಣ್ಣ ಪಟ್ಟಣದ ಕುಸ್ತಿಪಟು ಆಗಿರೋದ್ರಿಂದ, ಕುಸ್ತಿ ಬಗ್ಗೆ ಪ್ರೊಫೆಷನಲ್ ಐಡಿಯಾ ಸುಲ್ತಾನ್ ಗೆ ಇರೋದಿಲ್ಲ. ಆದರೂ 2010 ರಲ್ಲಿ ದೆಹಲಿಯಲ್ಲಿ ನಡೆಯುವ ಕಾಮನ್ ವೆಲ್ತ್ ಗೇಮ್ ಗೆದ್ದು, ಇಸ್ತಾಂಬುಲ್ ನಲ್ಲಿ ನಡೆಯುವ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲೂ ಪ್ರಶಸ್ತಿ ಬರುತ್ತೆ. ಆದ್ರೂ ಲಂಡನ್ ನಲ್ಲಿ ನಡೆಯುವ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಬೇಕು ಎಂಬ ಕನಸು ಕಟ್ಟಿಕೊಂಡಿರುತ್ತಾರೆ.[ಹರ್ಯಾಣದ 'ಸುಲ್ತಾನ್' ಸಲ್ಲೂಗೆ ಟ್ವಿಟ್ಟರಲ್ಲಿ 'ಅಪಮಾನ್']

  ಕ್ಯೂಟ್ ಲವ್ ಸ್ಟೋರಿ

  ಕ್ಯೂಟ್ ಲವ್ ಸ್ಟೋರಿ

  ಈ ನಡುವೆ ಸುಲ್ತಾನ್ ಆಲಿ ಖಾನ್ ಗೆ 'ಅರಫಾ' (ಅನುಷ್ಕಾ ಶರ್ಮಾ) ಎಂಬ ಹುಡುಗಿ ಪರಿಚಯ ಆಗುತ್ತದೆ. ಅರಫಾ ಕೂಡ ಹರ್ಯಾಣದ ಮಹಿಳಾ ಕುಸ್ತಿಪಟು ಆಗಿರುತ್ತಾರೆ. ಇವರಿಬ್ಬರು ಒಂದೇ ಫೀಲ್ಡ್ ನಲ್ಲಿ ಇರೋದ್ರಿಂದ ತನಗೆ ಅರಫಾ ಸರಿ ಹೊಂದುತ್ತಾಳೆ ಎಂದು ಸುಲ್ತಾನ್ ಅರಫಾ ಹಿಂದೆ ಹೋಗುತ್ತಾನೆ. ಹೇಗೋ ಅರಫಾ ಕೂಡ ಒಪ್ಪಿಕೊಂಡು ಇಬ್ಬರಿಗೂ ಪ್ರೀತಿ ಹುಟ್ಟುತ್ತದೆ.[ರಿಲೀಸ್ ಗೆ ಇನ್ನೂ 2 ದಿನ ಇದೆ, 'ಸುಲ್ತಾನ್' ಟಿಕೆಟ್ ಸೋಲ್ಡ್ ಔಟ್]

  ಪ್ರೇಮಿಗಳ ಮಧ್ಯೆ ಬಿರುಕು

  ಪ್ರೇಮಿಗಳ ಮಧ್ಯೆ ಬಿರುಕು

  ಈ ನಡುವೆ ಕಾಮನ್ ವೆಲ್ತ್ ಮತ್ತು ವಿಶ್ವ ಚಾಂಪಿಯನ್ ಶಿಪ್ ಪದಕ ಗೆದ್ದುಕೊಂಡ ಸುಲ್ತಾನ್ ಗೆ ಸ್ಟಾರ್ ಎಂಬ ಅಮಲು ನೆತ್ತಿಗೇರುತ್ತೆ. ಆದರೂ ಆರಫಾ ಸುಲ್ತಾನ್ ಗೆ ವಾರ್ನ್ ಮಾಡುತ್ತಾಳೆ. ಇದನ್ನು ಸುಲ್ತಾನ್ ಕ್ಯಾರೆ ಅನ್ನೋದಿಲ್ಲ. ಇದು ಅರಫಾ ಮತ್ತು ಸುಲ್ತಾನ್ ನಡುವೆ ಸಣ್ಣಮಟ್ಟಿನ ಬಿರುಕು ಮೂಡಲು ಕಾರಣವಾಗುತ್ತದೆ.['ರೇಪ್ ಆದ ಮಹಿಳೆ ಪರಿಸ್ಥಿತಿ ನನ್ನದಾಗಿತ್ತು': ಸಲ್ಲು ವಿವಾದಾತ್ಮಕ ಹೇಳಿಕೆ]

  ಸಣ್ಣ ಟ್ವಿಸ್ಟ್

  ಸಣ್ಣ ಟ್ವಿಸ್ಟ್

  ಈ ಮಧ್ಯೆ ಒಂದು ನಡೆಯಬಾರದ ಘಟನೆ ನಡೆದು, ಸುಲ್ತಾನ್ ನ ಸಂತಸದ ಜೀವನ ಬಿಕೋ ಎನ್ನುತ್ತದೆ. ಅಷ್ಟಕ್ಕೂ ಏನು 'ಆ' ಘಟನೆ, ಮತ್ತೆ ಬೇರೆ-ಬೇರೆ ಆಗಿರುವ ಪ್ರೇಮಿಗಳಿಬ್ಬರು ಒಂದಾಗ್ತಾರ?, ಸುಲ್ತಾನ್ ಗೆ ಲಂಡನ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಸಿಗುತ್ತಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹತ್ತಿರದ ಥಿಯೇಟರ್ ನಲ್ಲಿ ದೊರೆಯುತ್ತದೆ.

