For Quick Alerts
  ALLOW NOTIFICATIONS  
  For Daily Alerts

  ಪ್ಯಾರ್ ಗೆ ಆಗ್ಬುಟ್ಟೈತೆ v/s ಕೊಲವೆರಿ ಡಿ ಥಕಧಿಮಿತ

  |

  ಇಂದು (ಮಾರ್ಚ್ 30, 2012) ಕೋಮಲ್ ನಟನೆಯ 'ಗೋವಿಂದಾಯ ನಮಃ' ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. "ಪ್ಯಾರ್ ಗೇ ಆಗ್ಬುಟ್ಟೈತೆ...ನಮ್ದೂಕೇ ಪ್ಯಾರ್ ಗೇ ಆಗ್ಬುಟ್ಟೈತೆ' ಹಾಡು ಜನರನ್ನು ಅದೆಷ್ಟು ಮೋಡಿ ಮಾಡಿದೆ ಎಂದರೆ ಅದೊಂದೇ ಹಾಡು ಜನರನ್ನು ಚಿತ್ರಮಂದಿರಕ್ಕೆ ಕರೆದುತರುವ ಆಹ್ವಾನ ಪತ್ರಿಕೆಯಂತೆ ಕೆಲಸ ಮಾಡಲಿದೆ.

  ತಮಿಳಿನ ಧನುಷ್ ನಟನೆಯ '3' ಚಿತ್ರ ಕೂಡ ಇಂದೇ ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಅದಕ್ಕೆ ಪಿವಿಆರ್ ಪಿಕ್ಚರ್ಸ್ ಮೂಲಕ ಪೈಪೋಟಿ ನೀಡಲಿದೆ ಈ ಗೋವಿಂದಾಯ ನಮಃ ಚಿತ್ರ. ಕೊಲವೆರಿ ಡಿ ಹಾಡು ಯೂ ಟ್ಯೂಬ್ ಮೂಲಕ ದಾಖಲೆ ಮಾಡಿ ವಿಶ್ವದಾದ್ಯಂತ ಜನಪ್ರಿಯವಾಗಿರುವುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ನಮ್ಮ ಕನ್ನಡದ ಈ ಹಾಡೂ ಯೂ ಟ್ಯೂಬ್ ದಾಖಲೆ ಮೆರೆದಿದೆ.

  ಗೋವಿಂದಾಯ ನಮಃ ಚಿತ್ರ ಅಚ್ಚುಕಟ್ಟಾಗಿದೆ, ಮೆಚ್ಚಿಕೊಳ್ಳುವಂತಿದೆ, ಪ್ರೇಕ್ಷಕರನ್ನು ನಕ್ಕುನಗಿಸುವ ಎಲ್ಲಾ ಅಂಶಗಳು ಚಿತ್ರದಲ್ಲಿವೆ ಎನ್ನಲಾಗಿದೆ. ಕಳ್ ಮಂಜ ನಂತರ ಕೋಮಲ್ ಅವರಿಗೆ ಸರಿಹೊಂದುವಂತ ಪಾತ್ರವೂ ಈ ಚಿತ್ರದಲ್ಲಿದೆ. ಗೋವಿಂದಾಯ ನಮಃ ಚಿತ್ರದ ನಂತರ ಕೋಮಲ್ ಭರ್ಜರಿ ಮಿಂಚಲಿದ್ದಾರೆ ಎಂಬುದು ಈಗಾಗಲೇ ಎಲ್ಲರ ಮನದಾಳದ ಮಾತು.

  ಈ ಎಲ್ಲಾ ಬೆಳವಣಿಗೆ ಕಾರಣ ಗುರುಕಿರಣ್ ಸಂಗೀತ ನಿರ್ದೇಶನ ಹಾಗೂ ಪವನ್ ಒಡೆಯರ್ ಸಾಹಿತ್ಯದ ಪ್ಯಾರ್ ಗೇ ಆಗ್ಬುಟ್ಟೈತೆ ಎಂಬ ಅದೊಂದೇ ಹಾಡು. ಅತ್ತ ಧನುಷ್ ಕೊಲವೆರಿ ಹಾಡು ಕೂಡ ಸಾಕಷ್ಟು ಸುದ್ದಿ ಮಾಡಿರುವುದರಿಂದ ಅಲ್ಲೂ ಆ ಹಾಡು ನೋಡಲು ಜನ ಚಿತ್ರಮಂದಿರಕ್ಕೆ ಮುಗಿಬೀಳುವುದು ಗ್ಯಾರಂಟಿ.

  ಒಟ್ಟಿನಲ್ಲಿ ಕೊಲವೆರಿ ಡಿ ಹಾಗೂ ಪ್ಯಾರ್ ಗೇ ಆಗ್ಬುಟ್ಟೈತೆ ಯುದ್ಧದಲ್ಲಿ ಪ್ರಪಂಚದಾದ್ಯಂತ ಪ್ರೇಕ್ಷಕರಿಗೆ ಮನರಂಜನೆ ಮಹಾಪೂರ. ಇದೀಗ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಗೋವಿಂದಾಯ ನಮಃ ಚಿತ್ರದ ಚಿತ್ರವಿಮರ್ಶೆಯನ್ನು ಶೀಘ್ರದಲ್ಲೇ ನಮ್ಮ 'ಒನ್ ಇಂಡಿಯಾ ಕನ್ನಡ'ದಲ್ಲಿ ನಿರೀಕ್ಷಿಸಿ....

  English summary
  Today, on 30th March 2012, Pyarge Aagbuttaite song's Govindaya Namaha movie and Tamil Dhanush song Kolaveri D's movie '3', are in the competition in front of Audience. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X