»   » ಚಿತ್ರ ವಿಮರ್ಶೆ; ಕಳೆಗುಂದಿಲ್ಲ ಸುದೀಪ್ 'ರನ್ನ'ನ ರಂಗು

ಚಿತ್ರ ವಿಮರ್ಶೆ; ಕಳೆಗುಂದಿಲ್ಲ ಸುದೀಪ್ 'ರನ್ನ'ನ ರಂಗು

Posted By: ಹರಾ
Subscribe to Filmibeat Kannada

ಸೀನ್ 1 - ''ದೊಡ್ಡೋರು ಒಂದು ಮಾತು ಹೇಳಿದ್ದಾರೆ. ತುತ್ತು ಅನ್ನ ತಿನ್ನೋಕೆ...ಬೊಗಸೆ ನೀರು ಕುಡಿಯೋಕೆ...ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ...ಸುಮ್ನೆ ಹೇಳಿಲ್ಲ ಈ ಮಾತನ್ನ..!''- ವಿಲನ್ ಗೆ ಕಿಚ್ಚ ಸುದೀಪ್ ಹಾಡುತ್ತಾ ಹೊಡೆಯುವ ಡೈಲಾಗ್ ಇದು.


ಸೀನ್ 2 - ಡ್ರೈವರ್ ಆಗಿರುವುದು ಹೇಗೆ ಅಂತ ಡ್ರೈವರ್ ಗಳ ಮ್ಯಾನರಿಸಂ ಕಲಿಯೋಕೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ 'ಸೂರ್ಯವಂಶ' ಚಿತ್ರದ ಸನ್ನಿವೇಶ ತೆರೆಮೇಲೆ ಪ್ರಜ್ವಲಿಸುತ್ತದೆ.

ಸೀನ್ 3 - ''ಕೆಲವು ಸಿಂಹಗಳ ವಿಚಾರಕ್ಕೆ ಹೋಗದೆ ಇದ್ದರೇನೆ ಬೆಟರ್'' ಅಂತ ಖೇಡಿಗಳ ಮುಂದೆ ಸುದೀಪ್ ಘರ್ಜಿಸುತ್ತಾರೆ.


ಅಲ್ಲಿಗೆ, 'ರನ್ನ' ಸಿನಿಮಾ ಬರೀ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಮಾತ್ರವಲ್ಲ. ಸಾಹಸಸಿಂಹ ಡಾ.ವಿಷ್ಣುವರ್ಧನ್ ಭಕ್ತರಿಗೂ ಹಬ್ಬ. ಇಂದು ರಿಲೀಸ್ ಆಗಿರುವ 'ರನ್ನ' ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....


Rating:
3.0/5

ಚಿತ್ರ - ರನ್ನ
ನಿರ್ದೇಶನ - ನಂದ ಕಿಶೋರ್
ನಿರ್ಮಾಣ - ಎಂ.ಚಂದ್ರಶೇಖರ್
ಸಂಗೀತ ನಿರ್ದೇಶನ - ವಿ.ಹರಿಕೃಷ್ಣ
ಛಾಯಾಗ್ರಹಣ - ಸುಧಾಕರ್.ಎಸ್.ರಾಜ್
ಸಂಕಲನ - ಕೆ.ಎಂ.ಪ್ರಕಾಶ್
ತಾರಾಗಣ - ಸುದೀಪ್, ರಚಿತಾ ರಾಮ್, ಹರಿಪ್ರಿಯಾ, ಮಧೂ, ದೇವರಾಜ್, ಪ್ರಕಾಶ್ ರಾಜ್, ಚಿಕ್ಕಣ್ಣ, ಸಾಧು ಕೋಕಿಲ, ಮಂಡ್ಯ ರಮೇಶ್ ಮತ್ತು ಇತರರು.
ಬಿಡುಗಡೆ - ಜೂನ್ 4, 2015


'ರನ್ನ' ಕಥಾಹಂದರ

ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್ ಈ 'ರನ್ನ'. ಅಪ್ಪನ ಇಚ್ಛೆ ತಿರಸ್ಕರಿಸಿ ಪ್ರೀತಿಸಿದವರನ್ನ ಕೈಹಿಡಿದು, ತವರಿನಿಂದ ದೂರಾಗಿರುವ ಅತ್ತೆ (ಮಧೂ) ಮನವೊಲಿಸಿ, ಸೋದರ ಅಳಿಯ (ಸುದೀಪ್) ಮನೆಗೆ ವಾಪಸ್ ಕರೆದುಕೊಂಡು ಹೋಗಬೇಕು. ಇದರ ಮಧ್ಯೆ ನಡೆಯುವ ಮೋಜು, ಮಸ್ತಿ, ಹೊಡೆದಾಟವೇ 'ರನ್ನ'ನ ಕಥಾಹಂದರ. ['ರನ್ನ'ನ ಅತ್ತೆ ಮಧು ರಿಚ್ ಲುಕ್ ವಿಡಿಯೋ ಔಟ್]


ಸುದೀಪ್ ನಲ್ಲೇ ಇದ್ದಾರೆ ಪವನ್ ಕಲ್ಯಾಣ್.!

