»   » ಯು ಟರ್ನ್: ಸಂದೇಶ ಸಾರುವ ತಿರುವಿನಲ್ಲಿ ಥ್ರಿಲ್ಲಿಂಗ್ ಪ್ರಯಾಣ

ಯು ಟರ್ನ್: ಸಂದೇಶ ಸಾರುವ ತಿರುವಿನಲ್ಲಿ ಥ್ರಿಲ್ಲಿಂಗ್ ಪ್ರಯಾಣ

By: ಮಧುಸೂದನ ಹೆಗಡೆ
Subscribe to Filmibeat Kannada

ನಾವು ಮಾಡುವ ಚಿಕ್ಕ ಚಿಕ್ಕ ತಪ್ಪುಗಳು ನಮ್ಮ ಜೀವನದಲ್ಲಿಯೇ ನಮಗೆ ಗೊತ್ತಿಲ್ಲದೇ ಎಂಥ ಅವಘಡಗಳನ್ನು ತಂದಿಡಬದುಹು ಎಂಬುದನ್ನೇ ತೆರೆಯ ಮೇಲೆ ಪವನ್ ಕುಮಾರ್ ಥ್ರಿಲ್ಲರ್ ರೀತಿಯಲ್ಲಿ ತೆರೆದಿಡುತ್ತಾ ಹೋಗುತ್ತಾರೆ.

ಯು ಟರ್ನ್ ಚಿತ್ರದಲ್ಲಿ ಹೊಸದೇನಿಲ್ಲ. ನಮ್ಮ ಬದುಕಿನಲ್ಲಿ ಪ್ರತಿದಿನ ನಡೆಯುವ ಘಟನಾವಳಿಯನ್ನೇ ಚಿತ್ರ ಕತೆಯ ಮೂಲಕ ನಿಮ್ಮ ಮುಂದೆ ಇಡಲಾಗಿದೆ. ಟ್ರಾಫಿಕ್ ನಿಯಮ ಪಾಲನೆ ಮಾಡದಿದ್ದರೆ ಅದು ಬೇರೆಯವರನ್ನು ಬಲಿ ತೆಗೆದುಕೊಳ್ಳುತ್ತದೆ, ಬಲಿಯಾದವರ ನೋವು, ಅವರ ಕುಟುಂಬ ಅನುಭವಿಸುವ ಯಾತನೆ?['ಯು-ಟರ್ನ್' ನೋಡಿ ಥ್ರಿಲ್ಲಾದ ಪ್ರೇಕ್ಷಕರ ಟ್ವಿಟ್ಟರ್ ವಿಮರ್ಶೆ]

ಕೆಲವೇ ಪಾತ್ರಗಳ ಸುತ್ತ ಸುತ್ತುವ ಚಿತ್ರ ಮೊದಲಾರ್ಧದದವರೆಗೂ ಪ್ರೇಕ್ಷಕ ಪ್ರಭುವನ್ನು ಹಿಡಿದಿಟ್ಟುಕೊಳ್ಳುತ್ತದೆ. ದ್ವಿತೀಯಾರ್ಧದ ಆರಂಭದಿಂದ ಕೊಂಚ ಹಿಡಿತ ಕಳೆದುಕೊಂಡಂತೆ ಕಾಣುತ್ತದೆ. ಕ್ಲೈಮಾಕ್ಸ್ ಬರುವ ವೇಳೆಗೆ ಮೊದಲಿನ ಹಾದಿಗೆ ಮರಳಿದರೂ ಹಲವು ಪ್ರಶ್ನೆಗಳಿಗೆ ಉತ್ತರ ಇರುವುದಿಲ್ಲ.[ಶಿವನ ಪಾದ ಸೇರಿಸುವ ಶಾರ್ಟ್ ಕಟ್ ಕತೆ ಕೇಳಿ]

ಕಾಸು ಕೊಟ್ಟು ಒಳಹೋದವನಿಗೆ ಮೋಸ ಇಲ್ಲ. ನಾವು ಇಂಥದ್ದೇ ತಪ್ಪುಗಳನ್ನು ಮಾಡಿದ್ದೇವಾ? ಮಾಡುತ್ತಿದ್ದೇವಾ? ಎಂದು ಒಂದು ಕ್ಷಣ ಆತ್ಮಾವಲೋಕನ ಮಾಡಿಕೊಳ್ಳಲು ಚಿತ್ರ ಪ್ರೇರೇಪಣೆ ನೀಡುತ್ತದೆ. ವಾಹನ ಸವಾರರು ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು "ಯು ಟರ್ನ್" ಒಮ್ಮೆ ನೋಡಲೇಬೇಕು.

