»   » ವಿಮರ್ಶೆ : ಆರು ಹುಡುಗರ 'ಜಿಂದಾ' ಒಮ್ಮೆ ನೋಡಲು ಅಡ್ಡಿಯಿಲ್ಲ

ವಿಮರ್ಶೆ : ಆರು ಹುಡುಗರ 'ಜಿಂದಾ' ಒಮ್ಮೆ ನೋಡಲು ಅಡ್ಡಿಯಿಲ್ಲ

Posted By:
Subscribe to Filmibeat Kannada

'ಜಿಂದಾ' 1979-80 ರಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ. ಆರು ಪೊರ್ಕಿ ಹುಡುಗರು, ಅವರ ಸ್ನೇಹ, ಪ್ರೀತಿ, ಕಳ್ಳತನ, ಕೊಲೆ, ಇವೆಲ್ಲಾ 'ಜಿಂದಾ' ಸಿನಿಮಾದ ಪ್ರಮುಖ ಅಂಶಗಳು. ಒಬ್ಬ ಹುಡುಗಿಯ ಪ್ರೀತಿಗಾಗಿ ಆ ಹುಡುಗರ ಅಪ್ಪಟ ಸ್ನೇಹ ಯಾವ ಮಟ್ಟಕ್ಕೆ ಕ್ರೌರ್ಯವಾಗಿ ಬದಲಾಗುತ್ತದೆ ಎಂಬುದು 'ಜಿಂದಾ' ಚಿತ್ರದ ಒನ್ ಲೈನ್ ಸ್ಟೋರಿ.

Rating:
3.0/5

ಚಿತ್ರ: ಜಿಂದಾ

ನಿರ್ಮಾಣ: ದತ್ತಾತ್ರೇಯ ಬಚ್ಚೇಗೌಡ

ನಿರ್ದೇಶನ: ಮುಸ್ಸಂಜೆ ಮಹೇಶ್

ಸಂಗೀತ: ಶೀಧರ್ ವಿ. ಸಂಭ್ರಮ್

ಸಂಕಲನ: ರವಿಚಂದ್ರನ್

ಚಿತ್ರಕಥೆ, ಸಂಭಾಷಣೆ: ಮುಸ್ಸಂಜೆ ಮಹೇಶ್

ತಾರಾಗಣ: ದೇವರಾಜ್, ಮೇಘನಾ ರಾಜ್, ಯುವರಾಜ್, ಅರುಣ್, ಲೋಕಿ, ಕೃಷ್ಣ, ಅನಿರುದ್ಧ, ಮತ್ತು ಇತರರು

ಬಿಡುಗಡೆ ದಿನಾಂಕ: ಜೂನ್ 9, 2017

ಕಥೆಯ ಎಳೆ ಚೆನ್ನಾಗಿದೆ

'ಜಿಂದಾ' ಎನ್ನುವುದು ಆರು ಹುಡುಗರ ಗುಂಪಿನ ಹೆಸರು. ಆರು ಹುಡುಗರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆಪ್ತಮಿತ್ರರಾಗಿರುತ್ತಾರೆ. ಇಂತಹ ಇವರ ಸ್ನೇಹ ಒಂದು ಹುಡುಗಿಯ ಪ್ರೀತಿಯಿಂದ ಕೊಲೆ ಮಾಡುವ ಮಟ್ಟಕ್ಕೆ ಬರುತ್ತದೆ. ಕುರುಡು ಪ್ರೀತಿಯಿಂದ ಏನೆಲ್ಲಾ ಅನಾಹುತ ಸಂಭವಿಸುತ್ತದೆ ಎಂಬುದು ಚಿತ್ರದ ಕಥಾ ಹಂದರ.