'ಅತ್ತಾರಿಂಟಿಕಿ ದಾರೇದಿ' ಚಿತ್ರವನ್ನ ನೋಡಿರುವವರಿಗೆ 'ರನ್ನ' ಚಿತ್ರದ ಆಕ್ಷನ್ ಸೀಕ್ವೆನ್ಸ್ ಗಳಲ್ಲಿ, ಸುದೀಪ್ ಮ್ಯಾನರಿಸಂನಲ್ಲಿ ಪವನ್ ಕಲ್ಯಾಣ್ ಕಾಣ್ತಾರೆ. ಹಾಗಂತ ಸುದೀಪ್ ತಮ್ಮ ಗತ್ತು, ಗೈರತ್ತು ಬಿಟ್ಟಿಲ್ಲ. ಅವರ ಸ್ಟೈಲ್ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೇ, ಅವರ ರಿಚ್ ಆಟಿಟ್ಯೂಡ್ ಹುಡುಗೀರ ಎದೆಬಡಿತ ಜೋರಾಗುವಂತೆ ಮಾಡುತ್ತೆ. ಸೆಂಟಿಮೆಂಟ್ ದೃಶ್ಯಗಳಲ್ಲಿ ಸುದೀಪ್ ಲೀಲಾಜಾಲ. [ಕಿಚ್ಚ ಸುದೀಪ್ ರನ್ನ ಚಿತ್ರಕ್ಕೆ ಭರ್ಜರಿ ಓಪನಿಂಗ್]


ರಚಿತಾ ಓಕೆ, ಹರಿಪ್ರಿಯಾ ಅಷ್ಟಕಷ್ಟೆ!

'ರನ್ನ' ಚಿತ್ರದ ನಾಯಕಿ ರಚಿತಾ ರಾಮ್ ನಟನೆಯಲ್ಲಿ ಪರ್ವಾಗಿಲ್ಲ. ಡ್ಯಾನ್ಸಿಂಗ್ ನಲ್ಲಿ ಸೂಪರ್. ಹರಿಪ್ರಿಯಾಗೆ ನಟನೆಯಲ್ಲಿ ಹೆಚ್ಚು ಅವಕಾಶ ಸಿಕ್ಕಿಲ್ಲ. ['ರನ್ನ' ಚಿತ್ರದ ಸೂಪರ್ ಸಾಂಗ್ ಟೀಸರ್ ರಿಲೀಸ್]


ಖಡಕ್ ಆತ್ತೆಯಾಗ್ಲಿಲ್ಲ ಮಧೂ!

ತೆಲುಗು ಚಿತ್ರಕ್ಕೆ ಹೋಲಿಸಿದರೆ, ಇಲ್ಲಿನ ಅತ್ತೆ ಪಾತ್ರಧಾರಿ ಮಧೂ ಕೊಂಚ ಮಂಕಾಗಿರುವಂತೆ ಭಾಸವಾಗುತ್ತೆ. ಅವರ ಮೊಗದಲ್ಲಿ ಇನ್ನಷ್ಟು ಅಹಂ ಇರಬೇಕಿತ್ತು. ಆದರೂ ವರ್ಷಗಳ ನಂತ್ರ ಸ್ಯಾಂಡಲ್ ವುಡ್ ಗೆ ಮರಳಿರುವ ಮಧೂ ಪ್ರತಿ ಫ್ರೇಮ್ ನಲ್ಲೂ ಮುದ್ದು ಮುದ್ದು.


ಕಾಮಿಡಿಯಲ್ಲಿ ಪಂಚ್ ಇಲ್ಲ!

ಕಾಮಿಡಿ ಸನ್ನಿವೇಶಗಳೂ ಯಥಾವತ್ ಕನ್ನಡ ಅವತರಣಿಕೆ ಆಗಿರುವುದರಿಂದ ನಗೆ ಟಾನಿಕ್ ನಲ್ಲಿ ಅಂಥ ಕಿಕ್ ಇಲ್ಲ. ಚಿಕ್ಕಣ್ಣ, ಸಾಧು ಕೋಕಿಲ, ಮಂಡ್ಯ ರಮೇಶ್, ತಬಲ ನಾಣಿ ಅಂಥ ಕಾಮಿಡಿ ಖಿಲಾಡಿಗಳಿದ್ದರೂ, ಸದ್ಬಳಕೆ ಆಗಿಲ್ಲ. [ಭೂಕಂಪ-ಸುನಾಮಿಯನ್ನ ಒಂದು ಮಾಡಿದ 'ಸಿಂಹ' ಸುದೀಪ್]