  ಸಲ್ಮಾನ್ ಖಾನ್ ನಟನೆ

  ಸಲ್ಮಾನ್ ಖಾನ್ ನಟನೆ

  ನಟ ಸಲ್ಮಾನ್ ಖಾನ್ ಅವರು ಕುಸ್ತಿಪಟು ಪಾತ್ರಕ್ಕೆ ಅಕ್ಷರಶಃ ಪರಕಾಯ ಪ್ರವೇಶ ಮಾಡಿ ಅಬ್ಬರಿಸಿದ್ದಾರೆ. ಮಾತ್ರವಲ್ಲದೇ ಸಲ್ಮಾನ್ ಖಾನ್ ಅವರು ತಮ್ಮ ಪಾತ್ರದ ಮೂಲಕ ಎಲ್ಲರ ಕಣ್ಣಂಚಲ್ಲಿ ನೀರು ಬರುವಂತೆ ಮಾಡಿದ್ದಾರೆ. ಸೆಕೆಂಡ್ ಹಾಫ್‌ ನಲ್ಲಿ ನೀವು ಹಾರ್ಡ್ ವರ್ಕರ್ ಸಲ್ಮಾನ್ ಖಾನ್ ಅವರನ್ನು ಕಾಣಬಹುದು. ಸಲ್ಮಾನ್ ಖಾನ್ ಅವರು 'ಹರ್ಯಾಣವಿ' ಭಾಷೆಯನ್ನು ಸಖತ್ ಫ್ಲುಯೆಂಟ್ ಆಗಿ ಮಾತನಾಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

  ನಟಿ ಅನುಷ್ಕಾ ಶರ್ಮಾ/ರಣದೀಪ್ ಹೂಡಾ

  ನಟಿ ಅನುಷ್ಕಾ ಶರ್ಮಾ/ರಣದೀಪ್ ಹೂಡಾ

  ನಟಿ ಅನುಷ್ಕಾ ಶರ್ಮಾ ಅವರು ಕೂಡ ತಮ್ಮ ನಟನೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಹಿಳಾ ಕುಸ್ತಿಪಟುವಾಗಿ ಕಾಣಿಸಿಕೊಂಡು ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ನಟ ರಣದೀಪ್ ಹೂಡಾ ಅವರು ಸಲ್ಮಾನ್ ಅವರ ಕೋಚ್ ಆಗಿ ನಟಿಸಿದ್ದು, ತಮ್ಮ ಪಾತ್ರವನ್ನು ಸರಿಯಾಗಿ ನಿಭಾಯಿಸಿದ್ದಾರೆ.

  ಪ್ಲಸ್/ಮೈನಸ್

  ಪ್ಲಸ್/ಮೈನಸ್

  ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಅವರು ಒಂದೊಳ್ಳೆ ಸಿನಿಮಾ ನೀಡಿದ್ದಾರೆ. ಕೆಲವೊಂದು ದೃಶ್ಯಗಳು ಅತ್ಯಂತ ಹೆಚ್ಚು ನಾಟಕೀಯವಾಗಿತ್ತು ಅನ್ನೋದು ಬಿಟ್ಟರೆ, ಮಿಕ್ಕಂತೆ ಇಡೀ ಸಿನಿಮಾ ಪ್ರೇಕ್ಷಕರನ್ನು ಕೊಂಚ ಕೂಡ ಬೋರಾಗದಂತೆ ನೋಡಿಸಿಕೊಂಡು ಹೋಗುತ್ತದೆ.

  ಕೊನೆಯ ಮಾತು

  ಕೊನೆಯ ಮಾತು

  ಖಂಡಿತ ಎಲ್ಲರೂ ನೋಡಲೇಬೇಕಾದ ಸಿನಿಮಾ. ಸಮಾಜಕ್ಕೆ ಉತ್ತಮ ಸಂದೇಶದ ಜೊತೆಗೆ ಒಳ್ಳೆ ಮನರಂಜನೆ ಕೂಡ ದೊರೆಯುತ್ತದೆ. ಒಟ್ನಲ್ಲಿ ಈದ್ ಗೆ ಒಂದೊಳ್ಳೆ ಗಿಫ್ಟ್ ಸಿಕ್ಕಿದ್ದು, ಮತ್ತೆ ರಂಜಾನ್ ಹಾಗೂ ಸಲ್ಮಾನ್ ಖಾನ್ ಅವರ ಕಾಂಬಿನೇಷನ್ ಸೂಪರ್-ಡೂಪರ್ ಹಿಟ್ ಆಗಿದೆ.

  English summary
  'Sultan' Hindi Movie Review, A Hindi Movie directed by Ali Abbas Zafar. Hindi Actor Salman Khan, Bollywood Actress Anushka Sharma in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X