For Quick Alerts
  ALLOW NOTIFICATIONS  
  For Daily Alerts

  ಕ್ವೀನ್ : ಕಂಗನಾ ಮನರಂಜನೆಯ ಮಹಾ'ರಾಣಿ'

  By ಜೇಮ್ಸ್ ಮಾರ್ಟಿನ್
  |

  ಕಂಗನಾ ಇಸ್ ಬ್ಯಾಕ್. ಕ್ವೀನ್ ಚಿತ್ರದ ಮೂಲಕ ಮತ್ತೊಮ್ಮೆ ಕಂಗನಾ ರಾನೌತ್ ಎಂಬ ಬೆಡಗಿ ಬೆಳ್ಳಿ ಪರದೆಯಲ್ಲಿ ಮಿಂಚಿದ್ದಾಳೆ. ಮದುವೆ ಸುತ್ತ ಸುತ್ತುರ್ವ ಮೂಮೂಲಿ ಬಾಲಿವುಡ್ ಚಿತ್ರಗಳಿಗೆ ಈ ಪಂಜಾಬಿ ಕ್ವೀನ್ ಕಿಚ್ಚು ಹಚ್ಚಿದ್ದಾಳೆ.

  ಮದುವೆ ದಿನಕ್ಕೂ ಎರಡು ದಿನ ಮುಂಚಿತವಾಗಿ ಆಕೆಯ ಭಾವಿ ಪತಿ ಕೈಗೊಟ್ಟಿರುತ್ತಾನೆ.(ರಾಜಕುಮಾರ್ ರಾವ್ ಪಾತ್ರಧಾರಿ) ಆದರೆ, ಸಾಮಾನ್ಯವಾಗಿ ಇಲ್ಲಿಂದ ಕಥೆ ಗೋಳಿನ ಮೂಡ್ ಗೆ ತೆರಳುವ ಸಾಧ್ಯತೆಯೇ ಹೆಚ್ಚು. ಆದರೆ, ಕಂಗನಾ ತನ್ನ ಗ್ರಾಮದಿಂದ ಹೊರಬಿದ್ದು ತನ್ನ ದುಃಖವನ್ನು ಕಳೆಯಲು ಹನಿಮೂನ್ ಗೆ ತೆರಳುತ್ತಾಳೆ. ಫ್ರಾನ್ಸ್ ಯುರೋಪಿನಲ್ಲಿ ಮೋಜು ಮಸ್ತಿ ಮಾಡುತ್ತಾಳೆ.

  Queen Movie Review: A Must Watch, As Kangana Is Superb!

  ಹಳ್ಳಿ ಹುಡುಗಿ ಕಂಗನಾ ಮೊದಲ ಬಾರಿ ಮದ್ಯಪಾನ ಮಾಡುವ ದೃಶ್ಯ ಸಕತ್ ಆಗಿ ಮೂಡಿ ಬಂದಿದೆ. ನಿರ್ದೇಶಕ ವಿಕಾಸ್ ಬಾಹ್ಲ್ ಪ್ರತಿ ದೃಶ್ಯದಲ್ಲೂ ಏನೋ ಹೇಳಲು ಹೊರಟ್ಟಂತೆ ತೋರುತ್ತದೆ.ಇಡೀ ಚಿತ್ರವನ್ನು ಕಂಗನಾ ಆಕ್ರಮಿಸಿದಂತೆ ಕೂಡಾ ಭಾಸವಾಗುತ್ತದೆ. ಆದರೆ, ನಿಮಗೆಲ್ಲೂ ಬೋರ್ ಹೊಡೆಸಲ್ಲ. ಪ್ರತಿ ಮಹಿಳೆಯಲ್ಲೂ ತನ್ನ ನೋವು ಮರೆತು ನೆಮ್ಮದಿಯ ಹಾದಿ ಕಾಣುವ ಶಕ್ತಿ ಇರುತ್ತದೆ ಅದನ್ನು ನೀವೆ ಕಂಡು ಕೊಳ್ಳಬೇಕು ಎಂಬುದನ್ನು ಸರಳವಾಗಿ ಮನರಂಜನೆ ಮೂಲಕ ನಿರ್ದೇಶಕ ವಿಕಾಸ್ ತೋರಿಸಿದ್ದಾರೆ.

