For Quick Alerts
  ALLOW NOTIFICATIONS  
  For Daily Alerts

  ಭಟ್ಟರ 'ಪರಪಂಚ'ದೊಳಗೆ ವಿಮರ್ಶಕರಿಗೆ ಕಂಡದ್ದೇನು?

  By Suneetha
  |

  ನಿರ್ದೇಶಕ ಕಮ್ ನಿರ್ಮಾಪಕ ಯೋಗರಾಜ್ ಭಟ್ ನಿರ್ಮಿಸಿರುವ ನಿರ್ದೇಶಕ ಕ್ರಿಶ್ ಜೋಷಿ ಆಕ್ಷನ್-ಕಟ್ ಹೇಳಿರುವ 'ಪರಪಂಚ' ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ(ಜನವರಿ 15) ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ.

  ನಿರ್ದೇಶಕ ಯೋಗರಾಜ್ ಭಟ್ರು ನಟಿಸಿರುವ, ಜೊತೆಗೆ ಅವರ ನೆಚ್ಚಿನ ತಾರಾಬಳಗವೇ ಇರುವ 'ಪರಪಂಚ' ಸಿನಿಮಾದಲ್ಲಿ ಒಂದು ಬಾರನ್ನೇ ತಂದು ನಿಲ್ಲಿಸಿದ್ದಾರೆ ನಿರ್ದೇಶಕರು. ಇನ್ನು 'ಪರಪಂಚ' ಎಂಬ ಬಾರಿನಲ್ಲಿ ವಿಭಿನ್ನ ರೀತಿಯ ಕ್ಯಾರೆಕ್ಟರ್ ಗಳು ನಿಮಗೆ ಸಿಗಲಿದ್ದು, ಅವರೆಲ್ಲರ ಕಥೆ-ವ್ಯಥೆ, ಗೋಳು, ಕಷ್ಟ-ಸುಖ ಎಲ್ಲವೂ ತುಂಬಿ ತುಳುಕುತ್ತದೆ.[ಕಥೆ ವ್ಯಥೆ, ಕಷ್ಟ ಸುಖಗಳ ಡಿಕ್ಷನರಿಯೇ ಭಟ್ಟರ 'ಪರಪಂಚ'!]

  ಕುಡಿತದ ಚಟ ಮನುಷ್ಯನ ಬಾಳನ್ನು ಹಾಳು ಮಾಡುತ್ತದೆ [ಕುಡಿತದ ಚಟ ಬಿಡಿಸುವ ಎದ್ದೇಳು ಮಂಜುನಾಥ ಚಿತ್ರವಿಮರ್ಶೆ ] ಅದರಿಂದ ಇಡೀ ಸಮಾಜಕ್ಕೂ ತುಂಬಾ ತೊಂದರೆ ಎಂಬ ಸಂದೇಶವನ್ನು ಹೊತ್ತಿರುವ ಭಟ್ಟರ 'ಪರಪಂಚ'ಕ್ಕೆ ನಮ್ಮ ಖ್ಯಾತ ವಿಮರ್ಶಕರು ವಿಭಿನ್ನವಾಗಿ ರೆಸ್ಪಾನ್ಸ್ ಮಾಡಿದ್ದಾರೆ.

  ಕನ್ನಡದ ಖ್ಯಾತ ವಿಮರ್ಶಕರು ಏನಂದ್ರು?, ಅವರ ಅಭಿಪ್ರಾಯ ಏನು?, 'ಪರಪಂಚ'ದಲ್ಲಿರುವ ಪ್ರಪಂಚಕ್ಕೆ ವಿಮರ್ಶಕರು ಮನಸೋತ್ರಾ ಅಂತ ನಾವು ಹೇಳ್ತೀವಿ, ವಿಮರ್ಶೆಗಳ ಕಲೆಕ್ಷನ್ಸ್ ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...