ಕಳ್ಳತನ ಮಾಡುವ ಹುಡುಗರು

'ಜಿಂದಾ' ಗ್ಯಾಂಗ್ ಹುಡುಗರು ಕಳ್ಳತನ ಮಾಡಿ ಬದುಕುತ್ತಿರುತ್ತಾರೆ. ಆ ಹುಡುಗರ ಪೈಕಿ ಸ್ಕೂಲ್ ಪಾಸ್ ಆಗಿ ಅಶೋಕ್ (ಯುವರಾಜ್) ಕಾಲೇಜು ಮೆಟ್ಟಿಲೇರುತ್ತಾನೆ. ಪಾಸ್ ಆದ ತಮ್ಮ ಸ್ನೇಹಿತ ಆಫೀಸರ್ ಆಗಬೇಕು ಎಂದು ಉಳಿದ ಸ್ನೇಹಿತರು ಕಷ್ಟ ಪಡುತ್ತಾರೆ.

ಪ್ರೀತಿ ಗೀತಿ ಇತ್ಯಾದಿ..

ಕಾಲೇಜಿ ಸೇರಿದ ಅಶೋಕ (ಯುವರಾಜ್) ಮತ್ತು ಶೀತಲ್ (ಮೇಘನಾ ರಾಜ್) ಲವ್ ಮಾಡುತ್ತಾರೆ. ಈ ವಿಷಯ ತಿಳಿದ ಮೇಲೆ ಉಳಿದ ಸ್ನೇಹಿತರೇ ಅಶೋಕ್ ಪ್ರೀತಿಗೆ ವಿಲನ್ ಆಗುತ್ತಾರೆ.

ಸ್ನೇಹನಾ.... ಪ್ರೀತಿನಾ.....

ಒಂದು ಕಡೆ ಪ್ರೀತಿಸಿದ ಹುಡುಗಿ, ಇನ್ನೊಂದು ಕಡೆ ಸ್ನೇಹಿತರು... ಇಬ್ಬರಲ್ಲಿ ಯಾರು..? ಅಂತ ನಾಯಕ ತಲೆ ಕೆಡಿಸಿಕೊಂಡು ತನ್ನ ಪ್ರೇಯಸಿಯನ್ನೇ ಆಯ್ಕೆ ಮಾಡುತ್ತಾನೆ.

ಸ್ನೇಹಿತರ ಸವಾಲ್

ಪ್ರೀತಿಸಿದ ಹುಡುಗಿಗಾಗಿ ತಮ್ಮ ಸ್ನೇಹಿತರ ವಿರುದ್ಧವೇ ನಾಯಕ ಸವಾಲ್ ಹಾಕುತ್ತಾನೆ. ಕೊನೆಗೆ ಇದು ಕೊಲೆ ಮಾಡುವ ಮಟ್ಟಕ್ಕೆ ಹೋಗುತ್ತದೆ. ಒಂದು ಹುಡುಗಿಯ ಪ್ರೀತಿ ಆರು ಹುಡುಗರ ಅಂತ್ಯಕ್ಕೆ ನಾಂದಿ ಆಗುತ್ತದೆ.

ಅಭಿನಯ

ಸಿನಿಮಾದಲ್ಲಿ ಆರು ಹಳ್ಳಿ ಹುಡುಗರಾಗಿ ಯುವರಾಜ್, ಅರುಣ್, ಲೋಕಿ, ಕೃಷ್ಣ, ಅನಿರುದ್ಧ, ಕಾಣಿಸಿಕೊಂಡಿದ್ದು, ಎಲ್ಲರ ಅಭಿನಯ ಸಹಜವಾಗಿದೆ. ಆದರೆ ನಾಯಕ ಯುವರಾಜ್ ಎಮೋಷನಲ್ ಸೀನ್ ಗಳಲ್ಲಿ ಇನ್ನು ಚೆನ್ನಾಗಿ ಅಭಿನಯಿಸಬಹುದಾಗಿತ್ತು.