  ಮಹಿಳಾ ದಿನಾಚರಣೆ ಅಂಗವಾಗಿ ಕಂಗನಾರಿಂದ ಇದು ಒಳ್ಳೆ ಉಡುಗೊರೆ ಎನ್ನಬಹುದು. ಚಿತ್ರದ ಆರಂಭ ಸ್ವಲ್ಪ ಸ್ಲೋ ಎನಿಸುತ್ತದೆ. ಅಲ್ಲದೆ, ಹಾಡುಗಳ ಅಬ್ಬರವೂ ಬೇಕಿತ್ತಾ ಎಂಬ ಪ್ರಶ್ನೆ ಮೂಡುತ್ತದೆ. ಚಿತ್ರವನ್ನು ಮುನ್ನಡೆಸಿ ಮನರಂಜನೆಯ ಮಹಾಪೂರ ಹರಿಸುವುದು ಬಬ್ಲಿ ಕ್ವೀನ್ ಕಂಗನಾ.. ಈ ವಾರ ತಪ್ಪದೇ ಚಿತ್ರ ನೋಡಿ ಆನಂದಿಸಿ..ವಿಮರ್ಶಕರ ಮೆಚ್ಚುಗೆ ಪಡೆದಿರುವ ಈ ಚಿತ್ರದ ಬಗ್ಗೆ ಇತರೆ ವೆಬ್ ತಾಣಗಳ ವಿಮರ್ಶೆ ಮುಂದೆ ಓದಿ...

  ಎನ್ ಡಿಟಿವಿ ಮೂವೀಸ್ 4/5

  ಎನ್ ಡಿಟಿವಿ ಮೂವೀಸ್ 4/5

  Don't miss Queen for anything. It is a sparkling little gem. ಕಂಗನಾ ಪ್ರತಿಭೆಗೆ ಒಂದು ನಮನ. ಎಲ್ಲರೂ ಮುಕ್ತವಾಗಿ ಮೆಚ್ಚುವಂತ ಚಿತ್ರ ನೀಡಿದ್ದಾರೆ ವಿಕಾಸ್

  ರೀಡಿಫ್ : 4/5 ಮಸ್ತ್ ಮೂವಿ

  ರೀಡಿಫ್ : 4/5 ಮಸ್ತ್ ಮೂವಿ

  ಚಿತ್ರದ ಪ್ರತಿ ದೃಶ್ಯದಲ್ಲೂ ಹೊಸತನ ಕಂಡು ಬರುತ್ತದೆ. ಇಂಗ್ಲೀಷ್ ವಿಂಗ್ಲೀಷ್ ಚಿತ್ರದ ಶ್ರೀದೇವಿ, ಫ್ರೆಂಚ್ ಕಿಸ್ ಚಿತ್ರದ ಮೆಗ್ ರಯಾನ್ ನೆನಪಿಸುವಂಥ ರಾಣಿ ಪಾತ್ರಧಾರಿ ಕಂಗನಾ ಎಲ್ಲರ ಮೆಚ್ಚುಗೆ ಗಳಿಸುತ್ತಾರೆ. ವಿಕಾಸ್ ನಿರೂಪಣೆ ಮನರಂಜನೆ ಜತೆ ಚಿಂತನೆಗೆ ಒಡ್ಡುತ್ತದೆ

  ಕ್ವೀನ್ : ಶುಭ್ರಾ ಗುಪ್ತಾ 4/5

  ಕ್ವೀನ್ : ಶುಭ್ರಾ ಗುಪ್ತಾ 4/5

  ಮಹಿಳಾ ಪ್ರಧಾನ ಚಿತ್ರಗಳು ಬಾಲಿವುಡ್ ನಲ್ಲಿ ಹೊಸದೇನಲ್ಲ. ಆದರೆ, ಇಲ್ಲಿ ಜೀವನ ಉತ್ಸಾಹ ಲವಲವಿಕೆಯನ್ನು ರಾಣಿ ಪಾತ್ರದ ಮೂಲಕ ತೋರಿಸಲಾಗಿದೆ. ಚಿಲ್ಲರ್ ಪಾರ್ಟಿ ನಂತರ ವಿಕಾಸ್ ಮಸ್ತ್ ಮಜಾ ಮಾಡುವ ಸಿನಿಮಾ ತಂದಿದ್ದಾರೆ. ಇದಕ್ಕೆ ಕಂಗನಾ ಜೀವ ತುಂಬಿದ್ದಾರೆ.

  ಯಾಹೂ : ರುಮ್ಮನಾ ಅಹ್ಮದ್ 4/5

  ಯಾಹೂ : ರುಮ್ಮನಾ ಅಹ್ಮದ್ 4/5

  ಬದುಕು ಸಂತೋಷಮಯ ಯಾತನೆಗಳು ಮರೆಯಲು ಯಾನ ಅನುಕೂಲ ರಾಣಿ ಎಂಬ ಪಾತ್ರ ಸೃಷ್ಟಿಸಿದ ವಿಕಾಸ್ ಗೆ ಕಂಗನಾಗಿಂತ ಉತ್ತಮ ನಟಿ ಸಿಗುತ್ತಿರಲಿಲ್ಲ. ಪರಕಾಯ ಪ್ರವೇಶ ಮಾಡಿದಂತೆ ರಾಣಿ ನಿಮ್ಮ ಮನ ಮುಟ್ಟುತ್ತದೆ.ಬಾಲಿವುಡ್ ಸಿದ್ದಸೂತ್ರಗಳನ್ನು ತೊಡೆದು ಹಾಕಿದ ಚಿತ್ರ ಇದಾಗಿದೆ.

  ಪಾತ್ರಕ್ಕೆ ಫುಲ್ ಮಾರ್ಕ್ಸ್ koimoi

  ಪಾತ್ರಕ್ಕೆ ಫುಲ್ ಮಾರ್ಕ್ಸ್ koimoi

  ರಾಣಿ ಪಾತ್ರಕ್ಕೆ ಪಾತ್ರಕ್ಕೆ ಫುಲ್ ಮಾರ್ಕ್ಸ್, ಚಿತ್ರಕ್ಕೆ 4/5. ಸುಂದರ ಆಪ್ತ ದೃಶ್ಯಗಳೇ ಚಿತ್ರದ ಜೀವಾಳ. ಚಿತ್ರದಲ್ಲಿ ಕಥೆಗೆ ಹೆಚ್ಚಿನ ಒತ್ತು ಇಲ್ಲ. ಆದ್ರೆ, ಸನ್ನಿವೇಶಗಳನ್ನು ಎಳೆದಾಡದೆ ವಿಕಾಸ್ ಪ್ರೇಕ್ಷಕರನ್ನು ಕೊನೆವರೆಗೂ ಸೀಟಿನಲ್ಲಿ ಕೂರಿಸುತ್ತಾರೆ.

  ಇಂಡಿಯಾ ಟುಡೇ 4/5

  ಇಂಡಿಯಾ ಟುಡೇ 4/5

  ಗಾಯತ್ರಿ ಜಯರಾಮನ್ ರಾಣಿ ಪಾತ್ರದ ಗುಂಗಿನಲ್ಲಿ ಪ್ರೇಕ್ಷಕರು ಮನೆಗೆ ತೆರಳಬಹುದು ಎಂದಿದ್ದಾರೆ

  "From the languid shoulder-dropping shuffle to the confident canter of a woman set free, a woman happy in herself, Queen is a journey of self transformation every woman, dumped at the altar or not, must take."

  English summary
  The much talked about movie Queen has it all that can make you convinced to watch this flick which perhaps portrays Kangana's one of the best ever performances till date. Queen is all about a conservative Punjabi girl, Kangana Ranaut as Rani who gets dumped by her fiancé, played by Rajkumar Rao just two days

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X