Just In
Don't Miss!
- Sports
ಸಯ್ಯದ್ ಮುಷ್ತಾಕ್ ಅಲಿ ಟಿ20: ಕ್ವಾರ್ಟರ್ ಫೈನಲ್ಗೇರಿದ ಕರ್ನಾಟಕ
- Automobiles
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- News
ಹಣ ದುಪ್ಪಟ್ಟು ಆಮಿಷ; ಲಕ್ಷಾಂತರ ರೂ. ವಂಚನೆ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Odeya Review: ಅಣ್ಣತಮ್ಮಂದಿರ ಮಾಸ್, ಕ್ಲಾಸ್ ಮಸಾಲ
'ಒಡೆಯ' ಮಾಸ್ ಹಾಗೂ ಕ್ಲಾಸ್ ಸಿನಿಮಾ. ಇಲ್ಲಿ ಖಾರದ ಫೈಟ್ ಗಳು ಇವೆ, ಜೊತೆಗೆ ಕುಟುಂಬದ ಸಿಹಿಯೂ ಇಲ್ಲಿದೆ. ಇದು 'ವೀರಂ' ಸಿನಿಮಾ ರಿಮೇಕ್ ಆಗಿದ್ದು, ಬೇರೆ ಅಂಶಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕಾಮಿಡಿ, ಲವ್, ಅಣ್ಣತಮ್ಮಂದಿರ ಸಂಬಂಧ ತುಂಬಿರುವದ ಕಮರ್ಷಿಯಲ್ ಪ್ಯಾಕೇಜ್ 'ಒಡೆಯ'.

ಗಜೇಂದ್ರ ಮದುವೆಯಿಂದ ದೂರ
ಅಣ್ಣ ಗಜೇಂದ್ರ (ದರ್ಶನ್). ಆತನಿಗೆ ನಾಲ್ಕು ತಮ್ಮಂದಿರು. ಪ್ರೀತಿ, ಪ್ರೇಮ, ಮದುವೆಯಿಂದ ದೂರ ಇರುವ ಅಣ್ಣನಿಗೆ ತಮ್ಮಂದಿರೇ ಅತ್ತಿಗೆಯನ್ನು ಹುಡುಕಿ ಕೊಡುತ್ತಾರೆ. ಹೊಡೆದಾಟದಲ್ಲೇ ಬದುಕಿರೋ ಗಜೇಂದ್ರ ಹಾಗೂ ಶಾಂತಿಪ್ರಿಯೆ ಶಾಕಾಂಬರ ದೇವಿ (ಸನಾ ತಿಮಯ್ಯ) ನಡುವೆ ಪ್ರೀತಿ ಮೂಡುತ್ತದೆ. ಆದರೆ, ಗಜೇಂದ್ರನ ಸತ್ಯಾಂಶ ತಿಳಿದು ಆಕೆ ದೂರವಾಗುತ್ತಾಳೆ.

ಮತ್ತೆ ಹೊಡೆದಾಟಕ್ಕೆ ಇಳಿಯುವ ಗಜೇಂದ್ರ
ಪ್ರೀತಿಸಿದ ಹುಡುಗಿಗಾಗಿ ಹೊಡೆದಾಟ ಬಿಡುವ ಗಜೇಂದ್ರ ಮತ್ತೆ ಆಕೆಯ ಕುಟುಂಬಕ್ಕಾಗಿಯೇ ರಕ್ತ ಸುರಿಸುತ್ತಾನೆ. ಇದು ಸಿನಿಮಾದ ಕಥೆಯಾಗಿದೆ. ಇದರ ನಡುವೆ ಅಣ್ಣ ತಮ್ಮಂದಿರ ಬಾಂದವ್ಯ, ಜಾತಿ ಜಗಳ, ಅಪ್ಪ ಮಗಳ ಅನುಬಂಧ ಕಥೆಯ ಭಾಗವಾಗಿದೆ. 'ವೀರಂ' ಸಿನಿಮಾದ ರಿಮೇಕ್ ಆಗಿದ್ದು, ಕಥೆಯಲ್ಲಿ ದೊಡ್ಡ ಬದಲಾವಣೆ ಮಾಡಿಕೊಂಡಿಲ್ಲ.

ಮಾಸ್ ಲೀಡರ್ ದರ್ಶನ್
ಗಜೇಂದ್ರನಾಗಿ ದರ್ಶನ್ ಮಿಂಚಿದ್ದಾರೆ. ಎಂದಿನಂತೆ ತಮ್ಮ ಮಾಸ್ ಡೈಲಾಗ್ ಹಾಗೂ ಫೈಟ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ತಮ್ಮ ಹಳೆ ಸ್ಟೈಲ್ ಗೆ ಡಿ ಬಾಸ್ ಮರಳಿದ್ದಾರೆ. ಅವರ ಪಾತ್ರಕ್ಕೆ ಎರಡು ಶೇಡ್ ಇದೆ. ತಮ್ಮಂದಿರಿಗೆ ಪ್ರೀತಿಯ ಅಣ್ಣನಾಗಿ, ರೌಡಿಗಳಿಗೆ ಎದುರಾಳಿಯಾಗಿ ಅವರು ಕಾಣಿಸಿಕೊಂಡಿದ್ದಾರೆ.

