»   » ದೇವದಾಸಿ 'ತಿಪ್ಪಜ್ಜಿ ಸರ್ಕಲ್' ಚಿತ್ರ ಹೇಗಿದೆ? ವಿಮರ್ಶೆಗಳು ಇಲ್ಲಿವೆ

ದೇವದಾಸಿ 'ತಿಪ್ಪಜ್ಜಿ ಸರ್ಕಲ್' ಚಿತ್ರ ಹೇಗಿದೆ? ವಿಮರ್ಶೆಗಳು ಇಲ್ಲಿವೆ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಮಳೆ ಹುಡುಗಿ ಪೂಜಾ ಗಾಂಧಿ ದೇವದಾಸಿ ಆಗಿ ನಟಿಸಿರುವ ಸಿನಿಮಾ 'ತಿಪ್ಪಜ್ಜಿ ಸರ್ಕಲ್'. ಬಿ.ಎಲ್.ವೇಣು ಅವರ 'ತಿಪ್ಪಜ್ಜಿ ಸರ್ಕಲ್' ಕೃತಿಯನ್ನು ನಿರ್ದೇಶಕ ಆದಿತ್ಯ ಚಿಕ್ಕಣ್ಣ ಸಿನಿಮಾ ಮಾಡಿದ್ದಾರೆ.

  ಕಳೆದ ಶುಕ್ರವಾರ ರಿಲೀಸ್ ಆದ 'ತಿಪ್ಪಜ್ಜಿ ಸರ್ಕಲ್' ಚಿತ್ರಕ್ಕೆ ಭರ್ಜರಿ ಅನ್ನುವಂತಹ ಓಪನ್ನಿಂಗ್ ಲಭಿಸಿಲ್ಲ. ಚಿತ್ರದ ಪರವಾಗಿ ನಿಂತು ಪ್ರಚಾರ ಮಾಡಬೇಕಿದ್ದ ನಟಿ ಪೂಜಾ ಗಾಂಧಿ 'ಬಿಗ್ ಬಾಸ್' ಮನೆ ಸೇರಿದ್ದಾರೆ.

  ದೇವದಾಸಿಯರ ಬದುಕಿನ ಸುತ್ತ ಹೆಣೆದಿರುವ 'ತಿಪ್ಪಜ್ಜಿ ಸರ್ಕಲ್' ಚಿತ್ರವನ್ನ ನೋಡಿರುವ ಕನ್ನಡ ಸಿನಿ ವಿಮರ್ಶಕರು ಏನಂತಾರೆ. ದೇವದಾಸಿ ತಿಪ್ಪಿ ಆಗಿ ಪೂಜಾ ಗಾಂಧಿ ನಟನೆ ಹೇಗಿದೆ.?

  ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 'ತಿಪ್ಪಜ್ಜಿ ಸರ್ಕಲ್' ಬಗ್ಗೆ ಕರ್ನಾಟಕದ ಖ್ಯಾತ ದಿನಪತ್ರಿಕೆಗಳು ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......

  ಗಟ್ಟಿ ಕಥೆ, ತೆಳು ಚಿತ್ರಿಕೆ - ಪ್ರಜಾವಾಣಿ

  ಸಾಮಾನ್ಯವಾಗಿ ದೇವದಾಸಿಯರು ಗೌಡ ಇಲ್ಲವೆ ಧಣಿಯ ಆಶ್ರಯದಲ್ಲಿ ಬದುಕುವರು. ತಿಪ್ಪಜ್ಜಿಯೂ ಮುತ್ತು ಕಟ್ಟಿಸಿಕೊಂಡ ನಂತರ ದಾವಣಗೆರೆ ಧಣಿಯೊಬ್ಬರ ಮನದಾಸೆಯ ಅರಸಿ. ಆತನಿಗೆ ಮಾತ್ರ ಆಕೆಯ ನಿಷ್ಟೆ. ಬಹುಮಂದಿ ಧಣಿಗಳು ದೇವದಾಸಿಯರಿಗೆ ಪೂರ್ಣವಾಗಿ ಅನುರಕ್ತವಾಗಿದ್ದಾರೆ.

  ಇದು ಕೂಡಾವಳಿಗೆ ಮಾತ್ರವಲ್ಲ ಧಣಿಗಳ ಮನಸ್ಸಿಗೆ ಸಾಂತ್ವನ ನೀಡುವ ಮತ್ತು ಮನಸ್ಸನ್ನು ಅರ್ಥೈಸಿಕೊಳ್ಳುವ ಕಾರಣಕ್ಕೆ. ಇಲ್ಲಿಯೂ ಈ ಅನುರಕ್ತಿ ಇದೆ. ತಿಪ್ಪಿ ಎನ್ನುವ ಹೆಣ್ಣುಮಗಳು ದೇವದಾಸಿಯಾದದ್ದು, ಮಗಳಿಂದಲೇ ತಿರಸ್ಕಾರಕ್ಕೊಳಗಾದದ್ದು, ಆಕೆಯ ಮುಪ್ಪು ಮತ್ತು ಸಾವಿನವರೆಗಿನ ಬದುಕಿನ ಹಂತಗಳನ್ನು ಕಾಣಿಸುತ್ತದೆ ‘ತಿಪ್ಪಜ್ಜಿ ಸರ್ಕಲ್'. ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ವ್ಯಕ್ತಿ-ವಿಷಯ ಉತ್ತಮವಾದದ್ದೇ. ಆದರೆ ನಿರೂಪಣೆ ಸಾಧಾರಣ. ಅನಗತ್ಯ ದೃಶ್ಯಗಳು, ಸಂಭಾಷಣೆ ಸಿನಿಮಾದ ಕಾಲ ಹೆಚ್ಚಿಸಿರುವುದಲ್ಲದೆ ಕಥೆಗೂ ಭಾರ. ತಿಪ್ಪಜ್ಜಿ ಎನ್ನುವ ಸರ್ಕಲ್ ಸುತ್ತಲೇ ಆಮೆಗತಿಯಲ್ಲಿ ಸುತ್ತಿದ್ದಾರೆ ನಿರ್ದೇಶಕರು. - ಡಿ.ಎಂ.ಕುರ್ಕೆ ಪ್ರಶಾಂತ