  'ವೈನಾಗಿ ವೇದಾಂತ ಹೇಳುವವರ ಅಡ್ಡಾ' - ವಿಜಯ ಕರ್ನಾಟಕ

  'ವೈನಾಗಿ ವೇದಾಂತ ಹೇಳುವವರ ಅಡ್ಡಾ' - ವಿಜಯ ಕರ್ನಾಟಕ

  ಬದುಕಿನ ವಾಸ್ತವಗಳನ್ನು ಹೇಳಲು ನಿರ್ದೇಶಕ ಕ್ರಿಷ್ ಜೋಶಿ ಬಾರ್ ಅನ್ನು ಆಯ್ದುಕೊಂಡಿದ್ದಾರೆ. ಮನರಂಜನೆಯ ಮೂಲಕ ಹಾಗೂ ಲೈಟ್ ಆದ ಧಾಟಿಯಲ್ಲಿ ಕಟು ಸತ್ಯಗಳನ್ನು ಅರಹುವ ಕೆಲಸ ಮಾಡಿದ್ದಾರೆ. ಕಲ್ಪನೆಯೇನೊ ತುಂಬ ಚೆನ್ನಾಗಿದೆ. ಪ್ರಯತ್ನವೂ ಒಪ್ಪಿಕೊಳ್ಳುವಂಥದ್ದೆ. ಆದರೆ ಮೊದಲರ್ಧದಲ್ಲಿ ಪದೇ ಪದೇ ಬಾರ್‌ನ ದೃಶ್ಯಗಳು ಹಾಗೂ ಒಂದೇ ಸವನೇ ಜಡಿಮಳೆಯಂತೆ ಸುರಿಯುವ ಸಂಭಾಷಣೆಗಳಿಂದಾಗಿ ಬಾರ್ ಎಂದರೆ ಬೋರೋ ಬೋರು ಎಂದು ಪ್ರೇಕ್ಷಕ ಉಸುರಿದರೆ ಅದು ಅವನ ತಪ್ಪಲ್ಲ. - ಮಹಾಂತೇಶ ಬಹಾದುಲೆ.[ಈ ಹಾಡು ಕೇಳ್ಲೇಬೇಕು! ಇದು ಹುಚ್ಚ ವೆಂಕಟ್ ಆರ್ಡರ್!]

  'ನೀ ಬಾರಿನೊಳಗೋ ಬಾರು ನಿನ್ನೊಳಗೋ' - ವಿಜಯವಾಣಿ

  'ನೀ ಬಾರಿನೊಳಗೋ ಬಾರು ನಿನ್ನೊಳಗೋ' - ವಿಜಯವಾಣಿ

  ಇದು ಊರು ಬಿಟ್ಟವರ ‘ಪರಪಂಚ'. ಒಬ್ಬೊಬ್ಬರದು ಒಂದೊಂದು ಕಥೆ. ಎಲ್ಲದರಲ್ಲೂ ಹತ್ತಾರು ವ್ಯಥೆ. ಈ ಗೋಳಿನ ಕಥಾ ಸರಪಳಿಯನ್ನು ಚಿತ್ರದ ಪ್ಲಸ್ ಪಾಯಿಂಟ್ ಎನ್ನಬೇಕೋ ಅಥವಾ ಮೈನಸ್ ಪಾಯಿಂಟ್ ಎನ್ನಬೇಕೋ ಪ್ರೇಕ್ಷಕರಿಗೆ ಬಿಟ್ಟಿದ್ದು. ಪಾತ್ರಗಳು ಮಾಡುವ ಉಪನ್ಯಾಸದ ನಡುವೆ ಮನರಂಜನೆಯನ್ನು ಹುಡುಕುವುದು ಕೊಂಚ ತ್ರಾಸೆನಿಸುತ್ತದೆ. ಇಡೀ ಚಿತ್ರ ನಡೆಯುವುದು ಒಂದೇ ಒಂದು ರೆಸ್ಟೋರೆಂಟ್ ಒಳಗೆ. ಸರಿಯಾಗಿ 6 ಗಂಟೆಗೆ ಶುರುವಾಗುವ ಕಥೆ, ಮಧ್ಯರಾತ್ರಿ 12ಕ್ಕೆ ಕೊನೆಗೊಳ್ಳುತ್ತದೆ. ಮನಸೆಳೆಯುವ ಲೊಕೇಷನ್​ಗಳಿಗೆ ಇಲ್ಲಿ ಜಾಗವಿಲ್ಲ, ಮುದವೆನಿಸುವ ಡೈಲಾಗ್​ಗಳೂ ಕೇಳಿಸುವುದಿಲ್ಲ, ಆಹಾ.. ಎಂಬಂಥ ಮೀನಿಂಗ್ ಇದ್ದರೂ ಓಹೋ ಎಂಬಂಥ ಮೇಕಿಂಗ್ ಇಲ್ಲ. ಕಾಮಿಡಿ ಮತ್ತು ಆಕ್ಷನ್ ಬಯಸುವವರಿಗೆ ‘ಪರಪಂಚ' ಹಿಡಿಸುವುದು ಕಷ್ಟ.

  'ಪ್ರಪಂಚವೇ ದೇವರು ಮಾಡಿದ ಬಾರು; 'ಪರಪಂಚ'ವೇ ನಮಗಿಲ್ಲಿ ಬರೀ ಬೋರು; - ಕನ್ನಡ ಪ್ರಭ

  'ಪ್ರಪಂಚವೇ ದೇವರು ಮಾಡಿದ ಬಾರು; 'ಪರಪಂಚ'ವೇ ನಮಗಿಲ್ಲಿ ಬರೀ ಬೋರು; - ಕನ್ನಡ ಪ್ರಭ

  'ಪರಪಂಚ' ಎಂಬ ಬಾರ್ ನಲ್ಲೇ ನಡೆಯುವ ಇಡೀ ಸಿನೆಮಾ ಯೋಗರಾಜ್ ಭಟ್ ಅವರ ವಾಚಾಳಿ (ಮಂಬಲ್ಕೋರ್) ಶೈಲಿಯನ್ನು ಮೀರಲು ಯಾವುದೇ ಪ್ರಯತ್ನ ಮಾಡಿಲ್ಲ. ಕನಿಷ್ಠ ಪಕ್ಷ ಯೋಗರಾಜ್ ಭಟ್ ಅವರ ಪ್ರಾರಂಭಿಕ ಸಿನೆಮಾಗಳಲ್ಲಿ ಇರುತ್ತಿದ್ದ ಒಂದಷ್ಟು ಮಜವಾದ ಘಟನೆಗಳು ಕೂಡ ಇಲ್ಲಿ ಕೊರತೆಯನ್ನನುಭವಿಸಿವೆ. ಮೊದಲರ್ಧ ಬಾರಿನಲ್ಲಿ ನಡೆಯುವ ಅಸಂಖ್ಯಾತ ನೊಂದ ಪಾತ್ರಗಳ ಪ್ರಲಾಪಗಳು ಪ್ರೇಕ್ಷಕನನ್ನು ಬ್ಯಾಸರಿಕೆಯ ಉತ್ತುಂಗಕ್ಕೆ ತಳ್ಳಿದರೆ, ದ್ವಿತೀಯಾರ್ಧದ ಸಿನೆಮಾದಲ್ಲಿ ಈ ಎಲ್ಲ ನೊಂದ ಜೀವಿಗಳ ಆಶಾಕಿರಣವಾಗಿ ಮಾತುಗಾರ ಮಲ್ಲ, ಮಲ್ಲರ ಮಲ್ಲ ದಿಗಂತ್ 'ಪ್ರೀಚರ್' ಆಗಿ ಬೋರು ಹೊಡೆಸುತ್ತಾರೆ. ಈ ನೊಂದ ಜೀವಿಗಳ ಸರ್ವೇ ಸಾಮಾನ್ಯ ನೋವುಗಳಿಗೆ-ತೊಂದರೆಗಳಿಗೆ ಈ ಮಲ್ಲ ನೀಡುವ ಕ್ಲೀಶೆಯ-ಸುಲಭದ ಪರಿಹಾರಗಳು ಕೆಲವೊಮ್ಮೆ ನೋಡುಗನಿಗೆ ಕೋಪ ತರಿಸಿದರೆ ಮತ್ತೆ ಕೆಲವೊಮ್ಮೆ ಥಿಯೇಟರ್ ನಿಂದ ಹೊರದಬ್ಬುತ್ತವೆ.

  'ಖಯಾಲಿ ಮತ್ತು ಖಾಲಿಪೀಲಿ' - ಪ್ರಜಾವಾಣಿ

  'ಖಯಾಲಿ ಮತ್ತು ಖಾಲಿಪೀಲಿ' - ಪ್ರಜಾವಾಣಿ

  ಕ್ರಿಷ್‌ ಜೋಶಿ ಕಲ್ಪಿಸಿಕೊಂಡಿರುವ ಕಥೆ ಚೆನ್ನಾಗಿಯೇ ಇದೆ. ಕಳ್ಳಬಟ್ಟಿ ಮಾರಿ ಹಲವರ ಸಾವಿಗೆ ಕಾರಣನಾದ ಅಪ್ಪನ ಕೃತ್ಯಕ್ಕೆ ಹೇಸಿ, ಚಡ್ಡಿಯನ್ನೂ ಕಿತ್ತು ಬಿಸಾಕಿ ನಗರಕ್ಕೆ ಬರುವ ಹುಡುಗನದ ಕಥೆಯಿದು. ಆದರೆ, ಈ ಹುಡುಗನ ‘ಪರಪಂಚ'ದ ಕಥನ ದಿಕ್ಕಾಪಾಲಾಗಿದೆ. ವೈವಿಧ್ಯಮಯ ಪಾತ್ರಗಳ ಮೂಲಕ ಬದುಕಿನ ಹಲವು ಆಯಾಮಗಳನ್ನು ಚಿತ್ರಿಸುವ, ಅದಕ್ಕೆ ‘ಹುಸಿ ಅಧ್ಯಾತ್ಮ'ದ ಛಾಯೆ ನೀಡುವ ನಿರ್ದೇಶಕರ ಉದ್ದೇಶ ಬಾರ್‌ನ ಗದ್ದಲದಲ್ಲಿ ಕಳೆದುಹೋಗಿದೆ. - ರಘುನಾಥ ಚ.ಹ.

  'ಎಣ್ಣೆ ಅಂಗಡಿಯಲ್ಲಿ ಮಾತು ತುಂಬಾ ಅಗ್ಗ..! - ಉದಯವಾಣಿ

  'ಎಣ್ಣೆ ಅಂಗಡಿಯಲ್ಲಿ ಮಾತು ತುಂಬಾ ಅಗ್ಗ..! - ಉದಯವಾಣಿ

  ಸುಖ-ದುಃಖ, ಸೇಡಿಗೆ ಪ್ರತೀಕಾರ ನೋವಿಗೆ ಕಣ್ಣೀರು, ಒಂಟಿತನಕ್ಕೊಂದು ಸಂಗಾತಿ, ಹೊಟ್ಟೆಪಾಡಿಗೊಂದು ಅಡ್ಡದಾರಿ, ತಪ್ಪಿಗೊಂದು ಪಶ್ಚಾತ್ತಾಪ, ಮನಸ್ಸಿನ ತಳಮಳಕ್ಕೆ ಪರಿಹಾರ... ಮನುಷ್ಯ ಎಂದ ಮೇಲೆ ಇವೆಲ್ಲವೂ ಸಹಜ.. ಆದರೆ, ಎಲ್ಲವೂ, ಎಲ್ಲಾ ರೀತಿಯ ಜನರು ಒಂದೆಡೆ ಸೇರಲು ಸಾಧ್ಯವೇ?, ಸಾಧ್ಯವಾದರೆ ಅಲ್ಲಿ ಅವರಿಗೆ ಪರಿಹಾರ ಸಿಗಬಹುದಾ? ಇಂತಹ ಪ್ರಶ್ನೆಗೆ ಉತ್ತರ 'ಪರಪಂಚ'. ಪರಪಂಚದಲ್ಲಿ ಇಂತಹ ವಿಭಿನ್ನ ಮನಸ್ಥಿತಿಯ, ವೆರೈಟಿ ಸಮಸ್ಯೆಗಳಿರುವ ಜನರನ್ನು ಒಂದೆಡೆ ಸೇರಿಸುವ ಮತ್ತು ಅವರ ಸಮಸ್ಯೆಗಳನ್ನು ಅರ್ಥೈಸುವ ಪರಿಣಾಮವಾಗಿ ಮೂಡಿಬಂದಿರುವ ಚಿತ್ರ 'ಪರಪಂಚ'. - ರವಿಪ್ರಕಾಶ್ ರೈ.

  English summary
  Kannada Movie 'Parapancha' Critics Review, Actor Diganth, Yogesh, actress Ragini Dwivedi, Starrer 'Parapancha' has received mixed response from the critics. here is the collection of reviews by Top News Papers of Karnataka. The movie is directed by Krish Joshi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X