ತಮ್ಮಂದಿರು, ಉಳಿದವರು
ದರ್ಶನ್ ತಮ್ಮಂದಿರಿಗೆ ಸಿನಿಮಾದಲ್ಲಿ ನಟನೆಗೆ ಅವಕಾಶ ಇದೆ. ಆ ಕಲಾವಿದರು ಇನ್ನಷ್ಟು ಚೆನ್ನಾಗಿ ನಟನೆ ಮಾಡಬಹುದಿತ್ತು. ನಾಯಕಿ ಸನಾ ಆಕ್ಟಿಂಗ್ ಸಾಧಾರಣ. ದೇವರಾಜ್ ಗಂಭೀರ ನಟನೆ ಚೆನ್ನಾಗಿದೆ. ಚಿಕ್ಕಣ್ಣ ನಗಿಸುತ್ತಾರೆ. ಸಾಧು ಕಾಮಿಡಿ ಅದೇ ಶೈಲಿಯಲ್ಲಿ ಇದೆ. ರವಿಶಂಕರ್, ಶರತ್ ಲೋಹಿತಾಶ್ವ ಖಳನಾಯಕರಾಗಿ ಖದರ್ ತೋರಿಸಿದ್ದಾರೆ.

ಸಂಗೀತ
'ಒಡೆಯ' ಸಿನಿಮಾದ ಹಾಡುಗಳು ಚೆನ್ನಾಗಿಲ್ಲ ಎನ್ನುವ ಆರೋಪ ಅನೇಕ ದಿನಗಳಿಂದ ಇತ್ತು. ಚಿತ್ರಮಂದಿರದಲ್ಲಿ ಕೂಡ ಹಾಡುಗಳು ಅಷ್ಟೊಂದು ಮಜಾ ನೀಡುವುದಿಲ್ಲ. ಹಾಡುಗಳಿಗೆ ಹೋಲಿಕೆ ಮಾಡಿದರೆ, ಹಿನ್ನೆಲೆ ಸಂಗೀತ ಚೆನ್ನಾಗಿದೆ. ಹಾಡುಗಳ ಚಿತ್ರೀಕರಣ ಚೆನ್ನಾಗಿ ಆಗಿದೆ. ಕ್ಯಾಮರಾ ಮ್ಯಾನ್ ಕೆಲಸಕ್ಕೆ ಮೆಚ್ಚುಗೆ ನೀಡಬೇಕು.

ಸಾಹಸಮಯ ಸಿನಿಮಾ
'ಒಡೆಯ' ಒಂದು ಸಾಹಸಮಯ ಸಿನಿಮಾ. ಫಸ್ಟ್ ಹಾಫ್ ಹಾಗೂ ಸೆಕೆಂಡ್ ಹಾಫ್ ಎರಡರಲ್ಲಿಯೂ ಹೊಡೆದಾಟ ತುಂಬಿಕೊಂಡಿದೆ. ಕೆಲವು ಫೈಟ್ ಗಳು ತುಂಬ ಚೆನ್ನಾಗಿದೆ. ಇಡೀ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗಿದೆ. ಅದೇ ಫೈಟ್ಸ್, ಅದೇ ಹಾಡುಗಳು, ಅದೇ ರೀತಿಯ ಕಥೆ ಇರುವ ಕಾರಣ ಕೆಲವು ಕಡೆ ಸಿನಿಮಾ ಬೋರ್ ಆಗುತ್ತದೆ.

ಹೊಸತನದ ನಿರೀಕ್ಷೆ ಬೇಡ
ದರ್ಶನ್ ಅಭಿಮಾನಿಗಳು, ಕಮರ್ಷಿಯಲ್ ಸಿನಿಮಾ ಇಷ್ಟ ಪಡುವವರು, ಹೊಡೆದಾಟ ನೋಡಬೇಕು ಎನ್ನುವವರು 'ಒಡೆಯ'ನ ದರ್ಶನ ಮಾಡಬಹುದು. ಹೊಸತನದ ನಿರೀಕ್ಷೆ ಇಲ್ಲದೆ ಚಿತ್ರಮಂದಿರಕ್ಕೆ ಹೋದರೆ ನಿಮಗೆ ಮನರಂಜನೆ ಸಿಗಬಹುದು.