  ದೇವದಾಸಿಯ ಪೂಜಾ ಫಲ - ಉದಯವಾಣಿ

  "ತಿಪ್ಪಿ ದೊಡ್ಡವಳಾದ್ಲು, ತಿಪ್ಪಿ ದೊಡ್ಡವಳಾದ್ಲು,, ತಿಪ್ಪಿ ದೊಡ್ಡವಳಾದ್ಲು,..' ಎಂಬ ಈ ಡೈಲಾಗ್‌ ಮೂಲಕ "ತಿಪ್ಪಜ್ಜಿ'ಯ ಕಥೆ ಬಿಚ್ಚಿಕೊಳ್ಳುತ್ತೆ. ಚಿತ್ರದುರ್ಗದ ತಿಪ್ಪಜ್ಜಿ ಎಂಬ ದೇವದಾಸಿಯ ಸುತ್ತ ನಡೆದ ನೈಜ ಕಥೆ ಈ ಚಿತ್ರದ ಜೀವಾಳ. ಅದಕ್ಕೆ ಪೂರಕ ಎನಿಸುವಂತಹ ಮಾತುಗಳ ಜೋಡಣೆ ಕೂಡ ಸಿನಿಮಾದ ಮತ್ತೂಂದು ಪ್ಲಸ್‌. ಗಟ್ಟಿ ಕಥೆಗೆ ತಕ್ಕಂತೆ ಚಿತ್ರಕಥೆಯಲ್ಲಿ ಇನ್ನೂ ಸ್ವಲ್ಪ ಬಿಗಿಹಿಡಿತ ಇರಬೇಕಿತ್ತು. ಮೊದಲರ್ಧದ ನಿರೂಪಣೆಯಲ್ಲಿ ಕೊಂಚ ಲವಲವಿಕೆ ಬೇಕಿತ್ತು. ಇವೆರೆಡು ಚಿತ್ರದ ವೇಗಕ್ಕೆ ಕೊಂಚ ಹಿನ್ನೆಡೆ ಎನ್ನಬಹುದು. ಇದನ್ನು ಹೊರತುಪಡಿಸಿದರೆ, "ತಿಪ್ಪಜ್ಜಿ ಸರ್ಕಲ್‌'ನಲ್ಲಿ ನಿಂತು ಹಾಗೊಮ್ಮೆ ಒಂದು ರೌಂಡು ಹಾಕಿ ಬರಲು ಅಡ್ಡಿಯಿಲ್ಲ. - ವಿಜಯ್ ಭರಮಸಾಗರ

  ತಿಪ್ಪಜ್ಜಿ ಸರ್ಕಲ್ : ಮನಪರಿವರ್ತನೆ ಮಾಡುವ ತಿಪ್ಪಜ್ಜಿ

  ತಿಪ್ಪಜ್ಜಿ ಎಂಬ ದೇವದಾಸಿಯ ಜೀವನ ಕತೆಯ ಮೂಲ ಸತ್ವಕ್ಕೆ, ನೈಜತೆಗೆ ಧಕ್ಕೆ ಬರದಂತೆ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಆದಿತ್ಯ ಚಿಕ್ಕಣ್ಣ. ಮನರಂಜನೆಗಾಗಿ ಮಾತ್ರ ಸಿನಿಮಾ ನೋಡದೆ, ಸಮಾಜದಲ್ಲಿ ತುಚ್ಛವಾಗಿ ಕಾಣಲ್ಪಡುವ ದೇವದಾಸಿ ಹೆಣ್ಣು ಕೂಡಾ ಹೇಗೆ ಉತ್ತಮಳಾಗಿರುತ್ತಾಳೆ ಎಂಬುದನ್ನು ಅರಿಯಲು ತಿಪ್ಪಜ್ಜಿ ಸರ್ಕಲ್ ಚಿತ್ರವನ್ನು ನೋಡಬೇಕು. - ಪದ್ಮಾ ಶಿವಮೊಗ್ಗ

  Thippaji Circle - Movie Review - Times of India

  Thippaji, a devadasi, leads her life the way her mother has taught her. What happens when her educated daughter wants to break away from the tradition and marry a man of her choice?

  This story is based on a novel and follows the life of a devadasi. The film doesn't preach, but just tells the tale set in the time devadasis existed in a small town of Karnataka. The movie is interesting in the way director Aditya Chikkanna has narrated it, staying true to the look and props of the time it has been shot in.

  While at face value it is a story about a devadasi who leads her life in sync with the system and is also a kind-hearted soul liked by all, deeper down it is a tale of desire, ambition and generation gap, told in a subtle and effective way. - Sunayana Suresh

  English summary
  Kannada Actress Pooja Gandhi starrer Kannada Movie 'Thippaji Circle' has received mixed response from the critics. Here is the collection of reviews by Top News Papers of Karnataka.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more