Rating:
3.5/5

ಚಿತ್ರ: "ಯು ಟರ್ನ್"
ರಚನೆ-ಚಿತ್ರಕಥೆ-ನಿರ್ದೇಶನ: ಪವನ್ ಕುಮಾರ್
ಸಂಗೀತ: ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ: ಸತ್ಯ ಹೆಗ್ಡೆ
ತಾರಾಗಣ: ಶ್ರದ್ಧಾ ಶ್ರೀನಾಥ್, ರೋಜರ್ ನಾರಾಯಣ್, ದಿಲೀಪ್ ರಾಜ್, ರಾಧಿಕಾ ಚೇತನ್
ಬಿಡುಗಡೆ: ಮೇ 20, 2016

ಪ್ರೀತಿ ಪ್ರೇಮ ಎಲ್ಲೋ ಸ್ವಲ್ಪ

ತಾಯಿ ಮಗಳ ಮದುವೆ ಮಾತುಕತೆಯಿಂದ ಸಿನಿಮಾ ಆರಂಭವಾದರೂ ಚಿತ್ರದಲ್ಲಿ ಪ್ರೀತಿ ಪ್ರೇಮ ಪ್ರಣಯಕ್ಕೆ ಅವಕಾಶವಿಲ್ಲ. ಥ್ರಿಲ್ಲರ್ ಸಿನಿಮಾ ನಿಧಾನವಾಗಿ ಆರಂಭ ಪಡೆದುಕೊಳ್ಳುತ್ತದೆ.

ಹಿಡಿದಿಡುವ ಹಿನ್ನೆಲೆ ಸಂಗೀತ

ಚಿತ್ರದಲ್ಲಿ ಹಾಡುಗಳಿಲ್ಲ, ಆದರೆ ಹಿನ್ನೆಲೆ ಸಂಗೀತ ನಿಮ್ಮನ್ನು ಹಿಡಿದಿಡುತ್ತದೆ. ಕೆಲವೊಮ್ಮೆ ಇದು ಪುನರ್ಜನ್ಮದ ಕತೆಯೋ, ಭಯಂಕರ ಪ್ರೇತಾತ್ಮಗಳ ಸಿನಿಮಾವೋ ಎಂಬ ಅನುಮಾನವನ್ನು ಉಂಟುಮಾಡುವಂತೆ ನಿರ್ದೇಶಕರು ಮಾಡುತ್ತಾರೆ.

ಡಬಲ್ ರೋಡ್ ಮೇಲ್ಸೇತುವೆ

ಚಿತ್ರದ ನಿಜವಾದ ಹೀರೋ ಬೆಂಗಳೂರಿನ ಶಾಂತಿನಗರ ಡಬಲ್ ರೋಡ್ ಮೇಲ್ಸೇತುವೆ. ಅಲ್ಲಿ ನಡೆದಿದ್ದ ಅಪಘಾತವೊಂದರಲ್ಲಿ ಪ್ರಾಣ ಕಳೆದುಕೊಂಡಿದ್ದ ತಾಯಿ-ಮಗುವಿನ ಅಂತಃಕರಣದ ನೋವು "ಯು ಟರ್ನ್" ಆಗಿ ನಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ.

ಶ್ರದ್ಧಾ ಶ್ರೀನಾಥ್ ಡಿಸ್ಟಿಂಗ್ ಶನ್

ಮೊದಲ ಚಿತ್ರದಲ್ಲೇ ಶ್ರದ್ಧಾ ಶ್ರೀನಾಥ್ ಅಭಿನಯದಲ್ಲಿ ಮನಗೆಲ್ಲುತ್ತಾರೆ. ಉಳಿದಂತೆ ದಿಲೀಪ್ ರಾಜ್, ರೋಜರ್ ನಾರಾಯಣ್ ಸಹ ತಮ್ಮ ಪಾತ್ರಗಳಿಗೆ ಮೋಸ ಮಾಡುವುದಿಲ್ಲ.

ಡಬಲ್ ರೋಡ್ ಆಕ್ಸಿಡೆಂಟ್

ಆಂಗ್ಲ ಪತ್ರಿಕೆಯ ಟ್ರೈನಿ ವರದಿಗಾರ್ತಿಯಾಗಿ ಕೆಲಸ ಮಾಡುವ ರಚನಾಗೆ (ಶ್ರದ್ಧಾ ಶ್ರೀನಾಥ್) ಹೆಸರು ಗಳಿಸುವ ಹುಮ್ಮಸ್ಸು. ಇದೇ ಕಾರಣಕ್ಕೆ ಬೆಂಗಳೂರಿನ ಡಬಲ್ ರೋಡ್ ನ ಅಪಘಾತವೊಂದರ ಮೇಲೆ ವಿಶೇಷ ವರದಿ ಮಾಡಲು ಆರಂಭಿಸುತ್ತಾಳೆ. ಇಲ್ಲಿ ಕತೆ ನಿಜವಾದ ಆರಂಭ ಪಡೆದುಕೊಳ್ಳುತ್ತದೆ.