ಕ್ಯಾಮರಾ ವರ್ಕ್, ಸಂಗೀತ ಸೂಪರ್

'ರನ್ನ' ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಅದು ಚಿತ್ರದ ಛಾಯಾಗ್ರಹಣ. ಸುಧಾಕರ್.ಎಸ್.ರಾಜ್ ಕ್ಯಾಮರಾ ಕೈಚಳಕ ಪ್ರತಿ ಸೀನ್ ನಲ್ಲೂ ಪ್ರೇಕ್ಷಕರ ಕಣ್ಣುಕೋರೈಸುತ್ತೆ. ಅದ್ರಲ್ಲೂ ವಿದೇಶದಲ್ಲಿ ಚಿತ್ರೀಕರಿಸಿರುವ ಶಾಟ್ ಗಳು ರೋಮಾಂಚನಕಾರಿಯಾಗಿವೆ. ಇನ್ನೂ, ವಿ.ಹರಿಕೃಷ್ಣ ಸಂಗೀತ ನೀಡಿರುವ ಹಾಡುಗಳು ಆಗ್ಲೇ ಹಿಟ್ ಆಗಿವೆ. [ದಾಖಲೆ ಮೊತ್ತಕ್ಕೆ 'ರನ್ನ' ಪ್ರಸಾರ ಹಕ್ಕು ಮಾರಾಟ]


ಆಂಧ್ರಾ ಸ್ಟೈಲ್ ನಲ್ಲಿ 'ರನ್ನ'

ಥೇಟ್ ಆಂಧ್ರಾ ಸ್ಟೈಲ್ ನಲ್ಲಿ 'ರನ್ನ' ರಿಚ್ಚಾಗಿ ರೆಡಿಯಾಗಿದ್ದಾನೆ. ಸುದೀಪ್ ಕಾಲಿಟ್ಟರೆ, ರೋಡ್ ಮೇಲಿರುವ ವಾಹನಗಳೆಲ್ಲಾ ಬೌನ್ಸ್ ಆಗ್ತವೆ. ಕೊಡುವ ಒಂದು ಏಟಿಗೆ ಎದುರಾಳಿ ಮಣ್ಣುಮುಕ್ತಾನೆ. ವೇಯಿಂಗ್ ಮಷಿನ್ ಮೇಲೆ ಕಿಚ್ಚನ ಖದರ್ ಹೇಗಿರುತ್ತೆ ಅಂತ ಬೆಳ್ಳಿಪರದೆ ಮೇಲೆ ನೋಡಿದ್ರೇನೆ ಮಜಾ.


ಡಿಟ್ಟೋ ಡಿಟ್ಟೋ ರೀಮೇಕ್

ಪವನ್ ಕಲ್ಯಾಣ್ ಅಭಿನಯದ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ಯಥಾವತ್ ಕನ್ನಡ ಅವತರಣಿಕೆ 'ರನ್ನ'. ಕೆಲವು ಕಡೆ ಸಂಭಾಷಣೆ ಕೂಡ ತರ್ಜುಮೆ ಆಗಿದೆ. ಆಕ್ಷನ್ ಸನ್ನಿವೇಶಗಳ ಕಾನ್ಸೆಪ್ಟ್ ಕೂಡ ಕಾಪಿ. ಹೀಗಾಗಿ, 'ಅತ್ತಾರಿಂಟಿಕಿ ದಾರೇದಿ' ಚಿತ್ರ ನೋಡಿರುವವರಿಗೆ 'ರನ್ನ' ಅಷ್ಟೇನು ಫೀಲ್ ಕೊಡುವುದಿಲ್ಲ.


ಫೈನಲ್ ಸ್ಟೇಟ್ ಮೆಂಟ್

'ರನ್ನ' ಚಿತ್ರದ ಕ್ವಾಲಿಟಿಗೆ ನಿರ್ಮಾಪಕ ಎಂ.ಚಂದ್ರಶೇಖರ್ ಎಲ್ಲೂ ಕಾಂಪ್ರೊಮೈಸ್ಆಗಿಲ್ಲ. ಪ್ರತಿ ಸೀನ್ ಕೂಡ ರಿಚ್ ಆಗಿ ರೆಡಿಯಾಗುವುದಕ್ಕೆ ಪರಿಶ್ರಮ ಪಟ್ಟಿದ್ದಾರೆ. ತೆಲುಗಿನ ಕಾರ್ಬನ್ ಕಾಪಿ ಮಾಡುವ ಬದಲು, ನಿರ್ದೇಶಕ ನಂದಕಿಶೋರ್ ಕೊಂಚ ಜಾಗರೂಕತೆ ವಹಿಸಿದ್ದರೆ, 'ರನ್ನ' ಇನ್ನೂ ಉತ್ತಮ ಚಿತ್ರವಾಗಿರುತ್ತಿತ್ತು. ಈಗಲೂ 'ರನ್ನ' ಚೆನ್ನಾಗಿದೆ. ಸುದೀಪ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಹಾಗಿದೆ. ತೆಲುಗು ಚಿತ್ರವನ್ನ ನೀವು ನೋಡಿಲ್ಲ ಅಂದ್ರೆ, 'ರನ್ನ'ನನ್ನ ಮಿಸ್ ಮಾಡ್ಬೇಡಿ.


English summary
Kiccha Sudeep starrer 'Ranna' has released all over Karnataka today (June 4th). 'Ranna' is a wholesome entertainer and definitely a worth watch. Here is a complete review of the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada