ಟ್ವಿಟ್ಟರ್ ವಿಮರ್ಶೆ: 'ಮಾಸ್ ಲೀಡರ್' ಖದರ್ ಕಂಡು ಥ್ರಿಲ್ ಆದ ಪ್ರೇಕ್ಷಕ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಗೆಟಪ್ ನಿಂದಲೇ ಬಹುನಿರೀಕ್ಷೆ ಹುಟ್ಟಿಹಾಕಿರುವ 'ಮಾಸ್ ಲೀಡರ್' ಇಂದು (ಆಗಸ್ಟ್ 11) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಮೊದಲ ದಿನ, ಮೊದಲ ಶೋನಲ್ಲೇ 'ಮಾಸ್ ಲೀಡರ್' ನೋಡಿ ಚಿತ್ರಪ್ರೇಮಿಗಳು ಕಣ್ತುಂಬಿಕೊಂಡಿದ್ದಾರೆ.
ಶಿವಣ್ಣನ ಸಿನಿಮಾ ನೋಡಿ ಫುಲ್ ಖುಷ್ ಆದ ಪ್ರೇಕ್ಷಕರು ಟ್ವಿಟ್ಟರ್ ನಲ್ಲಿ ತಮ್ಮ ಮೊದಲ ವಿಮರ್ಶೆಯನ್ನ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಏನು ಇಷ್ಟವಾಯಿತು? ಲೀಡರ್ ಹವಾ ಹೇಗಿದೆ ಎಂಬುದನ್ನ ವ್ಯಕ್ತಪಡಿಸಿದ್ದಾರೆ.
ಹಾಗಿದ್ರೆ, 'ಮಾಸ್ ಲೀಡರ್' ಚಿತ್ರಕ್ಕೆ ಟ್ವಿಟ್ಟರ್ ವಿಮರ್ಶಕರು ಏನಂದ್ರು? ಸಿನಿಮಾ ಇಷ್ಟವಾಯಿತಾ? ಮುಂದೆ ಓದಿ.....
ಶಿವಣ್ಣನಿಗೆ ಜೈಕಾರ
ಮಾಸ್ ಲೀಡರ್ ಮೊದಲಾರ್ಧ ಅದ್ಭುತವಾಗಿದೆ. ಶಿವರಾಜ್ ಕುಮಾರ್ ಅವರ ಎಕ್ಸ್ ಪ್ರೆಶನ್ ಚಿಂದಿ. ಲೂಸ್ ಮಾದ ಮಿಂಚಿದ್ದಾರೆ ಎಂದು ಫಸ್ಟ್ ಶೋ ಸಿನಿಮಾ ನೋಡಿದವರು ಅಭಿಪ್ರಾಯ.
ಮಮತಾ ಬ್ಯಾನರ್ಜಿ ಛಾಯೆ
ಮಾಸ್ ಲೀಡರ್ ಚಿತ್ರದ ಕಥೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಛಾಯೆ ಕಾಣಬಹುದು. ಚಿತ್ರದ ಫಸ್ಟ್ ಹಾಫ್ ವರೆಗೂ ಸಿನಿಮಾ ರೋಚಕವಾಗಿದೆ ಎಂದು ಮೊದಲಾರ್ಧ ಸಿನಿಮಾ ನೋಡಿದವರು ಹೇಳುತ್ತಿದ್ದಾರೆ.
ಶಿವಣ್ಣ-ಲೂಸ್ ಮಾದ ಜೋಡಿ ಸೂಪರ್
''ಮಾಸ್ ಲೀಡರ್ ಚಿತ್ರದಲ್ಲಿ ಲೂಸ್ ಮಾದ ಯೋಗೇಶ್ ಮತ್ತು ಶಿವಣ್ಣನ ಜೋಡಿ ಸೂಪರ್ ಆಗಿದೆಯಂತೆ.
ಸೆಕೆಂಡ್ ಹಾಫ್ ನಲ್ಲಿ ರೋಚಕತೆ ಹೆಚ್ಚಿದೆ
''ಮಾಸ್ ಲೀಡರ್ ಮೊದಲಾರ್ಧ ಮುಗಿದಿದ್ದು, ಸೆಕೆಂಡ್ ಹಾಫ್ ನಲ್ಲಿ ಮತ್ತಷ್ಟು ಟ್ವಿಸ್ಟ್ ಗಳು ಹೆಚ್ಚಾಗಲಿವೆ.


Click it and Unblock the Notifications