ಸಂದರ್ಶನ ಸಾಹಸ

ಡಬಲ್ ರೋಡ್ ನ ಮೇಲಿನ ಡಿವೈಡರ್ ಸರಿಸಿ "ಯು ಟರ್ನ್" ತೆಗೆದುಕೊಂಡ ಎಲ್ಲ ವ್ಯಕ್ತಿಗಳ ವಾಹನದ ಸಂಖ್ಯೆಯನ್ನು ಡಬಲ್ ರೋಡ್ ಮೇಲೆ ವಾಸಮಾಡುವ ಭಿಕ್ಷುಕರೊಬ್ಬರಿಂದ ಪಡೆದುಕೊಳ್ಳುವ ರಚನಾ ಡಿವೈಡರ್ ಕಿತ್ತವರನ್ನು ಸಂದರ್ಶನ ಮಾಡಲು ಮುಂದಾಗುತ್ತಾರೆ.

ಒಂದೊಂದೆ ಸಾವು

ಡಿವೈಡರ್ ಕಿತ್ತ ಪ್ರತಿಯೊಬ್ಬರು ಸಾವಿಗೆ ಈಡಾಗುತ್ತಾರೆ. ಇದು ಹೇಗೆ ಎಂಬುದೇ ಯಕ್ಷ ಪ್ರಶ್ನೆಯಾಗಿ ಕಾಡಲು ಆರಂಭಿಸುತ್ತದೆ. ಇದಕ್ಕೆ ಉತ್ತರ ಬೇಕಾದಲ್ಲಿ ಚಿತ್ರ ಮಂದಿರಕ್ಕೆ ಕಾಲಿಡಬಹುದು. ಚಿತ್ರದ ಜೀವಾಳ ಇರುವುದು ಇಲ್ಲಿಯೇ.

ಮೈನಸ್ ಪಾಯಿಂಟ್

ಸಸ್ಪೆನ್ಸ್ ಕಾಪಾಡಿಕೊಂಡು ಹೋಗುವಲ್ಲಿ ಪವನ್ ಎಡವುತ್ತಾರೆ. ಕೆಲ ಸನ್ನಿವೇಶಗಳು ಅಲ್ಲಲ್ಲಿ ಕತೆಗೆ ಬ್ರೇಕ್ ಹಾಕುತ್ತವೆ. ಪೊಲೀಸ್ ಲಾಕಪ್ ನಲ್ಲಿಯೇ ಎರಡು ವ್ಯಕ್ತಿಗಳು ಹೊಡೆದಾಡಿಕೊಂಡು ಸಾಯುವುದು, ಬೀಗ ಓಪನ್ ಮಾಡಲಾಗದೆ ಪೊಲೀಸ್ ಅಧಿಕಾರಿಗಳು ಪರದಾಡುವ ದೃಶ್ಯ ಕೃಶವಾಗಿ ಕಂಡರೂ ಆಶ್ಚರ್ಯವಿಲ್ಲ.

ಪಾತ್ರ ಸೃಷ್ಟಿ

ಅಪಘಾತದಲ್ಲಿ ಸಾವನ್ನಪ್ಪುವ ತಾಯಿಯಾಗಿ ರಾಧಿಕಾ ಚೇತನ್ ಕೆಲವೇ ಸಮಯ ತೆರೆಯ ಮೇಲೆ ಕಂಡರೂ ಮನಸ್ಸನ್ನು ಆವರಿಸಿಕೊಳ್ಳುತ್ತಾರೆ. ಮಗುವಿನ ಬಂದು ಹೋಗುವಿಕೆಯೂ ಸಿನಿಮಾಕ್ಕೆ ಗಂಭೀರತೆ ತಂದುಕೊಡುತ್ತದೆ.

ಕೊನೆ ಮಾತು

ನ್ಯೂ ಯಾರ್ಕ್ ಐಐಎಫ್ ಗೆ ಬೆಸ್ಟ್ ಸ್ಕ್ರೀನ್ ಪ್ಲೇ ನಾಮಿನೇಶನ್ ಆಗಿದ್ದ ಚಿತ್ರ ಕೆಲವುಕಡೆ ಲೂಸಿಯಾದ ಛಾಯೆ ಮೂಡಿಸುತ್ತದೆ. ಅಲ್ಲಲ್ಲಿ ನಿಮ್ಮನ್ನು ಗೊಂದಲಕ್ಕೆ ಸಿಲುಕಿಸಿದರೂ ಅಂತಿಮವಾಗಿ ಸಮಾಜಕ್ಕೆ ಸಂದೇಶದ ಜತೆ ಚಿಂತನೆಯೊಂದನ್ನು ಚಿತ್ರ ನೀಡುತ್ತದೆ.

ಚಿತ್ರ ನೋಡಿದವರು ಏನೆಂದರು?

English summary
'U-turn' Kannada Movie Review. A Kannada movie directed by Pavan kumar based on the real incident which happens every human life. Kannada Actor Dilip Raj, Actress Shraddha Srinath, Radhika Chetam in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada