»   » ವಿಮರ್ಶೆ : ಮಾಸ್ ಪ್ರೇಕ್ಷಕರ ಮನ ತಣಿಸುವ 'ಟೈಗರ್'

ವಿಮರ್ಶೆ : ಮಾಸ್ ಪ್ರೇಕ್ಷಕರ ಮನ ತಣಿಸುವ 'ಟೈಗರ್'

Posted By:
Subscribe to Filmibeat Kannada

'ಟೈಗರ್' ಒಂದು ಪವರ್ ಫುಲ್ ಸಿನಿಮಾ. ಮಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಮೂವಿ. ಅಪ್ಪ ಮಗನ ಸೆಂಟಿಮೆಂಟ್ ಜೊತೆ ಜೊತೆಗೆ ಪೊಲೀಸ್ ವ್ಯವಸ್ಥೆಯ ಮೇಲೆ ಸಿನಿಮಾದ ಕಥೆ ಇದೆ. ಪೊಲೀಸ್ ಅಧಿಕಾರಿಗಳ ಜೀವನ, ಕಷ್ಟ, ಅವರ ಶ್ರಮ, ಎಲ್ಲವನ್ನು ಸಿನಿಮಾದಲ್ಲಿ ಕಮರ್ಶಿಯಲ್ ಆಗಿ ತೋರಿಸಿದ್ದಾರೆ.

Rating:
3.0/5

ಚಿತ್ರ : ಟೈಗರ್

ನಿರ್ಮಾಣ: ಶ್ರೀಮತಿ ಚಿಕ್ಕಬೋರಮ್ಮ

ನಿರ್ದೇಶನ: ನಂದ ಕಿಶೋರ್

ಸಂಗೀತ: ಅರ್ಜುನ್ ಜನ್ಯ

ಸಂಕಲನ: ಕೆ.ಎಂ.ಪ್ರಕಾಶ್

ತಾರಾಗಣ: ಪ್ರದೀಪ್, ನೈರಾ ಬ್ಯಾನರ್ಜಿ, ಕೆ ಶಿವರಾಮ್, ಪಿ. ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲಾ ಮತ್ತು ಇತರರು.

ಬಿಡುಗಡೆ ದಿನಾಂಕ: ಜೂನ್ 16, 2017

ಪವರ್ ಫುಲ್ ಎಂಟ್ರಿ

'ಟೈಗರ್' ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ತೋರಿಸಿರುವ ಹಾಗೆ ಇದು ಪ್ರದೀಪ್ ಅವರನ್ನು ಮತ್ತೆ ಪರಿಚಯಿಸಿದ ಸಿನಿಮಾ. ಅದಕ್ಕೆ ತಕ್ಕಂತೆ ಸಿನಿಮಾದಲ್ಲಿ ಅವರ ಎಂಟ್ರಿ ಜೋರಾಗಿದೆ. ಶಿವನ ಗೆಟಪ್ ನಲ್ಲಿ ಬರುವ 'ಟೈಗರ್' ಖದರ್ ಮೊದಲ ಸೀನ್ ನಿಂದಲೇ ಶುರುವಾಗುತ್ತೆ.

ಅಪ್ಪ ಮಗನ ಕಥೆ

ಚಿತ್ರದ ನಾಯಕ ಅಶೋಕ್ ನಾಯಕ್ (ಪ್ರದೀಪ್) ತಾನು ಪೊಲೀಸ್ ಆಗಬೇಕು ಅಂತ ಕನಸು ಇಟ್ಟುಕೊಂಡಿರುತ್ತಾನೆ. ಇತ್ತ ಅವರ ಅಪ್ಪ ಶಿವರಾಂ ನಾಯಕ್ (ಶಿವರಾಂ)ಗೆ ಮಗ ಪೊಲೀಸ್ ಆಗುವುದು ಸ್ವಲ್ಪವೂ ಇಷ್ಟ ಇರುವುದಿಲ್ಲ. ಹೀಗೆ ಸಾಗುವ ಚಿತ್ರದ ಕಥೆ ಸೆಕೆಂಡ್ ಹಾಫ್ ನಲ್ಲಿ ಬೇರೆಯದ್ದೇ ತಿರುವು ಪಡೆದುಕೊಳ್ಳುತ್ತೆ. ಯಾಕೆ ಅಪ್ಪ ತನ್ನ ಮಗನನ್ನು ಪೊಲೀಸ್ ಆಗುವುದಕ್ಕೆ ಬಿಡುವುದಿಲ್ಲ ಎನ್ನುವುದು ಚಿತ್ರದ ಒಂದು ಸಸ್ಪೆನ್ಸ್ ಎಲಿಮೆಂಟ್.

ನಾಯಕಿಗಾಗಿ ಹೋರಾಟ

ಆಕಸ್ಮಿಕವಾಗಿ ಸಿಗುವ ನಾಯಕಿ ಗೌರಿ (ನೈರಾ ಬ್ಯಾನರ್ಜಿ) ಮೇಲೆ ನಾಯಕನಿಗೆ ಲವ್ ಆಗುತ್ತೆ. ಆಪತ್ತಿನಲ್ಲಿರುವ ಆಕೆಯನ್ನು ಕಾಪಾಡಲು ಹೊರಡುವ ನಾಯಕ ಮುಂದೆ ದೊಡ್ಡ ರಿಸ್ಕ್ ತೆಗೆದುಕೊಂಡು, ದೊಡ್ಡ ಡಾನ್ ಮತ್ತು ಎಂ.ಎಲ್.ಎ ವಿರುದ್ದ ತಿರುಗಿ ಬೀಳುತ್ತಾನೆ.

ಮುಂಬೈ ಡಾನ್ ಆಗಿ ರವಿಶಂಕರ್

ಸಿನಿಮಾದಲ್ಲಿ ನಾಯಕನ ಪಾತ್ರಕ್ಕೆ ಪೈಪೋಟಿ ಕೊಡುವ ಪಾತ್ರ ನಟ ರವಿಶಂಕರ್ ಅವರದ್ದು. ಎಂದಿನಂತೆ ತೆರೆ ಮೇಲೆ ಅವರ ಖದರ್ ಮುಂದುವರೆದಿದೆ. ಇಲ್ಲಿ ಮುಂಬೈ ಡಾನ್ ಆಗಿ ರವಿಶಂಕರ್ ಕಾಣಿಸಿಕೊಂಡಿದ್ದಾರೆ.

ಖಾಕಿ ಖದರ್

ಸಿನಿಮಾದಲ್ಲಿ ಪೊಲೀಸ್ ವ್ಯವಸ್ಥೆಗೆ ತುಂಬ ಪ್ರಾಮುಖ್ಯತೆ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳ ಕಷ್ಟ, ಅವರ ನೋವು, ಜನರಿಗಾಗಿ ಅವರ ತ್ಯಾಗ ಎಲ್ಲವನ್ನು ಸಿನಿಮಾದಲ್ಲಿ ಚೆನ್ನಾಗಿ ಬಿಂಬಿಸಿದ್ದಾರೆ.

ನಟನೆ ಹೇಗಿದೆ

ಫೈಟ್ಸ್, ಡ್ಯಾನ್ಸ್ ನಲ್ಲಿ ಚಿಂದಿ ಉಡಾಯಿಸಿರುವ ಪ್ರದೀಪ್ ನಟನೆ ಇನ್ನಷ್ಟು ಸಹಜವಾಗಿ ಇರಬಹುದುದಾಗಿತ್ತು. ಚಿತ್ರದಲ್ಲಿ ಡೈಲಾಗ್ಸ್ ಸ್ವಲ್ಪ ಜಾಸ್ತಿನೇ ಇದೆ. ಇನ್ನು ಶಿವರಾಂ ಮತ್ತು ರವಿಶಂಕರ್ ಚಿತ್ರದ ಎರಡನೇ ನಾಯಕ ಅಂದ್ರೆ ತಪ್ಪಾಗೋದಿಲ್ಲ. ನಾಯಕಿ ಪಾತ್ರಕ್ಕೆ ಚಿತ್ರದಲ್ಲಿ ಹೆಚ್ಚಾಗಿ ಪ್ರಾಮುಖ್ಯತೆ ಇಲ್ಲ.

ಉಳಿದವರ ಅಭಿನಯ

ಅವಿನಾಶ್ ಮತ್ತು ಖಳ ನಟ ದೀಪಕ್ ಶೆಟ್ಟಿ, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿಕ್ಕಣ್ಣ, ಸಾಧು ಕೊಕಿಲ, ರಂಗಾಯಣ ರಘು ಕಾಮಿಡಿ ನೋಡುಗರಿಗೆ ಕಿಕ್ ಕೊಡುತ್ತೆ. ಇನ್ನು ಚಿತ್ರದ ಐಟಂ ಸಾಂಗ್ ನಲ್ಲಿ ರಾಗಿಣಿ ಹೆಜ್ಜೆ ಹಾಕಿದ್ದಾರೆ.

ಸಂಗೀತ - ಸಾಹಸ

ಅರ್ಜುನ್ ಜನ್ಯ ಸಂಗೀತದ ಎರಡು ಹಾಡು ಚೆನ್ನಾಗಿದೆ. ಹಿನ್ನಲೆ ಸಂಗೀತ ಚಿತ್ರದ ಖದರ್ ಜೋರಾಗುವಂತೆ ಮಾಡಿದೆ. ಆಕ್ಷನ್ ಸಿನಿಮಾವಾಗಿರುವ 'ಟೈಗರ್'ನಲ್ಲಿ ಸಿಕ್ಕಾಪಟ್ಟೆ ಮೈನವಿರೇಳಿಸುವ ಸಾಹಸ ಇದೆ.

ನಿರ್ದೇಶಕರ ಕೆಲಸ

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟಿದ್ದ ನಂದ ಕಿಶೋರ್ ಈಗ ಸ್ವಮೇಕ್ ಸಿನಿಮಾ ಮಾಡಿ ಗೆಲುವಿನ ಯಾತ್ರೆ ಮುಂದುವರೆಸುವ ಸೂಚನೆ ನೀಡಿದ್ದಾರೆ. ದುಡ್ಡು ಕೊಟ್ಟು ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕನನ್ನು ಈ ಚಿತ್ರದಲ್ಲೂ ನಂದಕಿಶೋರ್ ನಿರಾಸೆಯಿಂದ ಕಳಿಸಲ್ಲ.

ಒಟ್ಟಾರೆ ಸಾರಾಂಶ

ಟೋಟಲ್ಲಾಗಿ 'ಟೈಗರ್' ಸಿನಿಮಾವನ್ನು ಆರಾಮಾಗಿ ನೋಡಬಹುದು. ಮಾಸ್ ಪ್ರೇಕ್ಷಕರಿಗೆ ಟೈಗರ್ ಸಿನಿಮಾ ಹಬ್ಬದೂಟ. ಸಾಮಾನ್ಯ ಪ್ರೇಕ್ಷಕರು ಇಷ್ಟ ಪಡುವ ಎಲ್ಲ ಅಂಶಗಳು ಸಿನಿಮಾದಲ್ಲಿದೆ.

English summary
Pradeep starrer Kannada Movie 'TIGER' has hit the screens today (June 16th). The movie is out and out action entertainer and is a treat for mass audience. 'TIGER' Review is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada