For Quick Alerts
  ALLOW NOTIFICATIONS  
  For Daily Alerts

  'ಪ್ರಯಾಣಿಕರ ಗಮನಕ್ಕೆ' ಸಿನಿಮಾ ನೋಡಿ ವಿಮರ್ಶಕರು ಮಾಡಿದ ಕಾಮೆಂಟ್ಸ್ ಏನು.?

  By Harshitha
  |

  ಮನೋಹರ್ ನಿರ್ದೇಶನದ ಭರತ್ ಸರ್ಜಾ, ಲೋಕೇಶ್, ದೀಪಕ್ ಶೆಟ್ಟಿ ಅಭಿನಯದ 'ಪ್ರಯಾಣಿಕರ ಗಮನಕ್ಕೆ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ.

  ಕ್ರೌರ್ಯ ಹಾಗೂ ಮಾನವೀಯತೆ ನಡುವಿನ ಸಂಘರ್ಷ ಹೊಂದಿರುವ ಈ ಸಿನಿಮಾದಲ್ಲಿ ಯಾವುದನ್ನೂ ಅತೀ ಮಾಡಿಲ್ಲ. ಅನವಶ್ಯಕವಾಗಿ ಹಾಡುಗಳನ್ನು ತುರುಕಿಲ್ಲ. ಬೇಕು ಅಂತ ಕಾಮಿಡಿ ಮಿಕ್ಸ್ ಮಾಡಿಲ್ಲ. ಕೊಂಚ ನಿಧಾನಕ್ಕೆ ಸಾಗುವ ಈ ಪ್ರಯಾಣದಲ್ಲಿ ಪ್ರೇಕ್ಷಕರಿಗೆ ಸ್ವಲ್ಪ ರೋಚಕತೆ ಮಿಸ್ ಆಗಿದೆ.

  ಒಂದೊಳ್ಳೆ ಸಂದೇಶ ಸಾರುವ 'ಪ್ರಯಾಣಿಕರ ಗಮನಕ್ಕೆ' ಸಿನಿಮಾ ನೋಡಿ ಪ್ರೇಕ್ಷಕರಂತೂ ಪರ್ವಾಗಿಲ್ಲ ಅಂತಿದ್ದಾರೆ. ಆದ್ರೆ, ವಿಮರ್ಶಕರಿಗೆ ಈ ಸಿನಿಮಾ ಹೇಗನಿಸಿತು.?

  ವಿಮರ್ಶೆ: ಕ್ರೂರ ಮನಸ್ಸನ್ನ ಕೊಲ್ಲುವ 'ಪ್ರಯಾಣ'ವಿಮರ್ಶೆ: ಕ್ರೂರ ಮನಸ್ಸನ್ನ ಕೊಲ್ಲುವ 'ಪ್ರಯಾಣ'

  ಈ ಪ್ರಶ್ನೆಗೆ ಉತ್ತರ ಇಲ್ಲಿದೆ. 'ಪ್ರಯಾಣಿಕರ ಗಮನಕ್ಕೆ' ಸಿನಿಮಾ ನೋಡಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

  ಕಲ್ಲು ಹೃದಯವನ್ನೂ ಕರಗಿಸಿದ ಮಾನವ ಪ್ರೀತಿ: ವಿಜಯ ಕರ್ನಾಟಕ

  ಕಲ್ಲು ಹೃದಯವನ್ನೂ ಕರಗಿಸಿದ ಮಾನವ ಪ್ರೀತಿ: ವಿಜಯ ಕರ್ನಾಟಕ

  ಚಿತ್ರದಲ್ಲಿ ಕಥೆಯೇ ಹೀರೋ. ನಿರ್ದೇಶನದಲ್ಲಿ ಸ್ವಲ್ಪ ಎಡವಿದ್ದರೂ ಜಾಳಾಗಬಹುದಾಗಿದ್ದ ಸಿನಿಮಾವನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಕ್ರೌರ್ಯಕ್ಕೂ ಮಾನವೀಯತೆ ನಡುವಿನ ಸಂಘರ್ಷ, ಕ್ರೌರ್ಯದ ಹಿಂದೆ ಮನಹಿಂಡುವ ನೋವಿನ ಕಥೆ ಇದೆ. ದ್ವೇಷ, ಮನುಷ್ಯತ್ವ ಮುಖಾಮುಖಿಯಾಗುತ್ತದೆ. ಇವೆಲ್ಲವನ್ನೂ ಮೀರಿದ ವಿಧಿಯಾಟದ ಅಟ್ಟಹಾಸವೂ ಇದೆ. ಹೀಗೆ ಎಲ್ಲವನ್ನೂ ಹದವಾಗಿ ಹೆಣೆದು ಉತ್ತಮ ನಿರೂಪಣೆಯಿಂದ ಗಮನ ಸೆಳೆದಿದ್ದಾರೆ. ಹಾಸ್ಯ ನಗು ಮೂಡಿಸುತ್ತದೆ. ಚುರುಕಾದ ಮತ್ತು ಕುತೂಹಲಕಾರಿಯಾದ ಸ್ಕ್ರಿಪ್ಟ್‌ ಮತ್ತು ಸ್ಕ್ರೀನ್ ಪ್ಲೇ ಮಾಡಿ ನಿರ್ದೇಶಕ ತಮ್ಮ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ - ಪದ್ಮಾ ಶಿವಮೊಗ್ಗ

  ಗುರಿಮುಟ್ಟದ ಪ್ರಯಾಣ: ಉದಯವಾಣಿ

  ಗುರಿಮುಟ್ಟದ ಪ್ರಯಾಣ: ಉದಯವಾಣಿ

  ಸಿನಿಮಾದ ಕ್ಲೈಮ್ಯಾಕ್ಸ್ ವೇಳೆ ಬರುವ ಫ್ಲ್ಯಾಶ್‌ಬ್ಯಾಕ್‌ ಈ ಚಿತ್ರದ ಹೈಲೈಟ್‌. ಈ ಮೂಲಕ ಸಿನಿಮಾಕ್ಕೊಂದು ಸೆಂಟಿಮೆಂಟ್ ಟಚ್ ಕೊಡಲು ಪ್ರಯತ್ನಿಸಿದ್ದಾರೆ. 'ಪ್ರಯಾಣಿಕರ ಗಮನಕ್ಕೆ' ಚಿತ್ರದಲ್ಲಿ ಒಂದಷ್ಟು ತಪ್ಪುಗಳಿದ್ದರೂ, ಇದು ಕೆಟ್ಟ ಸಿನಿಮಾವಲ್ಲ. ಇಲ್ಲಿ ಅನಾವಶ್ಯಕ ಕಾಮಿಡಿ, ಬಿಲ್ಡಪ್, ಸಾಂಗ್ ಯಾವುದೂ ಇಲ್ಲ. ಪ್ರೇಕ್ಷಕರಿಗೆ ಕಿರಿಕಿರಿ ನೀಡದಂತಹ ಸಿನಿಮಾ. ಯಾವುದೇ ದೃಶ್ಯಗಳನ್ನು ಹೆಚ್ಚು ಎಳೆದಾಡಿಲ್ಲ. ಅದೇ ಕಾರಣದಿಂದ ಸಿನಿಮಾ ತನ್ನ ಪಾಡಿಗೆ ತಣ್ಣಗೆ ಸಾಗುತ್ತಿರುತ್ತದೆ. ಈ ತಣ್ಣನೆಯ ಪಯಣದಲ್ಲಿ ಕುತೂಹಲ, ಖುಷಿ, ಬೇಸರ, ಆಕಳಿಕೆ ಎಲ್ಲವೂ ನಿಮಗೆ ಎದುರಾಗುತ್ತದೆ. ಅಂತಿಮವಾಗಿ ತೆರೆಮೇಲೆ ಒಂದು ಸಂದೇಶವನ್ನು ನೀವು ಕಣ್ತುಂಬಿಕೊಳ್ಳಬಹುದು. - ರವಿಪ್ರಕಾಶ್ ರೈ

  ಸ್ಪೀಡಾಗಿದೆ ಜಮಾನ: ಜರ್ನಿ ತುಂಬಾ ನಿಧಾನ - ಕನ್ನಡ ಪ್ರಭ

  ಸ್ಪೀಡಾಗಿದೆ ಜಮಾನ: ಜರ್ನಿ ತುಂಬಾ ನಿಧಾನ - ಕನ್ನಡ ಪ್ರಭ

  ಕತೆ ಇಲ್ಲದೆ ದೃಶ್ಯಗಳನ್ನು ಮಾತ್ರ ಜೋಡಿಸಿಕೊಂಡು ತೀರಾ ತಾಳ್ಮೆ ಪರೀಕ್ಷೆ ಮಾಡುತ್ತಾ ಸಾಗುವ ಸಿನಿಮಾ 'ಪ್ರಯಾಣಿಕರ ಗಮನಕ್ಕೆ'. ಎಷ್ಟೋ ಬಾರಿ ಪ್ರಯಾಣ ಎನ್ನುವುದು ರೋಚಕ ಮತ್ತು ಪ್ರಣಯದಷ್ಟೇ ಉಲ್ಲಾಸ ತುಂಬುತ್ತದೆ. ಆದರೆ ನಿರ್ದೇಶಕ ಮನೋಹರ್ ಹೇಳುವ ಈ ಪ್ರಯಾಣದ ಕತೆ ಶುರುವಾಗಿ ಹತ್ತು ನಿಮಿಷಕ್ಕೇ ಅದು ಪ್ರಯಾಸದ ಹಂತಕ್ಕೆ ಬಂದು ನಿಲ್ಲುತ್ತದೆ. ಸಾಲದ್ದಕ್ಕೆ ಅಗತ್ಯವಿಲ್ಲದಿದ್ದರೂ ರೀರೆಕಾರ್ಡಿಂಗ್ ಮತ್ತೆ ಮತ್ತೆ ಸದ್ದು ಮಾಡುತ್ತದೆ - ಆರ್.ಕೇಶವಮೂರ್ತಿ

  Prayanikara Gamanakke Movie Review - Times of India

  Prayanikara Gamanakke Movie Review - Times of India

  The film is very well scripted and the cinematography is simple, making it worthwhile. The film also has the right amount of drama that might bring tears to your eyes. The mystery behind the hijackers makes the audience inquisitive. This is also a good example of how revenge can be fatal. It is different from usual Kannada films, making its worth a watch - Nithya Mandyam

  English summary
  Kannada Movie Prayanikara Gamanakke has received mixed response from the critics. Here is the collection of Prayanikara Gamanakke reviews from Top news papers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X