ದೇವರಾಜ್ ಖದರ್

ಇಡೀ ಸಿನಿಮಾದ ಕೀ ರೋಲ್ ಅಂದ್ರೆ ಎಸಿಪಿ ಆನಂದ್ ಕುಮಾರ್ ಆಗಿ ಕಾಣಿಸಿಕೊಂಡಿರುವ ದೇವರಾಜ್ ಪಾತ್ರ. ಈ ಪಾತ್ರದಿಂದ ಸಿನಿಮಾ ದೊಡ್ಡ ತಿರುವು ಪಡೆಯುತ್ತದೆ. ಪೊಲೀಸ್ ಆಗಿರುವ ದೇವರಾಜ್ ಖದರ್ ಜೋರಾಗಿದೆ.

ಹಳ್ಳಿ ಹುಡುಗಿ ಮೇಘನಾ

ಮೇಘನಾ ರಾಜ್ ಇಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಸಿನಿಮಾದಲ್ಲಿ ಅವರ ಪಾತ್ರಕ್ಕೆ ತುಂಬ ಪ್ರಾಮುಖ್ಯತೆ ಇದೆ. ಸಿನಿಮಾದ ಕ್ಲೈಮ್ಯಾಕ್ ನಲ್ಲಿ ಮೇಘನಾ ನಟನೆಯನ್ನು ಎಂಥವರೂ ಸಹ ಇಷ್ಟ ಆಗಿ ಬಿಡುತ್ತೆ.

ವಿವಾದ ಹುಟ್ಟಿಸಿದ್ದ ಡೈಲಾಗ್

ವಿವಾದ ಹುಟ್ಟಿಸಿದ್ದ ಮೇಘನಾ ರಾಜ್ ಡೈಲಾಗ್ ಸಿನಿಮಾದಲ್ಲಿಯೂ ಇದೆ. ಆದರೆ ಅದು ಸಂದರ್ಭಕ್ಕೆ ತಕ್ಕಂತಿದೆ.

ಉಳಿದವರ ಪಾತ್ರ

ಶ್ರೀನಿವಾಸ್ ಮೂರ್ತಿ, ಸುಂದರ್ ರಾಜ್, ಪ್ರಮಿಳಾ ಜೋಷಾಯಿ, ರಾಜು ತಾಳಿಕೋಟೆ, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ನಿರ್ದೇಶನ

ಮುಸ್ಸಂಜೆ ಮಹೇಶ್ ನಿರ್ದೇಶನ ಅಚ್ಚುಕಟ್ಟಾಗಿದೆ. ಚಿತ್ರಕಥೆ ಇನ್ನಷ್ಟೂ ಚುರುಕಾಗಿದ್ದು, ಕಾಮಿಡಿ ಇದ್ದಿದ್ದರೆ ನೋಡುಗರಿಗೆ ಬೋರ್ ಆಗುತ್ತಿರಲಿಲ್ಲ.

ಸಂಗೀತ ಮತ್ತು ಕ್ಯಾಮರಾ

ಸಿನಿಮಾದಲ್ಲಿನ ಹಾಡುಗಳು ಪದೇ ಪದೇ ಕೇಳಬೇಕು ಅಂತ ಅನಿಸುವುದಿಲ್ಲ.. ಒಂದು ಹಾಡು ಪರವಾಗಿಲ್ಲ. ಆದರೆ ಹಳ್ಳಿ ಸೌಂದರ್ಯವನ್ನು ನಾಗೇಶ್ ಆಚಾರ್ಯ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಒಂದು ಸಲ ನೋಡಬಹುದು

ರಿಯಲ್ ಕಥೆ ಆಗಿರುವುದರಿಂದ ಒಂದು ಸಲ ಸಿನಿಮಾ ಆರಾಮಾಗಿ ನೋಡಬಹುದು.

English summary
Meghana raj starrer Kannada Movie 'Jindaa' has hit the screens today (June 9th). The movie is out and out action and Romantic Entertainer. 'Jindaa' Review is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada